ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ ಚೆನ್ನಾಗಿ ಬೆಳೆಗಳಿಗೆ ಲಭ್ಯವಾಗುತ್ತದೆ.
- ನಾನು ಗೊಬ್ಬರಗಳನ್ನು ಸಾಕಷ್ಟು ಕೊಡುತ್ತೇನೆ.ಆದರೆ ಇಳುವರಿ ಇಲ್ಲ ಎನ್ನುತ್ತಾರೆ ಬಹಳ ಜನ.
- ಇದಕ್ಕೆ ಒಂದು ಕಾರಣ ನಿರಂತರ ರಾಸಾಯನಿಕ ಗೊಬ್ಬರದ ಬಳಕೆ.
- ನಿರಂತರ ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ರಾಸಾಯನಿಕ ಗೊಬ್ಬರಗಳಿಲ್ಲದೆ ಬೆಳೆ ಬೆಳೆಯಬಹುದು.
- ಸಾವಯವದಲ್ಲಿ ಉತ್ತಮ ಫಸಲು ಬರುತ್ತದೆ ಎಂದು ಕೆಲವರು ಬೀಗುವುದಿದ್ದರೆ ಇದೇ ಕೃಷಿ ಕ್ರಮದಿಂದ.
ರಾಸಾಯನಿಕ ಗೊಬ್ಬರಗಳು ತಾತ್ಕಾಲಿಕ ಅಥವಾ ಪೂರಕ ಬೆಳೆ ಪೋಷಕಗಳು. ಇದನ್ನೇ ಬಳಕೆ ಮಾಡಿದರೆ ಅದು ಮಣ್ಣೀನ ಜೈವಿಕ, ಮತ್ತು ಬೌತಿಕ ರಚನೆಯನ್ನು ಕೆಡುತ್ತದೆ. ಆದರ ಜೊತೆಗೆ ಸಾವಯವ ಗೊಬ್ಬರಗಳನ್ನು ಕೊಟ್ಟಗ ಮಾತ್ರ ಅದು ಫಲಕಾರಿಯಾಗುತ್ತದೆ.
ಸಾವಯವ ಗೊಬ್ಬರಗಳಿಂದ ಫಲ ಏನು:
- ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸಿದಾಗ ಅದು ಮಣ್ಣಿನಲ್ಲಿ ಹ್ಯೂಮಸ್ ಆಗಿ ಪರಿವರ್ತನೆ ಹೊಂದಿ ಮಣ್ಣಿನ ಬೌತಿಕ ರಚನೆಯನ್ನು ಉತ್ತಮಪಡಿಸುತ್ತದೆ.
- ಮಣ್ಣಿನಲ್ಲಿ ಹ್ಯುಮಸ್ ರಚನೆ ಇದ್ದರೆ ಮಾತ್ರ ಗಾಳಿಯಾಡುವಿಕೆ, ನೀರು ಹಿಡಿದಿಟ್ಟುಕೊಳ್ಳುವ ಗುಣ ನೀರು ಇಂಗುವಿಕೆಗೆ ಅನುಕೂಲವಾಗುತ್ತದೆ.
- ರಾಸಾಯನಿಕ ಗೊಬ್ಬರಗಳು ಸಸ್ಯಗಳಿಗೆ ಸಮರ್ಪಕವಾಗಿ ಲಭ್ಯವಾಗಲೂ ಸಹ ಸಾವಯವ ವಸ್ತುಗಳು ಬೇಕು.
- ಸಾವಯವ ವಸ್ತುಗಳಲ್ಲಿ ಮಾತ್ರ ಮಣ್ಣಿನ ಜೀವಾಣುಗಳು ಕ್ರಿಯಾತ್ಮಕವಾಗಿರುತ್ತವೆ.
- ಜೀವಾಣುಗಳು ಇದ್ದರೆ ಮಾತ್ರ ರಾಸಾಯನಿಕ ಗೊಬ್ಬರಗಳೂ ಸಸ್ಯಕ್ಕೆ ಲಭ್ಯವಾಗುತ್ತವೆ.
ಮಣ್ಣಿಗೆ ಜೀವಾಣುಗಳೇ ಆದಾರ:
- ಜೀವಾಣುಗಳಿಲ್ಲದ ಮಣ್ಣು ಬರೇ ಒಂದು ವಸ್ತು.
- ಜೀವಿಗಳ ಸಹಾಯದಿಂದ ಮಾತ್ರ ರಾಸಾಯನಿಕ ಮೂಲದ ಸಾರಜನಕ ಗೊಬ್ಬರಗಳು, ರಂಜಕ , ಪೊಟ್ಯಾಶ್ ಗೊಬ್ಬರಗಳು ಹಾಗೆಯೇ ಕಬ್ಬಿಣ, ಮ್ಯಾಂಗನೀಸ್,ಮುಂತಾದವು ರೂಪಾಂತರ ಹೊಂದಿ ಸಸ್ಯಗಳಿಗೆ ಲಭ್ಯವಾಗುತ್ತದೆ.
- ಇಲ್ಲವಾದರೆ ಅದೂ ಸಹ ನಿಶ್ಪ್ರಯೋಜಕ .ರಂಜಕ , ಕಬ್ಬಿಣ, ಮ್ಯಾಂಗನೀಸ್, ಸತು ಇತ್ಯಾದಿ ಗಳು ಸ್ಥಿರಗೊಳ್ಳದೆ ಸಸ್ಯಗಳಿಗೆ ಲಭ್ಯವಾಗಿಯೇ ಉಳಿಯುತ್ತದೆ.
ಸಾವಯವ ವಸ್ತುಗಳು ಮಣ್ಣಿನಲ್ಲಿ ಕಡಿಮೆಯಾಯಿತೆಂದರೆ ಮಣ್ಣು ಗಟ್ಟಿಯಾಗುತ್ತದೆ. ಮಣ್ಣು ಗಟ್ಟಿಯಾದರೆ ಬೇರುಗಳು ಹೆಚ್ಚು ವಿಶಾಲ ಪ್ರದೇಶಗಳಿಗೆ ಹಬ್ಬುವುದಿಲ್ಲ. ಸಾವಯವ ವಸ್ತುಗಳನ್ನು ಸೇರಿಸಿದಾಗ ಮಣ್ಣು ಮೆದುವಾಗುತ್ತದೆ. ಎರೆಹುಳು ಎಂಬ ಜೀವಿ ಮಣ್ಣನ್ನು ಅಗತೆ ಮಾಡುತ್ತದೆ. ಬೇರುಗಳ ಬೆಳೆವಣಿಗೆಗೆ ತುಂಬಾ ಅನುಕೂಲವಾಗುತ್ತದೆ.
- ಬೇರುಗಳು ಹೆಚ್ಚಾಗಿದ್ದರೆ ಮಾತ್ರ ಸಸ್ಯಗಳ ಆರೋಗ್ಯ ಉತ್ತಮವಾಗಿರುತ್ತದೆ, ಪೊಷಕಗಳ ಹೀರುವಿಕೆಯೂ ಉತ್ತಮವಾಗಿರುತ್ತದೆ.
- ಕೃತಕ ಗೊಬ್ಬರಗಳು ಅಧಿಕ ಇಳುವರಿಗೆ ಸಹಾಯಕವಾದರೂ ಸಹ ಅವು ಸಸ್ಯಗಳಿಗೆ ದೊರೆಯಲ್ಪಡುವುದೇ ಸಾವಯವ ವಸ್ತುಗಳ ಆಧಾರದಿಂದ ಎಂಬುದು ಪ್ರತೀಯೊಬ್ಬ ರೈತನಿಗೂ ತಿಳಿದಿರಬೇಕು.
ನಾವು ಏನೇ ಆಹಾರವನ್ನು ತಿಂದರೂ ಶರೀರದೊಳಗೆ ಅದನ್ನು ಸಮರ್ಪಕವಾಗಿ ಅರಗಿಸಿಕೊಡಬಲ್ಲ ಜೀರ್ಣಾಂಗ ವ್ಯೂಹದ ಕಿಣ್ವಗಳು ಕೆಲಸ ಮಾಡಿದರೆ ಮಾತ್ರ ಅದು ದೇಹ ಪೋಷಣೆಗೆ ಸಹಕಾರಿಯಾದಂತೆ ಸಾವಯವ ವಸ್ತುಗಳೂ ಸಹ.
- ಸಾವಯವ ಗೊಬ್ಬರ ಎಂದು ಬಳಕೆ ಮಾಡುವ ತೀಕ್ಷ್ಣ ಗೊಬ್ಬರಗಳು, ( ಕೊಂಡು ತರುವ ಗೊಬ್ಬರ, ಹಿಂಡಿ ಗೊಬ್ಬರ, ಕುರಿ, ಅಡು ಮುಂತಾದ ಗೊಬ್ಬರಗಳ ಪ್ರಮಾಣ ಮಣ್ಣಿನ ಜೈವಿಕ ರಚನೆಯನ್ನು ಉತ್ತಮಪಡಿಸಲು ಯಥೇಚ್ಚವಾಗಿ ಸಾಲದು.
- ಇಲ್ಲಿ ಬೇಕಾಗುವುದು ಭೂ ಹೊದಿಕೆ. ಇದನ್ನು ತಾವಯವ ತ್ಯಾಜ್ಯಗಳಾದ ಭತ್ತದ ಹುಲ್ಲು, ದ್ವಿದಳ ಧಾನ್ಯದ ಸಸ್ಯಗಳು, ತರಗೆಲೆ,ಕರಡ, ಸೊಪ್ಪು ಸದೆಗಳೇ ಮಿತವ್ಯಯದ ಪರಿಣಾಮಕಾರೀ ಸಾವಯವ ಮಣ್ಣು ಸುಧಾರಕಗಳು.
- ಕೆಲವು ತಜ್ಞರು ಬೆಳೆಗೆ ಬೇಕಾಗುವುದು ಪೋಷಕ. ಅದು ರಾಸಾಯನಿಕ ಆದರೇನು, ಸಾವಯವ ಆದರೇನು,ಸಸ್ಯಗಳಿಗೆ ಏನು ಗೊತ್ತಾಗುತ್ತದೆ ಎಂದು ವಾದ ಮಾಡುತ್ತಿದ್ದರು.
- ಆದರೆ ಅವರೂ ಕ್ರಮೇಣ ಇದರ ಸಮಸ್ಯೆಯನ್ನು ಮನದಟ್ಟು ಮಾಡಿಕೊಂಡಿದ್ದಾರೆ.
- ಈಗ ಸಾವಯವ ಮತ್ತು ರಾಸಾಯನಿಕ ಸಮತೋಲನ ಇಲ್ಲದೆ ವಿನಹ ಪ್ರಯೋಜನವೇ ಇಲ್ಲ ಎನ್ನುವಂತಾಗಿದೆ.
- ಕೆಲವು ಸಮಯದ ತನಕ ಬರೇ ರಾಸಾಯನಿಕ ಗೊಬ್ಬರಗಳು ಫಲಿತಾಂಶ ಕೊಟ್ಟರೆ ಅದು ಮಣ್ಣಿನಲ್ಲಿ ಸಂಗ್ರಹವಿರುವ ಸಾವಯವ ಪದಾರ್ಥಗಳ ಕಾರಣದಿಂದ.
ಮಲೆನಾಡಿನ ಕೆಲವು ಬೆಳೆಗಾರರ ತೋಟದಲ್ಲಿ ಭಾರೀ ಇಳುವರಿ ಬರುವುದನ್ನು ನಾವೆಲ್ಲಾ ನೋಡಿದ್ದೇವೆ. ಇವರ ಈ ಇಳುವರಿಯ ಗುಟ್ಟು, ವರ್ಷ ವರ್ಷ ಇವರು ಮಣ್ಣನ್ನು ಸಾವಯವ ತ್ಯಾಜ್ಯಗಳಿಂದ ಶ್ರೀಮಂತಗೊಳಿಸುತ್ತಿರುತ್ತಾರೆ.
ಏನೇ ಕೃಷಿ ಮಾಡಿ. ರಾಸಾಯನಿಕ ಬಳಸಿ. ಆದರೆ ಸಾವಯವ ತ್ಯಾಜ್ಯಗಳನ್ನು ಹಾಳು ಮಾಡದೆ ಮಣ್ಣಿಗೆ ಮರಳಿ ಸೇರಿಸುತ್ತಾ ಇರಿ.ಹೀಗೆ ಮಾಡಿದರೆ ಹೊಲ ಫಲವತ್ತಾಗಿ ಕ್ರಮೇಣ ಬೆಳೆ ಪೋಷಣೆಗೆ ಮಾಡುವ ಖರ್ಚು ಕಡಿಮೆಯಾಗುತ್ತದೆ.
end of the article————-
search words: Organic agriculture # Organic matter # Organic waste # Use of organic waste # soil fertility and organic matter #