ಕೃಷಿ ಉತ್ಪನ್ನಗಳ ನಿರ್ಜಲೀಕರಣದಿಂದ ಲಾಭ ಹೆಚ್ಚು.

by | Jan 21, 2020 | Dehydration (ನಿರ್ಜಲೀಕರಣ) | 1 comment

ಮಾರುಕಟ್ಟೆಯಲ್ಲಿ ವ್ಯಾಪಾರಿ ನನಗೆ ನಿಮ್ಮ  ಉತ್ಪನ್ನ ಬೇಕು ಎಂದು ಕೇಳುವ ಸ್ಥಿತಿ ಯಾವಾಗ ಬರುತ್ತದೆಯೋ ಆಗ ರೈತರು ತಮ್ಮ ಉತ್ಪನ್ನಕ್ಕೆ MRP ಇಡಬಹುದು. ಅದಕ್ಕೆ ಸ್ವಲ್ಪವೇ ತಯಾರಿ ನಡೆಯಬೇಕಿದೆ.

De hydrated garlic

ಒಣಗಿಸಿದ ಬೆಳ್ಳುಳ್ಳಿ

 • ನೀವು 100  ಟನ್  ಬೀನ್ಸ್  ಬೆಳೆದರೆ ಕೊಳ್ಳುವ ವ್ಯಾಪಾರಿ ಬುದ್ದಿವಂತಿಕೆ  ಮೆರೆಯುತ್ತಾನೆ.
 • ನಿಮ್ಮ ಕೊಯಿಲಿನ ಸಮಯದ ತನಕ ಉತ್ತಮ ಬೆಲೆ ಇದ್ದರೆ  ನೀವು ಕೊಯ್ಯುವಾಗ ಬೆಲೆ ನೆಲಕಚ್ಚುತ್ತದೆ.
 • ಆ ಸಮಯದಲ್ಲಿ  ನೀವು “ನಾನು ಬೆಳೆದ ಬೆಳೆಯನ್ನು ಪೂರ್ತಿ ಸಂಸ್ಕರಣೆ ಮಾಡುತ್ತೇನೆ.
 • ತಾಜಾ ಮಾರುಕಟ್ಟೆಗೆ ಕೊಡುವುದಿಲ್ಲ” ಎಂದರೆ ತಕ್ಷಣ  ಬೆಲೆ ಏರಿಕೆ ಆಗುತ್ತದೆ.
 • ಇಲ್ಲಿ ರೈತರೂ  ವ್ಯಾಪಾರಿಗಳಂತೆ  ಬುದ್ಧಿವಂತಿಕೆ ತೋರಿದರೆ ಎಲ್ಲವೂ ಸರಿಯಾಗುತ್ತದೆ.
 • ಇದು ನಮ್ಮಲ್ಲಿ ಆಗುತ್ತಿಲ್ಲ. ಅದೇ ಕಾರಣಕ್ಕೆ ರೈತ ಸದಾ ಶೋಷಣೆಗೆ ಒಳಗಾಗುತ್ತಿದ್ದಾನೆ.
 • ರೈತರು ಇಂತದ್ದನ್ನು ಮಾಡಲು ಬೇಕಾದ  ತಾಂತ್ರಿಕತೆ  ಇದೆ. ಅದು ಅವನಿಗೆ  ಗೊತ್ತಾಗಿಲ್ಲ ಅಷ್ಟೇ.

De hydrated pineapple

ಒಣಗಿಸಿದ ಅನನಾಸುpineapple

ಏನು ತಂತ್ರಜ್ಞಾನ:

 •  ಎಲ್ಲಾ ನಮೂನೆಯ ತರಕಾರಿ- ಹಣ್ಣು ಹಂಪಲುಗಳನ್ನು ವರ್ಷಗಳ ತನಕವೂ ಕೆಡದಂತೆ  ಉಳಿಸಲಿಕ್ಕಾಗುವ ತಂತ್ರಜ್ಞಾನ ಎಂದರೆ  ಅವುಗಳನ್ನು ತಾಜಾ ರೀತಿಯಲ್ಲಿ ಒಣಗಿಸುವುದು.
 • ನಮ್ಮ ರೈತನ ಕೈಯಲ್ಲಿ ನಾಲ್ಕು ಕಾಸು ತಿರುಗಾಡಬೇಕಿದ್ದರೆ ಅವನು ಕೃಷಿಯೊಂದಿಗೆ  ಕೆಲವು ಪೂರಕ ಕಸುಬುಗಳನ್ನು ಮಾಡುತ್ತಿರಬೇಕು. ಅಂತದ್ದರಲ್ಲಿ ಒಂದು ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ  ಮಾಡುವುದು.

De hydrated carrot

carrot

ಅವಶ್ಯಕತೆ:

ಬಿಜಾಪುರದ ದ್ರಾಕ್ಷಿ ಬೆಳೆಗಾರರು ಒಂದು ವೇಳೆ ತಾವು ಬೆಳೆದ ಎಲ್ಲಾ ದ್ರಾಕ್ಷಿಯನ್ನೂ ತಾಜಾ ಹಣ್ಣಿನ ಮಾರುಕಟ್ಟೆಗೇ ಮಾರಾಟ ಮಾಡಿದ್ದರೆ  ಇಂದು ದ್ರಾಕ್ಷಿ ಬೆಳೆಗಾರರಿಗೆ  ಕಿಲೋ ಹಣ್ಣಿಗೆ  2-3 ರೂ. ಸಿಗುತ್ತಿತ್ತೋ ಏನೋ. ಅಲ್ಲಿನ ಬೆಳೆಗಾರರು ತಮ್ಮ ಉತ್ಪನವನ್ನು ಬೇಕಾ ಬಿಟ್ಟಿ ತಾಜಾ ಹಣ್ಣಿನ ಮಾರುಕಟ್ಟೆಗೆ  ಬಿಡುಗಡೆ ಮಾಡಿಲ್ಲ.
ತಾವು ಬೆಳೆಯುವ ದ್ರಾಕ್ಷಿಯನ್ನು ಅರ್ಧ ಪಾಲು ಒಣಗಿಸುತ್ತಾರೆ. ಉಳಿದರ್ಧವನ್ನು ತಾಜಾ ಹಣ್ಣಾಗಿ ಮಾರಾಟ ಮಾಡುತ್ತಾರೆ.  ಹಾಗಾಗಿ ದ್ರಾಕ್ಷೀ ಹಣ್ಣಿಗೆ ಎಷ್ಟು ಕನಿಷ್ಟವೆಂದರೂ ಕಿಲೋ 20  ರೂ. ಪಡೆಯುತ್ತಾರೆ. ಆದ ಕಾರಣವೇ ದ್ರಾಕ್ಷಿ ಹಣ್ಣು ಟೊಮಾಟೋ ಹಣ್ಣಿನ ತರಹ ಬೀದಿಯಲ್ಲಿ ಚೆಲ್ಲುವ ಪರಿಸ್ಥಿತಿ ಬರಲಿಲ್ಲ. 

De hydrated Tomato

ಒಣಗಿಸಿದ ಟೊಮಟೋ

 •  ನಮ್ಮ ದೇಶದಲ್ಲಿ ರೈತರು ಬೆಳೆಯುವ ಬಹುತೇಕ ಉತ್ಪನ್ನಗಳು  ರೈತರ ಕೈಯಲ್ಲಿ  ಮೌಲ್ಯವರ್ಧನೆಗೊಳಪಡುವುದಿಲ್ಲ.
 •  ಏನೆಲ್ಲಾ ನಾವು ಮೌಲ್ಯವರ್ಧಿತ ಉತ್ಪನ್ನವಾಗಿ ಪಡೆಯುತ್ತೇವೆಯೋ ಅದೆಲ್ಲವೂ ರೈತರ ಕೈಯಿಂದ ಯಾರೋ ಕಂಪೆನಿಯವರು ತೀರಾ ಕಡಿಮೆ  ಬೆಲೆಗೆ ಉತ್ಪನ್ನ ಖರೀದಿ ಮಾಡಿ ತಯಾರಿಸಿ ಮಾರುಕಟ್ಟೆ ಮಾಡಿರುವುದೇ ಆಗಿದೆ.
 • ರೈತರೇ  ತಾವು ಬೆಳೆದ ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ  ತಾಜಾ ಮಾರುಕಟ್ಟೆಯ  ಮೇಲೆ  ಒತ್ತಡ  ಕಡಿಮೆಯಾಗಿ ರೈತರಿಗೆ  ಹೆಚ್ಚಿನ ಬೆಲೆ ಪಡೆಯಲು ಅನುಕೂಲವಾಗುತ್ತದೆ.
 • ಉತ್ಪನ್ನಗಳನ್ನು  ಮೌಲ್ಯವರ್ಧನೆ  ಮಾಡಿಕೊಂಡರೆ ಮಾರುಕಟ್ಟೆ ಹಿಡಿತ  ಸಾಧಿಸಲು ತುಂಬಾ ಸಹಕಾರಿಯಾಗುತ್ತದೆ.
De hydrated better gourd

ಒಣಗಿಸಿದ ಹಾಗಲ ಕಾಯಿ

ಯಾವ ಅವಕಾಶಗಳು:

 • ಭಾರತದ ಅತೀ ದೊಡ್ಡ ರೀಯಲ್ ಎಸ್ಟೇಟ್ ಸಂಸ್ಥೆ ಸುಮಾರು 400 ಎಕ್ರೆಯಲ್ಲಿ ನುಗ್ಗೆ  ಸಸಿ ಬೆಳೆಸಿ ಅದರ ಸೊಪ್ಪನ್ನು ಒಣಗಿಸುವ  ವ್ಯವಸ್ಥೆಗೆ ಈಗಾಗಲೇ  ಕೈಹಾಕಿದೆ.
 • ದೇಶದ ಆತೀ ದೊಡ್ಡ ನೀರಾವರಿ ಸಂಸ್ಥೆ ಈರುಳ್ಳಿಯನ್ನು ನಿರ್ಜಲೀಕರಣ ಮಾಡಿ ಅಷ್ಟೂ ಉತ್ಪನ್ನವನ್ನು  ಪೂರ್ತಿ ವಿದೇಶಗಳಿಗೆ  ರಪ್ತು ಮಾಡುತ್ತಿದೆ.
 • ಇನ್ನು ಇಂಥಹ ಹಲವಾರು ಸಂಸ್ಥೆಗಳು  ರೈತರ ಮೂಲಕ ಬೆಳೆ ಬೆಳೆಸಿ ಅದನ್ನು ಖರೀದಿಸಿ ತಮ್ಮ ಬ್ರಾಂಡ್ ಉತ್ಪನ್ನವಾಗಿ ಮಾರಾಟ ಮಾಡುತ್ತಿವೆ.
 • ಇನು ಕೆಲವು ಕಡೆ ರೈತರಿಂದಲೇ ಎಲ್ಲವನ್ನೂ ಮಾಡಿಸಿ ತಮ್ಮ ಉತ್ಪನ್ನದ ಸೀಲ್ ಹಾಕಿ ಮಾರಾಟ ಮಾಡುವುದೂ ಇದೆ.

ಇದೆಲ್ಲಾ ಅವಕಾಶಗಳನ್ನು ರೈತರು ಬಳಕೆ  ಮಾಡಿಕೊಂಡರೆ ಮಾತ್ರ  ಈ ದೇಶದಲ್ಲಿ ರೈತ ಮುಂದೆ ಬರಲು ಸಾಧ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

De hydrated grape

ಒಣಗಿಸಿದ ದ್ರಾಕ್ಷಿ

ಮೌಲ್ಯವರ್ಧನೆಗೆ  ಸಾಧನ:

 • ರಾಯಚೂರಿನ ಕೃಷಿ ವಿಶ್ವ ವಿಧ್ಯಾನಿಯದಲ್ಲಿ ರೈತರೇ ತಮ್ಮ ಕೃಷಿ ಉತ್ಪನ್ನಗಳನ್ನು ಮೌಲ್ಯ ವರ್ಧನೆ ಮಾಡಲು ಅನುಕೂಲವಾಗುವ ಡ್ರೈಯರ್ ಒಂದನ್ನು ಅಭಿವೃದ್ದಿಪಡಿಸಿದ್ದಾರೆ.
 • ಈ ಡ್ರೈಯರ್  ಸೌರ ಶಕ್ತಿಯ ಮೂಲಕವೂ ಕೆಲಸ ಮಾಡುತ್ತದೆ. ವಿದ್ಯುತ್ ಹೀಟರ್ ಮೂಲಕವೂ ಕೆಲಸ ಮಾಡುತ್ತದೆ.
 • ಇದರಲ್ಲಿ ಎಲ್ಲಾ ನಮೂನೆಯ ಕೃಷಿ ಉತ್ಪನ್ನಗಳನ್ನೂ ತಾಜಾ ರೀತಿಯಲ್ಲಿ ಒಣಗಿಸಿ  ದಾಸ್ತಾನು ಮಾಡಬಹುದು.
 • ಈರುಳ್ಳಿ ಒಂದೇ ದಿನದಲ್ಲಿ ಒಣಗುತ್ತದೆ. ಅಂಜೂರ ಮೂರು ದಿನದಲ್ಲಿ ಒಣಗುತ್ತದೆ. ದ್ರಾಕ್ಷಿ ಸಹ ಮೂರು ದಿನದಲ್ಲಿ ಒಣಗುತ್ತದೆ.
 • ಇದನ್ನು ಪ್ಲಾಸ್ಟಿಕ್  ಶೀಟು ಹಾಕಿಯೂ ಮಾಡಬಹುದು. ಪಾಲೀ ಕಾರ್ಬೋನೇಟ್ ಶೀಟು ಹಾಕಿಯೂ ಮಾಡಬಹುದು.
 • 1 ಕ್ವಿಂಟಾಲು ಸಾಮರ್ಥ್ಯದ ಈ ಡ್ರೈಯರ್ ಗೆ ಸುಮಾರು 40- 50 ತನಕ ಖರ್ಚು ತಗಲುತ್ತದೆ.   ಬೇಕಾದ ಕಡೆ ಸಾಗಿಸಬಹುದು.
 • ಇದರಲ್ಲಿ ಎಷ್ಟೂ ದೊಡ್ಡ ಸಾಮರ್ಥ್ಯದ ಡ್ರೈಯರನ್ನೂ ತಯಾರಿಸಿಕೊಳ್ಳಬಹುದು. ಸ್ಥಳಿಯವಾಗಿ ನುರಿತವರಿಂದ ಮಾಡಿಸಿಕೊಳ್ಳಬಹುದು.
De hydrated amla

ಒಣಗಿಸಿದ ನೆಲ್ಲಿ

 ಒಣಗಿಸಬಹುದಾದ ಉತ್ಪನ್ನಗಳು:

 • ಎಲ್ಲಾ ನಮೂನೆಯ  ತರಕಾರಿಗಳನ್ನು  ಒಣಗಿಸಬಹುದು. ಮೀನು, ಮಾಂಸಗಳನ್ನೂ  ಒಣಗಿಸಬಹುದು.
 • ಹಣ್ಣುಗಳಾದ ಅಂಜೂರ, ಬಾಳೆ ಹಣ್ಣು, ದ್ರಾಕ್ಷಿ, ಪೇರಳೆ, ಚಿಕ್ಕು, ಪಪ್ಪಾಯಿ, ಅನನಾಸು, ಮಾವು  ಮುಂತಾದವುಗಳು.
 • ಸೊಪ್ಪುಗಳಾದ ನುಗ್ಗೆ, ಕರಿ ಬೇಕು, ಕೊತ್ತಂಬರಿ ಸೊಪ್ಪು ಸಹ ಒಣಗಿಸಬಹುದು.

ನಮ್ಮ ದೇಶದ ಕೃಷಿಕ ಬೇರೆ ದೇಶದ ಕೃಷಿಕನಂತೆ ಗಟ್ಟಿ ಕುಳ ಆಗಬೇಕಿದ್ದರೆ ತಮ್ಮ ಹಳೆ ಚಿಂತನೆಗಳನ್ನು ಬದಲಾವಣೆ ಮಾಡಿ ಆಧುನಿಕ  ಚಿಂತನೆಯನ್ನು ಅಳವಡಿಸಿಕೊಳ್ಳುತ್ತಾ ಬರಬೇಕು.

1 Comment

 1. Vishwanath Puranikmath

  Very good idea

  Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!