ವೀಳ್ಯದೆಲೆ ಬೆಳೆಗಾರರ ಸಮಸ್ಯೆಗೆ ಇಲ್ಲಿದೆ ಉತ್ತರ.

ದೈನಂದಿನ ಆದಾಯ ಕೊಡಬಲ್ಲ ವೀಳ್ಯದೆಲೆಗೆ, ನೋಟದ ಮೇಲೆ ಮಾರುಕಟ್ಟೆ ನಿಂತಿದೆ.ಉತ್ತಮ ನೋಟದ ಎಲೆಗಳು  ರೋಗ  ರಹಿತ ಬಳ್ಳಿಗಳಿಂದ ಮಾತ್ರ ದೊರೆಯಬಲ್ಲುದು.

  • ವೀಳ್ಯದೆಲೆಯು ಒಂದು ಪ್ರಮುಖತೋಟಗಾರಿಕಾ ಬೆಳೆಯಾಗಿದ್ದು.
  • ಕರ್ನಾಟಕದಲ್ಲಿಇದರ ವಿಸ್ತೀರ್ಣ  8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್.
  • ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯ ಬೆಳೆವಣಿಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ.
  • ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತುಚಿಬ್ಬುರೋಗ ಪ್ರಮುಖ ರೋಗಗಳಾಗಿವೆ.
  • ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿಗೆ ಎಲ್ಲಾ ಕಡೆ ಭಾರೀ ನಷ್ಟವನ್ನು ಉಂಟು ಮಾಡುತ್ತಿದೆ.

ಕರ್ನಾಟಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ವೀಳ್ಯದೆಲೆ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಹಾವೇರಿ, ದಾವಣಗೇರೆ,  ಚಿತ್ರದುರ್ಗ ,  ಮೈಸೂರು ಮತ್ತು ಬಾಗಲಕೋಟೆ ಗಳಲ್ಲಿ ಈ ರೋಗವು ಅತೀ ಹೆಚ್ಚು ಹಾನಿಯನ್ನುಉಂಟು ಮಾಡುವುದು ಕಂಡುಬಂದಿದೆ.

ರೋಗದ ಲಕ್ಷಣಗಳು:

  •        ಈ ರೋಗವು ಪ್ರಾರಂಬಿಕ ಹಂತದಲ್ಲಿ ಎಲೆಗಳ ಮೇಲೆ ನೀರಿನಿಂದ ಆವೃತ ಚುಕ್ಕೆಗಳನ್ನು ಹೊಂದಿದ್ದು ಕ್ರಮೇಣವಾಗಿಕಂದು ಬಣ್ಣಕ್ಕೆ ತಿರುಗುತ್ತವೆ.
  •        ಈ ಚುಕ್ಕೆಗಳ ಸುತ್ತ ಹಳದಿ ಬಣ್ಣವು ಆವೃತಗೊಂಡಿರುತ್ತದೆ.
  •      ರೋಗವು ಪಸರಿಸುತ್ತ ಎಲೆಯ ಹೆಚ್ಚಿನ ಭಾಗವನ್ನು ಆವರಿಸಿ ರೋಗ ಪೀಡಿತ ಭಾಗದಲ್ಲಿ ಸುಟ್ಟಂತೆಕಾಣುತ್ತದೆ.
  •         ರೋಗ ಪೀಡಿತ ಎಲೆಗಳು ತನ್ನ ಹೊಳೆತನ್ನು ಕಳೆದುಕೊಂಡು ಹಳದಿ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತದೆ.
  •        ವಾತಾವರಣದಲ್ಲಿಆದ್ರ್ರತೆ ಹೆಚ್ಚಾದಂತೆ ರೋಗದ ಸೊಂಕು ಕಾಂಡದ ಮೇಲೆ ಕಾಣಿಸಿಕೊಳ್ಳುತ್ತದೆ.
  •       ಎಣ್ಣೆಯುಕ್ತ / ನೀರಿನಿಂದಆವೃತವಾದಂತಹ ಕಪ್ಪು ಮಚ್ಚೆಗಳು ಕೆಳ ಭಾಗದಕಾಂಡ ಮತ್ತು ಗಿಣ್ಣು / ಕಣ್ಣುಗಳ ಮದ್ಯದಲ್ಲಿ ಕಾಣಿಸಿಕೊಳ್ಳುತ್ತದೆ.
  • ಇಂತಹ ಮಚ್ಚೆಗಳು ಗಾತ್ರ ಹೆಚ್ಚಾದಂತೆ ಎರಡು ದಿಕ್ಕಿನಲ್ಲೂ ಪಸರಿಸಿ ಗಿಡದಕಾಂಡದ ತುಂಬೆಲ್ಲಾ ಹರಡುತ್ತದೆ.
  •        ರೋಗ ಪೀಡಿತ ಕಾಂಡಗಳು ನಿಶಕ್ತಗೊಂಡುಗಿಣ್ಣು/ಕಣ್ಣುಗಳ ಜಾಗದಲ್ಲಿ ಸುಲಭವಾಗಿ ಮುರಿದು ಹೋಗುತ್ತದೆ ಹಾಗೂ ಗಿಡಗಳು ಪೂರ್ತಿಒಣಗುತ್ತವೆ.

ರೋಗಾಣು:

  • ಈ ರೋಗವನ್ನುಜಾಂಥೊಮೋನಾಸ್‍ಆಕ್ಸೋನೊಪೋಡಿಸ್ ಪಿ.ವಿ ಬಿಟ್ಲಿಕೋಲ ಎಂಬ ದುಂಡಾಣುವಿನಿಂದ ಬರುತ್ತದೆ.
  • ರೋಗವು ಹೆಚ್ಚಿನ ಆದ್ರ್ರತೆಯಿದ್ದಂತಹ ವಾತಾವರಣ ಅಥವಾ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
  • ಮಳೆ ಹನಿಯಿಂದ ಮತ್ತುತುಂತುರು ನೀರಿನಿಂದ ಹೆಚ್ಚಾಗಿ ಹರಡುತ್ತದೆ.

ಅನುಕೂಲಕರ ವಾತಾವರಣ:

  •         2-3 ದಿನಗಳವರೆಗೆ ಮೋಡಕವಿದ ವಾತಾವರಣ,28-320 ಸೆ. ಉಷ್ಣಾಂಶ, 85% ಕ್ಕಿಂತಆದ್ರ್ರತೆ ಹೆಚ್ಚದಲ್ಲಿತೀವ್ರತೆ ಹೆಚ್ಚುತ್ತದೆ.
  •        ಎಲೆ ಬಳ್ಳಿಯಲ್ಲಿ ಕಾಣಿಸಿಕೊಳ್ಳುವ ಸಹಯೋಗಿ ಕೀಟಗಳಿಂದ ಈ ರೋಗವು ಒಂದು ಎಲೆಯಿಂದ ಮತ್ತೊಂದು ಗಿಡಕ್ಕೆ ಹರಡಲು ಉತ್ತೇಜನ ನೀಡುತ್ತದೆ.
  •       ಉದುರಿ ಬಿದ್ದರೋಗಗ್ರಸ್ತ ಎಲೆಗಳು ಸೊಂಕಾಗಿ ಉಳಿಯುತ್ತವೆ ಇಂತಹ ಎಲೆಗಳಲ್ಲಿ ದುಡಾಂಣುವು ಬದುಕುಳಿದಿದ್ದು ಮುಂದಿನ ಬೆಳೆಗೆ ಮಳೆಯ ನೀರಿನ ಸಿಡಿತದೊಂದಿಗೆ ಪಸರಿಸುತ್ತದೆ.
  •         ತುಂತುರು ನೀರಾವರಿ ಆಳವಡಿಸಿದ ತೋಟದಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬಂದಿದೆ.

ಸಮಗ್ರರೋಗ ಹತೋಟಿಕ್ರಮ:

  •         ರೋಗರಹಿತ ತೋಟದಿಂದ ಅಭಿವೃದ್ದಿ ಪಡಿಸಿದ ಆರೋಗ್ಯಕರ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು.
  •         ವೀಳ್ಯದೆಲೆ ತೋಟವನ್ನು ಕಳೆಮುಕ್ತವಾಗಿ ನಿರ್ವಹಿಸಬೇಕು.
  •       ರೋಗಪೀಡಿತ ಎಲೆ ಹಾಗೂ ಬಳ್ಳಿಯನ್ನು ಕಿತ್ತು ಸರಿಯಾದ ರೀತಿಯಲ್ಲಿ ನಾಶಪಡಿಸಲು ಭೂಮಿಯಲ್ಲಿ ಗುಂಡಿತೊಡಿ ಹೂತುಹಾಕಬೇಕು ಅಥವಾ ಸುಟ್ಟು ಹಾಕಬೇಕು ಇದರಿಂದ ಎಲೆಗಳಲ್ಲಿ ಮತ್ತು ಬಳ್ಳಿಗಳಲ್ಲಿ ಉಳಿದುಕೊಂಡು ಪಸರಿಸುವ ಸೊಂಕನ್ನು ನಾಶಗೊಳಿಸಬಹುದು.
  •         ತುಂತುರು ನೀರಾವರಿ ಪದ್ದತಿ ಅಳವಡಿಸಬಾರದು.
  •        ಬಳ್ಳಿ ಇಳಿಸಿದ ನಂತರರೋಗಗ್ರಸ್ಥ ಎಲೆಗಳು / ಬಳ್ಳಿಗಳು ಇದ್ದಲ್ಲಿ ರಸಸಾರ 7 ಇರುವ ಶೇಕಡ 1 ರ ಬೋರ್ಡೊದ್ರಾವಣವನ್ನು ನೆನೆಯುವಂತೆ ಸುರಿಯಬೇಕು.
  •         ಎಲೆ ಬಳ್ಳಿಯಲ್ಲಿ ಬರುವ ಕೀಟಗಳ ಹತೋಟಿ ಮಾಡಿದಾಗ ಈ ರೋಗದ ಪ್ರಸರಣೆಯನ್ನು ಕಡಿಮೆಗೊಳಿಸಬಹುದು.
  •         ಎಲೆಯನ್ನುಕೊಯ್ಯುವಾಗ ರೋಗಗ್ರಸ್ಥ ಎಲೆಗಳಿಗೆ ಉಪಯೋಗಿಸುವ ಕಬ್ಬಿಣದ ಉಗುರನ್ನು (ಬ್ಲೇಡನ್ನು) ರೋಗರಹಿತ ಎಲೆಗಳನ್ನು ಕಟಾವು ಮಾಡಲು ಉಪಯೋಗಿಸಬಾರದು.
  •        ರೋಗ ಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿರೋಗಗ್ರಸ್ಥ ಎಲೆಗಳನ್ನು ತೆಗೆದು ಹಾಕಿ ನಂತರ ಅಂತಹ ಬಳ್ಳಿಗಳಿಗೆ ಸ್ಟ್ರೆಪ್ಟೋಸೈಕ್ಲೀನ್ 0.5 ಗ್ರಾಂ.+ ತಾಮ್ರದ ಆಕ್ಸಿಕ್ಲೋರೈಡ್ 3ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ 12 ರಿಂದ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮಾ, ಸುಡೋಮೋನಸ್ ಮುಂತದವುಗಳನ್ನು ಕೊಟ್ಟಿಗೆ ಗೊಬ್ಬರದಜೊತೆ ಸೇರಿಸುವುದರಿಂದ ಬಳ್ಳಿಗಳಲ್ಲಿ ರೋಗನಿರೋದಕತೆ ಹೆಚ್ಚಾಗುತ್ತದೆ

 ಬರಹಗಾರರು: ಮಧುಶ್ರೀ ಕೆರಕಲಮಟ್ಟಿ (ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟ)
ಮತ್ತು ಶೃತಿ ಟಿ. ಎಚ್. (ಕೃಷಿ ವಿಶ್ವವಿದ್ಯಾಲಯ ರಾಯಚೂರು)

Leave a Reply

Your email address will not be published. Required fields are marked *

error: Content is protected !!