ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

by | Aug 10, 2020 | Dehydration (ನಿರ್ಜಲೀಕರಣ), Post Harvest Management (ಕೊಯಿಲೊತ್ತರ ನಿರ್ವಹಣೆ) | 0 comments

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ.

Electrical and solar Dryer developed by University of Agriculture science Raicur

ವಿದ್ಯುತ್ ಮತ್ತು ಸೌರ ಶಕ್ತಿಯಲ್ಲಿ (ಸೂರ್ಯನ ಬೆಳಕು) ಕೃಷಿ ಉತ್ಪನ್ನ ಒಣಗಿಸುವ ಡ್ರೈಯರ್ ಕೃ.ವಿವಿ ರಾಯಚೂರು ಇವರ ಕೊಡುಗೆ.

  • ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ ಹಿಡಿಯುವ, ಬೇರೆ ಬೇರೆ ಘನ ಬಜೆಟ್ ನ ವ್ಯವಸ್ಥೆಗಳು ಇವೆ.
  • ಕೆಲವು ಹಲ್ಲಿಲ್ಲದವನಿಗೆ ಕಡಲೆ ಕೊಟ್ಟಂತಿರುವುದೂ ಇದೆ.
  • ಎಲ್ಲದಕ್ಕೂ ಒಂದೇ ವ್ಯವಸ್ಥೆ ಆಗುವುದಿಲ್ಲ. ಕೆಲವು ಇತಿ ಮಿತಿಗಳು ಇರುತ್ತವೆ.
  • ಕೆಲವು ತ್ವರಿತ ಒಣಗಬೇಕಾದ ಉತ್ಪನ್ನಗಳಿರುತ್ತವೆ. ಮತ್ತೆ ಕೆಲವು ಸ್ವಚ್ಚ ಆಹಾರ ಗುಣಮಟ್ಟದವುಗಳಿರುತ್ತವೆ.
  • ಇದಕ್ಕೆಲ್ಲಾ ಸೂಕ್ತವಾದುದು ಎಂದರೆ ಸಣ್ಣ ಪೋರ್ಟೆಬಲ್ ಡ್ರೈಯರ್.
  • ಇದರಲ್ಲಿ  ನಿರ್ವಹಣೆಯ ಯಾವ ಜಠಿಲತೆಯೂ ಇರಬಾರದು. ಇಂಥ ಒಂದೆರಡು ಡ್ರೈಯರ್ ಗಳ ಪರಿಚಯ  ಮಾಡಿಕೊಡುತ್ತೇವೆ.
Dried Onion

ಒಣಗಿಸಿದ ಈರುಳ್ಳಿ

  • Dried onion

ಇಲೆಕ್ಟ್ರಿಕ್ – ಸೋಲಾರ್ ಕಾಂಬೋ ಡ್ರೈಯರ್:

  • ಇದು  ರಾಯಚೂರು ಕೃಷಿ ವಿಶ್ವ ವಿಧ್ಯಾನಿಲಯದ ಕೊಯಿಲೋತ್ತರ ತಂತ್ರಜ್ಞಾನ ವಿಭಾಗದವರು ತಯಾರಿಸಿದ ಡ್ರೈಯರ್.
  • ಇದರಲ್ಲಿ ಸೌರ ಶಕ್ತಿ( ಸೂರ್ಯನ ಬೆಳಕು)ಯಲ್ಲಿ ಸಹ ಒಣಗುತ್ತದೆ.
  • ವಿದ್ಯುತ್ ಹೀಟರನ್ನು ಉರಿಸಿಯೂ ಒಣಗಿಸಬಹುದು ಗ್ಯಾಸ್ ಹೀಟರನ್ನೂ ಇದಕ್ಕೆ ಹೊಂದಾಣಿಕೆ ಮಾಡಿ ಅಳವಡಿಸಿಕೊಳ್ಳಬಹುದು.
  • ಇದರ ಗಾತ್ರ ಸುಮಾರು 6 ಅಡಿ ಎತ್ತರ ಮತ್ತು 3 ಅಡಿ ಅಗಲ ಇರುತ್ತದೆ.
  • ಇದರಲ್ಲಿ ಒಳಗಡೆ ಟ್ರೇಗಳನ್ನು ಇಡುವ ವ್ಯವಸ್ಥೆ ಇದೆ. ಒಂದು ವೆಂಟ್ ಫ್ಯಾನ್ ಇದೆ,  ಹಾಗೆಯೇ ಬಿಸಿ ಹರಡಲು ಮತ್ತು ತೇವಾಂಶ  ಹೊರ ಹೋಗಲು ಎಗ್ಸಾಸ್ಟ್ ಫ್ಯಾನ್ ಸಹ ಇದೆ.
Layer by layer drying is possible

8 ಅಂತಸ್ತುಗಳಲ್ಲಿ ಒಣಗಿಸಲು ಸಾಧ್ಯ

  • ಇದಕ್ಕೆ ಹೊರ ಭಾಗದಲ್ಲಿ ಪಾರದರ್ಶಕ ಪಾಲಿಥೀನ್ ಶೀಟು ಹಾಕಬಹುದು, ಇಲ್ಲವೇ ಪಾಲೀ  ಕಾರ್ಬೋನೇಟ್ ಶೀಟನ್ನೂ ಹಾಕಬಹುದು.
  • ಇದರಲ್ಲಿ ಹಸಿ ಈರುಳ್ಳಿ ಒಂದು ದಿನದಲ್ಲಿ ಒಣಗುತ್ತದೆ. ನುಗ್ಗೆ ಸೊಪ್ಪು ಸಹ ಒಂದೇ ದಿನದಲ್ಲಿ ಒಣಗುತ್ತದೆ. ಹಣ್ಣು ಹಂಪಲುಗಳನ್ನೂ ಒಣಗಿಸಲು ಆಗುತ್ತದೆ.
Dried moringa leaves

ಒಣಗಿಸಿದ ನುಗ್ಗೆ ಸೊಪ್ಪು

ಕೇವಲ ಮೂರು ದಿನದಲ್ಲಿ ಪಪಾಯ ಹಣ್ಣು, ಅಂಜೂರ ಒಣಗುತ್ತದೆ. ಬಹುಷಃ ಈ ಚಿತ್ರವು ಅದರ ಪೂರ್ಣ  ವಿನ್ಯಾಸವನ್ನು ತೆರೆದಿಡುತ್ತದೆ. ಇದನ್ನು ಯಾರು ಬೇಕಾದರೂ ಸಮೀಪದ ಲೇತುಗಳಲ್ಲಿ ತಯಾರಿಸಿ ಬೇಕಾದ ಹೀಟರನ್ನೂ ಅಳವಡಿಸಿಕೊಳ್ಳಬಹುದು. ತುಂಬಾ ಬೇಸಿಗೆಯ ಸಮಯದಲ್ಲಿ ಇದನ್ನು ಬಿಸಿಲಿನಲ್ಲಿ ಇಡಬಹುದು.

  • ಗಾಲಿಗಳಿರುವ ಕಾರಣ ಎಲ್ಲಿಬೇಕಾದರೂ ಸ್ಥಳಾಂತರಿಸಬಹುದು.
  • ಯಾವುದೇ ನಿರ್ವಹಣೆ ಇಲ್ಲದ ವ್ಯವಸ್ಥೆ. ಸುಮಾರು 50,000 ವೆಚ್ಚದಲ್ಲಿ ಒಂದು ಕ್ವಿಂಟಾಲು ಒಣಗಿಸುವ ಪ್ರಮಾಣದ ಡ್ರೈಯರ್ ಮಾಡಿಕೊಳ್ಳಬಹುದು.
  • ಪ್ರಮಾಣ ಕಡಿಮೆಯಾದರೆ ವೆಚ್ಚ ಕಡಿಮೆಯಾಗಬಹುದು. ವೆಲ್ಡಿಂಗ್ ಬಲ್ಲವರಿಗೆ ಇದು ಇನ್ನೂ ಕಡಿಮೆ ವೆಚ್ಚದಲ್ಲಿ  ಮಾಡಬಹುದು.

ಇಲೆಕ್ಟ್ರಿಕಲ್ ಡ್ರೈಯರ್:

electrical Dyer by Hegde industries Sagara.

ಮಳೆಗಾಲದಲ್ಲಿ ಸಿಗುವ ಜಾಯೀ ಕಾಯಿ, ಏಲಕ್ಕಿ ಒಣಗಿಸುವ ಡ್ರೈಯರ್

  • ಇದರ ಉದ್ದೇಶವೂ ಎಲ್ಲಾ ಕೃಷಿ ಉತ್ಪನ್ನವನು ಒಣಗಿಸುವುದು.
  • ಇದರಲ್ಲಿ ಜಾಯಿ ಕಾಯಿ, ಪತ್ರೆ, ಕರಿಮೆಣಸು (ಬುಶ್ ಪೆಪ್ಪರ್ ಹಾಗೂ ಕೊಳಕೆಯ( ಎಡೆಬೆಳೆ) ಅಲ್ಪ ಸ್ವಲ್ಪ ಬೆಳೆ) ಏಲಕ್ಕಿ, ಬಾಳೆ ಹಣ್ಣು , ಕೊಬ್ಬರಿ , ದಿನಸಿಗಳನ್ನು ಬಿಸಿ ಹೆಚ್ಚು ಕಡಿಮೆ ಮಾಡುತ್ತಾ ಒಣಗಿಸಬಹುದು.
  • ಇದು ವಿದ್ಯುತ್ ಹೀಟರ್ ಉಳ್ಳ ವ್ಯವಸ್ಥೆ. ಇದನ್ನು ಸಾಗರದ ಹೆಗಡೆ ಇಂಡಸ್ಟ್ರೀಸ್ ಇವರು ಹಲವಾರು ವರ್ಷಗಳಿಂದ ತಯಾರಿಸುತ್ತಿದ್ದಾರೆ.
  • ಒಂದು ದಿನದಲ್ಲಿ ಜಾಯೀ ಕಾಯಿ ಪತ್ರೆ ಒಣಗುತ್ತದೆ. ಸುಮಾರು 10 ಕಿಲೋ ಒಣಗುವ ಈ ವ್ಯವಸ್ಥೆಗೆ ತಗಲುವ ಬೆಲೆ ಸುಮಾರು 22 ಸಾವಿರ ರೂಪಾಯಿಗಳು.
  • ನಾಲ್ಕು ಟ್ರೇ ಗಳು ಇರುತ್ತವೆ.ಟ್ರೇ ಅಗಲ ಸುಮಾರು 3X2 ಅಡಿಗಳು.
  • ಸುಮಾರು 2.5 ಗಂಟೆಗೆ 1 ಯುನಿಟ್ ವಿದ್ಯುತ್ ಖರ್ಚು ಆಗುತ್ತದೆ.ಸದ್ಯ ಒಂದೇ ಅಳತೆಯಲ್ಲಿ ಇರುವ ಉತ್ಪನ್ನ.
  • ಬೇಡಿಕೆಯ ಮೇಲೆ ಬದಲಾವಣೆ ಮಾಡಿಕೊಡಬಲ್ಲರು.

ಇಂತಹ ಡ್ರೈಯರ್ ಗಳು ಪ್ರತೀ ಮನೆಗೆ ಒಂದು ಇನ್ವೆಸ್ಟ್ ಮೆಂಟ್ ಇದ್ದಂತೆ. ಇದಕ್ಕೆ ನಿರ್ವಹಣೆ ಎಂಬುದಿಲ್ಲ. ಬಾಳ್ವಿಕೆಯೂ ಸುಧೀರ್ಘ. ಒಂದು ಡ್ರೈಯರ್ ಇದ್ದರೆ ಅದರಲ್ಲಿ ಬೇರೆ ಬೇರೆ ಒಣಗಿಸುವ ಯೋಚನೆಗಳು ಬರುತ್ತವೆ. ಕೃಷಿಕರ ಮನೆ ಎಂದ ಮಾತ್ರಕ್ಕೆ ಅಲ್ಲಿ ಹಲಸಿನ ಹಣ್ಣು ಇರುತ್ತದೆ. ಬಾಳೆ ಹಣ್ಣೂ ಇರುತ್ತದೆ. ಪಪ್ಪಾಯಿಯೂ ಇರುತ್ತದೆ. ಇದೆಲ್ಲವನ್ನೂ ಬೇಕಿದ್ದರೆ ಒಣಗಿಸಿ ದಾಸ್ತಾನು ಮಾಡಬಹುದಾದ ವ್ಯವಸ್ಥೆ ಇದ್ದರೆ ಎಷ್ಟು ಅನುಕೂಲ ಅಲ್ಲವೇ?

ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ. https://fb.watch/5wE8QbK984/

ತಯಾರಕರ ಸಂಪರ್ಕಕ್ಕೆ; 9448790195 ವಿಜಯ ಕುಮಾರ್ ಹೆಗಡೆ.
End of article _____________________
Search keywords : Agriculture dryer# Low cost dryer #Agriculture # value edition# pepper dryer # nut meg  dryer# fruit dryer # home dryer# Cardamom Dryer # Spices Dryer#
Farmer’s  media,Kannada agriculture news krushiabhivruddi , Krushi abhivruddi agriculture News Media ,,Best agriculture News Media in kannada ,Agriculture is krushi abhivruddi

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!