ತೆಂಗು -ಇಂಥಹ ನ್ಯೂನತೆಗೆ ಪರಿಹಾರ ಏನು?

coconut palm genetically defected

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯ ದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳವಣಿಗೆ  ಇರುತ್ತದೆ. ತೆಂಗಿನ ವಿಚಾರದಲ್ಲೂ ಇದು ಪ್ರಸ್ತುತ.

This type of palms not yield any time

  • ನಾವು ನೆಟ್ಟು ಬೆಳೆಸುವ ತೆಂಗು ನಾಟಿ ಮಾಡಿ ನಾಲ್ಕರಿಂದ ಐದು ವರ್ಷಕ್ಕೆ ಫಸಲಿಗೆ ಆರಂಭವಾಗುತ್ತದೆ.
  • ಆ ಸಮಯದ ವರೆಗೆ ಆ ಸಸಿ ಯಾವ ರೀತಿ ಫಲ ಕೊಡಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳಲಿಕ್ಕೆ ಬರುವುದಿಲ್ಲ.
  • ಕೆಲವು ಸಸಿಗಳು ಎಳವೆಯಲ್ಲಿ ಸಹಜ ಬೆಳವಣಿಗೆಹೊಂದಿರುತ್ತದೆ.
  • ಫಸಲಿಗಾರಂಭಿಸಿದ ನಂತರ ಅಂತರ್ಗತ ನ್ಯೂನ್ಯತೆಯನ್ನು ತೋರಿಸುತ್ತದೆ.
  • ಬೆಳವಣಿಗೆ ನ್ಯೂನತೆಯಲ್ಲಿ ಎಲೆಗಳ ರಚನೆ, ಶಿರ ಭಾಗದ ಬೆಳವಣಿಗೆ, ಕಾಂಡದ ಬೆಳವಣಿಗೆ, ಕಾಯಿಯ ಗಾತ್ರ ಮತ್ತು ಒಳ ರಚನೆ ಇವು ಮುಖ್ಯವಾದವುಗಳು.
  • ಕೆಲವು ಮಾತ್ರ ಪೋಷಕಾಂಶದ ನಿರ್ವಹಣೆಯಿಂದ ಸರಿಪಡಿಸಬಹುದು.

ಯಾವ ರೀತಿಯ ನ್ಯೂನ್ಯತೆಗಳು:

  •  “ನಮ್ಮ ತೆಂಗಿನ ಸಸಿ ಪೊಳ್ಳು ಕಾಯಿಯನ್ನೇ ಬಿಡುತ್ತದೆ.
  • ಒಂದೂ ಒಳ್ಳೆ ಕಾಯಿ ಬಿಡುವುದಿಲ್ಲ. ಮರ ಚೆನ್ನಾಗಿಯೇ ಇದೆ.
  • ತೆಂಗಿನ ಮರದ ಶಿರ ಭಾಗ ವಿಚಿತ್ರ ರೀತಿಯಲ್ಲಿ ಬೆಳೆಯುತ್ತಿದೆ. ಕಾಯಿಯೇ ಇಲ್ಲ.
  • ಹೀಗೆಲ್ಲಾ ನ್ಯೂನತೆಗಳಿರುತ್ತವೆ.

ಇಂತಹ ಅಸಹಜ ಬೆಳವಣಿಗೆಗಳು ಅಪರೂಪದ್ದಾದರೂ ಅಂಥಹ ಮರಗಳು ಯಾರ ಹೊಲದಲ್ಲಿಯಾದರೂ ಇದ್ದರೆ ಅದು ನಾಳೆ ಸರಿಯಾಗಬಹುದು, ನಾಡಿದ್ದು ಆಗಬಹುದು ಎಂದು ಉಳಿಸಿಕೊಳ್ಳುವುದು ವ್ಯರ್ಥ.

Un productive tree

  • ತೆಂಗಿನ ಮರಗಳಲ್ಲಿ ಸುಮಾರು ಶೇ. 1-2 ರ ಪ್ರಮಾಣದಲ್ಲಿ ಇಂತಹ ಅಸಹಜ ಬೆಳವಣಿಗೆಯ ನ್ಯೂನತೆ ಇರುತ್ತದೆ.
  • ಇಂಥಃ ಸಮಸ್ಯೆ ತೆಂಗು ಬೆಳೆಯಲಾಗುವ ಎಲ್ಲಾ ಕಡೆಯಲ್ಲೂ ಇದೆ.

ಇದಕ್ಕೆ  ಕಾರಣ ಆ ತೆಂಗಿನ ಬೀಜದ ವಂಶ ಗುಣ. ಕೆಲವೊಂದು ಮರಗಳು ತಿಗಣೆ ಜಾತಿಯ ಕೀಟಗಳ ಉಪಟಳದಿಂದ ಸ್ವಲ್ಪ ಅಸಹಜವಾಗಿ ಬೆಳೆಯಬಹುದಾದರೂ, ಶಾಶ್ವತವಾಗಿ ಇದೇ ರೀತಿಯಲ್ಲಿ ಬೆಳವಣಿಗೆ ತೋರ್ಪಡಿಸುವ ಮರಗಳೆಲ್ಲಾ ವಂಶಗುಣದ ತೊಂದರೆಗೆ ಒಳಗಾದವುಗಳಿರುತ್ತವೆ.  ಈ ತೊಂದರೆಗಳಿಗೆ ಹಲವಾರು ಕಾರಣಗಲಿದ್ದರೂ,ನಮ್ಮ ಬೀಜ / ಸಸಿಯ ಮೂಲದಲ್ಲಿ ಗುಣ ಸೇರಿರುತ್ತದೆ.

ಬ್ರೂಣದ ದೊಷ:

seed defect

  • ಕಾಯಿಯ ಮೂರು ಕಣ್ಣುಗಳಲ್ಲಿ ಮೆದು ಕಣ್ಣಿನ ಒಳಗೆ ಇರುವ ಅಕ್ಕಿ ತರಹದ ಭಾಗ ಅದರ ಬ್ರೂಣ.
  • ಈ ಬ್ರೂಣ ಸಸ್ಯದ ಮೊಳಕೆ ಹಾಗೂ ಅದರ ನಂತರದ  ಬೆಳವಣಿಗೆಗೆ ಮೂಲ ಪ್ರೇರಕ.
  • ಬ್ರೂಣಕ್ಕೆ ಉಂಟಾದ ಯಾವುದೇ ತೊಂದರೆ ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
  • ತೆಂಗಿನ ಬೀಜ ಎರಡು- ಮೂರು- ನಾಲ್ಕು ಮೊಳಕೆ ಒಡೆಯುವುದಕ್ಕೆ ಅದರಲ್ಲಿ ಅವಳಿ ಅಥವಾ ತ್ರಿವಳಿ ಬ್ರೂಣ ಇರಬಹುದು.
  • ಕೆಲವೊಮ್ಮೆ  ಮರವಾಗುವ ಸಮಯದಲ್ಲಿ ಎರಡು ಟಿಸಿಲು ಒಡೆಯುವುದೂ ಇದೆ.
  • ಬ್ರೂಣಕ್ಕೆ ಪ್ರಾಕೃತಿಕವಾಗಿ ಅಥವಾ ಭೌತಿಕವಾಗಿ ತೊಂದರೆಗಳು ಆಗಬಾರದು.

ಪ್ರಾಕೃತಿಕವಾಗಿ ಆಗುವ ಘಾಸಿ:

Physical injury

  •  ತೆಂಗಿನ ಮರದಲ್ಲಿ ಸಾಮಾನ್ಯವಾಗಿ ಕೃತಕ ಪರಾಗಸ್ಪರ್ಶದ ಮೂಲಕ  ಕಾಯಿ ಕಚ್ಚುತ್ತದೆ.
  • ಕೆಲವೊಮ್ಮೆ ಪರಾಗ ಕಣಗಳಲ್ಲಿ ಏನಾದರೂ ಸೂಕ್ಷ್ಮ ದೋಷಗಳಿದ್ದು ಅವುಗಳಿಂದ ಪರಾಗ ಸ್ಪರ್ಶ ಕ್ರಿಯೆ ನಡೆದರೆ ಮರವಾದಾಗ ಅದರ ನ್ಯೂನತೆಯು ಬೆಳವಣಿಗೆ ಅಥವಾ ಇನ್ಯಾವುದೇ ರೀತಿಯಲ್ಲಿ ತೋರಬಹುದು.

ಭೌತಿಕ ಕಾರಣಗಳು:

  • ನಮ್ಮ ಕೈಯಿಂದ ಆಗುವ ತೊಂದರೆಗಳಿಗೆ ಭೌತಿಕ ಕಾರಣಗಳು ಎನ್ನಬಹುದು.
  • ಬೀಜಕ್ಕಿಡುವ ತೆಂಗಿನ ಕಾಯಿಗೆ ತಾಯಿ ಮರದ ಲಕ್ಷಣ ಪ್ರಾಮುಖ್ಯ.
  • ಇದಕ್ಕನುಗುಣವಾಗಿ ಬೀಜದ ಕಾಯಿಯನ್ನು ಆರಿಸಬೇಕು.
  • ಬೀಜದ ಕಾಯಿ  ತೆಗೆಯುವಾಗ ಎತ್ತರದ ಮರಗಳಿಂದ ಕೆಳಕ್ಕೆ  ಬೀಳಿಸಬಾರದು, ಇಳಿಸಬೇಕು.
  • ಬೀಳಿಸಿದರೆ  ಬ್ರೂಣಕ್ಕೆ ಹೊಡೆತ ಉಂಟಾಗಬಹುದು. ಆಗ ವೈಪರೀತ್ಯಗಳು ಉಂಟಾಗುವ ಸಾಧ್ಯತೆ ಇದೆ.

ಮರದ ಬೆಳಯುತ್ತಿರುವಾಗ ಕೆಲವು ನ್ಯೂನ್ಯತೆಗಳು ಉಂಟಾಗುತ್ತವೆ. ಇದಕ್ಕೆ ನಮ್ಮ  ಕೆಲವು ಕೆಲಸ ಕಾರ್ಯಗಳು ಮತ್ತು ಕೆಲವು ಕೀಟ- ರೋಗದ ಸಮಸ್ಯೆಯು ಕಾರಣವಾಗುತ್ತದೆ. ತೆಂಗಿನ ಮರದಲ್ಲಿ ಒಂದೇ ಒಂದು ಮೊಳಕೆ ಇದ್ದು, ಅದು ಶಿರ ಭಾಗದ ಸುಳಿಯ ಎಡೆಯಲ್ಲಿ ಇರುತ್ತದೆ.

ಸರಿಯಾಗದ ತೆಂಗಿನ ಮರ

  • ಯಾವುದಾದರೂ ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ಮರದ ಸುಳಿ ಭಾಗಕ್ಕೆ ಯಾವುದಾದರೂ ಮರದ ಗೆಲ್ಲುಗಳು ಬಿದ್ದು ಘಾಸಿ ಉಂಟಾದರೆ ಆಂತಹ ಮರಗಳು ಚೇತರಿಸಿಕೊಳ್ಳಲು ಸುಮಾರು ಮೂರು ವರ್ಷ ಬೇಕಾಗುತ್ತದೆ.
  • ಈ ಸಮಯದಲ್ಲಿ ಕೆಲವೊಮ್ಮೆ ಮೊಳಕೆ ಭಾಗಕ್ಕೆ ಏನಾದರೂ ಶಾಕ್ ತರಹದ ಅನುಭವವಾದಲ್ಲಿ ಆ ಮರದ ಇಳುವರಿ ಕ್ಷಮತೆ ಕುಗ್ಗಬಹುದು.
  • ಕೆಲವು ಕೀಟಗಳು ಶಿರಭಾಗದ ಮೆದು ಅಂಗಾಂಶಕ್ಕೆ  ಹಾನಿ ಮಾಡಿ, ಅದನ್ನು  ನಿರ್ವಹಣೆ ಮಾಡಿದರೂ ಫಲಕಾರಿಯಾಗದೆ ಅದರ ಮೊಳಕೆ ಭಾಗಕ್ಕೆ  ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಗಿ ,ನಂತರ ಇಳುವರಿ ಕಡಿಮೆಯಾಗಬಹುದು.
  • ಮುಖ್ಯವಾಗಿ ಕೆಂಪು ಮೂತಿ ಹುಳ, ಕುರುವಾಯಿ ಕೀಟ, ಕೋರಿಡ್ ಬಗ್ ಮುಂತಾದ ಕೀಟಗಳಿಂದ ಹೀಗಾಗುತ್ತದೆ.
  • ತೆಂಗಿನ ಮರದಲ್ಲಿ  ಪೊಳ್ಳು ಕಾಯಿಗಳೇ ಬಿಡುತ್ತಿದ್ದರೆ ಆ ಮರಕ್ಕೆ  ಪೊಟಾಶಿಯಂ ಹಾಗೂ ಗಂಧಕ ಪೋಷಕಾಂಶಗಳನ್ನು ಕೊಟ್ಟು, ಮೂರು ವರ್ಷಗಳ ತನಕ ಇಳುವರಿಯನ್ನು  ಗಮನಿಸಿರಿ
  • ಸರಿಯಾದರೆ ಮಾತ್ರ ಉಳಿಸಿ. ವಕ್ರ ವಕ್ರವಾಗಿ, ಸುರುಳಿ ಸುರುಳಿಯಾಗಿ ಬೆಳೆಯುವ ಮರಗಳು ನಾಳೆ ನಾಡಿದ್ದು ಸರಿಯಾಗುತ್ತದೆ ಎಂದು ಕಾಯುತ್ತಾ ಕುಳಿತು ಕೊಳ್ಳಬೇಡಿ.
  • ಅದು ಅದರ ಶಾರೀರಿಕ ನ್ಯೂನತೆಯಾಗಿದ್ದು, ಅದು ಅದು ಎಂದಿಗೂ ಸರಿಯಾಗಲಾರದು.
  • ಈ ತೊಂದರೆಗಳಿಗೆ ಯಾರೂ ಕಾರಣವಲ್ಲ.
  • ಇದು ಮಿನಿಮಮ್ ಲಾಸ್‍ನಲ್ಲಿ ಬರುವ ಸಮಸ್ಯೆಯಾಗಿದ್ದು, ಇಂತದ್ದು ಗುರುತಿಸಿ ತಕ್ಷಣ ತೆಗೆದು ಬೇರೆ ಸಸಿ ನಾಟಿ ಮಾಡುವುದರಿಂದ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.

ತೆಂಗು ಬೆಳೆಗಾರರು ಅನುತ್ಪಾದಕ ಮರಗಳನ್ನು ಉಳಿಸಿಕೊಂಡು ಅದು ಇಂದು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂದು ಕಾದು ನೊಡುವುದು ಸರಿಯಲ್ಲ. ಎಲ್ಲಾ ಬೆಳೆಗಳಲ್ಲೂ ಇರುವಂತೆ ತೆಂಗಿನಲ್ಲೂ ಕೆಲವು ಅನುತ್ಪಾದಕ ಮರಗಳು ಇರುವುದು ಸಹಜ. ಅದನ್ನು ಗುರುತಿಸಿದ ಮೇಲೆ ತೆಗೆಯುವುದು ಉತ್ತಮ.

ಪ್ರಶ್ನೆಗಳು:
ತೆಂಗಿನ ಮರದಲ್ಲಿ ಎಷ್ಟು ಗರಿಗಳು ಇರಬೇಕು?
ಒಂದು ಹೂ ಗೊಂಚಲು ಎಷ್ಟು ಉದ್ದ ಇರಬೇಕು

Leave a Reply

Your email address will not be published. Required fields are marked *

error: Content is protected !!