ರೂ. 615 ದಾಟಿದ ಕರಿಮೆಣಸು ಧಾರಣೆ- ಶಿರಸಿಯ ದಾಖಲೆ.

by | Nov 25, 2021 | Market (ಮಾರುಕಟ್ಟೆ), Pepper (ಕರಿಮೆಣಸು) | 0 comments

ಕರಿಮೆಣಸು ಧಾರಣೆ ಕಳೆದ ಕೆಲವು ವರ್ಷಗಳಿಂದ ನೆಲಕಚ್ಚಿತ್ತು. ಅಡಿಕೆಯ ಮಿಶ್ರ ಬೆಳೆಯಾಗಿದ್ದರೂ ಸಹ ಅಡಿಕೆಗಿಂತ ಕಡಿಮೆ ದರದಲ್ಲಿ ಇತ್ತು. ಈ ವರ್ಷ ಅಕ್ಟೋಬರ್ ತಿಂಗಳು ಇದಕ್ಕೆ ಅಂಟಿದ ಗ್ರಹಣ ಬಿಡುಗಡೆಯಾದಂತಾಗಿದೆ. ಮೆಣಸಿನ ಬೆಲೆ ಬಹುಷಃ ಮುಂದಿನ ವರ್ಷಕ್ಕೆ 800 ಆದರೂ ಅಚ್ಚರಿ ಇಲ್ಲ ಎಂಬ ವರದಿಗಳಿವೆ. ದಿನಾಂಕ 24-11-2021 ರ ಬುಧವಾರ  ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ಕರಿಮೆಣಸಿನ ಬೆಲೆ 615.99 ಗರಿಷ್ಟ ದರ ದಾಖಲಾಗಿದೆ.ಉಳಿದೆಡೆ ಏರಿಕೆ ಆಗಿಲ್ಲ.

ಪ್ರಪಂಚದ ಎಲ್ಲಾ ಮೆಣಸು ಬೆಳೆಯುವ ದೇಶಗಳಲ್ಲೂ ಉತ್ಪಾದನೆ ಕಡಿಮೆ ಇದೆ. ಈ ಬೆಳೆಯೇ ಹಾಗೆ. ಅಧಿಕ ಇಳುವರಿ ಬಂದರೆ ಮತ್ತೆ ಬಳ್ಳಿಗೆ ಏನಾದರೂ ರೋಗ ರುಜಿನಗಳು ಬಂದು ಇಳುವರಿ 25-30% ಕಡಿಮೆಯಾಗುತ್ತದೆ. ನಂತರ ಪಿಕ್ ಅಪ್ ಆಗಲು 3-4 ವರ್ಷ ಬೇಕಾಗುತ್ತದೆ. ಹಾಗಾದ ಕಾರಣ ಭವಿಷ್ಯ ಚೆನ್ನಾಗಿದೆ. ಆದರೆ ಹಳೆಯ ಸ್ಟಾಕು ಏನಾದರೂ ಕಳ್ಳ ಸಾಗಾಣಿಕೆ ಮೂಲಕ ನುಸುಳಿದರೆ ದರ ಇಳಿಕೆ ಆಗಬಹುದು. ಅದರೂ ಇದು ತಾತ್ಕಾಲಿಕ ಎನ್ನಲಾಗುತ್ತಿದೆ.

ರಪ್ತುದಾರರು ಮತ್ತು  ವ್ಯಾಪಾರಿಗಳಾದ  ಕಿಶೋರ್ ಶರ್ಮಾ ಎಂಬವರ ಪ್ರಕಾರ ದರ 600 ದಾಟಿ  800 ಆದರೂ ಆಗಬಹುದು ಎಂಬ ವರದಿ ಇದೆ. ದೊಡ್ದ ಸಮಸ್ಯೆ ಎಂದರೆ ನಮ್ಮಲ್ಲಿ ನಿಖರ ಬೆಳೆ ಲೆಕ್ಕಾಚಾರ ಇಲ್ಲದೆ ಇರುವುದು. ಎಲ್ಲಾ ಉತ್ಪಾದನೆಯ ಲೆಕ್ಕಾಚಾರಗಳೂ 3-4  ವರ್ಷ ಹಳೆಯದಾಗಿದ್ದು, ಇದನ್ನು ಯಾವ ರೀತಿಯಲ್ಲೂ ನಂಬುವಂತಿಲ್ಲ.

ಕರಿಮೆಣಸು

ಎಲ್ಲೆಲ್ಲಿ ಯಾವ ದರ ಇತ್ತು: ಕಿಲೊ

  • ಕಾರ್ಕಳ, UG, 48000, 545.00, 50.000
  • MANGALURU, UnG , 371.00, 545.00, 380.00
  • PUTTUR UnG  21500, 540.00, 362.50
  • SIDDAPURA, UnG, 400.69, 555.09, 533.89
  • SIRSI, UnG  522.99, 615.99, 531.37
  • YELLAPURA, UnG 495.01, 536.80, 514.99
  • Sakleshpur-Royal Traders, UnG,  550.00 
  • Sakleshpur-Gain Coffee, UnG 540.00 
  • Sakleshpur-Sathya Murthy, Garbled,  560.00,
  • Sakleshpur-Sathya Murthy, Ung,  540.00
  • Sakleshpur-S.K Traders, UnG,  550.00 
  • Sakleshpur-H.K.G & Bros- UnG  540.00
  • Sakleshpur-Nasir UnG  550.00 
  • Sakleshpur-Sainath UnG  555.00 
  • Balupet-Geetha Coffee Trading, UnG  550.00 
  •  Balupet-Coffee Age, UnG,  550.00 
  • Mudigere-Bhavarlal UnG,  545.00 
  • Mudigere-A1 Traders, UNg  545.00 
  • Mudigere-Harshika,UnG  540.00 
  • Mudigere-A.M Traders, UnG.  550.00
  • Mudigere-Hadhi Coffee, UnG 500.00 
  • Chikmagalur-Arihant UnG  535.00 
  • Chikmagalur-Nirmal UnG,  540.00 
  • Chikmagalur-M.R UnG,  540.00 
  • Chikmagalur-Kiran, UnG  540.00 
  • Madikeri-Kiran Garbled,  540.00 
  • Madikeri-Spice N Spice- UnG  540.00 
  • Gonikoppa-Sri Maruthi, UnG,  540.00 
  • Kalasa – PIB Traders, UnG,  530.00 
  • Thirthahalli-Malenadu, UnG 545.00 

ಕ್ಯಾಂಪ್ಕೋ ದರ ಎಲ್ಲಾ ಕಡೆಯಲ್ಲೂ ಕ್ವಿಂಟಾಲಿಗೆ 52,000 ಖಾಸಗಿಯವರ ದರ ಸುಮಾರು 10-20 ಹೆಚ್ಚು. ಕೊಚ್ಚಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಲ್ಲಿದೆ. ಕೊಳ್ಳುವವರ ಬೆಂಬಲ ಇದ್ದಾಗ ಬೆಲೆ ಹೆಚ್ಚಳವಾಗುವುದಕ್ಕೆ ಅನುಕೂಲವಾಗುತ್ತದೆ. ಒಮ್ಮೊಮ್ಮೆ ಬೇಕು ಇದೆಯಾ ಎಂದು ಕೇಳುವವರು ಇರುವಾಗ ಬೇಡಿಕೆಗೆ ಅನುಗುಣವಾಗಿ ಬೆಲೆ ಹೆಚ್ಚಳ ಮಾಡಲಾಗುತ್ತದೆ ಎನ್ನುತ್ತಾರೆ ಕರಾವಳಿಯಲ್ಲಿ ಉತ್ತಮ ದರಕ್ಕೆ ಮೆಣಸು ಖರೀದಿ ಮಾಡುವ ಕಾರ್ಕಳದ ಕಾಮಧೇನು ಟ್ರೇಡರ್ಸ್ ಇದರ ಮಾಲಿಕರಾದ  ಉದಯ ಬಲ್ಲಾಳರು.

ಶಿರಸಿಯಲ್ಲಿ ಮಾತ್ರ ಈ ದರಕ್ಕೆ ಖರೀದಿ ಆಗಿದೆ. ಉಳಿದೆಡೆ ಆಗಿಲ್ಲ. ಕೆಲವು ದಿನ ಬೇಕಾಗಬಹುದು. ಮಾರುಕಟ್ಟೆಯಲ್ಲಿ  ಆಮದು ಆದರೆ ಎಂಬ ಒಂದು ಅಂಜಿಕೆ ವಾತಾವರಣದಿಂದಾಗಿ ಖರೀದಿಗೆ ಹಿಂದೇಟು  ಹಾಕುತ್ತಿದ್ದಾರೆ.

ಬೆಳೆಗಾರರು ಕಾದು ನೋಡುವುದು ಉತ್ತಮ. ಈ ವರ್ಷ ಮಳೆ ಕಾರಣ ಕರ್ನಾಟಕ, ಕೇರಳದಲ್ಲಿ ಬೆಳೆ ಸುಮಾರು 15-20% ನಷ್ಟ ಆಗಿದೆ. ವಿಯೆಟ್ನಾಂ , ಶ್ರೀಲಂಕಾ ಇಲ್ಲಿಯೂ ಬೆಳೆ ನಷ್ಟ ಉಂಟಾಗಿದೆ. ಹಾಗಾಗಿ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!