ಜೈವಿಕ ಗೊಬ್ಬರಗಳ ಮಾರಾಟ ಮತ್ತು ನಂಬಿಕಾರ್ಹತೆ.

ಜೈವಿಕ ಗೊಬ್ಬರ ಸಿಂಪರಣೆ

ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಉತ್ಪನ್ನಗಳ  ತಯಾರಿಕೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಈ ಜೈವಿಕ ಉತ್ಪನ್ನಗಳು ಒಳ್ಳೆಯ  ಉತ್ಪನ್ನಗಳಾದರೂ ನಾಯಿಕೊಡೆಗಳಂತೆ ತಯಾರಕರು ಹುಟ್ಟಿಕೊಳ್ಳುತ್ತಿದ್ದಾರೆ.ಜೊತೆಗೆ ದರ ಸ್ಪರ್ಧೆ ಇರುವಾಗ ಗ್ರಾಹಕರಿಗೆ ಇದು ಒಂದು ಗೊಂದಲದ ಗೂಡಾಗಿದೆ. ಯಾವುದು ಉತ್ತಮ, ಯಾವುದು ಕಳಪೆ ಎಂದು ಅರಿಯುವುದಕ್ಕೆ ಅಸಾಧ್ಯವಾದ ಈ ಉತ್ಪನ್ನಗಳಲ್ಲಿ ಹೇಗಾದರೂ ನಂಬಿಕೆ ಇಡುವುದು ತಿಳಿಯದಾಗಿದೆ.  

ಜೈವಿಕ ಗೊಬ್ಬರ ಅಥವಾ ಜೀವಾಣುಗಳು ಎಂದರೆ ಅದು ಕಣ್ಣಿಗೆ ಕಾಣದ ಜೀವಿಗಳು.ಇದರಲ್ಲಿ ಕೆಲವು ಪೋಷಕ ಒದಗಿಸುವಂತವುಗಳು ಮತ್ತೆ ಕೆಲವು ಕೀಟ  ರೋಗ ನಿಯಂತ್ರಿಸುವವವುಗಳು ಹಾಗೂ ಇನ್ನೂ ಕೆಲವು ಬೆಳವಣಿಗೆ  ಪ್ರಚೋದನೆ ಮಾಡುವವುಗಳು ಇವೆ.ಈ ಉತ್ಪನ್ನಗಳು ಕೃಷಿಯಲ್ಲಿ ಪೋಷಕಾಂಶ ಉಳಿಸುತ್ತವೆ. ಮಣ್ಣಿನ ಗುಣಮಟ್ತವನ್ನೂ ಸುಧಾರಿಸುತ್ತದೆ. ಆದರೆ ಒಂದೇ ಒಂದು ಸಮಸ್ಯೆ ಹೀಗೆಲ್ಲಾ ಇದನ್ನು ಸಿಕ್ಕ ಸಿಕ್ಕವರು ಉತ್ಪಾದಿಸಲಿಕ್ಕೆ ಆಗುತ್ತದೆಯೇ ಎಂಬುದು.

ಎಲ್ಲವೂ ಮಣ್ಣಿನ ಮೂಲದ್ದು:

  • ಇವೆಲ್ಲವನ್ನೂ ಯಾವುದೇ ರಾಸಾಯನಿಕ ಕ್ರಿಯೆಯಿಂದ ಉತ್ಪಾದಿಸಲಾಗಿಲ್ಲ.
  • ಅವು ಮಣ್ಣಿನಲ್ಲೇ ಇದ್ದ ಜೀವಿಗಳಾಗಿದ್ದು, ಅದನ್ನು ಸಂಗ್ರಹಿಸಿ ಕೃತಕವಾಗಿ ವಂಶಾಭಿವೃದ್ದಿ ಮಾಡಿ ಮತ್ತೆ ಮರಳಿ ಮಣ್ಣಿಗೆ  ಕೊಡುವ ಕ್ರಿಯೆಯೇ ಜೈವಿಕ ಕೃಷಿ.

ಇದು ಇತ್ತೀಚಿನ ಬೆಳವಣಿಗೆ.

  • ಮಣ್ಣಿನಲ್ಲಿ ಹಾನಿಕಾರಕ ಮತ್ತು ಉಪಕಾರೀ ಎಂಬ ಎರಡೂ ನಮೂನೆಯ ಜೀವಾಣುಗಳು ಇರುತ್ತವೆ.
  • ಎಲ್ಲಿ ಯಾವುದು ಇರುತ್ತದೆ ಎಂಬುದು ಹೇಳಲಿಕ್ಕೆ  ಬರುವುದಿಲ್ಲ.
  • ಎಲ್ಲಾ ಮರಗಳಿಗೂ ರೋಗ ಬಂದರೂ ಒಂದೆರಡು ಮರಗಳಿಗೆ  ರೋಗ ಅಥವಾ ಕೀಟ ಬಾಧೆ ತಗಲಿಲ್ಲ ಎಂದಾದರೆ ಅಲ್ಲಿ ರೋಗಾಣುಗಳ  ವಿರುದ್ಧ  ಹೋರಾಡುವ ಜೀವಿ ಇರಬಹುದು ಅಥವಾ ಅದಕ್ಕೇ ರೋಗ ನಿರೋಧಕ ಶಕ್ತಿ ಇರಬಹುದು ಎಂದು ತಿಳಿಯ ಬಹುದು ಈ ಆಧಾರದ ಮೇಲೆ ಜೀವಾಣುಗಳನ್ನು ಪತ್ತೆ ಹಚ್ಚಲಾಗಿದೆ.
  • ಈ ಜೀವಾಣುಗಳಲ್ಲಿ ಮೊದಲು ಪರಿಚಿತವಾದುದು ರೈಜೋಬಿಯಂ ಜೀವಾಣು. ಆನಂತರ ಹಲವಾರು ಜೀವಾಣಿಗಳನ್ನು ಪತ್ತೆಹಚ್ಚಲಾಯಿತು.

 

ಈಗಿನ ಬೆಳವಣಿಗೆಯಂತೆ  ಸಾರಜನಕ ರಂಜಕ,ಪೊಟಾಶಿಯಂ, ಅಲ್ಲದೆ ಕೆಲವು ಸೂಕ್ಷ್ಮ ಪೋಷಕಗಳನ್ನು , ಜೊತೆಗೆ ರೋಗಕಾರಗಳನ್ನು ಹತ್ತಿಕ್ಕುವ, ಪೀಡೆಗಳನ್ನು  ಕೊಲ್ಲುವ ಮತ್ತು ಬೆಳವಣಿಗೆ  ಪ್ರಚೋದಕವಾಗಿ ಕೆಲಸ ಮಾಡಬಲ್ಲ ನೂರಾರು ಜೀವಾಣುಗಳನ್ನು  ಪತ್ತೆ ಹಚ್ಚಲಾಗಿದೆ.

  • ಅವುಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಬ್ರಾಂಡ್ ಗಳಲ್ಲಿ   ಲಭ್ಯವಿವೆ.
  •  ಜೀವಾಣುಗಳು ತಮ್ಮ ಜೀವನದದಲ್ಲಿ ತನ್ನ ವೈರಿ ಜೀವಿಯಲ್ಲಿ ಪರಾವಲಂಭಿಯಾಗಿ ಸಹಜೀವನ ನಡೆಸಿ ಬದುಕುತ್ತದೆ.
  • ಆಗ ಅದರ ಆಶ್ರಯ ಜೀವಿ ಸಾಯುತ್ತದೆ ಅಥವಾ ಹತ್ತಿಕ್ಕಲ್ಪಡುತ್ತದೆ. ಇದೇ ಜೈವಿಕ ನಿಯಂತ್ರಕದ ಕೆಲಸ.

ಈಗ ಬಳಕೆಯಲ್ಲಿರುವ ಬಹುತೇಕ  ಜೀವಾಣುಗಳ ಪತ್ತೆ  ಮತ್ತು ಅದರ ಮೂಲ ಸರಕಾರೀ ಸ್ವಾಮ್ಯದಲ್ಲಿದ್ದು, ಅವರಿಂದ ಒಪ್ಪಂದ ಮಾಡಿಕೊಂಡು ಬಹಳಷ್ಟು ಜನ ಈಗ ಜೈವಿಕ ಗೊಬ್ಬರ ಮತ್ತು ನಿಯಂತ್ರಕ ತಯಾರಿಕೆ  ಮತ್ತು ಪೂರೈಕೆಗೆ ಇಳಿದಿದ್ದಾರೆ.


ಸರಕಾರದ ಮೂಲದಿಂದ ಅಂದರೆ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಈ ಜೈವಿಕ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆ ಮಾಡುವ ವ್ಯವಸ್ಥೆಗಳನ್ನು ಇಟ್ಟುಕೊಂಡಿದ್ದರೂ ಸಹ ಅನಿವಾರ್ಯ ಕಾರಣಗಳಿಂದ ರೈತರಿಗೆ ಇಲ್ಲಿಂದ ಪೂರೈಕೆ ಆಗುತ್ತಿಲ್ಲ.

  • ಈಗ ಖಾಸಗಿ ಸ್ವಾಮ್ಯದ ಸಂಸ್ಥೆಗಳು ವ್ಯಕ್ತಿಗಳು ಈ ವ್ಯವಹಾರದಲ್ಲಿ  ಹೆಚ್ಚಿನ  ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
  • ಇದರಲ್ಲಿ ಕೆಲವರು ಯಾವುದೋ ಗೊಬ್ಬರ ಮಾರಾಟ ಮಾಡುತ್ತಿದ್ದ ಧಂಧೆಯಲ್ಲಿದ್ದರೂ ಇದ್ದಾರೆ.
  • ಮಾರುಕಟ್ಟೆಯಲ್ಲಿ ಇಂತಹ ನೂರಾರು  ಕಂಪೆನಿಗಳಿದ್ದು, ಬಳಕೆ ಮಾಡುವ ರೈತರಿಗೆ ಇದು ಗೊಂದಲದ ಗೂಡಾಗಿದೆ.

ಜೈವಿಕ ಉತ್ಪನ್ನವನ್ನು ಕೊಟ್ಟಿಗೆ ಗೊಬ್ಬರ ತಯಾರಿಸಿದಂತೆ  ತಯಾರು ಮಾಡಲಿಕ್ಕೆ ಆಗುವುದಿಲ್ಲ. ಅದರ ತಳಿ (ಸ್ಟ್ರೈನ್) ಗಳನ್ನು ತಂದು ಅದನ್ನು ಮಾಧ್ಯಮದಲ್ಲಿ ಬೆಳೆಸಿ ಸಂಖ್ಯಾಭಿವೃದ್ದಿ ಮಾಡಿ ಒದಗಿಸಬೇಕಾಗುತ್ತದೆ. ಅದಕ್ಕೆ ತಜ್ಞತೆಯೂ  ಬೇಕಾಗುತ್ತದೆ.

  • ಈಗ ಯಾವ ತಜ್ಞತೆಯೂ ಇಲ್ಲದದವರೂ ಸಹ ಸರಕಾರೀ ಸ್ವಾಮ್ಯದ ಸಂಸ್ಥೆಗಳ ಮೂಲಕ ಜೀವಾಣು ಕಲ್ಚರ್ ಅನ್ನು ತಂತ್ರಜ್ಞಾನ ವರ್ಗಾವಣೆಯ ಮೂಲಕ ನಿರ್ಧರಿತ ಮೊತ್ತದ ಪಾವತಿ ಮೇರೆಗೆ ಪಡೆದು ತಾವೇ ಅದನ್ನು ಬೆಳೆಸಿ ತಮ್ಮ ಬ್ರಾಂಡ್ ಮೂಲಕ ಮಾರಾಟ ಮಾಡುತ್ತಿದ್ದಾರೆ.
  • ಇದರಲ್ಲಿ ಎಷ್ಟು ಜೀವಾಣುಗಳು ಇವೆ, ಇವೆಯೋ ಇಲ್ಲವೋ ಎಂಬುದಂತೂ  ಯಾರಿಗೂ ಗೊತ್ತಿಲ್ಲದ ವಿಚಾರ.

ಇದು ಶೊಷಣೆ ಆಗದಿರಲಿ;

  • ಜೀವಾಣು ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವುದು ಎಂದರೆ ಅದು ಕಷ್ಟದ ಕೆಲಸ.
  • ಇದನ್ನು ಕೃಷಿ ವಿಶ್ವ ವಿಧ್ಯಾನಿಲಯ ಹಾಗೂ  ಕೆಲವು ಸಂಶೋಧಾನಾ  ಸಂಸ್ಥೆಗಳು ಮಾಡಿಕೊಡುತ್ತವೆಯಾದರೂ ಅದಕ್ಕೆ ತಗಲುವ ವೆಚ್ಚ ಅಪಾರ.
  • ಗುಣಮಟ್ಟ ಎಂದರೆ ದ್ರಾವಣ ಅಥವಾ ಹುಡಿಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ಸಾಂದ್ರತೆ.
  • ಈ ಸಾಂದ್ರತೆ ಹೆಚ್ಚು ಇದ್ದರೆ ಅದು ಉತ್ತಮವಾಗಿ ಕೆಲಸ ಮಾಡುತ್ತದೆ.
  • ಕಡಿಮೆ ಇದ್ದರೆ ಕೆಲಸ ಚೆನ್ನಾಗಿರುವುದಿಲ್ಲ.
  • ಇದನ್ನು ಯಾವುದನ್ನೂ ರೈತ ಮಾಡಲಿಕ್ಕೆ ಆಗುವುದಿಲ್ಲ.
  • ತಜ್ಞರನ್ನು ಅವಲಂಭಿಸಿ ಆಗಬೇಕು.ಇದನ್ನು ಸಂಬಂಧಿಸಿದವರು ಸೀರಿಯಸ್ ವಿಷಯ ಎಂದು ಪರಿಗಣಿಸದಿದ್ದರೆ ಇನ್ನೂ ಇನ್ನೂ ಉತ್ಪಾದಕರು ಹುಟ್ಟಿಕೊಳ್ಳುತ್ತಾ ಇರುತ್ತಾರೆ.
  • ರೈತರು ಮೋಸ ಹೋಗುತ್ತಲೇ ಇರುತ್ತಾರೆ.

 

ಜೈವಿಕ ಗೊಬ್ಬರಗಳನ್ನು ಖರೀದಿ ಮಾಡುವಾಗ ತಯಾರಕರ ಪೂರ್ವಪರವನ್ನು ಅರಿತುಕೊಂಡು ಬಳಕೆ  ಮಾಡಿ.

 

Leave a Reply

Your email address will not be published. Required fields are marked *

error: Content is protected !!