ಕರು ಹಾಕದಿದ್ದರೂ ಹಾಲು ಕರೆಯಬಹುದು.

ಹಾಲು ಕರೆಯುವುದು

ಕರು ಇಲ್ಲದೆ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅದರಿಂದ ಹಾಲು ಕರೆಯಬಹುದು,  ಮತ್ತೆ ಆ ಹಸು ಕರು ಹಾಕುವಂತೆ  ಮಾಡಲೂ ಇದು ಸಹಕಾರಿ.

  • ಹಲವು ಕಾರಣಗಳಿಂದ ರಾಸುಗಳು ಬೆದೆಗೆ ಬಾರದೇ ಇರುವುದು,
  • ಬೆದೆಗೆ ಬಂದರೂ ಗರ್ಭ ಕಟ್ಟದೇ ಇರುವುದು,
  • ಗರ್ಭ ಕಟ್ಟಿದರೂ ಪದೇ ಪದೇ ಗರ್ಭಪಾತವಾಗುವುದು ಇತ್ಯಾದಿ ಕಾರಣಗಳಿಂದ ರಾಸುಗಳು ಕರು ಹಾಕಲು ಸಾಧ್ಯವಾಗದೇ ಬರಡು ಜಾನುವಾರುಗಳೆಂದು ಕರೆಯಿಸಿಕೊಳ್ಳುತ್ತವೆ..
  • ಅದಕ್ಕೆ ತಜ್ಞ ವೈದ್ಯರಿಂದ ಆಧುನಿಕ ಚಿಕಿತ್ಸೆಗಳ ಮೂಲಕ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ರೈತರು ಹತಾಶೆಯಿಂದ ಮಾರಾಟ ಮಾಡುವುದು ಸರ್ವೇಸಾಮಾನ್ಯ.
  • ಇನ್ನೂ ಕೆಲವು ರಾಸುಗಳು ಅಪಘಾತದಿಂದ ಅಥವಾ ಹುಟ್ಟುವಾಗಲೇ ಕಾಲು ಅಥವಾ ಪೃಷ್ಠಭಾಗದ ನ್ಯೂನತೆಯಿಂದ ಬಳಲುತ್ತಿದ್ದರೆ ಗರ್ಭ ಕಟ್ಟಿಸಲು ಸಾಧ್ಯವಾಗುವುದೇ ಇಲ್ಲ.
  • ಇಂತಹ ಜಾನುವಾರುಗಳ ಮಾಲಿಕರಿಗೊಂದು ಸಂತಸದ ಸುದ್ದಿ ಇದೆ. ಅದೆಂದರೆ ಕೃತಕವಾಗಿ ಇಂತಹ ಜಾನುವಾರುಗಳಿಂದಲೂ ಹಾಲನ್ನು ಉತ್ಪಾದಿಸಬಹುದು.

 ಅವಶ್ಯಕತೆ ಯಾವಾಗ  ?

  • ಮಿಶ್ರತಳಿ ಪಡ್ಡೆ ಅಥವಾ ಮಣಕಗಳು 5-6 ವರ್ಷ ವಯಸ್ಸಾದರೂ ಗರ್ಭ ಕಟ್ಟಲು ವಿಫಲವಾದಾಗ
  • ಹಾಲು ಕೊಡುವ ರಾಸುಗಳು 3-4 ಕರುವಿನ ನಂತರ ಬೆದೆಗೆ ಬಾರದೇ ಬರಡಾದಾಗ.
  • ಕೆಲವು ವಾಸಿಯಾಗದ ಗರ್ಭಕೋಶ ಸಂಬಂಧಿ ಕಾಯಿಲೆಗಳಿಂದ ರಾಸುಗಳು ಗರ್ಭ ಕಟ್ಟದಿದ್ದರೆ ಈ ರೀತಿ ಮಾಡಬಹುದು.

ಯಾವ ರಾಸು  ಸೂಕ್ತ;

  • ಮಿಶ್ರತಳಿ ಹಸು ಅಥವಾ ಮೇಲ್ದರ್ಜೀಕರಿಸಿದ ಎಮ್ಮೆಗಳನ್ನು ಆಯ್ಕೆ ಮಾಡಬೇಕು.
  • ಇನ್ನು ಕರು ಹಾಕದ ಅಥವಾ ಈಗಾಗಲೇ ಕರು ಹಾಕಿ ನಂತರ ಬರಡಾದ ಜಾನುವಾರುಗಳೂ ಈ ಚಿಕಿತ್ಸೆಗೆ ಅರ್ಹ.
  • ಜಾನುವಾರು ಆರೋಗ್ಯದಿಂದಿದ್ದು ಉತ್ತಮ ದೇಹದಾಢ್ಯತೆ ಹೊಂದಿರಬೇಕು.
  • ಚಿಕಿತ್ಸೆಗೆ ಒಳಪಡಿಸುವ ರಾಸುಗಳಿಗೆ ಆರೋಗ್ಯವಂತ ಕೆಚ್ಚಲು ಹಾಗೂ ಮೊಲೆತೊಟ್ಟುಗಳಿರಬೇಕು.
  • ಗರ್ಭ ಧರಿಸಿದ ಜಾನುವಾರುಗಳಿಗೆ ಈ ಚಿಕಿತ್ಸೆ ನಿಶಿದ್ಧ.

 ಪ್ರಯೋಜನಗಳೇನು ?

  • ಈ ಚಿಕಿತ್ಸೆಗೆ ಸುಮಾರು ಶೇ. 80ರಷ್ಟು ರಾಸುಗಳು ಸ್ಪಂದಿಸುತ್ತವೆ. ಹಾಗೂ ಸರಾಸರಿ ದಿನಕ್ಕೆ 7-10 ಲೀಟರ್ ಹಾಲು ಉತ್ಪಾದಿಸುವ ಸಾಧ್ಯತೆ ಇದೆ.
  • ಈ ಚಿಕಿತ್ಸೆಯ ನಂತರ ಶೇ. 80ರಷ್ಟ ಜಾನುವಾರುಗಳು ಗರ್ಭ ಧರಿಸುವ ಸಾಧ್ಯತೆ ಇದೆ.
  • ಬೆದೆಗೆ ಬಾರದೇ ಇರುವ ರಾಸುಗಳು ಈ ಚಿಕಿತ್ಸೆಯ ನಂತರ ಸಕಾಲದಲ್ಲಿ ಬೆದೆಗೆ ಬರುವ ಸಾಧ್ಯತೆ ಇದೆ.

ಈ ಚಿಕಿತ್ಸೆಯಿಂದ ಉತ್ಪತ್ತಿಯಾಗುವ ಹಾಲು ಸಹಜವಾಗಿದ್ದು ಮಾನವ ಉಪಯೋಗಕ್ಕೆ ಸೂಕ್ತವಾಗಿದೆ. ಆದ್ದರಿಂದ ಯಾವುದೇ ಹಿಂಜರಿಕೆ ಅಥವಾ ಹೆದರಿಕೆ ಅಗತ್ಯವಿಲ್ಲ.

  • ಕೃತಕವಾಗಿ ಹಾಲು ತರಿಸಿದ ಜಾನುವಾರುಗಳು ಸತತವಾಗಿ ಸಹಜ ರಾಸುವಿನಂತೆಯೇ 10 ತಿಂಗಳುಗಳ ವರೆಗೂ ಹಾಲು ಕೊಡುತ್ತವೆ.
  • ಆ ನಂತರ ಕೂಡ ಹಾಲು ಕೊಡುತ್ತವೆಯಾದರೂ ಪ್ರಮಾಣ ಕಡಿಮೆಯಾಗುತ್ತದೆ.
  • ಈ ಅವಧಿಯಲ್ಲಿ ರಾಸುಗಳು ಗರ್ಭ ಧರಿಸದೇ ಹೋದರೆ ಹಾಲು ಕರೆಯುವುದನ್ನು ನಿಲ್ಲಿಸಿ ಎರಡು ತಿಂಗಳ ವರೆಗೆ ವಿಶ್ರಾಂತಿ ನೀಡಿದ ಮೇಲೆ ಮತ್ತೆ ಈ ಚಿಕಿತ್ಸೆಗೆ ಒಳಪಡಿಸಬೇಕು.
  • ಎರಡನೇ ಬಾರಿ ಮೊದಲಿಗಿಂತ ಹೆಚ್ಚು ಹಾಲು ಉತ್ಪಾದಿಸುತ್ತವೆ.

ಚಿಕಿತ್ಸೆ ವಿಧಾನ ಹೇಗೆ :

  • ಚಿಕಿತ್ಸೆಗೆ ಆಯ್ಕೆಯಾಗುವ ಜಾನುವಾರುಗಳಿಗೆ ತಜ್ಞರು ಕನಿಷ್ಟ ಏಳು ದಿನ ಹಾಗೂ ಗರಿಷ್ಠ 12 ದಿನಗಳ ವರೆಗೆ ಹಾರ್ಮೋನುಗಳ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ 4-5 ದಿನಗಳ ವರೆಗೆ ಪೂರಕ ಔಷಧಿಯನ್ನು ಸಹ ನೀಡುತ್ತಾರೆ.
  • ಚಿಕಿತ್ಸೆಯ ಅವಧಿಯಲ್ಲಿ ಪ್ರತೀ ಎರಡು ಬಾರಿ ಕೆಚ್ಚಲನ್ನು ಮಸಾಜ್ ಮಾಡಬೇಕು.
  • ಚಿಕಿತ್ಸೆ ಪ್ರಾರಂಭಿಸಿದ 10ನೇ ದಿನ ಹಾಲಿನ ಅಂಶ ಕಂಡುಬರುತ್ತದೆ.
  • ನಂತರದ 20 ದಿನಗಳ ವರೆಗೆ ಕರೆದ ಹಾಲು ಮಾನವನ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ.
  • ಮೂವತ್ತು ದಿನಗಳ ನಂತರ ಈ ಹಾಲನ್ನು ಉಪಯೋಗಿಸಬಹುದು.
  • ಚಿಕಿತ್ಸೆ ನೀಡಿದ ರಾಸುಗಳಲ್ಲಿ ಚಿಕಿತ್ಸೆ ನಂತರ 60ನೇ ದಿನಕ್ಕೆ ಗರಿಷ್ಠ ಹಾಲಿನ ಉತ್ಪಾದನೆ ಕಂಡುಬರುತ್ತದೆ.

ಈ ಪದ್ಧತಿಯನ್ನು ತಜ್ಞ ವೈದ್ಯರ ಸೂಕ್ತ ಚಿಕಿತ್ಸೆಯ ನಂತರವೂ ಜಾನುವಾರು ಗರ್ಭ ಧರಿಸಲು ಸಾಧ್ಯವಾಗದೇ ಇದ್ದಾಗ ಮಾತ್ರ ಹಾಲು ಕರೆಯುವ ಪರ್ಯಾಯ ಉಪಾಯವಾಗಿ ಮಾತ್ರ ಬಳಸಬಹುದು.

  •  ಈ ರೀತಿಯಲ್ಲಿ ಹಾಲನ್ನು ಉತ್ಪಾದಿಸುವ ವಿಧಾನ ಕೃತಕವೇ ಹೊರತು ಹಾಲು ಕೃತಕವಲ್ಲ.
  • ಹಾಗಾಗಿ ಇಂತಹ ಹಾಲನ್ನು ಮನುಷ್ಯರು ಉಪಯೋಗಿಸಲು ಯಾವುದೇ ತೊಂದರೆಯಿಲ್ಲ.

ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಕರು ಹಾಕದೇ ಹಾಲು ಉತ್ಪಾದಿಸುವ ಬರಡು ರಾಸನ್ನು ಗರ್ಭ ಕಟ್ಟಿಸುವುದೇ ಈ ವಿಧಾನದ ಮುಖ್ಯ ಉದ್ದೇಶವಾಗಿದೆ.

ಆಧಾರ;

 
 
 
 
 

Leave a Reply

Your email address will not be published. Required fields are marked *

error: Content is protected !!