ನೀವೂ ಮಾಡಬಹುದು- ಸರಳ ಬಡ್ಡಿಂಗ್.
ನಿಮಗೆ ಬೇರೆಕಡೆ ಉತ್ತಮ ಹಣ್ಣಿನ – ಹೂವಿನ ಸಸಿ ನೋಡಿ, ಅದನ್ನು ನಿಮ್ಮಲ್ಲೂ ಬೆಳೆಸಬೇಕೆಂಬ ಆಸೆ ಉಂಟಾದರೆ, ಒಂದು ಅದೇ ಜಾತಿಯ ಬೇರು ಗಿಡ ಇದ್ದರೆ ಸಾಕು. ಅಲ್ಲಿಂದ ಎಲೆಗಳು ಇರುವ ಒಂದು ಸಣ್ಣ ಕಾಂಡದ ತುಂಡು ತಂದು ಅದರಿಂದ ಸಸಿ ಮಾಡಿಕೊಳ್ಳಬಹುದು. ಇದು ಬಡ್ಡಿಂಗ್ ವಿಧಾನದಲ್ಲಿ. ಪ್ರತೀ ಡೈಕೋಟ್ ( ದ್ವಿದಳ) ಸಸ್ಯದ ಎಲೆಯ ಕಂಕುಳಲ್ಲಿ ಒಂದು ಮೊಳಕೆ ಬರುವ ಜೀವ ಕೋಶ ಇರುತ್ತವೆ. ಇದು ಅನುಕೂಲ ಕೂಡಿ ಬಂದಾಗ ಅಲ್ಲೇ ಮೊಳೆತು ಹೊಸ ಚಿಗುರು…