Headlines

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು.

ಬಹಳ ಜನ ಈ ವರ್ಷ ಅಡಿಕೆಗೆ ಬೆಲೆ ಏರುತ್ತದೆ ಎಂದು ಊಹಿಸಿದ್ದಾರೆ. ಇವರ ಊಹನೆ ಸಲ್ಪ ಮಟ್ಟಿಗೆ ನಿಜವಾಗಲಿದೆ. ಕೆಂಪಡಿಕೆ ಬೆಳೆಗಾರರಂತೂ ಈ ವರ್ಷ ಉತ್ತಮ ದರವನ್ನೇ ಪಡೆಯಲಿದ್ದಾರೆ. ಚಾಲಿಯ ಕಥೆ ಸ್ವಲ್ಪ ಅಸ್ಥಿರವಾಗಿದೆ. ಬೆಳೆಗಾರರಲ್ಲಿ ಗರಿಷ್ಟ ಪ್ರಮಾಣದ ಅಡಿಕೆ ಇದೆ. ಈಗ ಅಡಿಕೆಯನ್ನು ಯಾರೂ ಮಾರಾಟ ಮಾಡಲು ಮುಂದೆ ಬರುತ್ತಲೇ ಇಲ್ಲ. ವ್ಯಾಪಾರಿಗಳಿಗೆ ಅಡಿಕೆ ಸಿಗುತ್ತಿಲ್ಲ. ಮನೆ ಮನೆಗೆ ಬಂದು ಖರೀದಿ ಮಾಡುವ ವ್ಯಾಪಾರಿಗಳು ನಿತ್ಯ ವಿಚಾರಿಸುತ್ತಿದ್ದಾರೆ. ಬೆಳೆಗಾರರು ಸ್ವಲ್ಪ ನೋಡುವ ಮಳೆಗಾಲ ಪ್ರಾರಂಭವಾಗಲಿ ಎಂದು ಮಾರಾಟ ವನ್ನು ಮುಂದೂಡುತ್ತಿದ್ದಾರೆ. ದಕ್ಷಿಣ ಕನ್ನಡ – ಮಲೆನಾಡಿನಲ್ಲಿ ಕೆಲವು ರೈತರು ಅಡಿಕೆ ತೋಟ ಮಾಡುವುದಕ್ಕಾಗಿ ಹೊಲ ಖರೀದಿಗೆ ಮುಂದಾಗಿದ್ದಾರೆ. ಕಳೆದ ವರ್ಷ  ಮತ್ತು ಅದಕ್ಕೂ ಹಿಂದಿನ ವರ್ಷದ ಭರ್ಜರಿ  ಬೆಲೆ ಅಡಿಕೆ ಬೆಳೆಗಾರರಿಗೆ ಹಣದ ಅಡಚಣೆ ಇಲ್ಲದಂತಹ ಪರಿಸ್ಥಿತಿಯನ್ನು  ತಂದಿದೆ. ಹೇಗಾದರೂ ಆಗಲಿ, ನಮ್ಮ ತೋಟದ  ಅಡಿಕೆ ನಿಧಾನವಾಗಿ ಮಾರಾಟ ಮಾಡೋಣ ಎಂದು  ಕಾಯುತ್ತಿದ್ದಾರೆ. ಈ ಸ್ಥಿತಿಯಲ್ಲಿ ಮಾರುಕಟ್ಟೆಯ ಹೆಜ್ಜೆ ಹೇಗಿರುತ್ತದೆ ಎಂಬುದು ಅಡಿಕೆ ವಿಷಯದಲ್ಲಿ ಹೇಳಲಿಕ್ಕೆ ಬರುವುದಿಲ್ಲ. ಉಳಿದ ಕೃಷಿ ಉತ್ಪನ್ನವಾದರೆ ಬೆಲೆ ಏರಿಕೆ ಆಗುತ್ತದೆ. ಇದರಲ್ಲಿ ಎರಡೂ ಸಾಧ್ಯತೆಗಳೂ ಇವೆ.

  • ಕೆಂಪಡಿಕೆ ಮಾರುಕಟ್ಟೆಗಳಾದ ಹೊಸನಗರ, ಚೆನ್ನಗಿರಿ,ಸಾಗರ, ಶಿರಸಿ, ಯಲ್ಲಾಪುರಗಳಲ್ಲಿ ಇಂದು ಗರಿಷ್ಟ ದರ 50,000 ಮೀರಿದೆ.
  • ಉಳಿದೆಡೆ 50,000  ಕ್ಕೆ ಹತ್ತಿರ ಹತ್ತಿರ  ಆಗಿದೆ.
  • ಹೊಸನಗರದಲ್ಲಿ ವಾರದಲ್ಲಿ ಒಂದೇ ದಿನ ವ್ಯಾಪಾರ ಆಗುವ ಕಾರಣವೋ ಏನೋ 1887 ಚೀಲ ರಾಶಿ ಅಡಿಕೆ ಮಾರಾಟಕ್ಕೆ ಬಂದಿದೆ. 
  • ಉಳಿದೆಡೆ ತುಂಬಾ ಕಡಿಮೆ ಬಂದಿದೆ. ಚಾಲಿ ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
  • ಯಲ್ಲಾಪುರ ಶಿರಸಿ, ಸಿದ್ದಾಪುರ, ಸಾಗರಗಳಲ್ಲಿ ಚಾಲಿ ಅಧಿಕ ಪ್ರಮಾಣದಲ್ಲಿ ಮಾರಾಟಕ್ಕೆ ಬರಲಾರಂಭಿಸಿದೆ. 
  • ಕರಾವಳಿಯಲ್ಲಿ ಕುಂದಾಪುರ ಅತ್ಯಂತ ಹೆಚ್ಚು ಅಡಿಕೆ ಉತ್ಪಾದಿಸುವ ತಾಲೂಕು ಆಗಿ ಬೆಳೆಯುತ್ತಿದೆ.
  • ಇಲ್ಲಿಗೆ  ಕರಾವಳಿಯ ಕುಮಟಾ ತನಕದ ಚಾಲಿ ಅಡಿಕೆ ಮಾರಾಟಕ್ಕೆ ಬರುತ್ತದೆ ಎಂಬ ಸುದ್ದಿಗಳಿವೆ.
ಮುಹೂರ್ತಕ್ಕೆ ಕಾಯುತ್ತಿದೆ  ಚಾಲಿ ಅಡಿಕೆ ಸ್ಥಿರ

ಚಾಲಿ ಅಡಿಕೆ ಧಾರಣೆ:

  • ಮಂಗಳೂರು: ಹೊಸತು: 45000, (ಗರಿಷ್ಟ) 42000 ( ಸರಾಸರಿ)
  • ಹಳೆಯದು: 54000, 50000
  • ಬೆಳ್ತಂಗಡಿ: ಹೊಸತು: 45000, 42000
  • ಹಳೆಯದು: 54000, 50000
  • ಕಾರ್ಕಳ: ಹೊಸತು: 45000, 43000
  • ಹಳೆಯದು: 54000, 50000
  • ಕುಂದಾಪುರ: ಹೊಸತು: 44500, 44000
  • ಹಳೆಯದು: 52500, 52000
  • ಸುಳ್ಯ: ಹೊಸತು: 44500, 43000
  • ಹಳೆಯದು: 54000, 50000
  • ಪುತ್ತೂರು: ಹೊಸತು: 44500, 42500
  • ಹಳೆಯದು: 54000, 52000
  • ಪಟೋರಾ:32,000 -42,000
  • ಉಳ್ಳಿಗಡ್ಡೆ:20,000-26,000
  • ಕರಿಗೋಟು:20,000-25,500
  • ಶಿರಸಿ: 40539, 38973 (ಹೊಸತು)
  • ಸಾಗರ: 38899, 37599 (ಹೊಸತು)
  • ಸಿದ್ದಾಪುರ: 39799, 38699 (ಹೊಸತು)
  • ಹಳೆಯದು: 47819, 47489
  • ಯಲ್ಲಾಪುರ: 40401, 39250
  • ಕುಮಟಾ: 38839, 38269
  • ಹಳೆಯದು: 49399-48989

ಚಾಲಿ ಇಳಿಕೆಯಾಗುವ ಸಂಭವ ಕಡಿಮೆ. ಇಳಿಕೆ ಆದರು ತಾತ್ಕಾಲಿಕ. ಇದಕ್ಕೆ ನಿದರ್ಶನ ಹಳೆ ಮತ್ತು ಡಬ್ಬಲ್ ಚೊಲ್ ಅಡಿಕೆಗೆ ಬೇಡಿಕೆ.

ಕೆಂಪಡಿಕೆ ಮಾರುಕಟ್ಟೆ ದರ:

  • ಶಿವಮೊಗ್ಗ:ರಾಶಿ: 49569,(ಗರಿಷ್ಟ) 48858( ಸರಾಸರಿ)
  • ಸರಕು: 79699, 70606
  • ಬೆಟ್ಟೆ: 53400-52610
  • ಹೊನ್ನಾಳಿ: ರಾಶಿ: 49100.-.49100
  • ಚಿತ್ರದುರ್ಗ: ರಾಶಿ. 49269.- 49000
  • ದಾವಣಗೆರೆ: ರಾಶಿ. 49609 -48941
  • ಶಿರಸಿ: ರಾಶಿ. 50709 -47371
  • ಸಾಗರ: ರಾಶಿ. 49399.- 48699
  • ತುಮಕೂರು: ರಾಶಿ. 49050-48100
  • ಯಲ್ಲಾಪುರ: ರಾಶಿ. 54700 – 51513
  • ಸಿದ್ದಾಪುರ:  ರಾಶಿ. 48999 – 48869
  • ಹೊಸನಗರ: ರಾಶಿ. 50099 – 49870
  • ಹೊಳಲ್ಕೆರೆ: ರಾಶಿ. 48700 – 47928
  • ಸಿರಾ: ರಾಶಿ. 48000- 45244
  • ತುಮಕೂರು: ರಾಶಿ. 49050 – 48100

ಈ ತಿಂಗಳ ಕೊನೆಯ ಒಳಗೆ ರಾಶಿಗೆ ಸರಾಸರಿ 50,000 ವೂ ಗರಿಷ್ಟ 52,000 ತನಕವೂ ಏರುವ ಸಾಧ್ಯತೆ ಇದೆ ಎನ್ನುತ್ತಾರೆ ಚಿತ್ರದುರ್ಗದ ವ್ಯಾಪಾರಿಯೊಬ್ಬರು.  ಕಳೆದ ವರ್ಷ ಈ ಸಮಯದಲ್ಲಿ ಮಾರುಕಟ್ಟೆಗೆ  ಬರುತ್ತಿದ್ದ ಅಡಿಕೆಯ ಅರ್ಧ ಪಾಲು ಸಹ ಈ ವರ್ಷ ಬರುತ್ತಿಲ್ಲ. ಆದ ಕಾರಣ ದರ ಇಳಿಕೆ ಆಗುವುದೇ ಇಲ್ಲ. ಏರಿಕೆ ನಿಧಾನವಾಗಿ ಆಗಬಹುದು ಎನ್ನುತ್ತಾರೆ.

ಕರಿಮೆಣಸು ಧಾರಣೆ;

ಉತ್ತಮ ಲೀಟರ್‍ ತೂಕದ ಕರಿಮೆಣಸು

ಕರಿಮೆಣಸಿನ ದರ ಕೆಲವು ಕಡೆಗಳಲ್ಲಿ ಏರಿಕೆಯಾಗುತ್ತಿದೆ. ಚೆನ್ನಗಿರಿಯಲ್ಲಿ ಮೆಣಸಿನ ಬೆಲೆ ಕ್ವಿಂಟಾಲಿಗೆ 53,100 ದಾಟಿದೆ. ಮೊನ್ನೆ ಬುಧವಾರ ಶಿರಸಿಯಲ್ಲಿ ಗರಿಷ್ಟ 55,000 ಕ್ಕೆ ಖರೀದಿಯಾಗಿದೆ. ಇಂದು ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುವ ಉತ್ಪನ್ನದ ಗುಣಮಟ್ಟದ ಮೇಲೆ ದರ. ನಿನ್ನೆ 52330 ಗರಿಷ್ಟ ದರಕ್ಕೆ ಖರೀದಿಯಾಗಿದೆ. ಕರಾವಳಿಯಲ್ಲಿ ಗರಿಷ್ಟ ದರ 51,500 ಕ್ಯಾಂಪ್ಕೋ ಈ ದರಕ್ಕೆ ಖರೀದಿಸಲಿ ಲೀಟರ್ ತೂಕ ಮತ್ತು ತೇವಾಂಶ ಮಾಪಕದ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ. ಖಾಸಗಿಯವರು ಇದನ್ನು ಅಷ್ಟಾಗಿ ಗಮನಿಸುವುದಿಲ್ಲ.

  • ಮೂಡಿಗೆರೆ ಚಿಕ್ಕಮಗಳೂರು, ಸಕಲೇಶಪುರ: 500.00-508.00-510.00-515.00
  • ಕಾರ್ಕಳ ಮಂಗಳೂರು, ಪುತ್ತೂರು ಬೆಳ್ತಂಗಡಿ:495.00-500.00-515.00
  • ಮಡಿಕೇರಿ, ಸಿದ್ದಾಪುರ, ಗೋಣಿಕೊಪ್ಪ: 500.00-510.00
  • ಶಿರಸಿ, ಯಲ್ಲಾಪುರ, ಕುಮಟಾ, ಸಿದ್ದಾಪುರ ಸಾಗರ: 498.00-500.00-510-00-515.00

ಕರಿಮೆಣಸಿಗೆ ಮಳೆಗಾಲದಲ್ಲಿ 550.00  ಆಸು ಪಾಸಿನವರೆಗೆ ದರ ಏರಿಕೆ ಆಗಬಹುದು ಎಂಬ ಸುದ್ದಿ ಇದೆ.  ಜೂನ್ ನಿಂದ ನವೆಂಬರ್  ವರೆಗೆ ದರ ಏರಿಕೆ ಸಾದ್ಯತೆ  ಇದೆ. ಈ ವರ್ಷ  ಮಳೆ ಬೇಗ ಬಂದ ಕಾರಣ ಸ್ವಲ್ಪ ಬೇಗ ಬೆಳೆ ಬರುವ ಸಾಧ್ಯತೆ  ಇದೆ. ಮಳೆ ನಿಂತರೆ ಬೆಳೆ ಕಡಿಮೆಯಾಗಬಹುದು.

ಏಲಕ್ಕಿ ಧಾರಣೆ: ಕಿಲೋ.

  •  ಆಯದೆ ಇದ್ದದ್ದು: 531.00  
  • ಕೂಳೆ,  430-450.00
  •  ನಡುಗೊಲು,  500-550.00
  •  ರಾಶಿ,  600-650.00 
  • ರಾಶಿ ಉತ್ತಮ,  650-700.00 
  •  ಜರಡಿ,  750-800.00  
  • ಹೇರಕ್ಕಿದ್ದು,  1100-1150.00 
  • ಹಸಿರು ಸಾದಾರಣ,  600-700.00  
  • ಹಸಿರು ಉತ್ತಮ,  900-950.00  
  • ಹಸಿರು ಅತೀ ಉತ್ತಮ,  1200-1250.00  

ಕೊಬ್ಬರಿ ದರ:

ಎಣ್ಣೆ ಕೊಬ್ಬರಿ

ಕೊಬ್ಬರಿ ದರ ಸ್ವಲ್ಪಇಳಿಕೆ ಆಗಿದೆ.ಕೊಯಿಲಿನ ಸೀಸನ್ ಆದ ಕಾರಣ ದರ ಸ್ವಲ್ಪ ಇಳಿಕೆ ಆಗಬಹುದು. ತೆಂಗಿನ ಕಾಯಿಯ ಬೆಲೆ ಇಳಿಕೆಯಾಗಿದ್ದು ಕೊಬ್ಬರಿ ದರ ಇಳಿಕೆಗೆ ಒಂದು ಕಾರಣ. .

  • ಅರಸೀಕೆರೆ: 15000-16100 (ಬಾಲ್) ಕ್ವಿಂ.
  • ತಿಪಟೂರು: 15000-16000(ಬಾಲ್)
  • ಚನ್ನರಾಯಪಟ್ನ:6800-8400 (ಎಣ್ಣೆ)
  • ಮಂಗಳೂರು:8000-9500 (ಎಣ್ಣೆ)
  • ಪುತ್ತೂರು:8600-9300 (ಎಣ್ಣೆ)
  • ಹಸಿ ಸಿಪ್ಪೆ ಸುಲಿದ ಕಾಯಿ ಕಿಲೋ: 25-26

ಕಾಫೀ ಧಾರಣೆ: 50 ಕಿಲೊ.

  • ಅರೇಬಿಕಾ ಪಾರ್ಚ್ ಮೆಂಟ್: 15,800-16,100
  • ಆರೇಬಿಕಾ ಚೆರಿ:8000-8600
  • ರೋಬಸ್ಟಾ ಪಾರ್ಚ್ ಮೆಂಟ್: 9600-9750
  • ರೋಬಸ್ಟಾ ಚೆರಿ:4000-4600
ಅರೆಬಿಕಾ ಪಾರ್ಚ್ ಮೆಂಟ್

ರಬ್ಬರ್ ಧಾರಣೆ:

ರಬ್ಬರ್ ದರ  ಮತ್ತೆ ಸ್ವಲ್ಪ ಏರಿಕೆಯಾಗಿದೆ.

  • 1X GRADE -181.00
  • RSS:4:169.00
  • RSS 5:163.00
  • RSS 3:169.50
  • LOT:159.00
  • SCRAP: 108.00-116.00

ಶುಂಠಿ ಧಾರಣೆ:

ಶುಂಠಿ ಬಿತ್ತನೆ ಬಹುತೇಕ ಮುಗಿದಿದೆ. ಬಿತ್ತನೆ ಶುಂಠಿಗೂ ಬೇಡಿಕೆ ಇಲ್ಲ. ಇನ್ನು ತಾಜಾ ಶುಂಠಿಗೆ ಬೇಡಿಕೆ ಉಂಟಾಗಲಿದೆ. ಹಾಗಾಗಿ ಸ್ವಲ್ಪ ದರ ಏರಬಹುದು. ಈ ವರ್ಷ ಶುಂಠಿ ಬೆಳೆಗಾರರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಬಹಳಷ್ಟು ರೈತರಲ್ಲಿ ನೂರಾರು ಚೀಲ ಮಾರಾಟವಾಗದೇ ಉಳಿದಿದೆ.  ಹಸಿ ಶುಂಠಿಗೆ 900-1100 ತನಕ ಬೆಲೆ ಇದೆ. ಉಡುಪಿಯಲ್ಲಿ ಅತ್ಯಧಿಕ  2800-3000 ರೂ ಗಳಿಗೆ ಮಾರಾಟವಾಗಿದೆ.

ಕೊಕ್ಕೋ :

ತೆಂಗು ಅಡಿಕೆ ತೋಟದಲ್ಲಿ ಬೆಳೆಯಬಹುದಾದ ಮಿಶ್ರ ಬೆಳೆ ಕೊಕ್ಕೋ ಗೆ ಬೆಲೆ ಏರಿಕೆಯಾಗಲಿದೆ. ಕೊಕ್ಕೋ ಕೊರತೆ ಇದೆ. ಹಾಗಾಗಿ ಸರಕಾರದ ಇಲಾಖೆಗಳ ಮೂಲಕ ಕೊಕ್ಕೋ ಬೆಳೆ ಪ್ರೋತ್ಸಾಹವೂ ನಡೆಯುತ್ತಿದೆ.

  • ಈ ವರ್ಷ ಕೊಕ್ಕೋ ಬೆಲೆ ಚೆನ್ನಾಗಿದ್ದು, ಹಸಿ ಬೀಜಕ್ಕೆ ಕಿಲೋ 68.00 ರೂ. ತನಕ ಒಣ ಬೀಜಕ್ಕೆ 210 ತನಕ ಬೆಲೆ ಇದೆ.

ಕಾಡುತ್ಪತ್ತಿ (ಸಾಂಬಾರ)

  • ಜಾಯೀ ಕಾಯಿ:190 -200 ಕಿಲೊ
  • ಜಾಯಿ ಪತ್ರೆ: 800-950
  • ದಾಲ್ಛಿನಿ ಮೊಗ್ಗು: 1000-1200
  • ರಾಂಪತ್ರೆ: 500-600
  • ಗೋಟು: 150 -200

ಅಡಿಕೆಯ ಬೆಲೆ ಇನ್ನು ಎರಡು ವರ್ಷದ ತನಕ ಇದೇ ರೀತಿ ಮುಂದುವರಿಯಬಹುದು. ನಂತರ ಬಹಳ ಇಳಿಕೆ ಸಾಧ್ಯತೆಗಳಿವೆ ಎನ್ನುತ್ತಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಎಲ್ಲೆಂದರರಲ್ಲಿ ಅಡಿಕೆ ತೋಟ ಆಗುತ್ತಿದ್ದು, ಸ್ಥಳೀಯವಾಗಿಯೇ ಉತ್ಪಾದನೆ ಹೆಚ್ಚಾಗಲಿದೆ. ಆಗ ದರ ಇಳಿಕೆಯಾಗುವ ಸಾಧ್ಯತೆ ಇದೆ. ದರ ಇಳಿಕೆಯಾದ ತಕ್ಷಣ ತೋಟದ ನಿರ್ವಹಣೆ ಕಷ್ಟಆಗಲಿದೆ. ಬೆಳೆಗಾರರು ತಮ್ಮ ಉತ್ಪಾದನೆಯಲ್ಲಿ ಸ್ವಲ್ಪ  ಉಳಿತಾಯವನ್ನು ಮಾಡಿಕೊಳ್ಳುವುದು ಉತ್ತಮ. ಅನವಶ್ಶಕ ದುಂದುವೆಚ್ಚಗಳನ್ನು ಕಡಿಮೆಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಮಿಶ್ರ ಬೆಳೆಗಳತ್ತ ಗಮನಹರಿಸುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!