ಕಳೆದ ವಾರದಲ್ಲಿಯೂ ಅಡಿಕೆ ಧಾರಣೆ ತುಸು ಏರಿಕೆ ಕಂಡಿತ್ತು. ಈಗ ಮತ್ತೆ ಸ್ವಲ್ಪ ಏರಿಕೆ ಕಂಡಿದೆ. ಕೊಬ್ಬರಿ ಧಾರಣೆ ಜನವರಿ ಸುಮಾರಿಗೆ 18,000 ದಾಟಬಹುದು ಎಂಬ ಲೆಕ್ಕಾಚಾರ ಇತ್ತಾದರೂ ಅದು ನವೆಂಬರ್ ನಲ್ಲಿಯೇ ಆಗಿದೆ. ರಬ್ಬರ್ ಸಹ ಏರಿಕೆಯಾಗುತ್ತಿದೆ. ಕಳೆದ ವಾರ ಹಿಮ್ಮುಖವಾಗಿದ್ದ ಕರಿಮೆಣಸಿನ ದರ ಈ ವಾರ ಮತ್ತೆ ಏರಿಕೆಯತ್ತ ಸಾಗಿದೆ. ದಿನಾಂಕ 23-11-2021 ನೇ ಮಂಗಳವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ ಹೀಗಿದೆ.
ಅಡಿಕೆ ಆಮದು ಆಗುತ್ತಿಲ್ಲ. ಪರಿಸ್ಥಿತಿ ಅನುಕೂಲಕರವಾಗಿಯೇ ಇದೆ. ಲಾಕ್ ಡೌನ್ ಇತ್ಯಾದಿ ಎಲ್ಲವೂ ಸಡಿಲಿಕೆಯಾಗಿದ್ದು, ಜನ ಸ್ವೇಚ್ಚೆಯಂತೆ ತಿರುಗಾಡುವಂತಾಗಿದೆ. ಅದ್ದೂರಿಯ ಸಭೆ ಸಮಾರಂಭಗಳು ಪ್ರಾರಂಭವಾಗಿವೆ.ದಕ್ಷಿಣ ಭಾರತದ ಕೆಲವ್ಯ್ ರಾಜ್ಯಗಳಲ್ಲಿ ಮಳೆ ಒಂದು ಒಂದು ಬಿಟ್ಟರೆ ಬೇರೆಲ್ಲಾ ಅನುಕೂಲಕರವಾಗಿ ಇರುವ ಕಾರಣ ಕೃಷಿಕರ ಪ್ರಮುಖ ಬೆಳೆಯಾದ ಅಡಿಕೆಗೆ ದರ ಕಡಿಮೆಯಾಗುವ ಯಾವ ಸಾಧ್ಯತೆಯೂ ಇಲ್ಲ. ಭಾರೀ ಏರಿಕೆ ಆಗದಿದ್ದರೂ ಈಗ ಇರುವ ಸ್ಥಿತಿಯಲ್ಲಿ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ.
ಉತ್ತರ ಭಾರತದಲ್ಲಿ ಜನಜೀವನ ಹಿಂದಿನಂತೆ ಆಗಿರುವ ಕಾರಣ ಖಾದ್ಯ ಕೊಬ್ಬರಿ ಬೆಲೆ ಏರಿಕೆ ಕಂಡಿದೆ. ಕೊಚ್ಚಿ ಮಾರುಕಟ್ಟೆ ಏರಿಕೆಯಾಗಿಯೇ ಇರುವ ಕಾರಣ ಕರಿಮೆಣಸು ದರ ಇಳಿಯುವುದಿಲ್ಲ. ದರ ಇಳಿಯುವ ಸಾಧ್ಯತೆ ಇಲ್ಲ. ಆದರೆ ಖರೀದಿ ಮಾಡಿದ್ದಕ್ಕೆ ತಕ್ಷಣ ಬೇಡಿಕೆ ಇರುವುದಿಲ್ಲವಾದ ಕಾರಣ ದರ ಭಾರೀ ಮೇಲೆ ಹೋಗುತ್ತಿಲ್ಲ. ಖರೀದಿದಾರರ ಬೇಡಿಕೆ ಬಂದಾಗ ದರ ಏರುತ್ತದೆ. ಇಲ್ಲದಾಗ ತುಸು ಇಳಿಕೆಯಾಗುತ್ತದೆ. ಆದಾಗ್ಯೂ ದೇಶಿಯ ಉತ್ಪಾದನೆ ಕಡಿಮೆಯಾಗಿ, ಆಮದು ಸಹ ಹೆಚ್ಚ್ ಆಗದ ಕಾರಣ ದರ ಇಳಿಕೆ ಆಗಲಾರದು. ಈ ವರ್ಷ ಹೊಸ ಕೊಯಿಲು ಪ್ರಾರಂಭವಾಗುವ ಮುನ್ನ ಕ್ವಿಂಟಾಲಿಗೆ 60,000 ಆದರೂ ಅಚ್ಚರಿ ಇಲ್ಲ.
ಇಂದಿನ ಖರೀದಿ ದರ: ಕ್ವಿಂಟಾಲು.
- ಬಂಟ್ವಾಳ: 23/11/2021, Coca, 28, 12500, 25000, 22500
- BANTWALA, 23/11/2021, New Variety, 1, 27500, 42500, 40000
- BANTWALA, 23/11/2021, Old Variety, 16, 46000, 52000, 50000
- ಬೆಳ್ತಂಗಡಿ, 23/11/2021, New Variety, 226, 29000, 42500, 39000
- BELTHANGADI, 23/11/2021, Old Variety, 92, 43140, 50500, 47000
- BELTHANGADI, 23/11/2021, Other, 20, 26600, 36000, 32000
- BELTHANGADI, 23/11/2021, Coca, 2, 26000, 26000, 26000
- ಬೆಂಗಳೂರು: 23/11/2021, Other, 100, 45000, 48000, 46500
- ಭದ್ರಾವತಿ: 19/11/2021, Rashi, 289, 44199, 46109, 45753
- ಚೆನ್ನಗಿರಿ: 23/11/2021, Rashi, 1134, 44499, 46629, 45865
- ಹೊಳಲ್ಕೆರೆ : 23/11/2021, Rashi, 225, 44879, 46409, 45626
- ಹೊನ್ನಾಳಿ: 19/11/2021, Rashi, 15, 45099, 45099, 45099
- ಹೊಸನಗರ: 19/11/2021, Chali, 6, 45832, 46202, 45832
- HOSANAGAR, 19/11/2021, Kempugotu, 21, 36909, 38569, 37599
- HOSANAGAR, 19/11/2021, Rashi, 489, 42499, 47510, 46599
- ಕಾರ್ಕಳ: 23/11/2021, Old Variety, 24, 46000, 50500, 48000
- KARKALA, 20/11/2021, New Variety, 1, 35000, 42500, 38000
- ಕುಮಟಾ: 18/11/2021, Chippu, 5, 24099, 41924, 41369
- KUMTA, 18/11/2021, Coca, 1, 21399, 36205, 35719
- KUMTA, 18/11/2021, Hale Chali, 28, 46449, 48069, 47519
- KUMTA, 18/11/2021, Hosa Chali, 2, 38170, 40624, 40129
- KUMTA, 17/11/2021, Factory, 160, 12019, 18699, 17899
- ಕುಂದಾಪುರ: 23/11/2021, Hale Chali, 4, 45000, 50500, 50000
- KUNDAPUR, 23/11/2021, Hosa Chali, 2, 30000, 37000, 30000
- ಮಂಗಳೂರು: 23/11/2021, Coca, 91, 26800, 28000, 27000
- ಪುತ್ತೂರು: 23/11/2021, Coca, 848, 10500, 26000, 18250
- PUTTUR, 23/11/2021, New Variety, 233, 27500, 42500, 35000
- ಸಾಗರ: 23/11/2021, Kempugotu, 1, 32099, 32099, 32099
- SAGAR, 23/11/2021, Rashi, 46, 41570, 45699, 44899
- SAGAR, 23/11/2021, Sippegotu, 5, 25289, 26120, 25289
- SAGAR, 18/11/2021, Bilegotu, 6, 23699, 37161, 35099
- SAGAR, 18/11/2021, Chali, 29, 35889, 45700, 44699
- SAGAR, 18/11/2021, Coca, 1, 22099, 36854, 35299
- ಶಿವಮೊಗ್ಗ: 23/11/2021, Bette, 55, 45900, 53570, 52630
- SHIVAMOGGA, 23/11/2021, Gorabalu, 1915, 17000, 38469, 37269
- SHIVAMOGGA, 23/11/2021, Rashi, 2010, 43869, 46399, 45900
- SHIVAMOGGA, 23/11/2021, Saraku, 25, 52069, 73696, 67500
- ಸಿದ್ದಾಪುರ: 23/11/2021, Bilegotu, 40, 32899, 41789, 40469
- SIDDAPURA, 23/11/2021, Chali, 146, 42899, 49411, 49379
- SIDDAPURA, 23/11/2021, Coca, 16, 24499, 38799, 34899
- SIDDAPURA, 23/11/2021, Hosa Chali, 7, 32699, 36599, 33699
- SIDDAPURA, 23/11/2021, Kempugotu, 4, 24899, 38899, 30599
- SIDDAPURA, 23/11/2021, Rashi, 25, 45399, 47989, 47439
- SIDDAPURA, 23/11/2021, Tattibettee, 5, 33899, 42699, 40499
- ಸಿರಾ: 22/11/2021, Other, 175, 9000, 46000, 41108
- ಸಿರ್ಸಿ: 23/11/2021, Bette, 7, 42399, 46699, 45142
- SIRSI, 23/11/2021, Bilegotu, 42, 25099, 44878, 40374
- SIRSI, 23/11/2021, Chali, 283, 43069, 49699, 48740
- SIRSI, 23/11/2021, Rashi, 28, 38399, 49209, 48295
- ಸುಳ್ಯ: 23/11/2021, Coca, 230, 10000, 27500, 25300
- SULYA, 17/11/2021, Old Variety, 17, 42500, 51000, 49200
- ತೀರ್ಥಹಳ್ಳಿ: 21/11/2021, Bette, 88, 46109, 54099, 53559
- TIRTHAHALLI, 21/11/2021, EDI, 135, 42366, 47099, 46399
- TIRTHAHALLI, 21/11/2021, Gorabalu, 123, 36009, 38119, 37869
- TIRTHAHALLI, 21/11/2021, Rashi, 274, 41668, 47019, 46309
- TIRTHAHALLI, 21/11/2021, Saraku, 149, 48189, 74080, 66300
- ತುಮಕೂರು: 22/11/2021, Rashi, 54, 45000, 46200, 45500
- ಯಲ್ಲಾಪುರ: 23/11/2021, Bilegotu, 3, 31222, 42389, 39299
- YELLAPURA, 23/11/2021, Chali, 103, 43009, 49503, 48320
- YELLAPURA, 23/11/2021, Coca, 17, 24899, 34299, 30799
- YELLAPURA, 23/11/2021, Kempugotu, 1, 27125, 33566, 30699
- YELLAPURA, 23/11/2021, Rashi, 48, 45698, 52950, 50899
- YELLAPURA, 23/11/2021, Tattibettee, 9, 37742, 44689, 42811
- YELLAPURA, 19/11/2021, Api, 1, 55555, 55555, 55555
ಕರಿಮೆಣಸು ಧಾರಣೆ:ಕ್ವಿಂಟಾಲು.
ಕರಿಮೆಣಸಿಗೆ ಉತ್ತರ ಕನ್ನಡದ ಶಿರಸಿಯಲ್ಲಿ ಅತ್ಯಧಿಕ ದರ ಕ್ವಿಂಟಾಲಿಗೆ 575,99 ಕ್ಕೆ ಖರೀದಿಯಾಗಿದೆ. ನಂತರ ಸಕಲೇಶಪುರದಲ್ಲಿ 56,000 ಕ್ಕೆ ಖರೀದಿ ಆಗಿದೆ.ಸಿದ್ದಾಪುರದಲ್ಲಿ 55,000 ಕ್ಕೆ ಖರೀದಿ ಆಗಿದೆ. ಉತ್ತಮ ಗುಣಮಟ್ಟದ ಮೆಣಸಿಗೆ ಬೆಲೆ ಚೆನ್ನಾಗಿದೆ. ಆದರೆ ಕರಾವಳಿ ಭಾಗದಲ್ಲಿ ಗುಣಮಟ್ಟಕ್ಕೆ ಅಂತಹ ಪ್ರಾಮುಖ್ಯತೆ ಇರುವುದಿಲ್ಲ.
- ಬೆಳ್ತಂಗಡಿ: 23/11/2021, ಕ್ಯಾಂಪ್ಕೋ, 47000, 52000, 48500
- ಕಾರ್ಕಳ: 23/11/2021, ಕಾಮಧೇನು 48000, 54000, 50000
- ಮಂಗಳೂರು: 23/11/2021, PB A Hameed, 21000, 54500, 39000
- PUTTUR, 23/11/2021, ಖಾಸಗಿ 4, 21500, 53000, 36250
- ಸಾಗರ: 23/11/2021, ಖಾಸಗಿ 49099, 53500, 49099
- ಸಿದ್ದಾಪುರ: 23/11/2021, TSS, 40069, 55509, 53389
- ಸಿರ್ಸಿ: 23/11/2021, TSS, 53899, 57599, 55115
- YELLAPURA, 23/11/2021, 49501, 53680, 51499
- ಸಕಲೇಶಪುರ: 54,000- 560.00 Sathya Murthy -55,000
- ಮೂಡಿಗೆರೆ : 55,000 ಹರ್ಷಿಕಾ ಟ್ರೇಡರ್ಸ್ -55,500 ಭವರ್ಲಾಲ್
- ಹಾಸನ ಬಾಳುಪೇಟೆ: 53,000-55,000-54,500
- ಚಿಕ್ಕಮಗಳೂರು: 53,500-54,000 ನಿರ್ಮಲ್ ಕಮೋಡಿಟಿಸ್.
- ಮಡಿಕೇರಿ: 53,000-54,000
- ಕಳಸ: 54,000-54,500
- ತೀರ್ಥಹಳ್ಳಿ: 54,000 -54,500
ಏಲಕ್ಕಿ ಧಾರಣೆ: ಕಿಲೋ
- ರಾಶಿ ಉತ್ತಮ: 800-850
- ಜರಡಿ: 1200-1300
- ಆಯ್ದದ್ದು:1000-1050
- ಹಸಿರು ಸಾಧಾರಣ:800-900
- ಹಸಿರು ಬೋಲ್ಡ್: 1,300-1,400
ಜಾಯೀ ಸಾಂಬಾರ: ಕಿಲೊ.
- ಜಾಯೀ ಕಾಯಿ ಕೊಲೋ: 195-200
- ಜಾಯೀ ಪತ್ರೆ ಕಿಲೋ: 900-1000
ಕೊಬ್ಬರಿ ದರ: ಕ್ವಿಂಟಾಲು
ಕೊಬ್ಬರಿ ದರ ಇಂದಿನ ಗರಿಷ್ಟ 18,100 ದಾಖಲಾಗಿದೆ. ಇನ್ನೂ ಬೇಡಿಕೆ ಚೆನ್ನಾಗಿದ್ದು, ಜನವರಿ ಸಮಯಕ್ಕೆ 19,000 ಆದರೂ ಅಚ್ಚರಿ ಇಲ್ಲ. ತೆಂಗಿನೆಣ್ಣೆಯ ಬೇಡಿಕೆ ಚೆನ್ನಾಗಿರುವ ಕಾರಣ ಎಣ್ನೆ ಕೊಬ್ಬರಿಗೂ ಬೆಲೆ ಉತ್ತಮವಾಗಿದೆ.
ಇಂದಿನ ಕೊಬ್ಬರಿ ದರ:
- ಅರಸೀಕೆರೆ: 23/11/2021, Copra, 14100, 18000, 17758
- ಚೆನ್ನರಾಯಪಟ್ನ: 23/11/2021, Ball, 16300, 16600, 16300
- ಚೆನ್ನರಾಯಪಟ್ನ:23/11/2021, ಎಣ್ಣೆ 10300, 10300, 10300
- ಹುಲಿಯಾರು: 20/11/2021, Ball, 17710, 17710, 17710
- ಹುಲಿಯಾರು 20/11/2021, ಸಣ್ಣದು 12500, 12500, 12500
- ಕೆ ಆರ್ ಪೇಟೆ: 23/11/2021, ಎಣ್ಣೆ, 10369, 10379, 10369
- ಮಂಗಳೂರು: 23/11/2021,ಎಣ್ಣೆ 6500, 15500, 9000
- ಪುತ್ತೂರು: 20/11/2021, ಎಣ್ಣೆ 4500, 11500, 8000
- ತುಮಕೂರು: 19/11/2021, ಇತರ, 7800, 8600, 8100
- ತುರುವೇಕೆರೆ: 23/11/2021, Copra, 431, 18000, 18100, 18000
ರಬ್ಬರ್ ದರ: ಕಿಲೊ
ಈ ಹಿಂದೆ ಹೇಳಿದಂತೆ ಈ ವರ್ಷ ರಬ್ಬರ್ ದರ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅದರೆ ಟ್ಯಾಪಿಂಗ್ ಬಹಳ ಕಡಿಮೆಯಾಗಿದೆ. ರೈನ್ ಗಾರ್ಡ್ ಸೋರುವ ಸ್ಥಿತಿ ಉಂಟಾಗಿದೆ. ಒಂದಷ್ಟು ರಬ್ಬರ್ ತೋಟ ಕಡಿಯಲ್ಪಟ್ಟು ಉತ್ಪತ್ತಿ ಕಡಿಮೆಯಾಗಿದೆ. ಜನವರಿ ಸುಮಾರಿಗೆ RSS 4 190 ತಲುಪಿದರೂ ಅಚ್ಚರಿ ಇಲ್ಲ.
ಇಂದಿನ ದರ : ಕಿಲೋ:
- GRADE:1X 195-00
- RSS 4: 186-00
- RSS 3: 186-50
- RSS 5: 179-00
- LOT: 173-00
- SCRAP:123-00 115-00
ಕಾಫೀ ದಾರಣೆ:
ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಗೆ ಭಾರೀ ಹಾನಿ ಉಂಟಾಗಿದೆ. ರೋಬಸ್ಟಾ ಇಳುವರಿ ಚೆನ್ನಾಗಿದೆ. ಬೆಲೆ ಸ್ವಲ್ಪ ಏರಿಕೆ ಆಗಿದೆ. ಇನ್ನೂ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ.
- ಅರೇಬಿಕಾ ಪಾರ್ಚ್ ಮೆಂಟ್: 14,400 (50 kg)
- ಅರೇಬಿಕಾ ಚೆರಿ: 6125(50 kg)
- ರೋಬಸ್ಟಾ ಪಾರ್ಚ್ ಮೆಂಟ್: 6200(50 kg)
- ರೋಬಸ್ಟಾ ಚೆರಿ: 3300 (50 kg)
ಹಸಿ ಶುಂಠಿ ದರ ಕ್ವಿಂಟಾಲು:
- ಬೇಲುರು: 21/11/2021, ಹಸಿ, 1000, 1000, 1000
- ಬೆಂಗಳೂರು: 23/11/2021, ಹಸಿ 1800, 2000, 1900
- ಬಿನ್ನಿ ಮಿಲ್: 20/11/2021, Green Ginger, 2800, 3200, 3000
- ಕೋಲಾರ: 23/11/2021, Green Ginger, 2500, 4000, 3300
- ಮೈಸೂರು: 23/11/2021, Green Ginger, 4800, 5000, 4900
- ರಾಮನಗರ: 23/11/2021, Green Ginger, 1600, 3200, 2500
- ಶಿವಮೊಗ್ಗ: 23/11/2021, Green Ginger, 1800, 2000, 1900
- ಟಿ ನರಸಿಪುರ: 23/11/2021, ಹಸಿ, 1500, 2500, 2000
ಅಡಿಕೆ ಬೆಳೆಗಾರರು ಇನ್ನೂ ದರ ಹೆಚ್ಚಳವಾಗುತ್ತದೆ ಎಂದು ಕಾಯಬೇಡಿ. ಸ್ವಲ್ಪ ಸ್ವಲ್ಪ ಮಾರಾಟ ಮಾಡಿ. ಕ್ರುಷಿ ಕಾಯಿದೆ ರದ್ದತಿ ಇತ್ಯಾದಿಗಳ ಪರಿಣಾಮವಾಗಿ ಎಲ್ಲಿಯಾದರೂ ಗಡಿ ಭಾಗದಲ್ಲಿ ಸ್ವಲ್ಪ ಸಡಿಲ ಮಾಡಿದರೆ ಆಮದು ಆಗಿ ದರ ಇಳಿಕೆಯಾಗುತ್ತದೆ. ಸಧ್ಯಕ್ಕೆ ಆ ಭಯ ಇಲ್ಲ.