ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?

ವಿದ್ಯುತ್ ಸರಬರಾಜು ವ್ಯವಸ್ಥೆ

ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರಿಗೆ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಅದನ್ನು ನಾವು ವಿರೋಧಿಸಬೇಕು. ಖಾಸಗೀಕರಣ ಹಾಗೆ ಹೀಗೆ ಎಂದೆಲ್ಲಾ ರೈತರ ಕಿವಿ ತುಂಬಿ ಅವರನ್ನೂ ತಮ್ಮ ಬೆಂಬಲಕ್ಕೆ ಸೇರಿಸಿಕೊಳ್ಳಲು ಹವಣಿಕೆ ನಡೆಯುತ್ತಿದೆ.

ಸರಕಾರ ಹಂತ ಹಂತವಾಗಿ ಎಲ್ಲಾ ಸರಕಾರೀ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ತಯಾರಿಯಲ್ಲಿದೆ. ನಮ್ಮ ಪ್ರತಿನಿಧಿಗಳು ಯೋಗ್ಯರೇ ಆಗಿದ್ದರೆ  ಇದರಿಂದ  ಸಾರ್ವಜನಿಕರಿಗೆ ಅನುಕೂಲವೇ ಆಗುವುದು.

 • ಕೇಂದ್ರ ಸರಕಾರ ನಾಳೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯ Electricity Amendment Bill 2021 ತಿದ್ದುಪಡಿ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.
 • ಇದರಿಂದ ರೈತರಿಗೆ ಉಚಿತ ವಿದ್ಯುತ್ ಸಿಕ್ಕದಿದ್ದರೆ ಎಂಬ ಆತಂಕ ಎದುರಾಗಿದೆ.
 • ವಿದ್ಯುತ್  ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ಕೊಡಲಿ ಅಥವಾ ಇನ್ಯಾರಿಗೋ ಕೊಡಲಿ.
 • ರೈತರಿಗೆ ಕೊಡುವ ಉಚಿತ ವಿದ್ಯುತ್  ಕೋಟಾವನ್ನು ನಿಲ್ಲಿಸದಿದ್ದರೆ ಆಯಿತು. 
 • ಸರಕಾರೀ ವ್ಯವಸ್ಥೆಯನ್ನು ಸಾಕುವುದೆಂದರೆ  ಯಾವಾಗಲೂ ದೇಶದ ನಾಗರೀಕರಿಗೆ ಹೊರೆಯೇ.
 • ಸರಕಾರೀ ವ್ಯವಸ್ಥೆಗಳಿಗೆ ಅಂಕುಶ ಹಾಕದೆ ಇದ್ದರೆ ಮುಂದೆ ನಮ್ಮ ದೇಶವೇ ಅಧಿಕಾರ ಶಾಹಿಗಳ ದರ್ಬಾರಿನಲ್ಲಿ ನಡೆಯುವಂತಾದೀತು.  
 • ರೈತರಾಗಿ ನಾವು ಇಂತದ್ದಕ್ಕೆ ಬೆಂಬಲ ಕೊಡುವುದು ಬೇಡ.
 • ನಮ್ಮ ಬೇಡಿಕೆಯಲ್ಲಿ ಸಡಿಲಿಕೆ ಮಾಡುವುದು ಖಂಡಿತವಾಗಿಯೂ ಬೇಡ.

ಕೇಂದ್ರ ಸರಕಾರ ಈಗಾಗಾಲೇ ದೂರ ಸಂಪರ್ಕ ಕ್ಷೇತ್ರವನ್ನು ಕೈಬಿಟ್ಟಂತಿದೆ. ಸದ್ಯವೇ ವಿದ್ಯುತ್ ಸರಬರಾಜು ಸಹ ಕೈಬಿಡಲಿದೆ. ಕೆಲವೇ ಸಮಯದಲ್ಲಿ ಬ್ಯಾಂಕಿಂಗ್ ,ವಿಮಾ ವ್ಯವಸ್ಥೆ, ಹಾಗೆಯೇ ಕೆಲವು ಸಮಯದಲ್ಲಿ ಶಿಕ್ಷಣವನ್ನೂ ಸಹ ಖಾಸಗೀಕರಣಕ್ಕೆ ಒಳಪಡಿಸಿದರೂ ಅಚ್ಚರಿ ಇಲ್ಲ. ಕಾರಣ ಇವೆಲ್ಲಾ ಇಲಾಖೆಗಳು ಸರಕಾರದ ಅಂಕುಶಕ್ಕೆ ಸಿಗುತ್ತಿಲ್ಲ. ಈ ಇಲಾಖೆಗಳ ನಿರ್ವಹಣೆ ಸರಕಾರದ ಬೊಕ್ಕಸಕ್ಕೆ ದೊಡ್ದ ಹೊರೆ. ಸರಕಾರಕ್ಕೆ ಹೊರೆಯಾದರೆ ಅದು ಸಾರ್ವಜನಿಕರಿಗೆ ಹೊರೆ. ಈ ನಿಟ್ಟಿನಲ್ಲಿ ಸೂಕ್ತ ಶರತ್ತುಗಳ ಮೇಲೆ ಖಾಸಗಿ ಸ್ವಾಮ್ಯಕ್ಕೆ ಸಾರ್ವಜನಿಕ ವಲಯಗಳನ್ನು ಬಿಟ್ಟು ಕೊಡುವುದು ಸೂಕ್ತ.

ಪಂಪ್ ಸೆಟ್ ಕನೆಕ್ಷನ್

ಕೃಷಿ ನೀರಾವರಿ ಪಂಪುಸೆಟ್ ಗಳು:

 • ರೈತರಿಗೆ ಉತ್ಪಾದನೆ ಮಾಡಬೇಕಾದರೆ ಒಂದೋ ಸರಕಾರ ಉಚಿತ ನೀರು ಕೊಡಬೇಕು.
 • ಇಲ್ಲವೇ ರೈತರು ಅವರವರೇ ಮಾಡಿಕೊಳ್ಳುವ ನೀರಾವರಿ ವ್ಯವಸ್ಥೆಗಳಿಂದ ನೀರು ಎತ್ತಲು ವಿದ್ಯುತ್ ಸೌಕರ್ಯವನ್ನಾದರೂ ಕೊಡಲೇ ಬೇಕು.
 • ಇದನ್ನು ರೈತರು ಸರಕಾರದಿಂದ ಪಡೆಯಲು ಹಿಂದೇಟು ಹಾಕಬಾರದು.
 • ನಮಗೆ ವಿದ್ಯುತ್ ಖಾಸಗಿಗೆ ಹೋಗಲಿ, ಸರಕಾರವೇ ನಡೆಸಲಿ, ನಮಗೆ ಕೊಡಬೇಕಾದುದನ್ನು ಕೊಟ್ಟರೆ ಮುಗಿಯಿತು.
 • ಇದಕ್ಕೆ ಸರಕಾರ ವಿದ್ಯುತ್ ನಿಯಂತ್ರಣ ಪ್ರಾಧಿಕಾರನ್ನ Electricity Regulatory Commission ನೇಮಿಸಲಿದೆ.
 • ಕೃಷಿ ಪಂಪು ಸೆಟ್ ಗಳಿಗೆ ರೈತರು ಮುಂಗಡವಾಗಿ ಹಣ ಪಾವತಿಸಬೇಕು.
 • ಅದಕ್ಕೆ ಸಂದಾಯವಾಗಬೇಕಾದ ಸಬ್ಸಿಡಿಯನ್ನು ಸರಕಾರ ಈಗ ಎಲ್ ಪಿ ಜಿ ಗ್ಯಾಸ್ ಗೆ ಹೇಗೆ ಕೊಡುತ್ತದೆಯೋ ಅದೇ ರೀತಿಯಲ್ಲಿ Direct Benefit Transfer (DBT)ಕೊಡುತ್ತದೆ ಎಂಬುದು ಸರಕಾರದ ಹೇಳುತ್ತಿದೆ.
 • ಸರಿ ಕೊಡೋಣ. ಒಂದೆಡೆ ಸರಕಾರ ರೈತರಿಗೆ  ವರ್ಷಕ್ಕೆ ರೂ. 6000 ಕೊಡುತ್ತದೆ.
 • ಸ್ವಲ್ಪ ಹೆಚ್ಚು ಮಾಡುವ ಘೋಷಣೆ ನಾಡಿದ್ದು ಸ್ವಾತಂತ್ರ್ಯ ದಿನಾಚರಣೆಯಂದು ಹೊರ ಬೀಳಲಿದೆ ಎಂಬ ಸೂಚನೆ ಇದೆ.
 • ಅದನ್ನೇ ಕಟ್ಟುವುದು, ಮತ್ತೆ ಮರಳಿ ಪಡೆಯುವುದು.

ಮೀಟರ್ ಆಳವಡಿಸಲಿ:

 • ಯಾವುದನ್ನೂ ಸರಕಾರ ರೈತರಿಗೆ ಲೆಕ್ಕ ಇಲ್ಲದೆ ಕೊಡುವುದೇ ಬೇಕಾಗಿಲ್ಲ.
 • ಈಗ ರೈತರಿಗೆ ಉಚಿತವಾಗಿ, ಮೀಟರ್ ಇಲ್ಲದೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.
 • ಅದಕ್ಕೆ ಯಾವುದಕ್ಕಾದರೂ ಕರಾರುವಕ್ಕಾದ ಲೆಕ್ಕ ಇದೆಯೇ? ಇಲ್ಲ.
 • ಮೀಟರ್ ಮೂಲಕ ಅಳತೆಯಲ್ಲಿ ಕೊಟದ್ದು ಮಾತ್ರ ಲೆಕ್ಕದ್ದು. ಲೆಕ್ಕ ಇಲ್ಲದ್ದೆಲ್ಲಾ  ರೈತರ ಹೆಸರಿಗೆ.
 • ಇದರಲ್ಲಿ ಅದೆಷ್ಟು ಮೋಸಗಳಿವೆಯೋ? ವಿದ್ಯುತ್ ಕಳ್ಳತನಗಳೆಲ್ಲಾ ರೈತರ ಹೆಸರಿಗೆ.
 • ವರ್ಷಕ್ಕೆ ಇಷ್ಟು ಪ್ರಮಾಣದಲ್ಲಿ ರೈತರಿಗೆ ವಿದ್ಯುತ್ ಕೊಡಲಾಗಿದೆ ಎಂಬ ಲೆಕ್ಕವಾದರೂ ಸಾರ್ವಜನಿಕರಿಗೆ ಸಿಗುತ್ತದೆ.
 • ಮೀಟರ್ ಅಳವಡಿಸಿದಾಕ್ಷಣ  ಅದಕ್ಕೆ ಹಣ ಪಾವತಿ ಮಾಡಬೇಕಾಗಿಲ್ಲ.
 • ರೈತರ ಪಾಲಿನ ವಿದ್ಯುತ್ ಬಿಲ್ಲನ್ನು ಯಾವ ಸರಬರಾಜು ಕಂಪೆನಿ ಇದೆಯೋ ಅದಕ್ಕೆ ಸರಕಾರ ಕೊಡಬಹುದು.
 • ರೈತರಿಗೆ ವಿದ್ಯುತ್ ಕೊಟ್ಟು ಸರಬರಾಜು ಕಂಪೆನಿಗಳು ಲಾಸ್ ಆಗುವುದು ಬೇಡ.
 • ಕೊಟ್ಟದ್ದಕ್ಕೆ ಸರಕಾರದಿಂದ  ಪಾವತಿ ಪಡೆಯಲಿ.
ವಿದ್ಯುತ್ ಕಳ್ಳತನ

ಸರಕಾರಕ್ಕೆ ಇದು ಅನಿವಾರ್ಯ ಕೂಡಾ:

 • ಕೇಂದ್ರ ಸರಕಾರ, ಹಾಗೆಯೇ ರಾಜ್ಯ ಸರಕಾರಗಳಲ್ಲಿ ಅತೀ ದೊಡ್ಡ ಖರ್ಚು ಎಂದರೆ ನೌಕರರಿಗೆ ವೇತನ ಮತ್ತು ಭತ್ಯೆ ಹಾಗೂ ಪೆನ್ಶನ್ ನೀಡುವುದು.
 • ಇದಕ್ಕಾಗಿ ಒಟ್ಟು ಆದಾಯದಲ್ಲಿ 15-20 %  ಮೊತ್ತವನ್ನು ಮೀಸಲಿಡಬೇಕಾಗುತ್ತದೆ.
 • ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇರುತ್ತದೆ.  
 • ದಿನಕಳೆದಂತೆ ಇದು ಬಿಳಿ ಆನೆ ಸಾಕಿದ ತರಹ ಆಗುತ್ತಿದೆ.
 • ಇದನ್ನು ಸ್ವಲ್ಪವಾದರೂ ತಹಬಂದಿಗೆ ತರದಿದ್ದರೆ ಏನಾಗಬಹುದು ಎಂಬುದನ್ನು ಯೋಚಿಸಿ ನೋಡಿ.
 • ಇದು ಸರಕಾರಕ್ಕೂ ತಲೆನೋವೇ ಆಗಿದೆ.  
 • ದೇಶದ ಜನತೆ ಪಾವತಿಸುವ ಕರ ರೂಪದ ಮೊತ್ತ ಬರೇ ಸಂಬಳಕ್ಕೆ ಅಧಿಕ ಪ್ರಮಾಣದಲ್ಲಿ ವ್ಯಯವಾಗುವುದಾದರೆ  ನಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಆಗುವುದಾದರೂ ಎಂದು.
 • ಭಾರತ ಬಡ ದೇಶ ಎಂಬ ಹಣೆ ಪಟ್ಟಿಯನ್ನು ನಿರಂತರ ಅಂಟಿಸಿಕೊಂಡೇ ಇರಬೇಕಾಗಬಹುದು.
 • ಖಾಸಗೀಕರಣ ಆದರೆ ಲಂಚಾವತಾರ ಕಡಿಮೆಯಾಗುತ್ತದೆ. ಕೆಲಸದಲ್ಲಿ ಕ್ಷಮತೆ ಬರುತ್ತದೆ.
 • ಸಂಬಳ ಪಡೆಯುವುದಕಾಗಿಯೇ ಕೆಲಸಕ್ಕೆ ಸೇರಲಿಚ್ಚಿಸುವವರಿಗೆ ತೊಂದರೆ ಉಂಟಾಗುತ್ತದೆ.
 • ಯೋಗ್ಯರಿಗೆ ಅವಕಾಶಗಳು ಇರುತ್ತವೆ.

ರೈತಾಪಿ ವರ್ಗ ತಮ್ಮ ಹೋರಾಟವನ್ನು ತಮ್ಮ ಅನುಕೂಲಕ್ಕೆ ಮಾತ್ರ ಮಾಡಿಕೊಳ್ಳಬೇಕು.  ವಿದ್ಯುತ್, ದೂರ ಸಂಪರ್ಕ ಅಥವಾ ವಿಮಾ ಕ್ಷೇತ್ರಗಳಿಂದ ರೈತರ ಬೇಡಿಕೆಗೆ ಸ್ಪಂದನೆ ಸಿಗುತ್ತದೆಯೇ? ಇಲ್ಲ. ಹಾಗಿದ್ದಾಗ ನಾವು ಯಾಕೆ ಇವರ ಕ್ಷೇತ್ರದಲ್ಲಿ ಮೂಗು ತೂರಿಸಿ ಬೆಂಬಲಿಸಬೇಕು?    

One thought on “ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?

 1. We will review the LPG subsidies, Petrol and diesel prices, Reliance telecommunications in all this the promises have not been kept up both by govts and private people.Now the govts employees not able to be controlled neither are private companies.Let the subsidy part be made available while farmers obtaining the prepaid voucher to the supply companies that is end of it.

Leave a Reply

Your email address will not be published. Required fields are marked *

error: Content is protected !!