ಅಡಿಕೆ ಮಾರುಕಟ್ಟೆ ವರ್ಷದುದ್ದಕ್ಕೂ ಏಕಪ್ರಕಾರವಾಗಿ ಇರುವುದಿಲ್ಲ. ಒಮ್ಮೆ ಗ್ರಹಣ ಹಿಡಿದು ಬೆಲೆ ಕುಸಿಯುತ್ತದೆ. ಮತ್ತೆ ಗ್ರಹಣ ಮೋಕ್ಷ ಕಾಲ ಬಂದೇ ಬರುತ್ತದೆ. ಅಡಿಕೆ ಮಾರಾಟವಾಗಿ ಹಣ ಕೈಗೆ ಬರುವ ತನಕ ಗ್ರಹಣ ಕಾಲವೂ, ಹಣ ಬರಲಾರಂಭಿಸಿದ ತರುವಾಯ ಅದು ಮುಗಿಯುವ ತನಕ ಗ್ರಹಣ ಮೋಕ್ಷವೂ ನಡೆಯುತ್ತಾ ಇರುತ್ತದೆ. ಇವುಗಳ ಮಧ್ಯೆ ರೈತರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಕೆಂಪಡಿಕೆ ಧಾರಣೆ ಸ್ವಲ್ಪ ಚೇತರಿಗೆ ಪ್ರಾರಂಭವಾಗಿದೆ. ಚಾಲಿಗೆ ಸ್ವಲ್ಪ ನೆರಳು ಕವಿದಿದೆ. ಅನಿರ್ಧಿಷ್ಟಾವಧಿಯ ತನಕ ಏರಿಕೆ ಮುಂದುವರಿದು ಮತ್ತೆ ಇಳಿಕೆ ಪ್ರಾರಂಭವಾಗುತ್ತದೆ.
ಕೆಂಪಡಿಕೆ ಮಾರುಕಟ್ಟೆ ಆಗಸ್ಟ್ ತಿಂಗಳಲ್ಲಿ ಕಡಿಮೆಯಾಗಲಾರಂಭಿಸಿ ಬೆಳೆಗಾರರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಸ್ವಲ್ಪ ಚೇತರಿಕೆ ಉಂಟಾಗಿದೆ.ಈ ಹಿಂದೆ ನಾವು ಸ್ಪಷ್ಟವಾಗಿ ಹೇಳಿದಂತೆ ಈಗ ನಡೆದಿದೆ. ಯಾವಾಗ ಮಾರುಕಟ್ಟೆ ಸ್ಥಿತಿ ಹಿನ್ನೆಯಾಗುತ್ತದೆಯೋ ಅದು ಹಾಗೆಯೇ ನಿಲ್ಲುವುದಿಲ್ಲ.ಕೆಲವೊಮ್ಮೆ ಸ್ವಲ್ಪ ಧೀರ್ಘ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಬೇಗನೆ ಚೇತರಿಕೆ ಆಗುತ್ತದೆ. ಬೆಲೆ ಏರಿಳಿತ ಆಗದಿದ್ದರೆ ಅದು ಮಾರುಕಟ್ಟೆಯೇ ಅಲ್ಲ ಎನ್ನುತ್ತಾರೆ ವ್ಯಾಪಾರದಲ್ಲಿ ಪಳಗಿದವರು. ಬೇಡಿಕೆ ಚೆನ್ನಾಗಿದ್ದರೆ ,ಸ್ಟಾಕು ಕಡಿಮೆ ಇದ್ದರೆ ಇಳಿಕೆಯಾದದ್ದು ಬೇಗ ಚೇತರಿಕೆ ಆಗುತ್ತದೆ. ಈ ಬಾರಿ ಹಾಗೆ ಆದ ಲಕ್ಷಣ ಕಾಣಿಸುತ್ತದೆ. ದೇಶದಲ್ಲಿ ಗುಟ್ಕಾ ಸೇವನೆ ಪ್ರಮಾಣ ಕಡಿಮೆ ಆದಂತಿಲ್ಲ. ಕೆಲವು ಮೂಲಗಳ ಪ್ರಕಾರ ಕರ್ನಾಟಕ ರಾಜ್ಯ ಒಂದಕ್ಕೆ ದಿನಕ್ಕೆ ದಿನಕ್ಕೆ 10 ಲೋಡ್ ಗೂ ( 6 ವರ್ಷಗಳ ಹಿಂದೆ ಲಭ್ಯವಾದ ಲೆಕ್ಕ) ಹೆಚ್ಚು ಗುಟ್ಕಾ ಬೇಕಾಗುತ್ತದೆ. ಇಷ್ಟೊಂದು ಬಳಕೆ ಇರುವ ಉತ್ಪನ್ನಕ್ಕೆ ಅಡಿಕೆ ಎಷ್ಟು ಬೇಕಾಗಬಹುದು? ಕೊರತೆಯ ಕಾರಣಕ್ಕಾಗಿ ಆಮದು ಸಹ ಮಾಡಲಾಗುತ್ತದೆ. ಹಾಗಿರುವಾಗ ಅಡಿಕೆಗೆ ಬೇಡಿಕೆ ಇಲ್ಲದಿಲ್ಲ. ಖರೀದಿದಾರರಿಗೆ, ಸಿದ್ದ ಉತ್ಪನ್ನ ತಯಾರಕರಿಗೆ ಕಡಿಮೆ ಬೆಲೆಗೆ ಮಾಲು ಸಿಗಬೇಕು. ಅದಕ್ಕಾಗಿ ಏರಿಕೆ -ಇಳಿಕೆ ಮಾಡುತ್ತಾ ಸರಾಸರಿ ದರದಲ್ಲಿ ಲಾಭಮಾಡಿಕೊಳ್ಳಲಾಗುತ್ತದೆ. ಈ ವ್ಯಾವಹಾರಿಕ ಆಟದಲ್ಲಿ ದರ ಭಾರೀ ಇಳಿಕೆಯಾಗದಂತೆ ತಡೆಯಲು ನಮ್ಮಲ್ಲಿರುವ ಸಹಕಾರಿ ವ್ಯವಸ್ಥೆಗಳು(CAMPCO, TSS, MAMCOS, TUMKOS ಇತ್ಯಾದಿ) ಬೆಳೆಗಾರರ ಬೆಂಬಲಕ್ಕಿರುವುದು ಸತ್ಯ.
ಕೆಂಪಡಿಕೆ ದರ ಎಷ್ಟು ಏರಬಹುದು?
- ಈಗಿನ ಟ್ರೆಂಡ್ ಪ್ರಕಾರ ಬೆಲೆ ಹಿಂದಿಗಿಂತ ಸ್ವಲ್ಪ ಚೇತರಿಕೆ ಆಗಿದೆ.
- ಹಾಗೆಂದು ಭಾರೀ ಏರಿಕೆಯ ನಿರೀಕ್ಷೆ ಬೇಡ. ಮುಂದಿನ ದಿನಗಳಲ್ಲಿ ಕೊಯಿಲು ನಡೆಯಲಿದೆ.
- ಈ ಬಾರಿ ದರ ಏರಿಕೆ ಬಹಳ ಸಮಯದ ತನಕ ಮುಂದುವರಿಯುವುದು ಸ್ವಲ್ಪ ಸಂಶಯ.
- ಸ್ವಲ್ಪ ಏರಿಕೆ ಆಗಿ ಮತ್ತೆ ಇಳಿಕೆಯಾಗುವ ಸಂಭವ ಇದೆ. ದಾವಣಗೆರೆ , ಚಿತ್ರದುರ್ಗ ಕಡೆ ಕೊಯಿಲು ಪ್ರಾರಂಭವಾಗಿದೆ.
- ಇನ್ನೇನು ಮುಂದಿನ ವಾರ ಶಿವಮೊಗ್ಗದಲ್ಲೂ ಕೊಯಿಲು ಪ್ರಾರಂಭವಾಗುತ್ತದೆ.
- ಹೀಗೆ ಬಿಸಿಲಿನ ವಾತಾವರಣ ಮುಂದುವರಿದರೆ ಸಾಗರ, ಶಿರಸಿ, ಸಿದ್ದಾಪುರ, ಎಲ್ಲಾ ಕಡೆಯಲ್ಲೂ ಕಳೆದ ವರ್ಷಕ್ಕಿಂತ ಮುಂಚೆಯೇ ಕೊಯಿಲು ಪ್ರಾರಂಭವಾಗುವ ಸಾಧ್ಯತೆ ಇರುವ ಕಾರಣ ದರ ಏರಿಕೆ ಕಷ್ಟ.
- ಸುಮಾರಾಗಿ ಈ ಸಲ ಗರಿಷ್ಟ 53,000 ತನಕ ಏರಬಹುದು ಎಂಬ ಊಹನೆ ಇದೆ.
- ಮಾರುಕಟ್ಟೆಗೆ ರಾಶಿ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೆಲೆ ಸ್ವಲ್ಪ ಸಮಯದಲ್ಲಿ ಇಳಿಕೆ ಆಗಲೂಬಹುದು.
ಎಲ್ಲಿ ಯಾವ ದರ ಇತ್ತು:
- ಚೆನ್ನಗಿರಿಯಲ್ಲಿ ರಾಶಿ ಅಡಿಕೆ: 48264, 50812,
- ಭದ್ರಾವತಿಯಲ್ಲಿ ರಾಶಿ ಅಡಿಕೆ: 46565 – 49699,
- ಹೊಸನಗರದಲ್ಲಿ ರಾಶಿ: 49839 – 50600,
- ಕೆಂಪುಗೋಟು: 36511- 37019.
- ಸಾಗರ ರಾಶಿ: 48569-49789.
- ಕೆಂಪುಗೋಟು: 30899 – 35399.
- ಶಿವಮೊಗ್ಗ ರಾಶಿ: 49569 – 50321,
- ಬೆಟ್ಟೆ: 50989 – 52599.
- ಗೊರಬಲು: 36869 – 37269,
- ಸರಕು: 74400 – 84540,
- ಶಿರಸಿ ರಾಶಿ: 49283 -51899.
- ಬೆಟ್ಟೆ: 41900 -45909,
- ಕೆಂಪುಗೋಟು: 33500 – 38599,
- ಸೊರಬ ರಾಶಿ: 48101- 49199,
- ಗೊರಬಲು: 33169- 33509.
- ಸಿದ್ದಾಪುರ: ರಾಶಿ: 48469 -49399.
- ತಟ್ಟೆ ಬೆಟ್ಟೆ: 42109 – 44109.
- ಬಿಳೇ ಗೋಟು: 34699 – 36000.
- ಕೆಂಪುಗೋಟು: 33319 – 34099.
- ಯಲ್ಲಾಪುರ ರಾಶಿ: 50689 – 54899.
- ಬೆಟ್ಟೆ: 43690 – 47815.
- ಆಪಿ: , 56379 – 63275.
- ಬಿಳೇ ಗೋಟು: 34819 – 36050.
- ಕೆಂಪುಗೋಟು: 32019 – 34712.
- ತೀರ್ಥಹಳ್ಳಿ ರಾಶಿ: 50029 – 50369.
- ಸರಕು: 68799 – 82400 .
- ಬೆಟ್ಟೆ: 50049 -51754.
- ಇಡಿ: 49899 – 50299.
- ತುಮಕೂರು ರಾಶಿ: 47100 – 48600.
- ಸಿರಾ: ರಾಸಿ: 48903 – 50000.
ಚಾಲಿ ಕಥೆ ಏನು?
- ಕಳೆದ ವರ್ಷ ನವೆಂಬರ್ ತಿಂಗಳ ನಂತರ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಗ್ರಹಣ ಹಿಡಿದು ಏನೋ ಎಡವಟ್ಟು ಆದಂತೆ ಕಾಣಿಸುತ್ತದೆ.
- ಮಾಹಿತಿಗಳ ಪ್ರಕಾರ ಕೆಲವು ಖರೀದಿದಾರರಿಗೆ ಕೋಟ್ಯಾಂತರ ರೂ. ಅಡಿಕೆ ಹಾಳಾಗಿ ನಷ್ಟವಾಗಿದೆ ಎಂಬ ಸುದ್ದಿ ಇದೆ.
- ಸುಮಾರು 4-5 ತಿಂಗಳ ಕಾಲ ಖಾಸಗಿಯವರು ಹಳೆ ಅಡಿಕೆ ಖರೀದಿಸುದಕ್ಕೇ ಹಿಂದೇಟು ಹಾಕುತ್ತಿದ್ದರು.
- ದರ ಸಹ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆ ಇತ್ತು.
- ಕಳೆದ ವರ್ಷ ಹಳಯ ಅಡಿಕೆಗೂ ಹೊಸತಕ್ಕೂ ರೂ. 100-125 ತನಕ ವ್ಯತ್ಯಾಸ ಇದ್ದುದು ಈ ವರ್ಷ ಕೇವಲ 20-25 ರೂ. ವ್ಯತ್ಯಾಸಕ್ಕೆ ಬಂದಿದೆ.
- ಉತ್ತರ ಭಾರತದಿಂದ ಬೇಡಿಕೆ ಕಡಿಮೆ ಎಂಬ ಉತ್ತರ ಸಿಗುತ್ತಿತ್ತು.
- ಹಾಗೆಂದು ಚಾಲಿ ಉತ್ಪಾದನೆ ಕೆಂಪಡಿಕೆಯಷ್ಟು ಏರಿಕೆ ಆಗಿಲ್ಲ. ಆದರೂ ದರ ಕುಂಟುತ್ತಾ ಸಾಗುತ್ತಿದೆ.
- ಸಪ್ಟೆಂಬರ್ 27 -2023 ಬುಧವಾರ ಕ್ಯಾಂಪ್ಕೋ ಮಹಾಸಭೆ ಇರುವ ಕಾರಣ ಇದಕ್ಕೆ ಮುನ್ನ ದರ ಏರಿಸಬಹುದು ಎಂಬುದು ಬೆಳೆಗಾರರ ವಾದ.
- ಆದರೆ ಏರಿಕೆ ಆಗದಿದ್ದರೂ ಇಳಿಕೆ ಆಗದು ಎಂಬ ನಿರೀಕ್ಷೆ ಇಡಬಹುದು.
- ಈಗಲೂ ಅಡಿಕೆ ದಾಸ್ತಾನು ಹೆಚ್ಚಾಗಿದ್ದು, ಯಾವಾಗ ಬೇಡಿಕೆ ಬರುತ್ತದೆ ಎಂದು ಕಮಿಷನ್ ಏಜೆಂಟ್ ಗಳು ಕಾಯುತ್ತಿದ್ದಾರೆ.
- ಹೊಸ ಬೆಳವಣಿಗೆಯಾಗಿ ಈಗ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಎನ್ನುತ್ತಾರೆ.
- ಯಾಕೆ ಹೀಗಾಯಿತು ಎಂಬುದಕ್ಕೆ ಸ್ಪಷ್ಟ ಮಾಹಿತಿ ಇಲ್ಲ.
- ಈಗ ಒಂದು ವಾರದಿಂದ ಮತ್ತೆ ಸ್ವಲ್ಪ ಮಾರುಕಟ್ಟೆ ಹಿಂದಕ್ಕೆ ಬಂದಿದೆ.
- ಆದರೂ ಚೌತಿ ತರುವಾಯ ನವರಾತ್ರೆ ಸಮಯಕ್ಕೆ ದರ ಏರಿಕೆ ಆಗಬಹುದು ಎಂಬ ನಂಬಿಕೆ.
- ಹೊಸ ಚಾಲಿಗೆ 45,000 ತನಕ ದರ ಇದೆಯಾದರೂ ಎರಡನೇ ದರ್ಜೆಯ ಪಟೋರಾ, ಉಳ್ಳಿ, ಕರಿ ಇತ್ಯಾದಿಗಳಿಗೆ ಶೇ.10-15 ದರ ಕಡಿಮೆಯಾಗಿದೆ.
ಎಲ್ಲೆಲ್ಲಿ ಯಾವ ದರ ಇತ್ತು:
- ಮಂಗಳೂರು ಮಾರುಕಟ್ಟೆ: ಹೊಸತು:41,000-45,000
- ಹಳೆಯದು: 46,500-47,500
- ಪುತ್ತೂರು ಹೊಸತು:42500-45,000
- ಹಳೆಯದು:46,000-48,000
- ಸುಳ್ಯ: ಹೊಸತು: 41,000 -45,000
- ಹಳೆಯದು:45,000-48,000
- ವಿಟ್ಲ: ಹೊಸತು: 42500-45,500
- ಹಳೆಯದು:46,000-48,500
- ಬಂಟ್ವಾಳ ಹೊಸತು: 41,500 -45,000
- ಹಳೆಯದು:46,000-47,500
- ಕುಂದಾಪುರ ಹೊಸತು: 40000-45,000
- ಹಳೆಯದು: 46000-46,500
- ಕಾರ್ಕಳ ಹೊಸತು:42500-45,000
- ಹಳೆಯದು: 46500-48,000
- ಬೆಳ್ತಂಗಡಿ ಹೊಸತು:41000-45,000
- ಪಟೋರಾ: 36,000-36,500
- ಕಣ್ಣೋಟ್ಟೆ:37,000-38,500
- ಉಳ್ಳಿ ಗಡ್ಡೆ: 30,000
- ಕರಿಕೋಕಾ: 28,000
- ಹಳೆಯದು:46,500-47,500
- ಸಿರ್ಸಿ: 39854 – 42199.
- ಸಾಗರ: 37711 – 38579.
- ಕುಮಟಾ: 4052941339 (ಹಳೆಯದು)
- ಹೊಸತು: 40269 – 41019.
- ಯಲ್ಲಾಪುರ: 40840 -42099.
- ಹೊಸನಗರ: 37599, 37599
- ಸೊರಬ: 38033 -38499.
- ಉಡುಪಿ, ಸಿರಸಿ, ಸಾಗರ, ಸೊರಬದಲ್ಲಿ ಸಿಪ್ಪೆ ಗೋಟು 21,000-22,000
ಅಡಿಕೆ ಬೆಳೆಗಾರರ ತಿಳುವಳಿಕೆಗಾಗಿ:
- ನಿಮ್ಮೂರಿನ ಹಳ್ಳಿಯಲ್ಲಿ ಗುಟ್ಕಾ ದ ಮುಖ್ಯ ಮಾರಾಟಗಾರರ ಪರಿಚಯ ಇದ್ದರೆ ಅವರಲ್ಲಿ ಒಂದು ಗುಟ್ಕಾ ಚೀಲ ಕೇಳಿ.
- ಕೊಡಬಹುದು ಇಲ್ಲವೇ ನಾಳೆ ಕೊಡುತ್ತೇನೆ ಎನ್ನಬಹುದು.
- ಯಾಕೆಂದರೆ ಪ್ರತೀ ಸಣ್ಣ ಹಳ್ಳಿಯಲ್ಲಿಯೂ ದಿನಕ್ಕೆ 10 ಕಿಲೋ ತೂಗುವ ಒಂದು ಚೀಲವಾದರೂ ಗುಟ್ಕಾ ಮಾರಾಟವಾಗುತ್ತದೆ.
- ರಾಜ್ಯದ ಲಕ್ಷಾಂತರ ಹಳ್ಳಿಗಳಲ್ಲಿ ತಿಂದುಗುಳುವ ಈ ಗುಟ್ಕಾ ಎಷ್ಟು ಪ್ರಮಾಣದಲ್ಲಿ ಮಾರಾಟವಾಗಬಹುದು?
- ಗುಟ್ಕಾ ಮಾರಾಟವಾದಷ್ಟು ಪಾನ್ ಬೀಡಾಗಳು ಮಾರಾಟವಾಗುವುದಿಲ್ಲ.
- ಹಾಗಾಗಿ ಮುಂದೆ ಚಾಲಿ ಅಡಿಕೆಗೆ ಬೇಡಿಕೆ ಕಡಿಮೆ ಆಗಲೂಬಹುದು.
- ಆದರೂ ಮಾರುಕಟ್ಟೆ ಯಾವಾಗ ಏನಾಗುತ್ತದೆ ಎಂಬುದನ್ನು ಊಹಿಸುವುದು ತುಂಬಾ ಕಷ್ಟ.
ಕರಾವಳಿಯ ಅಡಿಕೆ ಬೆಳೆಗಾರರು ಹಳೆ ಚಾಲಿ ಅಡಿಕೆಯನ್ನು ಇನ್ನು ದಾಸ್ತಾನು ಇಡುವುದು ಅಷ್ಟೊಂದು ಲಾಭದಾಯಕವಲ್ಲ. ಮತ್ತೆ ಪುನಹ ಹಳೆ ಚಾಲಿಯ ದರ ಕಡಿಮೆಯಾಗಿದೆ. ಇನ್ನೂ ಕಡಿಮೆ ಆಗಬಹುದು ಎಂಬ ವದಂತಿಯೂ ಇದೆ. ಹಾಗಾಗಿ ತಕ್ಷಣವೇ ಮಾರಾಟ ಮಾಡುವುದು ಉತ್ತಮ ಎಂಬುದಾಗಿ ಕೆಲವು ವರ್ತಕರು ಹೇಳುತ್ತಾರೆ. ಹೊಸ ಅಡಿಕೆ ದಾಸ್ತಾನು ಇಡಿ. ಕಳೆದ ವರ್ಷದ ಅಡಿಕೆಗೆ ಒಟ್ಟಾರೆ ಗುಣಮಟ್ಟ ಉತ್ತಮವಾಗಿರುವ ಕಾರಣ ಬೆಲೆ ಏರಿಕೆ ಆಗಬಹುದು. ಕೆಂಪಡಿಕೆ ಹಳತು ಮಾರಾಟ ಮಾಡಿ. ಇನ್ನು ಎರಡು ಮೂರು ವಾರ ಕಾಲ ಸ್ವಲ್ಪ ಚೇತರಿಕೆ ಆಗುವ ಸಂಭವ ಇದ್ದು, ದರ ವಿಚಾರಿಸಿ ಮಾರಾಟ ಮಾಡಿ.