ಅರಿಶಿಣ ಬೆಳೆಯುವವರು ಯೋಗ್ಯ ತಳಿಗಳ ಬಗ್ಗೆ ತಿಳಿದಿರಿ.

ಒಂದು ಗಿಡದಲ್ಲಿ ಬೆಳೆದ ಅರಶಿನ, ಸಾಂಗ್ಲಿ ಸ್ಥಳೀಯ ತಳಿ

ಅರಶಿನ ಒಂದು ಪ್ರಮುಖ  ಸಾಂಬಾರ ಬೆಳೆಯಾಗಿದ್ದು, ಉತ್ತರ ಕರ್ನಾಟಕದ  ಬಾಗಲಕೋಟೆ,  ಬೆಳಗಾವಿ, ಬಿಜಾಪುರದ ಕೆಲ ಭಾಗಗಳಲ್ಲಿಯೂ, ದಕ್ಷಿಣ ಕರ್ನಾಟಕದ ಮಂಡ್ಯ, ಕೊಳ್ಳೇಗಾಲ ಕಡೆ ಅಧಿಕ ಪ್ರಮಾಣದಲ್ಲೂ, ಉಳಿದ ಕಡೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿಯೂ ಬೆಳೆಯಲಾಗುತ್ತದೆ. ಇದು ಒಂದು ಔಷಧೀಯ ಮತ್ತು ಸಾಂಬಾರ ರೂಪದಲ್ಲಿ ಬಳಸಲ್ಪಡುವ ವಸ್ತುವಾಗಿರುವುದರಿಂದ ಉತ್ತಮ ಬೇಡಿಕೆ ಇದೆ. ಉಳಿದ ಸಾಂಬಾರ ಬೆಳೆಗಳಿಗಿಂತ ಇದರ ಬೆಳೆ ಸುಲಭ.

 • ಭಾರತದಲ್ಲಿ ಹಲವಾರು ಅರಿಶಿಣ ತಳಿಗಳು ಲಭ್ಯವಿದ್ದು, ಕೃಷಿ ಪ್ರದೇಶಕ್ಕೆ ಅನುಗುಣವಾಗಿ ಸ್ಥಾನಿಕ ಹೆಸರುಗಳನ್ನು ಕೊಡಲಾಗಿದೆ.
 • ಮುಖ್ಯವಾಗಿ ಜನಪ್ರಿಯ ತಳಿಗಳೆಂದರೆ ದುಗ್ಗಿರಾಲ, ತೆಕ್ಕುರ್ಪೆಟ್, ಸುಗಂಧಂ, ಅಮಲಾಪುರಂ, ಈರೋಡ್ ಸ್ಥಳೀಯ, ಸೇಲೆಂ, ಅಲೆಪ್ಪಿ, ಮೂವಟ್ಟುಪುಳ ಮತ್ತು ಲಕ್ಡಾಂಗ್.
 • ಭಾರತದ ವಿವಿಧ ಸಂಸ್ಥೆ ಯಿಂದ ಬಿಡುಗಡೆ ಮಾಡಲಾದ ಸುಧಾರಿತ ಅರಿಶಿಣ ತಳಿಗಳು ಮತ್ತು ಅದರ ಮುಖ್ಯ ಲಕ್ಷಣಗಳ ಕೊಡಲಾಗಿದೆ.  

ಅರಶಿನ ಬೆಳೆ

ತಳಿಗಳು  ಮತ್ತು ಸರಾಸರಿ ಇಳುವರಿ:

ರೈತರು ಅರಶಿನ ಹೆಕ್ಟೇರಿಗೆ ಸರಾಸರಿ ಎಷ್ಟು  ಇಳುವರಿ ಬರುತ್ತದೆ, ಎಷ್ಟು ದಿನಗಳಲ್ಲಿ ಬೆಳೆಯುತ್ತದೆ,  ಒಣ ತೂಕ Dw ಎಷ್ಟು, ಕರ್ಕುಮಿನ್ ಇದೆ, ಎಷ್ಟು , ಓಲಿಯೋರೈಸಿನ್ Ole ಪ್ರಮಾಣ ಎಷ್ಟು, ಮತ್ತು ಎಣ್ಣೆ EO ಪ್ರಮಾಣ ಎಷ್ಟು ಎಂದು ತಿಳಿದು ಬೆಳೆಯಬೇಕು. 

ಅಲ್ಪಾವಧಿ ತಳಿಗಳು;

ಅರಶಿನದ ತಳಿ

 • ಸುವರ್ಣ:            17.4(ಟನ್/ಹೆ) –   200 ದಿನ –    20.0 DW%     – 4.3  ಕರ್ಕುಮಿನ್ %  – 13.5 Ole%   – 7.0 EO%
 • ಸುಗುಣ:              29.3(ಟನ್/ಹೆ) – 190 ದಿನ     –12.0 DW%      – 7.3 ಕರ್ಕುಮಿನ್ %    – 13.5 Ole%   – 6.0 EO%
 • ಸುದರ್ಶನ :        28.8(ಟನ್/ಹೆ)   -190 ದಿನ     –12.0 DW%-      5.3 ಕರ್ಕುಮಿನ್ %     – 15.0 Ole%   – 7.0 EO%
 • IISR ಪ್ರಭ:        37.5(ಟನ್/ಹೆ)   -195ದಿನ      –19.5 DW%     – 6.5 ಕರ್ಕುಮಿನ್ %    –  15.0 Ole%- 6.5 EO%
 • IISR ಪ್ರತಿಭ:    39.1(ಟನ್/ಹೆ)   -188 ದಿನ     -18.5 DW%     – 6.2 ಕರ್ಕುಮಿನ್ %    –  16.2 Ole%- 6.2 EO%
 • IISR ಅಲೆಪ್ಪಿ ಸುಪ್ರೀಮ್:  35.4(ಟನ್/ಹೆ)  – 210ದಿನ  – 19.3 DW%   -ಕರ್ಕುಮಿನ್ %   –6.0- 16.0 Ole%    –  4.0 EO%
 • IISR ಕೇದಾರಮ್:             34.5(ಟನ್/ಹೆ)   – 210 ದಿನ – 18.9 DW%  -5.5 ಕರ್ಕುಮಿನ್ %  –13.6 Ole%       -3.0 EO%
 • IISR ಪ್ರಗತಿ:                       33.2(ಟನ್/ಹೆ)   -180-200ದಿನ  –18-20 DW%  –  5.0 ಕರ್ಕುಮಿನ್ %  –12.1 Ole% – 3.6 EO%
 • ಸುಗಂಧಂ:                           15.0(ಟನ್/ಹೆ)- 210 ದಿನ – 23.3 DW%- 3.1 ಕರ್ಕುಮಿನ್ %- 11.0 Ole%-2.7 EO%
 • ಸುರಂಗ:                              23.4(ಟನ್/ಹೆ)-180-200 ದಿನ – 28.0 DW%- 4.5 ಕರ್ಕುಮಿನ್ % -6.5 12.7 Ole%-4.6 EO%

ಪ್ರಭಾ ಅರಶಿನದ ತಳಿ

ಮಧ್ಯಮಾವಧಿ ತಳಿಗಳು;

 •  ರಂಗ:                               29.0(ಟನ್/ಹೆ)-    250ದಿನ –          24.8 DW%       6.3 ಕರ್ಕುಮಿನ್ %           13.5 Ole% -4.4 EO%
 •  ರಶ್ಮಿ:                                 31.3(ಟನ್/ಹೆ)     240 ದಿನ –         23.0 DW%       6.4 ಕರ್ಕುಮಿನ್ %           13.4 Ole%-4.4 EO%
 •  ರಾಜೇಂದ್ರ ಸೋನಿಯ:  42.0(ಟನ್/ಹೆ)-        225ದಿನ –  18.0 DW%- 8.4 ಕರ್ಕುಮಿನ್ %- 10.0 Ole%- 5.0 EO%
 • ರೋಮ:                20.7(ಟನ್/ಹೆ)-    250ದಿನ –          31.0 DW%       6.1 ಕರ್ಕುಮಿನ್ %           13.2 Ole%-4.2 EO%
 • ಸುರೋಮ:           20.0(ಟನ್/ಹೆ)-            255 ದಿನ –         26.0 DW%       6.1 ಕರ್ಕುಮಿನ್ %           13.1 Ole%-4.4 EO%
 • ಬಿ.ಎಸ್.ಆರ್-2:   32.7(ಟನ್/ಹೆ)-    245 ದಿನ –         20.0 DW%       3.8 ಕರ್ಕುಮಿನ್ %           –           –

ಧೀರ್ಘಾವಧಿ ತಳಿಗಳು;

ಅರಶಿನದ ತಳಿ

 • Co-3                                32(ಟನ್/ಹೆ)        -270ದಿನ       – 3.2 DW%      –
 • ಮೇಗ ಟರ್ಮರಿಕ್ 1:    23.0 (ಟನ್/ಹೆ)-    310 ದಿನ – 16.4 DW%- 6.8 ಕರ್ಕುಮಿನ್ %-         –           –
 • ಬಿ.ಎಸ್.ಆರ್-1:              30.7(ಟನ್/ಹೆ)-    285 ದಿನ  – 20.5 DW% 4.2 ಕರ್ಕುಮಿನ್ %-4.0 Ole%       3.7 EO%
 • Co-1:                              30.0(ಟನ್/ಹೆ) -285 ದಿನ  –19.5 DW% – 3.2 ಕರ್ಕುಮಿನ್ % –           6.7 Ole% -3.2 EO%
 • ಕಾಂತಿ:                             37.7(ಟನ್/ಹೆ)-240-270 ದಿನ – 20.2 DW% – 7.2 ಕರ್ಕುಮಿನ್ % – 8.3 Ole%-5.2 EO%
 • ಶೋಭ:                           35.9(ಟನ್/ಹೆ)-240-270 ದಿನ  –19.4 DW% – 7.4 ಕರ್ಕುಮಿನ್ %-     9.7 Ole%-4.2
 • ಸೋನ:                            21.3(ಟನ್/ಹೆ)-    240-270 ದಿನ – 18.9 DW%- 7.1 ಕರ್ಕುಮಿನ್ %- 10.3 Ole%-4.2 EO%
 • ವರ್ಣ:                               21.9(ಟನ್/ಹೆ)-240-270ದಿನ – 19.1 DW% – 7.9 ಕರ್ಕುಮಿನ್ %- 10.8 Ole%-4.6 EO%

ಉತ್ತಮ ಎಲೆಗಳಿದ್ದರೆ ಉತ್ತಮ ಬೆಳೆಯ

ಸಾಂಬಾರ ಬೆಳೆಗಳ ಬಗ್ಗೆ ಸಂಶೊಧನೆ ಮತ್ತು ರೈತರ ಸಂದೇಹಗಳ ಪರಿಹಾರಕ್ಕೆ  ಭಾರತ ಸರಕಾರದ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ IISR ಪ್ರಾದೇಶಿಕ ಸಂಶೋಧನಾ ಸಂಸ್ಥೆ ಇದೆ. ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಪ್ಪಂಗಳದಲ್ಲಿ ಇದನ್ನು ಸ್ಥಾಪಿಸಲಾಗಿದೆ.

 • ಇದು ಮಡಿಕೇರಿಯಿಂದ 8 ಕಿ. ಮೀ ದೂರದಲ್ಲಿ ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿದೆ.
 • ಇಲ್ಲಿ ಸುಧಾರಿತ ತಳಿಗಳನ್ನು ಕೃಷಿ ಸಮುದಾಯಕ್ಕೆ ಮತ್ತು ಕೃಷಿ ಇಲಾಖೆಗೆ ಉತ್ಪಾದಿಸಿ ವಿತರಿಸಲಾಗುತ್ತದೆ.
 • ಪ್ರಾದೇಶಿಕ ಕೇಂದ್ರವು ಬೆಳೆಗಾರರಿಗೆ ಸಲಹಾ ಸೇವೆಗಳನ್ನು ಒದಗಿಸಿತ್ತದೆ

ಲೇಖಕರು:  ಅಂಕೇಗೌಡ ಎಸ್. ಜೆ., ಹೊನ್ನಪ್ಪ ಆಸಂಗಿ, ಶಿವಕುಮಾರ್ ಎಂ. ಎಸ್, ಅಕ್ಷಿತಾ ಎಚ್. ಜೆ., ಬಾಲಾಜಿ ರಾಜ್‍ಕುಮಾರ್ ಎಂ. ಮತ್ತು ಮೊಹಮ್ಮದ್ ಫೈಸಲ್ ಪಿ.  .ಸಿ..ಆರ್.- ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ, ಕೊಡಗು– 571 201
end of the article: —————————————————————–
search words: Turmeric crop#  Turmeric varieties# IISR Appangala# Madikeri# Haladi#  Kedaram Turmeric# Alleppi Turmeric# Spices crop#
 
 
 

Leave a Reply

Your email address will not be published. Required fields are marked *

error: Content is protected !!