ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ ಬೇಕಾದ ಮಾಹಿತಿಗಳು ಲಭ್ಯವಿದೆ.
ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ನಂತರ ಇದನ್ನು 1988 ರಲ್ಲಿ ಕೋಜಿಕೋಡ್‍ನ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ವರ್ಗಾಯಿಸಲಾಯಿತು. 2014 ರಲ್ಲಿ ಕೇಂದ್ರವನ್ನು ಕೋಜಿಕೋಡ್‍ನ ಐಸಿಎಆರ್– ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಪ್ರಾದೇಶಿಕ ಕೇಂದ್ರವಾಗಿ ನವೀಕರಿಸಲಾಯಿತು.
ಎಲ್ಲಿ ಇದೆ:
- ಈ ಕೇಂದ್ರವು ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಪ್ಪಂಗಳದಲ್ಲಿದೆ.
- ಇದು ಮಡಿಕೇರಿಯಿಂದ 8 ಕಿ. ಮೀ ದೂರದಲ್ಲಿ ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿದೆ ಮತ್ತು ಇದು ಸಮುದ್ರ ಮಟ್ಟಗಿಂತ 920 ಮೀ ಎತ್ತರದಲ್ಲದೆ.
- ಕೇಂದ್ರದ ಪ್ರಾಯೋಗಿಕ ಕೃಷಿ 17.4 ಹೆಕ್ಟೇರ್ ಪ್ರದೆಶದಲ್ಲಿ ಹರಡಿದ್ದು.
- ಈ ಕೇಂದ್ರವು ಏಲಕ್ಕಿ, ಕರಿಮೆಣಸು, ಜಾಯಿಕಾಯಿ, ಶುಂಠಿ, ಅರಶಿನ ಮತ್ತು ಇತರ ಸಂಬಾರ ಬೆಳೆಗಲ ಬಗ್ಗೆ ಸಂಶೋಧನೆ ನಡೆಸುತ್ತದೆ.
- ಸಂಶೋಧನಾ ಪ್ರಯತ್ನಗಳಲ್ಲದೆ, ಕೇಂದ್ರವು ವೈವಿಧ್ಯಮಯ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ,
- ಇದರಲ್ಲಿ ಸುಧಾರಿತ ತಳಿಗಳನ್ನು ಕೃಷಿ ಸಮುದಾಯಕ್ಕೆ ಮತ್ತು ಕೃಷಿ ಇಲಾಖೆಗೆ ಉತ್ಪಾದಿಸಿ ವಿತರಿಸಲಾಗುತ್ತದೆ.
- ಪ್ರಾದೇಶಿಕ ಕೇಂದ್ರವು ಬೆಳೆಗಾರರಿಗೆ ಸಲಹಾ ಸೇವೆಗಳನ್ನು ಒದಗಿಸುತ್ತದೆ.
- ಸಂಬಾರ ಬೆಳೆಗಳ ಉತ್ಪಾದನೆ ಮತ್ತು ಸಂಸ್ಕರಣಾ ತಂತ್ರಜ್ಞಾನಗಳ ವಿವಿಧ ಅಂಶಗಳ ಕುರಿತು
- ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಅಭಿವೃಧ್ದಿ ಇಲಾಖೆಗಳ ಸಿಭ್ಭಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಪ್ರಾದೇಶಿಕ ಕೇಂದ್ರದ ಉದ್ದೇಶಗಳು;
- ಸುರಕ್ಷಿತ ಸಂಬಾರ ಬೆಳೆಗಳ ವರ್ಧಿತ ಉತ್ಪಾದನೆಗಾಗಿ ಅನುವಂಶಿಕ ಸಂಪನ್ಮೂಲ ನಿರ್ವಹಣೆ, ಬೆಳೆ ಸುಧಾರಣೆ, ಬೆಳೆ ಉತ್ಪಾದನೆ ಮತ್ತು ಸಂರಕ್ಷಣಾ ತಂತ್ರಜ್ಞಾನಗಳ ಕುರಿತು ಮೂಲ, ಅನ್ವಯಿಕ ಮತ್ತು ಕಾಯ್ರತಂತ್ರದ ಸಂಶೋಧನೆ.
- ತಂತ್ರಜ್ಞಾನದ ವರ್ಗಾವಣೆ, ಸಾಮರ್ಥ್ಯ ವೃದ್ದಿ ಮತ್ತು ತಂತ್ರಜ್ಞಾನಗಳ ಪ್ರಭಾವದ ಮೌಲ್ಯಮಾಪನ
- ಅಖಿಲ ಭಾರತ ಸಂಬಾರ ಬೆಳೆಗಳ ಸಮನ್ವಯ ಸಂಶೋಧನಾ ಯೋಜನೆ ಅಡಿಯಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನಗಳ ಮೌಲ್ಯಮಾಪನ.
ಕೇಂದ್ರದ ಚಟುವಟಿಕೆಗಳು:
- ಏಲಕ್ಕಿಯ ಅನುವಂಶಿಕ ಸಂಪನ್ಮೂಲಗಳ ನಿರ್ವಹಣೆ .
- ಐಸಿಎಆರ್–ಐಐಎಸ್ಆರ್ ಪ್ರಾದೇಶಿಕ ಕೇಂದ್ರದ ರಾಷ್ಟ್ರೀಯ ಸಕ್ರಿಯ ಜರ್ಮ್‍ಪ್ಲಾಸಂ ಸೈಟ್ Germplasm collections (ಎನ್‍ಎಜಿಎಸ್) ನಲ್ಲಿ 622 ಏಲಕ್ಕಿ ಜರ್ಮ್‍ಪ್ಲಾಸಂ ಪ್ರಬೇದಗಳನ್ನು ಹೊಂದಿದೆ.
- ಇದರಲ್ಲಿ ಅಪ್ಪಂಗಳದ 423 ಪ್ರಬೇಧಗಳನ್ನು, ಪಂಪಡಂಪಾರದಿಂದ 102 ಪ್ರಬೇದಗಳು, ಮೂಡಿಗೆರೆಯಿಂದ 41 ಮತ್ತು ಸಕಲೇಶಪುರದಿಂದ 56 ಪ್ರಬೇದಗಳು ಒಳಗೊಂಡಿದೆ.
- ಜರ್ಮ್‍ಪ್ಲಾಸಂ ಸಂಗ್ರಹವು ಬಹುತೇಕ ಎಲ್ಲಾ ಗುಣಲಕ್ಷಣಗಳ ರೂಪಾಂತರಗಳನ್ನು ಒಳಗೊಂಡಿದೆ.
ಏಲಕ್ಕಿ ಮತ್ತು ಕರಿಮೆಣಸಿಗೆ ಡಸ್ ಪರೀಕ್ಷ ಕೇಂದ್ರ:
- ಏಲಕ್ಕಿಯ ಡಸ್ ಕೇಂದ್ರವನ್ನು ಅಪ್ಪಂಗಳದಲ್ಲಿ ನಿರ್ವಹಿಸಲಾಗುತ್ತಿದೆ,
- ಇದು 30 ಉದಾಹರಣೆ ಪ್ರಭೇದ/ತಳಿಗಳನ್ನು ಒಳಗೊಂಡಿದೆ.
- ಚೆಟ್ಟಳ್ಳಿಯ ಡಸ್ ಬ್ಲಾಕ್ ನಲ್ಲಿ 35 ಕರಿಮೆಣಸಿನ ತಳಿಗಳನ್ನು ನಿರ್ವಹಿಸಲಾಗುತ್ತಿದೆ.
ಗಿಡಗಳು ಮತ್ತು ಜೈವಿಕ ಪೀಡೆನಾಶಕ ಮಾರಾಟ:
- ಇಲ್ಲಿ ಬಿಡುಗಡೆಯಾದ ಏಲಕ್ಕಿ ಮತ್ತು ಕರಿಮೆನಸಿನ ಸುಧಾರಿತ ತಳಿಗಳನ್ನು ಉತ್ಪಾದಿಸಿ ವಿತರಿಸುವ ಮೂಲಕ ಪ್ರಾದೇಶಿಕ ಕೇಂದ್ರವು ಕೃಷಿ ಸಮುದಾಯದ ಅಗತ್ಯಗಳನ್ನು ಪೂರೈಸುತ್ತದೆ.
- ಜೈವಿಕ ಏಜೆಂಟ್/ಪೀಡೆನಾಶಕಗಳಾದ ಟ್ರೈಕೋಡರ್ಮಾ ಮತ್ತು ಪೊಚೋನಿಯಾವನ್ನು ಕೇಂದ್ರದಿಂದ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ.
ಸಾಂಬಾರ ಬೆಳೆಗಳ ತಂತ್ರಜ್ಞಾನಗಳ ತರಬೇತಿ:
- ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಸಂಬಾರ ಮಂಡಳಿ, ಕಾಫಿ ಮಂಡಳಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ,
- ಕರ್ನಾಟಕ ಸಕಾರ, ಕೃಷಿ ವಿಜ್ಞಾನ ಕೇಂದ್ರಗಳು, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್,
- ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ರಾಷ್ಟ್ರೀಯ ಬ್ಯಾಂಕುಗಳು ಮತ್ತು ಸ್ವಸಹಾಯ ಗುಂಪುಗಳು ಸಹಯೋಗದೊಂದಿಗೆ ಬೆಳೆಗಾರರ ಸಭೆ/ಸೆಮಿನಾರ್/ಕಾರ್ಯಾಗಾರಗಳನ್ನು ಸಂಘಟಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕೇಂದ್ರದ ತಂತ್ರಜ್ಞಾನಗಳು:
- ಪ್ರಾದೇಶಿಕ ಕೇಂದ್ರವು 4 ಏಲಕ್ಕಿ ತಳಿಗಳಾದ ಅಪ್ಪಂಗಲಾ-1, ಐಐಎಸ್ಆರ್– ವಿಜೇತ, ಐಐಎಸ್ಆರ್–ಅವಿನಾಶ್ ಮತ್ತು ಅಪ್ಪಂಗಲಾ-2 ಬಿಡುಗಡೆ ಮಾಡಿದೆ.
- ಕರಿಮೆಣಸು ಮತ್ತು ಏಲಕ್ಕಿಯಲ್ಲಿ ಬರ ನಿರ್ವಹಣೆ ಬಗ್ಗೆ ತಂತ್ರಜ್ಞಾನ ಬಿಡುಗಡೆಮಾಡಿದೆ.
- ಕೊಡಗಿನ ಎತ್ತರದ ಪ್ರದೇಶಗಳಲ್ಲಿ ಕಾಫಿ ಆಧಾರಿತ ಬೆಳೆ ಪದ್ದತಿಯಲ್ಲಿ, ಕರಿಮೆಣಸಿನ ಇಳುವರಿಮ ಹೆಚ್ಚಿಸಲು ನೀರಾವರಿ ಮತ್ತು ನೆರಳು ನಿಯಂತ್ರಣ ತಂತ್ರಜ್ಞಾನವನ್ನು ಬಿಡುಗಡೆಮಾಡಿದೆ.
- ಕರಿಮೆಣಸಿನಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಲು ನೈಸರ್ಗಿಕ ಸಾರಗಳು.
ಕೇಂದ್ರದ ಭವಿಷ್ಯದ ಯೋಜನೆ:
- ಏಲಕ್ಕಿ ಮತ್ತು ಕರಿಮೆಣಸು ಜರ್ಮ್‍ಪ್ಲಾಸಂ ನ ಸಂರಕ್ಷಣೆ ಮತ್ತು ಗುಣಲಕ್ಷಣಗಳನ್ನು ದಾಖಲಿಸುವುದು.
- ಹೆಚ್ಚಿನ ಇಳುವರಿ ನೀಡುವ ಮತ್ತು ಕೀಟ ಮತ್ತು ರೋಗ ನಿರೋಧಕ ಏಲಕ್ಕಿ ಮತ್ತು ಕರಿಮೆಣಸು ತಳಿಗಳನ್ನು ಅಭಿವೃದ್ಧಿಪಡಿಸುವುದು.
- ಸಂಬಾರ ಬೆಳೆಗಳ ಸುಸ್ಥಿರ ಉತ್ಪಾದನೆಗೆ ಉತ್ತಮ ಕೃಷಿ ಪದ್ದತಿಗಳನ್ನು ಅಭಿವೃದ್ದಿಪಡಿಸುವುದು.
- ಸಂಬಾರ ಬೆಳೆಗಳ ಉತ್ಪಾದನಾ ತಂತ್ರಜ್ಞಾನದ ಪ್ರಗತಿಯ ಬಗ್ಗೆ ಬೆಳೆಗಾರರಿಗೆ ತರಬೇತಿ ನೀಡುವುದು.
ಸಾಂಬಾರ ಬೆಳೆಗಳಾದ ಕರಿಮೆಣಸು, ಏಲಕ್ಕಿ, ಅರಶಿನ ಶುಂಠಿ ಬೆಳೆಯುವ ರೈತರು ಈ ಕೇಂದ್ರದ ಸಂಪರ್ಕ ಹೊಂದುವುದರಿಂದ ಸಾಕಷ್ಟು ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ರೈತರ ಸಮಸ್ಯೆಗಳಿಗೆ ಇಲ್ಲಿ ತಜ್ಞರ ಸಲಹೆಗಳು ಮತ್ತು ಗುಣಮಟ್ಟದ ಸಸ್ಯಗಳೂ ಸಹ ಲಭ್ಯವಿರುತ್ತವೆ. ವಿಳಾಸ ಮತ್ತು ದೂರವಾಣಿ: ICAR-IISR Regional Station , Appangala, Heravanad Post, Madikeri-571201, Karnataka -Phone:08272-245514.
ಲೇಖಕರು; ಅಂಕೇಗೌಡ ಎಸ್. ಜೆ., ಹೊನ್ನಪ್ಪ ಆಸಂಗಿ, ಶಿವಕುಮಾರ್ ಎಂ. ಎಸ್, ಅಕ್ಷಿತಾ ಎಚ್. ಜೆ., ಬಾಲಾಜಿ ರಾಜ್‍ಕುಮಾರ್ ಎಂ. ಮತ್ತು ಮೊಹಮ್ಮದ್ ಫೈಸಲ್ ಪಿ. ಐ.ಸಿ.ಎ.ಆರ್.- ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ, ಕೊಡಗು- 571 201
end of the article: —————————————————————-
search words: Spices crops# spice research# pepper # pepper research# Ginger research# Turmeric research # Turmeric # Cardamom research# Cardamom germplasm# pepper germplasm# pepper varieties# IISR regional research station# Appangala# Madikeri#