ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ.
ಕಾಗೆ ಮೆಣಸು, ಜೀರಿಗೆ ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ ಇದು ಎರಡು ವರ್ಷ ತನಕವೂ ಸಾಯುವುದಿಲ್ಲ.
- ಎಲ್ಲಾ ಮೆಣಸಿನ ಮೂಲ ಇದೇ ಸೂಜಿ ಮೆಣಸು ಎಂಬುದಾಗಿ ಉಲ್ಲೆಖ ಇದೆ.ಇದರಲ್ಲೇ ತಳಿ ಮಾರ್ಪಾಡುಗಳಾಗುತ್ತಾ ನಾವು ಈಗ ಕಾಣುವ ಮೆಣಸಿನ ರೂಪ ಬಂದಿದೆ ಎನ್ನುತ್ತಾರೆ ತಜ್ಞರು.
- ಇದು ತಾರಿಹಾಳ ಮೆಣಸು ಕ್ಯಾಪ್ಸಿಕಮ್ ಅದಂತೆ.
- ಅದೇನೇ ಇರಲಿ ಈ ಜೀರಿಗೆ ಮೆಣಸು ಎನ್ನುವುದು ನಿರ್ಲಕ್ಷಿಸುವಂತದ್ದಲ್ಲ.ಬೆಲೆ ಉಳ್ಳದ್ದು.
ಸಸ್ಯಾಭಿವೃದ್ದಿ:
- ಜೀರಿಗೆ ಮೆಣಸಿನ ಸಸ್ಯಾಭಿವೃದ್ದಿ ಕಾಗೆ ಹಾಗೆಯೇ ಇನ್ನಿತರ ಹಕ್ಕಿಗಳು ಹಣ್ಣು ತಿಂದು ತನ್ನ ಹಿಕ್ಕೆಯ ಮೂಲಕ ಹೊರ ಹಾಕಿದಲ್ಲಿ ಹುಟ್ಟಿಕೊಳ್ಳುತ್ತದೆ.
- ಅದೇ ನಾವು ಹಣ್ಣನ್ನು ಬೀಜಕ್ಕೆ ಹಾಕಿದರೆ ಮೊಳಕೆ ಒಡೆಯುವುದು ವಿರಳವಾಗಬಹುದು.
- ನೀರಾಶ್ರಯ ಇರುವ ಸ್ಥಳದಲ್ಲಿ ,ನೆರಳು ಇರುವ ಮರಗ ಬುಡದಲ್ಲಿ ಅಲ್ಲಿಗೆ ಹಕ್ಕಿಗಳು ವಿರಮಿಸಲು ಬರುತ್ತವೆ.
- ಅಲ್ಲೇ ಅವು ಹಿಕ್ಕೆಯನ್ನೂ ಹಾಕುತ್ತವೆ ಮೆಣಸಿನ ಬೀಜ ಅಲ್ಲಿ ಹುಟ್ಟಿಕೊಳ್ಳುತ್ತದೆ. ಸಸಿಯನ್ನು ಅಲ್ಲಿಂದ ತಂದು ಬೇಕಾದಲ್ಲಿ ನೆಡಬಹುದು.
ತಳಿಗಳು:
- ಸೂಜಿ ಮೆಣಸಿನ ಕಾಯಿಯಲ್ಲಿ ತಳಿ ಮಾರ್ಪಡುಗಳಾಗಿ ಹಲವಾರು ಬಗೆಗಳಾಗಿವೆ.
- ಇದರಲ್ಲೂ ಹಸುರು,ಬಿಳಿ ಬಣ್ಣದ ವಿಧಗಳನ್ನು ಕಾಣಬಹುದು.
- ಕೆಲವು ಬೀಜ ಕಂಪೆನಿಗಳು ಇದರಲ್ಲಿ ತಳಿ ಅಭಿವೃದ್ದಿಯನ್ನೂ ಮಾಡಿವೆ.
- ಜೀರಿಗೆ ಮೆಣಸು ಎಂಬ ಹೆಸರು ಬಂದಿರುವುದು ಇದರ ಮೂಲ ತಳಿಯ ಮೆಣಸು ಜೀರಿಗೆ ಗಾತ್ರಕ್ಕಿಂತ ಸ್ವಲ್ಪ ದೊಡ್ದದಿರುವ ಕಾರಣಕ್ಕೇ ಇರಬೇಕು.
ಪ್ರಾದೇಶಿಕವಾಗಿ ಬೇರೆ ಬೇರೆ ಪ್ರಕಾರಗಳನ್ನೂ ಕಾಣಬಹುದು. ಇದಕ್ಕೆ ಬಲಿಷ್ಟ ಕಾಂಡ ಇದೆ. ಇದರ ಬುಡಕ್ಕೆ ಮೆಣಸಿನ ಕಸಿ ಕಟ್ಟಿದವರೂ ಇದ್ದಾರೆ. ಇದು ವರ್ಷ ಇಡೀ ಬದುಕಿರುತ್ತದೆ. ಮೆಣಸನ್ನು ಇದಕ್ಕೆ ಕಸಿ ಕಟ್ಟಿದರೆ ಅದು ಒಂದು ವರ್ಷಕ್ಕೂ ಹೆಚ್ಚು ಕಾಲ ಬದುಕಿರುತ್ತದೆ. ಅದರದ್ದೇ ಅದ ಕೆಲವು ಗುಣಗಳೂ ಬರಬಹುದು..
ಉಪಯೋಗ:
- ಈ ಮೆಣಸಿನ ವಿಶೇಷ ಎಂದರೆ ಇದು ಎಷ್ಟು ಖಾರ ಇದ್ದರೂ ಸಹ ಶರೀರಕ್ಕೆ ತಂಪನ್ನು ಕೊಡುತ್ತದೆ ಎನ್ನುತ್ತಾರೆ.
- ಇದನ್ನು ಅಸಿಡಿಟಿ ಇದ್ದವರು ಉಪ್ಪಿನ ಜೊತೆ ತಿಂದು ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
- ಇದರ ಹಣ್ಣು ಮೆಣಸನ್ನು ಜಜ್ಜಿ ನಾಯಿ ಕಚ್ಚಿದ ಗಾಯಕ್ಕೆ ಹಚ್ಚಿದರೆ ಗಾಯ ಬೇಗ ಗುಣವಾಗುತ್ತದೆ ಮತ್ತು ಸೋಂಕು ಉಂಟಾಗುವುದಿಲ್ಲ ಎನ್ನುತ್ತಾರೆ.
- ಈ ಮೆಣಸನ್ನು ಹಸಿಯಾಗಿ ಬಳಕೆ ಮಾಡಿದಾಗ ಮೆಣಸಿನ ಸುವಾಸನೆ ಘಾಢವಾಗಿರುತ್ತದೆ.
- ಮಜ್ಜಿಗೆ ನೀರಿಗೆ ಈ ಮೆಣಸನ್ನು ಹಾಕಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಜಂತು ಹುಳ ನಿವಾರಣೆಗೂ ಈ ಮೆಣಸು ಉಪಯುಕ್ತ ಎನ್ನುತ್ತಾರೆ.
- ಕೇರಳ, ತಮಿಳುನಾಡು ಕಡೆ ಇದನ್ನು ಉಪ್ಪು ನೀರಿನಲ್ಲಿ ಹಾಕಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಾರೆ.
- ಈ ಮೆಣಸಿನ ಬುಡಕ್ಕೆ ನಮ್ಮ ಮಾಮೂಲು ಮೆಣಸಿನ ಸಸಿಯನ್ನು ಕಸಿ ಮಾಡಿದರೆ ಮೆಣಸು ಬಹುವಾರ್ಷಿಕ ಬೆಳೆಯಾಗುತ್ತದೆ.
ಇದು ಹಲವಾರು ಪಕ್ಷಿಗಳಿಗೆ ಆಹಾರ. ಈ ಪಕ್ಷಿಗಳು ನಮಗೆ ಉಪಕಾರಿಗಳು. ಆದ ಕಾರಣ ಈ ಮೆಣಸಿನ ಗಿಡ ಇದ್ದರೆ ಕಿತ್ತು ತೆಗೆಯಬೇಡಿ. ಉಳಿಸಿ. ಬೇಕಿದ್ದರೆ ಮೆಣಸು ಕೊಯಿಲು ಮಾಡಿ ಮಾರಾಟ ಮಾಡಿ.
ರೋಗ – ಕೀಟ ಮುಕ್ತ:
ನಾವು ಬೆಳೆಯುವ ಎಲ್ಲಾ ಮೆಣಸಿಗೂ ಬುಡ ಕೊಳೆಯುವ ರೋಗ ಇದೆ. ಕಾಯಿ ಕೊಳೆಯುವ ರೋಗ ಇದೆ. ಜಂತು ಹುಳ, ಹಾಗೆಯೇ ಬಂಬು ಕೀಟ ಇಲ್ಲದ ರೋಗಗಳಿಲ್ಲ. ಇಲ್ಲದ ಕೀಟಗಳೂ ಇಲ್ಲ. ಆದರೆ ಇದಕ್ಕೆ ಅದರ ಯಾವ ರಗಳೆಯೂ ಇರುವುದಿಲ್ಲ. ಹಸಿ ಮೆಣಸಿನ ನೈಜ ಸುವಾಸನೆ ಈ ಮೆಣಸಿನಲ್ಲಿ ಕಾಣಬಹುದು.
- ಸೂಜಿ ಮೆಣಸಿಗೆ ಯಾವ ರೋಗವೂ ಇಲ್ಲ. ಯಾವ ಕೀಟ ಬಾಧೆಯೂ ಇಲ್ಲ.
- ಆದ ಕಾರಣ ಇದಕ್ಕೆ ರಾಸಾಯನಿಕ ಸ್ಪರ್ಶವೇ ಅಗತ್ಯವಿಲ್ಲ.
- ಶುದ್ಧ ಸಾವಯವ ಉತ್ಪನ್ನ ಎಂದರೆ ಇದೇ.
ಮಾರುಕಟ್ಟೆ:
- ಸೂಜಿ ಮೆಣಸನ್ನು ಕೊಳ್ಳುವವರು ಕೆಲವು ಕಡೆ ಮಾತ್ರ ಇದ್ದಾರೆ.
- ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ಇದನ್ನು ಕೊಳ್ಳುವರಿದ್ದಾರೆ.
- ಇಲ್ಲಿ ಮನೆ ಹೆಂಗಸರು ತೋಟಕ್ಕೆ ಹೋಗುವಾಗ ಬರುವಾಗ ಕೊಯಿದು ಸಂಗ್ರಹಿಸಿ ವಾರ್ಷಿಕ 50,000 ತನಕದ ವರಮಾನ ಮಾಡಿಕೊಳ್ಳುವವರಿದ್ದಾರೆ.
- ಸೂಜಿ ಮೆಣಸಿನ ಹಣ್ಣು ಮತ್ತು ಬೆಳೆದ ಕಾಯಿಯನ್ನು ಕೊಯಿಲು ಮಾಡಬೇಕು.
- ಇದನ್ನು ಬಿಸಿಲಿನಲ್ಲಿ ಒಣಗಿಸಬೇಕು.
- ಪೂರ್ತಿ ಒಣಗಿದ ನಂತರ ಗಾಳಿಯಾಡದಂತೆ ಸಂಗ್ರಹಿಸಿಟ್ಟು ಬೇಕಾದಾಗ ಮಾರಾಟ ಮಾಡಬಹುದು.
ಇದು ಕೆಲವು ಖಾರದ ಅಡುಗೆಗಳಿಗೆ ಬಳಸಲು ಹೋಗುತ್ತದೆ. ಉತ್ತರ ಭಾರತದ ಜನ ಇದರ ಗಿರಾಕಿಗಳು ಎನ್ನುತ್ತಾರೆ ಶಿರಸಿ ಬಸ್ ಸ್ಟಾಂಡ್ ಹಿಂದುಗಡೆಯ ವ್ಯಾಪಾರಿ ಅಬ್ದುಲ್ ಕರೀಮ್ ಸಾಹೇಬ್ ರವರು. ಸಿದ್ದಾಪುರ,ಶಿರಸಿ, ಯಲ್ಲಾಪುರಗಳಲ್ಲಿ ಇದನ್ನು ಕೊಳ್ಳುವ ಒಂದಷ್ಟು ವ್ಯಾಪಾರಿಗಳಿದ್ದಾರೆ.
I need ಜಿರಗಿಮೆಣಸಿನ ಕಾಯಿ ಬಿಜ
Can you please suggest the buyer name for birds eye chill
Bihind Sirsi Old bus stand there are many buyers. If you want I will collect the buyers contact number.
Thanking you
Yours faithfully
Radhakrihna Holla
Need seeds. 9611251517
Your palce?
Sir I’m need bird eye chilli seeds my phone number is 9535341678
Your place? Nearby your place it is availabel. Main drawback is this chilli will germinate by birds excreeta.
Comment what market place
Sirsi, siddaapura yallapura are the main market.