ಬಹುತೇಕ ಎಲ್ಲಾ ಬೆಳೆಗಳಿಗೂ ರಸ ಹೀರಲು ಒಂದು ತಿಗಣೆ ಪ್ರಭೇದದ ಕೀಟ ಬರುತ್ತದೆ. ಇದು ತರಕಾರಿಗಳು, ಭತ್ತ, ಮೆಣಸು ಮುಂತಾದವುಗಳಲ್ಲಿ ಕುಳಿತು ರಸ ಹೀರಿ ಗಣನೀಯ ಬೆಳೆ ಹಾನಿ ಮಾಡುತ್ತವೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಬಂಬು ಕೀಟ ಎನ್ನುತ್ತಾರೆ. ಇವು ತಿಗಣೆಗಳು. ವಾಸನೆಯಿಂದ ಕುಡಿವೆ. ಹಾಸಿಗೆಯ ಎಡೆಗಳಲ್ಲಿ ವಾಸ ಮಾಡುವ ತಿಗಣೆಯಂತೆ ಇದು. ಇದು ರಸ ಹೀರಿದ ತರಕಾರಿ, ಹಣ್ಣು ಹಂಪಲುಗಳು ವಾಸನೆಯಿಂದ ಕೂಡಿರುತ್ತದೆ.
- ಕೈಯಲ್ಲಿ ಮುಟ್ಟಿದರೆ ಸಾಕು ಅಸಹ್ಯ ವಾಸನೆ ಕೊಡಬಲ್ಲ ಸಾವಿರಾರು ಬಗೆಯ ಕೀಟಗಳಿವೆ.
- ಆರು ಕಾಲುಗಳು ಮತ್ತು ಎರಡು ಮೀಸೆಗಳು ಇರುತ್ತವೆ.
- ಕೆಲವು ಸಣ್ಣ ಸಾಸಿವೆಯಷ್ಟೂ ಮತ್ತೆ ಕೆಲವು ಹೆಬ್ಬೆಟ್ಟಿನಷ್ಟು ದೊಡ್ದದೂ, ಹಾಗೆಯೇ ಕೆಲವು ಕಡ್ಡಿಯಾಕಾರದಲ್ಲಿ ಇಂದು ಇಂಚಿನಷ್ಟೂ ದೊಡ್ಡದಿರುತ್ತವೆ.
- ಇವು ಹಸುರು, ಕಂದು, ಕಪ್ಪು, ಬೂದು ಮುಂತಾದ ಹಲವು ಬಣ್ಣಗಳಲ್ಲಿ ಸಾವಿರಾರು ಪ್ರಭೇಧಗಳಲ್ಲಿ ಇರುತ್ತವೆ.
ಬಂಬುಗಳು ಏನು ಮಾಡುತ್ತವೆ:
- ನಾವು ಭತ್ತದ ತೆನೆಯ ರಸ ಹೀರುವ ಬಂಬು ಕೀಟದ ಬಗ್ಗೆ ಬಹಳಷ್ಟು ಕೇಳಿದ್ದೇವೆ.
- ಬರೇ ಭತ್ತ ಮಾತ್ರವಲ್ಲ. ಬಹುತೇಕ ಬೆಳೆಗಳಿಗೆ ಇದರದ್ದೇ ಆದ ಪ್ರಬೇದದ ಕೀಟ ತೊಂದರೆ ಮಾಡುತ್ತದೆ.
- ಇದು ಹಾರುವ ಗುಣದ ಸಾಮಾನ್ಯ ರಸ ಹೀರುವ ಕೀಟ.
- ಇದಕ್ಕೆ Stink bugs ಎಂದು ಕರೆಯುತ್ತಾರೆ. ಇದು Arthropoda ಗುಂಪಿನ Hemiptera ಪ್ರಭೇಧಕ್ಕೆ ಸೇರಿದ ಕೀಟ.
- ಅದು ಎಲ್ಲಿಂದ ಬರುತ್ತದೆ ಎಂಬುದು ಸಾಮಾನ್ಯ ರೈತರಿಗೆ ಗೊತ್ತಾಗದು.
- ನಾವು ತರಕಾರಿಗಳಾದ ಹೀರೆ, ಹಾಗಲ, ಬೆಂಡೆ, ಅಲಸಂದೆ , ಕಡಲೆ ಸೋಯಾ ಬೀನ್, ಮೆಣಸು ಏನೇ ಬೆಳೆದರೂ ಅಲ್ಲಿಗೆ ಅವು ಹಾಜರಾಗುತ್ತವೆ.
- ಸೇಬು ಬೆಳೆಯಲ್ಲಿ ಇದರ ತೊಂದರೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
- ಪ್ರಾರಂಭದಲ್ಲಿ ಎಲ್ಲಿರುತ್ತವೆಯೋ ಗೊತ್ತಿಲ್ಲ. ಇವು ನಮ್ಮ ದೇಶದ ಕೀಟ ಅಲ್ಲ ಎನ್ನುತ್ತಾರೆ.
- ಇವು ಹುಲ್ಲು ಸಸ್ಯಗಳಲ್ಲಿ ವಾಸವಾಗಿರುತ್ತವೆ ಎನ್ನುತ್ತಾರೆ.
- ಅಲ್ಲಿಂದಲೇ ಇವು ಬೆಳೆಗಳಿಗೆ ಹಾನಿಮಾಡಲು ಬರುತ್ತವೆ.
- ಮೊದಲು ಎಲೆಗಳ ಎಡೆಯಲ್ಲಿ ಅಲ್ಲಲ್ಲಿ ಅವಿತಿರುತ್ತವೆ.
- ನಂತರ ಹೂಮಿಡಿ ಕಾಯಿಗಳು ಆಗುತ್ತಿದ್ದಂತೆ ಎಳೆಯ ಹಂತದಲ್ಲಿ ಮೊಗ್ಗು ಬಾಗದಲ್ಲೇ ಕುಳಿತು ರಸ ಹೀರುತ್ತವೆ.
- ಅಂತಹ ಕಾಯಿಗಳು ಬೆಳವಣಿಗೆ ಆಗದೆ ಅಲ್ಲೇ ಕೊಳತು ಒಣಗುತ್ತದೆ.
- ಬೆಳೆದ ಕಾಯಿಗಳ ಮೇಲೆ ಕುಳಿತು ರಸ ಹೀರಿದ್ದೇ ಆದರೆ ಅರ್ಧಂಬರ್ಧ ಬಲಿಯುತ್ತದೆ.
- ಆದರೆ ಅದನ್ನು ತಿನ್ನುವಾಗ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.
- ಬಂಬು ಮುಟ್ಟಿದ ಯಾವುದೇ ತರಕಾರಿ, ಬೆಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.
ವಾಸನೆ ಯಾಕೆ:
- ಬಂಬು ಕೀಟಕ್ಕೆ ವಾಸನೆ ಯಾಕೆ ಬಂತು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲವಾದರೂ, ಕೀಟ ಶಾಸ್ತ್ರಜ್ಞರ ಪ್ರಕಾರ , ಇವು ತಮ್ಮನ್ನು ಭಕ್ಷಿಸುವ ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಉಂಟಾಗಿದೆ ಎನ್ನುತ್ತಾರೆ.
- ಇದನ್ನು Aldahyds ಎನ್ನುತ್ತಾರೆ.
- ಅವು ತಮ್ಮ ಶರೀರದ ಒಂದು ಗ್ರಂಥಿಯ ಮೂಲಕ ಈ ರಸವನ್ನು ಅವು ಹೊರ ಸೂಸಿ, ತಮ್ಮನ್ನು ರಕ್ಷಿಸಿಕೊಳ್ಳುತ್ತವೆ.
- ಕೆಲವು ತಮ್ಮ ಶರೀರದ ಈ ವಾಸನೆಯನ್ನು ಕೆಲವು ಇಂಚಿನ ತನಕವೂ ಸಿಂಪರಣೆ ಮಾಡಬಲ್ಲವು.
- ಇಂಥಹ ಕೀಟಗಳು ಮನೆಯ ದೀಪದ ಸಮೀಪ ಬಂದಾಗ ವಾಸನೆ ಮೂಗಿಗೆ ಹೊಡೆಯುತ್ತವೆ.
- ಈ ವಾಸನೆಯು ತಮ್ಮ ದೇಹದ ಹೊಟ್ಟೆ ಭಾಗದಿಂದ ಹೊರಸೂಸಲ್ಪಡುತ್ತವೆ.
- ಈ ವಾಸನೆಯಿಂದ ಮಾನವ ದೇಹಕ್ಕೆ ಹಾನಿ ಇಲ್ಲ.
- ಅದರೆ ಅದನ್ನು ಸೇವಿಸಲು ಅಸಾಧ್ಯವಾದಷ್ಟು ವಾಸನೆ ಇರುತ್ತದೆ. ಇವು ಗಂಭಿರ ವೈರಸ್ ರೋಗ ಪ್ರಸರಕಗಳು.
ಸುರಕ್ಷಿತ ಪರಿಹಾರ ಸ್ವಲ್ಪ ಕಷ್ಟ :
- ರಾಸಾಯನಿಕವಾಗಿ ಇದನ್ನು ಅಂತರ್ ವ್ಯಾಪೀ ಕೀಟನಾಶಕ (Imidaclophrid , Quinalphos) ಸಿಂಪರಣೆ ಮಾಡಿ ನಿಯಂತ್ರಿಸಬಹುದು.
- ಅದರೆ ಅದೆಲ್ಲವೂ ನಂತರ ಆ ಬೆಳೆಯಲ್ಲಿ ಉಳಿಕೆಯಾಗಿ ಬಳಸಿದವರಿಗೆ ತೊಂದರೆ ಉಂಟಾಗುತ್ತದೆ.
- ಆದರೆ ಈ ತನಕವೂ ರೈತರು ಇದನ್ನು ರಾಸಾಯನಿಕ ಕೀಟನಾಶಕ ಬಳಕೆ ಮಾಡಿಯೇ ನಿಯಂತ್ರಿಸುತ್ತಿದ್ದಾರೆ.
- ಇದನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡಲು ಎಲೆ ಅಡಿ ಭಾಗದಲ್ಲಿ ಇರುವ ಮೊಟ್ಟೆಗಳನ್ನು ನಾಶ ಮಾಡುವುದು ಒಂದೇ.
- ಸಸ್ಯ ಬೆಳೆಯುವ ಹಂತದಲ್ಲಿ ಕೆಲವೇ ಸಂಖ್ಯೆಯಲ್ಲಿರುವಾಗ ಸಸ್ಯಗಳನ್ನು ಅಲ್ಲಾಡಿಸುವ ಮೂಲಕ
- ಅದನ್ನು ಹಾರುವಂತೆ ಮಾಡಿ, ಬೇವು ಮೂಲದ ಕೀಟನಾಶಕ ಸಿಂಪರಣೆ ಮಾಡಿ, ಅಥವಾ ಹೊಗೆ ಇತ್ಯಾದಿ ಹಾಕಿ ಓಡಿಸಬಹುದು.
ಹೊಲದಲ್ಲಿ ಕಳೆಗಳು ಇದ್ದಷ್ಟೂ ಇವುಗಳ ಹಾವಳಿ ಹೆಚ್ಚು. ಕಳೆಗಳನ್ನು ಆಗಾಗ ಸವರುತ್ತಾ ಇದ್ದರೆ ಅವುಗಳ ಸಂತಾನೋತ್ಪತ್ತಿಗೆ ಅವಕಾಶ ಸಿಗದೆ ಕಡಿಮೆಯಾಗುತ್ತದೆ. ಮೆಲಾಥಿಯಾನ್ ನಂತಹ ಕಡಿಮೆ ಅವಧಿಯ ಕೀಟನಾಶಕದ ಬಳಕೆ ಮಾಡುವುದು ಸೂಕ್ತ.
ಇತ್ತೀಚಿನ ದಿನಗಳಲ್ಲಿ ಇದರ ಹಾವಳಿ ಹೆಚ್ಚುತ್ತಿರುವುದು ಆತಂಕವನ್ನು ಉಂಟು ಮಾಡಿದೆ. ಇದರ ಪರಭಕ್ಷಕ ಕೀಟಗಳು ನಾಶವಾಗುತ್ತಿರುವುದೇ ಇದಕ್ಕೆ ಕಾರಣ.
ಜೇಡಗಳು ಮತ್ತು ಕೆಲವು ಗುಬ್ಬಿಯಂತಹ ಸಣ್ಣ ಹಕ್ಕಿಗಳು, ಇರುವೆಗಳು, ಗುಲಗುಂಜಿ ಹುಳುಗಳು ಇದರ ಪರಭಕ್ಷಕಗಳಾಗಿವೆ,. ಪ್ರಭಲ ಕೀಟನಾಶಕ ಬಳಸದೇ ಇದ್ದಾಗ ಅವುಗಳ ಸಂಖ್ಯೆ ಹೆಚ್ಚಳವಾಗಿ ನಿಯಂತ್ರಣ ಸುಲಭವಾಗುತ್ತದೆ.
end of the article: ——————————————————————-
search words: Rice pests# sucking pests# Oder smell pests# Gundhi bug# harmful bugs# Crop pests# Agriculture damage# Stink bugs #Arthropodes# Hemiptera #Ridge gourd pests # soya pests# vegetable pests