ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ. ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ.
- ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ.
- ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ.
- ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ.
- ಕಾರಣ ಅಷ್ಟೂ ಕೀಟನಾಶಕ- ರೋಗ ನಾಶಕ ಬಳಸಲಾಗುತ್ತದೆ.
Click to WhatsApp us and build your website now!
- ಸೊರಗು ರೋಗದಂತಹ ಖಾಯಿಲೆಗಳಿಂದ ಬದನೆ ಬೆಳೆಸುವವರಿಗೆ ಉತ್ಪತ್ತಿಗಿಂತ ಹೆಚ್ಚು ಖರ್ಚೇ ಆಗುತ್ತಿದೆ.
- ಹಿಂದೆ ನೂರಾರು ರೈತರು ಬೆಳೆಯುತ್ತಿದ್ದ ಬೆಳೆ ಈಗ ಹತ್ತಾರು ರೈತರು ಮಾತ್ರ ಬೇಯುವ ಸ್ಥಿತಿಗೆ ಬಂದಿದೆ.
- ಆದುದರಿಂದ ತಳಿಯ ಬದಲಾವಣೆ ಆಗತ್ಯವಾಗಿದೆ.
ಟೊಮಾಟೋ ನಂತರದ ಅತೀ ದೊಡ್ದ ಬೆಳೆ ಬದನೆ. ಇದನ್ನು ದೇಶದ ಎಲ್ಲಾ ಭಾಗಗಳಲ್ಲೂ ಬೆಳೆಸಬಹುದು. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ವರ್ಷದ ಎಲ್ಲಾ ಋತುಮಾನಗಳಲ್ಲೂ ಬೆಳೆಸಬಹುದು. ಬದನೆ ಬೆಳೆ ಕೈ ಹಿಡಿದರೆ ಉತ್ತಮ ಆದಾಯದ ಬೆಳೆ. ಲಕ್ಷಕ್ಕೂ ಹೆಚ್ಚು ಲಾಭ ಪಡೆಯಬಹುದು.ಆದರೆ ಅದಕ್ಕೆ ಸೂಕ್ತವಾದ ತಳಿ ಬೇಕು ಅಷ್ಟೇ.
ಗುಳ್ಳಕ್ಕೆ ಬದಲಿ ತಳಿ:
- ಗುಳ್ಳ ಎಂದರೆ ದುಂಡಗೆ ಸಾಧಾರಣ ದೊಡ್ಡ ಗಾತ್ರದ ತಿಳಿ ಹಸುರು ಬಣ್ಣದ ಮೇಲ್ಮೈ ಮತ್ತು ದಟ್ಟ ಹಸುರು ಬಣ್ಣದ ಪಟ್ಟಿಗಳುಳ್ಳ ಬದನೆ.
- ಪ್ರಾರಂಭದಲ್ಲಿ ಇದು ಉಡುಪಿಯ ಕಟಪಾಡಿ ಸುತ್ತಮುತ್ತ ಮಟ್ಟು ಮುಂತಾದ ಊರಿನಲ್ಲಿ ಬೆಳೆಸುತ್ತಿದ್ದರು.
- ಉಡುಪಿ ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ.
- ಕೆಲವು ಸಮಯದ ನಂತರ ತೊಟ್ಟಿನಲ್ಲಿ ಮುಳ್ಳು ಇಲ್ಲದ ಅದರದ್ದೇ ಪಡಿಯಚ್ಚು ಬದನೆ ಬ್ರಹ್ಮಾವರ – ಕೊಕ್ಕರ್ಣೆ, ಸುತ್ತಮುತ್ತ ಬಳೆಯಲಾರಂಭಿಸಿತು.
- ಇದಕ್ಕೂ ಅದಕ್ಕೂ ಅಂತಹ ವ್ಯತ್ಯಾಸ ಇಲ್ಲ.
ಅವೆರಡೂ ತಳಿಗಳಲ್ಲಿ ಈಗ ಸಮಸ್ಯೆಗಳು ಹೆಚ್ಚುತ್ತಿದ್ದು, ಇದನ್ನು ಸರಿಪಡಿಸಲು ಹೊಸ ತಳಿಯೇ ಅವಶ್ಯವೇನೋ ಎಂಬ ಸ್ಥಿತಿ ಉಂಟಾಗಿದೆ.
- ಹಾಗೆಂದು ಹೋಲಿಕೆ ಇಲ್ಲದ ಯಾವುದೇ ತಳಿಯನ್ನು ಬೆಳೆಸಿದರೂ ಈ ಪ್ರದೇಶದಲ್ಲಿ ಮಾರುಕಟ್ಟೆ ಮಾಡಲು ಸಾಧ್ಯವಿಲ್ಲ.
- ಅಷ್ಟೇ ಅಲ್ಲದೆ ರೈತರಿಗೆ ಉತ್ತಮ ಬೆಲೆಯೂ ಸಿಗಲಾರದು.
- ಅಪ್ಪಟ ಹೋಲಿಕೆಯ ತಳಿಯಾದರೆ ಅದನ್ನು ಜನ ಸ್ವೀಕರಿಸಬಲ್ಲರು.
ಗುಳ್ಳಕೆ ಹೋಲಿಕೆಯ ತಳಿ:
- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಗುಳ್ಳಕ್ಕೆ ಹೋಲಿಕೆ ಇರುವ ತಳಿಯನ್ನು ಹೊಂದಿದ್ದಾರೆ.
- IIHR-B-BR-54 ಹೆಸರಿನ ಈ ತಳಿಯ ಬಣ್ಣ ಮತ್ತು ಆಕಾರ ಗುಳ್ಳ ಬದೆನೆಗೆ ಸಮನಾಗಿದೆ.
- ಗೊಂಚಲು ಗೊಂಚಲು ಇಳುವರಿ ಕೊಡಬಲ್ಲುದು.
- ಬದನೆಯ ಪ್ರಮುಖ ರೋಗ ಸಮಸ್ಯೆಯಾದ ಸೊರಗು ರೋಗಕ್ಕೆ ತಕ್ಕಮಟ್ಟಿಗೆ ನಿರೋಧಕ ಶಕ್ತಿ ಪಡೆದಿದೆ.
- ಎಕ್ರೆಗೆ ಸುಮಾರು 25 ಟನ್ ಇಳುವರಿ ಕೊಡುವ ಸಾಮಾರ್ಥ್ಯ ಹೊಂದಿದೆ.
ಬದನೆಯ ರುಚಿ:
- ಬದನೆ ಅಥವಾ ಇನ್ಯಾವುದೇ ತರಕಾರಿಗಳಿಗೆ ರುಚಿ ಎಂಬುದು ಅದಕ್ಕೆ ಹಾಕುವ ಪೋಷಕಾಂಶದ ಮೇಲೆ ಅವಲಂಭಿತವಾಗಿದೆ.
- ಹಿಂದಿನವರು ಬದನೆ ಅಥವಾ ಇನ್ಯಾವುದೇ ತರಕಾರಿ ಬೆಳೆಸುವಾಗ ಬೂದಿಯನ್ನು ಬಳಕೆ ಮಾಡುತ್ತಿದ್ದರು.
- ಬೂದಿಯಲ್ಲಿ ಪೊಟ್ಯಾಶ್ ಅಂಶ ಉತ್ತಮವಾಗಿರುವ ಕಾರಣ ರುಚಿ ಉತ್ತಮವಾಗಿರುತ್ತಿತ್ತು
- ಸಮತೋಲನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದರಿಂದ ಉತ್ತಮ ರುಚಿಬರುತ್ತದೆ.
ಉತ್ತಮ ಫಲವತ್ತಾದ ಮಣ್ಣು ಮತ್ತು ಸಮತೋಲನ ಗೊಬ್ಬರ ಅದರಲ್ಲೂ ಪೊಟ್ಯಾಶಿಯಂ ಸತ್ವದ ಗೊಬ್ಬರ ಅಗತ್ಯ ಇದ್ದಷ್ಟು ಪೂರೈಕೆ ಮಾಡಿದಾಗ ಬದನೆಯ ರುಚಿ ಉತ್ತಮವಾಗಿರುತ್ತದೆ.
ಬೀಜಗಳಿಗೆ ಸಂಸ್ಥೆಯ Nodal officer RFS for vegetable and flower crops ICAR-IIHR Hesaraghatta lake post Bangalore Phone -080-23086100 Ext-285 ಅಥವಾ seeds.iihr@icar.gov.in ವಿಳಾಸಕ್ಕೆ ಸಂಪರ್ಕಿಸಬಹುದು.