ಅಡಿಕೆ ತೋಟದಲ್ಲಿ ಏಲಕ್ಕಿ

ಅಡಿಕೆ ತೋಟದಲ್ಲಿ ಏಲಕ್ಕಿ ಬೆಳೆದರೆ ಲಾಭವಿದೆ.

ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಅಲಂಕರಿಸಿದ ಬೆಳೆ ಅಂದರೆ ಏಲಕ್ಕಿ. ಅಂತರ ರಾಷ್ಟ್ರೀಯ  ಮಾರುಕಟ್ಟೆ ಜೊತೆಗೆ ದೇಶೀಯ ಮಾರುಕಟ್ಟೆ ಎರಡರಲ್ಲೂ ಯಾವಾಗಲೂ ಬೇಡಿಕೆ ಪಡೆದ ಬೆಳೆ. ಇದು ಮಲೆನಾಡು, ಅರೆಮಲೆನಾಡಿನ ಅಡಿಕೆ ತೋಟಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಅಡಿಯಷ್ಟೇ ಆದಾಯವನ್ನೂ ಕೊಡಬಲ್ಲುದು. ವಿಶಿಷ್ಟ ವಾತಾವರಣ ಬೆಳೆ: ಪಶ್ಛಿಮ ಘಟ್ಟದ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಪರಿಮಳದ ಕಾಳನ್ನು ಬಿಡುತ್ತಿದ್ದ  ಸಸ್ಯವಾಗಿದ್ದ ಈ ಏಲಕ್ಕಿ, ಈಗ ರೈತರ ಹೊಲದಲ್ಲಿ  ಬೆಳೆಸಲ್ಪಡುತ್ತಿದೆ. ವನಿಲ್ಲಾ ಎಂಬ ಸಾಂಬಾರ ಪದಾರ್ಥದ ನಂತರ ಇದಕ್ಕೇ…

Read more
ತೆಂಗಿನ ಮರ

ತೆಂಗಿನ ತೋಟದಲ್ಲಿ ಗರಿಷ್ಟ ಆದಾಯ ಕೊಡಬಲ್ಲ ಮಿಶ್ರ ಬೆಳೆ.

ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ  ತೆಂಗನ್ನು ಏಕ ಬೆಳೆಯಾಗಿ  ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು  ಬೆಳೆಸಿರಿ. ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ  ಒಂದು ಎಕ್ರೆಯಲ್ಲಿ ಸುಮಾರು 8000  ಕಾಯಿಗಳು. ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು. ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ?  ಖಂಡಿತವಾಗಿಯೂ …

Read more

ಕೊಕ್ಕೋ ಬೆಳೆದರೆ ನೀರು ಕಡಿಮೆ ಸಾಕು.

ಪ್ರತೀಯೊಂದೂ ಬೆಳೆಗೂ ಅದಕ್ಕೆ ಸೂಕ್ತವಾದ ತಾಪಮಾನ ಪ್ರಾಮುಖ್ಯ ಅಂಶ. ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು.  ತಾಪಮಾನದ ಏರು ಪೇರನ್ನು ನಿಯಂತ್ರಿಸಲು ಸಸ್ಯಗಳಿಂದ ಮಾತ್ರ ಸಾಧ್ಯ. ಜೊತೆಗೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತಾ ಇದ್ದರೆ ಮಾತ್ರ ಇಳುವರಿ ಸ್ಥಿರವಾಗಿರುವುದು. ಇದಕ್ಕೆಲ್ಲಾ   ಸಹಾಯವಾದ ಬೆಳೆ  ಕೊಕ್ಕೋ. ಇದು ತಾಪಮಾನ ಕಡಿಮೆ ಮಾಡುತ್ತದೆ. ಮಣ್ಣಿನ ಫಲವತ್ತತೆ  ಹೆಚ್ಚಿಸುತ್ತದೆ. ನೀರಿನ ಆವೀಕರಣ ತಡೆಯುತ್ತದೆ. ನೆಲಕ್ಕೆ ಬಿಸಿಲು ಹೆಚ್ಚು ಬಿದ್ದಷ್ಟೂ ಹೆಚ್ಚು ಹೆಚ್ಚು ನೀರಾವರಿ ಮಾಡಬೇಕಾಗುತ್ತದೆ. ನೆಲದ ಮೇಲು ಭಾಗದಲ್ಲಿ ಸಸ್ಯದ ಹಸಿರು ಹೊದಿಕೆ  ಇದ್ದಷ್ಟೂ…

Read more
ಜಾಯಿ ಕಾಯಿ ಫಲ

ಇದು ಅಡಿಕೆಗಿಂತಲೂ ಲಾಭದ ಮಿಶ್ರ ಬೆಳೆ

ನೂರು ವರ್ಷಕ್ಕೂಹೆಚ್ಚು ಬದುಕಬಲ್ಲುದು. ಈ ಅವಧಿಯುದ್ದಕ್ಕೂ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಡುತ್ತಾ ಇರುವ  ಯಾವ  ಮರಮಟ್ಟೂ ಇಲ್ಲ. ಅದು ಜಾಯೀ ವೃಕ್ಷ ಮಾತ್ರ. ಅದಕ್ಕೇ ಕೇರಳದ ಜನ ತಮ್ಮ ಮನೆಮುಂದೆ ಒಂದಷ್ಟು ಸಸಿ ಬೆಳೆಸಿ ಕಲ್ಪವೃಕ್ಷ  ಇದು ಎಂದು ಪೋಷಿಸುವುದು. ಕೇರಳದಾದ್ಯಂತ ಎಲ್ಲೆಲ್ಲಿ ಕಂಡರೂ ಜಾಯೀ ಕಾಯಿ ಮರಗಳು. ಯಾಕಪ್ಪಾ  ಇವರು ಮನೆ  ಮುಂದೆ ಇಂತಹ ದೊಡ್ಡ ಮರಮಟ್ಟು  ಬೆಳೆಸಿದ್ದಾರೆ  ಎನ್ನುತ್ತೀರಾ?  ಇದರಲ್ಲಿದೆ  ಭಾರೀ ಆದಾಯ. ಬರೇ ಕೇರಳ ಮಾತ್ರವಲ್ಲ. ಕರ್ನಾಟಕದಲ್ಲೂ ಕೆಲವು ರೈತರು ಸದ್ದಿಲ್ಲದೆ ಇದನ್ನು…

Read more
error: Content is protected !!