ಮನುಷ್ಯರೆಲ್ಲರೂ ಒಂದೇ. ಆದರೆ ಗುಣಗಳು ಮಾತ್ರ ಭಿನ್ನ. ಕೆಲವರು ಬಹಳ ಚುರುಕು. ಮತ್ತೆ ಕೆಲವರು ಮಂದ. ಹಾಗೆಯೇ ಫಲ ಕೊಡುವ ಸಸ್ಯಗಳಲ್ಲೂ ಇದೆ. ಕೆಲವು ಉತ್ತಮ ಗುಣವನ್ನು ತಮ್ಮ ಜೀನ್ ನಲ್ಲೇ ಒಳಗೊಂಡಂತದ್ದನ್ನು ಆಯ್ಕೆ ಮಾಡಿ ಅದನ್ನು ಅಭಿವೃದ್ದಿಪಡಿಸಿ ಬೆಳೆಸಬಹುದಾದ್ ಅತಳಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಅಂತದ್ದೇ ಇದು ಶಿರಸಿಯ ಆಕೆ ತಳಿ ಅಡಿಕೆ.(SAS).
ಎಕ್ರೆಗೆ 28 ಕ್ವಿಂಟಾಲು ಅಡಿಕೆ:
- ಶಿರ್ಸಿಯ ಆಯ್ಕೆ ಅಡಿಕೆ ( Sirsi areca selection 1 ) ಉತ್ತರಕನ್ನಡ ಜಿಲ್ಲೆಯ ಶಿರಸಿ ಭಾಗದ ಅಡಿಕೆಯ ಗಾತ್ರ ಉಳಿದ ಮಲೆನಾಡಿನ ಅಡಿಕೆಗಿಂತ ಸ್ವಲ್ಪ ದೊಡ್ಡದಿರುತ್ತದೆ.
- ಇದು ಚಾಲಿ ಹಾಗೂ ಕೆಂಪು ಮಾಡಲು ಹೊಂದಿಕೆಯಾಗುವ ತಳಿ.
- ಉತ್ತಮ ಇಳುವರಿ ಕೊಡಬಲ್ಲ ಸಾಮರ್ಥ್ಯ ಹೊಂದಿದೆ.
- ಶಿರಸಿ ಸುತ್ತಮುತ್ತ ಬೆಳೆಸಲ್ಪಡುವ ಬಹುತೇಕ ತಳಿಗಳು ಇವೇ ಆಗಿದ್ದು, ಒಂದು ಗೊನೆಯಲ್ಲಿ 300 ಕ್ಕೂ ಅಧಿಕ ಕಾಯಿಗಳಿರುತ್ತವೆ.
- ಉತ್ತಮ ಆರೈಕೆಯಲ್ಲಿ ಮರವೊಂದರಲ್ಲಿ ಮೂರು ಗೊನೆಗೂ ಹೆಚ್ಚು ಅಡಿಕೆ ಆಗುತ್ತದೆ.
- ಈ ತಳಿಯ ಇಳುವರಿ ಸಾಮರ್ಥ್ಯ ಮರಕ್ಕೆ 5 ಕಿಲೋ ಚಾಲಿ ಅಡಿಕೆ. ಎಕ್ರೆಗೆ 28 ಕ್ವಿಂಟಾಲು.
ಎಲ್ಲಿಗೆ ಸೂಕ್ತ:
- ಸಿರಸಿ ಸುತ್ತಮುತ್ತ ಬೆಳೆಸಲ್ಪಡುತ್ತಿದ್ದ ತಳಿಯಲ್ಲಿ ಪ್ರತೀ ವರ್ಷ ಉತ್ತಮ ಇಳುವರಿ ಕೊಡಬಲ್ಲ ಸಾಮಾರ್ಥ್ಯ ಹೊಂದಿದ ತಳಿಮೂಲವನ್ನು ಆಯ್ಕೆ ಮಾಡಿ ಅದಕ್ಕೆ ಈ ಹೆಸರನ್ನು ನಾಮಕರಣ ಮಾಡಲಾಗಿದೆ.
- ಇದು ಕುಮಟಾ, ಹೊನ್ನಾವರ, ಸಿದ್ದಾಪುರ , ಯಲ್ಲಾಪುರದಂತಹ ಭೂ ಭಾಗಕ್ಕೆ ಹೊಂದಿಕೆಯಾಗುವ ತಳಿಯಾಗಿದೆ.
- ತಳಿ ಗುಣದಲ್ಲೇ ಇದಕ್ಕೆ ವೈಶಿಷ್ಟ್ಯತೆ ಇರುವ ಕಾರಣ ಇದು ಪ್ರತಿಕೂಲ ಹವಾಮಾನದಲ್ಲೂ ಉತ್ತಮ ಕ್ಷಮತೆಯನ್ನು ತೋರಿಸಬಲ್ಲದು.
- ಅಭಿವೃದ್ದಿ ಪಡಿಸಿದವರು ಬಾಗಲಕೋಟೆ ತೋಟಗಾರಿಕಾ ಮಹಾವಿಧ್ಯಾಲಯದ ತೋಟಗಾರಿಕಾ ಸಂಶೋಧನಾ ಸಂಸ್ಥೆ ಶಿರಸಿಯ ಶ್ರೀ. ಲಕ್ಷೀನಾರಾಯಣ ಹೆಗಡೆಯವರು.
- ಇವರು ಶಿರಸಿ ತೋಟಗಾರಿಕಾ ಕಾಲೇಜಿನಲ್ಲಿ ಪ್ರಾದ್ಯಾಪಕರು. ಸ್ಥಳೀಯರೂ ಆಗಿದ್ದು, ಅಡಿಕೆ ಬೆಳೆಗಾರ ಕುಟುಂಬದವರೇ ಆಗಿರುವ ಕಾರಣ ಆಯ್ಜೆಯ ಮಾನದಂಡಗಳಲ್ಲಿ ಹುಟ್ಟು ಸಹಜವಾದ ಅನುಭವ ಹೊಂದಿದವರು.
ವಿಷೇಶ ಗುಣ:
- ಸಸಿ ನೆಟ್ಟು 4 ನೇ ವರ್ಷಕ್ಕೆ ಇಳುವರಿಗೆ ಪ್ರಾರಂಭವಾಗುತ್ತದೆ. ಮರದ ಗಂಟುಗಳು ಹತ್ತಿರವಿರುವ ಕಾರಣ ಗಟ್ಟಿ ಮುಟ್ಟಾಗಿರುತ್ತದೆ.
- ಈ ತಳಿಯ ಗರಿಗಳು ಕಾಂಡಕ್ಕೆ ಹೆಚ್ಚು ಜೋತು ಬೀಳುವುದಿಲ್ಲ.
- ಅಧಿಕ ಪ್ರಮಾಣದಲ್ಲಿ ಹೆಣ್ಣು ಹೂವುಗಳು ಇರುವ ಕಾರಣ ಅಧಿಕ ಇಳುವರಿ ಕೊಡುತ್ತದೆ.
- ಗೊನೆಯಲ್ಲಿ ಕಾಯಿಗಳು ಒತ್ತೊತ್ತಾಗಿರುತ್ತವೆ. ಇದು ಬೇರೆ ಪ್ರದೇಶಗಳಲ್ಲೂ ಉತ್ತಮ ಕ್ಷಮತೆಯನ್ನು ತೋರಿಸುತ್ತದೆ.
1996 ರ ಸುಮಾರಿಗೆ ಇದನ್ನು ಬಿಡುಗಡೆ ಗೊಳಿಸಲಾಗಿದ್ದು ಇತ್ತೀಚೆಗೆ ಸಿರ್ಸಿ ಸೆಲೆಕ್ಷನ್ 2 ಮತ್ತು 3 ತಳಿಯನ್ನು ಬಿಡುಗಡೆ ಮಾಡಿದ್ದಾರೆ. ಇವುಗಳೂ ಸಹ ಮೊದಲ ತಳಿಯಂತೆ ಉತ್ತಮ ಕ್ಷಮತೆಯನ್ನು ಹೊಂದಿದ ತಳಿಯಾಗಿರುತ್ತದೆ.