ಇದು ಅಡಿಕೆಗಿಂತಲೂ ಲಾಭದ ಮಿಶ್ರ ಬೆಳೆ

ಜಾಯಿ ಕಾಯಿ ಫಲ

ನೂರು ವರ್ಷಕ್ಕೂಹೆಚ್ಚು ಬದುಕಬಲ್ಲುದು. ಈ ಅವಧಿಯುದ್ದಕ್ಕೂ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಡುತ್ತಾ ಇರುವ  ಯಾವ  ಮರಮಟ್ಟೂ ಇಲ್ಲ. ಅದು ಜಾಯೀ ವೃಕ್ಷ ಮಾತ್ರ. ಅದಕ್ಕೇ ಕೇರಳದ ಜನ ತಮ್ಮ ಮನೆಮುಂದೆ ಒಂದಷ್ಟು ಸಸಿ ಬೆಳೆಸಿ ಕಲ್ಪವೃಕ್ಷ  ಇದು ಎಂದು ಪೋಷಿಸುವುದು.

 • ಕೇರಳದಾದ್ಯಂತ ಎಲ್ಲೆಲ್ಲಿ ಕಂಡರೂ ಜಾಯೀ ಕಾಯಿ ಮರಗಳು.
 • ಯಾಕಪ್ಪಾ  ಇವರು ಮನೆ  ಮುಂದೆ ಇಂತಹ ದೊಡ್ಡ ಮರಮಟ್ಟು  ಬೆಳೆಸಿದ್ದಾರೆ  ಎನ್ನುತ್ತೀರಾ?
 •  ಇದರಲ್ಲಿದೆ  ಭಾರೀ ಆದಾಯ.

ಬರೇ ಕೇರಳ ಮಾತ್ರವಲ್ಲ. ಕರ್ನಾಟಕದಲ್ಲೂ ಕೆಲವು ರೈತರು ಸದ್ದಿಲ್ಲದೆ ಇದನ್ನು ಬೆಳೆಸಿ ಭಾರೀ ಆದಾಯ ಪಡೆಯುತ್ತಿದ್ದಾರೆ.  ಉತ್ತಮ ಮಿಶ್ರ ಬೆಳೆ. ಯಾವ ಖರ್ಚೂ ಇಲ್ಲ. ಕಾಡು ಪ್ರಾಣಿಗಳ ಭಯವಿಲ್ಲ. ಕೊನೆಗೊಂದು ದಿನ ಇದು ಉತ್ತಮ ನಾಟಾ ಸಹ.

ಜಾಯಿ ಕಾಯಿ ಮರ

ಆದಾಯ ಹೀಗಿದೆ:

 • ವಿಟ್ಲ ಸಾರಡ್ಕ ಗೇಟ್ ಸಮೀಪ  ಪೆಲತ್ತಡ್ಕ ವಿಜಯಾನಂದ ಭಟ್ ಇವರು.
 • ಇವರು ಸುಮಾರು 250 ಜಾಯೀ ಕಾಯಿ ಗಿಡಗಳನ್ನು ಹೊಂದಿದ್ದು,
 • ಇಲ್ಲಿ 40 ವರ್ಷದ, 20 ವರ್ಷದ ,10 ವರ್ಷದ ಸಸಿಗಳಿವೆ.
 •  ಇವರು 10 ವರ್ಷದ ಪ್ರಾಯದ ಜಾಯೀ ಕಾಯಿ ಸಸಿಯಲ್ಲಿ 4-7 ಕಿಲೋ ಜಾಯೀ ಕಾಯಿ ಇಳುವರಿ ಪಡೆಯುತ್ತಾರೆ.
 • ಕಳೆದ ವರ್ಷ ಇವರು 650 ಕಿಲೋ ಜಾಯೀ ಕಾಯಿ ಇಳುವರಿಯನ್ನು  ಪಡೆದಿದ್ದು,  ಇದನ್ನು 250 ರೂ.ಬೆಲೆಗೆ ಮಾರಾಟ ಮಾಡಿದ್ದಾರೆ.
 • ಅದೇ ರೀತಿಯಲ್ಲಿ 80 ಕಿಲೋ ಪತ್ರೆಯ ಇಳುವರಿಯನ್ನು  ಪಡೆದಿದ್ದು ಸರಾಸರಿ 1100 ರೂ ಬೆಲೆಯನ್ನು  ಪಡೆದಿದ್ದಾರೆ.
 • ಬರೇ ಜಾಯೀ ಕಾಯಿ ಬೆಳೆ  ಯಿಂದ ಇವರು ವರ್ಷಕ್ಕೆ  2.5  ಲಕ್ಷಕ್ಕೂ ಹೆಚ್ಚು  ಉತ್ಪತ್ತಿ ಪಡೆಯುತ್ತಾರೆ. ಅದು ಖರ್ಚು ಇಲ್ಲದೆ..

ಈ ಬೆಳೆಯಲ್ಲಿ  ಕಾಯಿ ಮತ್ತು ಕಾಯಿಯ ಮೇಲಿರುವ ಪರೆ ( ಪತ್ರೆ)ಗೆ ಭಾರೀ  ಬೇಡಿಕೆ ಇದ್ದು ಕಾಯಿಗೆ ಕಿಲೋ 250 ರೂ . ತನಕ  ಪತ್ರೆಗೆ 1250  ರೂ ತನಕ ಬೆಲೆ  ಇದೆ.

 • ಎರ್ನಾಕುಳಂ ಜಿಲ್ಲೆಯ ಪಾರಕ್ಕಾಡದ ತೆಕ್ಕುನೇಲ್ ನ ಮ್ಯಾಥ್ಯು ಜೊಸ್ ರವರು  ಸುಮಾರು 8 ಎಕ್ರೆಗಳಲ್ಲಿ ಕಾಡಿನಂತೆ ಜಾಯೀಕಾಯಿ ಮರ ಬೆಳೆಸಿದ್ದಾರೆ.
 • ಅದನ್ನು ಗುತ್ತಿಗೆ ಕೊಟ್ಟು  ವರ್ಷಕ್ಕೆ  ಸುಮಾರು 10 ಲಕ್ಷ ವರಮಾನ ಸಂಪಾದಿಸುತ್ತಾರೆ.
 • ಇದು ವರ್ಷಕ್ಕೆ ಒಮ್ಮೆ ಫಲ ಕೊಡುವ ಮರ ಸಾಂಬಾರ ಬೆಳೆ.
 • ಯಾವುದೇ ಆರೈಕೆ ಬೇಡ. ರೋಗ ಇಲ್ಲ. ಕೀಟ ಇಲ್ಲ.
 • ಕಾಡು ಪ್ರಾಣಿಗಳ ಉಪಟಳ ಇಲ್ಲ

 ಬೆಲೆ ಅನುಕೂಲತೆ:

 •  ಮರಸಾಂಬಾರವಾದ ಜಾಯೀಕಾಯಿಗೆ ಕಳೆದ ಹಲವಾರು ವರ್ಷಗಳಿಂದ ಬೆಲೆ ಕುಸಿತವಾದುದೇ ಇಲ್ಲ.
 • ಸ್ವಲ್ಪ ಸ್ವಲ್ಪ ಬೆಲೆ ಏರುತ್ತಲೇ ಇದೆ.
 • ಇಳಿಕೆಯಾದರೂ ತೀರಾ ಇಳಿಕೆ ಎಂಬುದು ಇಲ್ಲ.
 • ಗೋಟಡಿಕೆಯ ಗಾತ್ರದ ಸರಾಸರಿ 5 ಗ್ರಾಂ ತೂಗುವ ಜಾಯೀಕಾಯಿಗೆ ಈಗ ಒಂದಕ್ಕೆ 2 ರೂ.
 • ಸುಮಾರು 1ಗ್ರಾಂ ತೂಗುವ ಅದರ ಪತ್ರೆಯೊಂದಕ್ಕೆ 1.5 ರೂ.
 • ಒಂದು ಕಿಲೋ ಜಾಯೀ ಕಾಯಿಗೆ ಸರಾಸರಿ 250 ರೂ.
 •   ಪತ್ರೆಗೆ ಸರಾಸರಿ 1000 ರೂ.ಗಳು. ಯಾವ ಬೆಳೆಗೆ ಈ ದರ ಇದೆ ಹೇಳಿ?

 ಲೆಕ್ಕಾಚಾರ:

 • ಒಂದು  ಕಿಲೋ ತೂಗಲು  ಸುಮಾರು 150 ಬೀಜಗಳು ಬೇಕಾದರೆ, ಪತ್ರೆ ಒಂದು ಕಿಲೋ ಆಗಬೇಕಾದರೆ 1500 ರಷ್ಟು ಬೇಕು.
 • ಸುಮಾರು 15 ವರ್ಷ ಪ್ರಾಯಕ್ಕೆ ಬೆಳೆದ ಮರ ವರ್ಷಕ್ಕೆ ಸುಮಾರು 2000 ರಿಂದ 2500 ಬೀಜಗಳನ್ನು ಕೊಡುತ್ತದೆ.
 • ಮರಕ್ಕೆ ವರ್ಷ ಹೆಚ್ಚಾದಂತೆ ಇಳುವರಿ ಹೆಚ್ಚುತ್ತಿರುತ್ತದೆ .
 •  ಸುಮಾರು 50 ವರ್ಷಗಳಿಂದಲೂ ನಿರಂತರ ಫಸಲು ಕೊಡುತ್ತಿರುವ ಮರಗಳನ್ನು ನಾವು ನಮ್ಮ ರಾಜ್ಯದಲ್ಲಿ ಮತ್ತು ನೆರೆಯ ಕೇರಳದಲ್ಲಿ ಕಾಣಬಹುದು.

  ಅರಣ್ಯವೂ ಸಹ:

 •  ಅರಣ್ಯ ಬೆಳೆಸಲು  ಸೂಕ್ತ ಮರಮಟ್ಟು.
 • ಇದರಲ್ಲಿ ವರ್ಷವೂ ಆದಾಯ  ಇದೆ.
 • ನೂರಾರು ವರ್ಷ  ಬಾಳ್ವಿಕೆ   ಬರುತ್ತದೆ.
 • ಅಡಿಕೆ, ತೆಂಗು ತೋಟಕ್ಕೆ  ಸೂಕ್ತ  ಯಾವುದೇ ಹಾನಿ ಇಲ್ಲದ ಮಿಶ್ರ ಬೆಳೆ.
 •   ಬೀಜ ಮತ್ತು ಕಸಿ ವಿಧಾನದಲ್ಲಿ ಸಸಿ ಮಾಡಲಾಗುತ್ತದೆ.
 • ಕರಾವಳಿ ಮಲೆನಾಡು, ಅರೆ ಮಲೆನಾಡಿನಲ್ಲಿ ಉತ್ತಮವಾಗಿ  ಬರುತ್ತದೆ.
 • ಕೆಲವರು ಬಯಲು ನಾಡಿನಲ್ಲೂ ಬೆಳೆಸಿದ್ದುಂಟು.

ಮಿಶ್ರ ಬೆಳೆ ಬೇಕು, ಅರಣ್ಯ ಬೆಳೆ  ಬೇಕು ಆದಾಯ  ಇರಬೇಕು ಎಂಬ ಹುಡುಕಾಟದಲ್ಲಿರುವವರಿಗೆ ಇದು ಸೂಕ್ತ ಬೆಳೆ. ಆದಾಯ ಏನೇ ಇರಲಿ. ಈ ಬೆಳೆಯಿಂದ ನಷ್ಟಾಂತೂ ಇಲ್ಲವೇ ಇಲ್ಲ. ಒಂದು ಬರ ಸಾಕಷ್ಟು ಸಾವಯವ ತ್ಯಾಜ್ಯವನ್ನೂ ಕೊಡುತ್ತದೆ. ಇದರ  ಕಾಯಿಯ ತೊಗಟೆ ಒಂದು ಮೊಥ್ ಫ್ರೆಶ್ನರ್. ಹಲ್ಲು ಬಿಳಿ ಮಾಡಬಲ್ಲದು. ಉಪ್ಪಿನಕಾಯಿಗೂ ಆಗುತ್ತದೆ.
ಜಾಯೀ ಕಾಯಿ ಬೆಳೆಸುವ  ವಿಧಾನದ ಬಗ್ಗೆ ವಿವರವಾದ  ಲೇಖನ  ನಿರೀಕ್ಷಿಸಿರಿ.

Leave a Reply

Your email address will not be published. Required fields are marked *

error: Content is protected !!