ಈ ಸೊಪ್ಪು ತರಕಾರಿಗಳಿಗೆ ಭಾರೀ ಬೇಡಿಕೆ.

lettuce

ಕಾಲಸ್ಥಿತಿಗನುಗುಣವಾಗಿ ಮನುಷ್ಯನ ಆಹಾರಾಭ್ಯಾಸಗಳು ಮೇಲ್ದರ್ಜೆಗೇರುತ್ತವೆ. ಈಗ ಅಧಿಕ ಸತ್ವಾಂಶಗಳ ವಿದೇಶೀ ತರಕಾರಿಗಳ ಸರದಿ. ಈ ಸೊಪ್ಪು –ತರಕಾರಿಗಳಲ್ಲಿ ದೇಹ ಪೋಷಕ ಗಳು ಹೇರಳವಾಗಿದ್ದು, ಬೆಳೆಸಿದವರಿಗೆ ಕೈತುಂಬಾ ಸಂಪಾದನೆಯೂ ದೊರೆಯುತ್ತದೆ. ಇದು ನಮ್ಮ ರಾಜ್ಯದ ಎಲ್ಲಾ ಕಡೆ ಬೆಳೆಯುತ್ತದೆ.

  • ನಮ್ಮಲ್ಲಿ ಉತ್ತರ ಕರ್ನಾಟಕದ ಕಡೆ ಉಟದ ಜೊತೆಗೆ ಕೆಲವು ಸೊಪ್ಪು ತರಕಾರಿ- ಈರುಳ್ಳಿ, ಮೂಲಂಗಿ ಕೊಡುವುದು ವಾಡಿಕೆ.  
  • ಅದೇ ರೀತಿಯಲ್ಲಿ ವಿದೇಶಗಳಲ್ಲಿ ಕೆಲವು ಸೊಪ್ಪು ತರಕಾರಿಗಳನ್ನು ಜೊತೆಗೆ ಕೊಡುತ್ತಾರೆ.
  • ಈ ಅಭ್ಯಾಸ ಈಗ ನಮ್ಮ ನಗರಗಳ ಪ್ರತಿಷ್ಟಿತ ಹೋಟೇಲುಗಳಿಗೂ ಪಸರಿಸಿದೆ.
  •  ಹೋಟೇಲುಗಳ ಬೇಡಿಕೆಯನ್ನು ಪೂರೈಸುವಷ್ಟು ನಮ್ಮಲ್ಲಿ ಉತ್ಪಾದೆನೆ ಇಲ್ಲ.
  • ಆದ ಕಾರಣ ಬೆಳೆ ಬೆಳೆಯುವುದಕ್ಕೆ ಅವಕಾಶ ಇದೆ.

ಮೈಸೂರಿನ ಉದ್ಭೂರು ಸಮೀಪದ ಒಬ್ಬ ಕೃಷಿಕ ಲಕ್ಷೀಶ ಈ ಸೊಪ್ಪು ತರಕಾರಿಗಳನ್ನು ಬೆಳೆಸುತ್ತಿದ್ದು, ನಾಟಿ ಮಾಡುವಾಗಲೇ ಇದಕ್ಕೆ ಬೇಡಿಕೆ ಮತ್ತು ಬೆಲೆ  ನಿರ್ಧಾರವಾಗುತ್ತದೆಯಂತೆ. ಅವುಗಳ ಪರಿಚಯ ಇಲ್ಲಿದೆ.

ಬಾಸಿಲ್(Basil):  

basil

  • ಇದನ್ನು ಬಾಸಿಲ್ ಮೂಲಿಕೆ ಎಂದು ಕರೆಯಲಾಗುತ್ತದೆ.
  • ಮಾನವ  ಶರೀರದ ಎಲ್ಲಾ ನಮೂನೆಯ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಒಳಗೊಂಡಿವೆ.
  • ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಕಡಿಮೆ ಕ್ಯಾಲೊರಿಯ ಕೊಲೆಸ್ಟ್ರಾಲ್ ರಹಿತ ಆಹಾರ.
  • ಈ ಸೊಪ್ಪಿನಲ್ಲಿ 23 ಕಿಲೋ ಕ್ಯಾಲೊರಿ ಶಕ್ತಿ ಇದೆ.
  • ಅಷ್ಟೇ ಅಲ್ಲದೆ ಪ್ರೋಟೀನು 3.15 %, ಕಾರ್ಬೋಹೈಡ್ರೇಟ್ 2.6 ರಷ್ಟು,ಕೊಬ್ಬು0.60 ತನಕ, ಜೀರ್ಣಕಾರೀ ನಾರು 1.60 ಯಷ್ಟು , ವಿಟಮಿನ್ ಗಳು, ಬಹುತೇಕ ಎಲ್ಲಾ ಖನಿಜಾಂಶಗಳು  ಈ ಸೊಪ್ಪಿನಲ್ಲಿ ಇದೆ.
  • ಇದನ್ನು ಒಂದು ಪೂರಕ ಆಹಾರ ಅಥವಾ ಅಹಾರದ ಬದಲಿಗೆ ಅದಕ್ಕಿಂತ ಹೆಚ್ಚು ಪೋಷಕಗಳನ್ನು ಕೊಡುವ ವಸ್ತು ಎಂದು ಹೇಳಬಹುದು.

ಇದನ್ನು ನಮ್ಮ ಹೊಲದ ಮಣ್ಣಿನಲ್ಲಿ ಯಾವುದೇ ಕಷ್ಟವಿಲ್ಲದೆ ಬೆಳೆಸಬಹುದಾಗಿದೆ.

ಲೆಟ್ಯೂಸ್ ( Lettuce):

letuse

  • ಹಸಿ ಸೊಪ್ಪಾಗಿ ಬಳಕೆ  ಮಾಡುವ  ಇದು  ಸಮೃದ್ಧ ಪೋಷಕಗಳ ಆಗರ.
  • ಪೋಷ ಇದು ಸಹ ಬಸಿಲ್ ಸೊಪ್ಪಿನಂತೆ ಎಲ್ಲಾ ದೇಹ ಪೋಷಕ ಸತ್ವಗಳನ್ನು ಒಳಗೊಂಡಿದೆ.
  • ಕಡಿಮೆ ಕ್ಯಾಲೊರಿ ಕಾರ್ಬೋಹೈಡ್ರೇಟ್ಸ್, ನಾರು,ವಿಟಮಿನುಗಳು A B 12-6 C D E ಗಳು, ಕ್ಯಾಲ್ಸಿಯಂ ಸೇರಿದಂತೆ ಎಲ್ಲಾ ಖನಿಜಾಂಶಗಳು  ಇವೆ.

ಬಕ್ಚೋಯಿ – ಪಕ್ಛೋಯಿ (Pak choi)( Bak Choi):

chines cabbage

  • ಇದನ್ನು ಸ್ಪಿನಚ್ ಲೀವ್ಸ್ ಅಥವಾ, ಚೈನೀಸ್ ಕ್ಯಾಬೇಜ್    ಎಲೆಗಳು ಎಂದೂ ಕರೆಯುತ್ತಾರೆ.
  • ಚೈನಾ ಮೂಲದ ಈ ಸಸ್ಯ ಅತ್ಯಧಿಕ ಪೋಷಕಗಳನ್ನು ಒಳಗೊಂಡಿದೆ.
  • ಇದರ ಎಲೆಯನ್ನು ಪ್ಲೇಟ್ ತರಹ ಬಳಸಿ ಪ್ಲೇಟ್ ಸಮೇತ ತಿನ್ನಲಾಗುತ್ತದೆ.
  • ಇದನ್ನು ಕೆಲವು ಪದಾರ್ಥ ಮಾಡಲು, ಸೂಪ್ ತಯಾರಿಸಲು ಬಳಸುತ್ತಾರೆ.
  • ಶರೀರದ ಎಲ್ಲಾ  ರೀತಿಯ ಬೆಳವಣಿಗೆಗೆ ಇದು ಪೂರಕ.
  • ಇದನ್ನು ವಂಡರ್ ಪ್ಲಾಂಟ್ ಎಂದು ಕರೆಯುತ್ತಾರೆ.
  • ಸುಮಾರು 5000 ವರ್ಷಗಳಿಂದಲೂ ಇದು ಚೀನಾದ ಜನರ ಆಹಾರವಾಗಿದೆ.
  • ಎಲುಬು ಸಂಬಂಧಿತ ಖಾಯಿಲೆಗಳಿಗೆ ಇದು ರಾಮಬಾಣ ಎನ್ನುತ್ತಾರೆ.
  • ಕಣ್ಣು, ಹೃದಯ , ಹೊಟ್ಟೆ,  ಹೃದಯ, ಚರ್ಮ, ರೋಗ ನಿರೋಧಕ ಶಕ್ತಿ, ಆಂಟಿ ಡಯಾಬೆಟಿಕ್, ಆಂಟಿ ಕ್ಯಾನ್ಸರ್  ಗುಣಗಳು ಇದರಲ್ಲಿ ಇವೆ.

ಪಾರ್ಸ್ಲೆ (Parsley):

Parsley

  •  ಇದು ವಿಟಮಿನ್ ಸ್ಸೊಪ್ಪು ತರಹ ಎಂದೇ ಹೇಳಬಹುದು.
  • A 12% C 16%ಮತ್ತು K  154% ವಿಟಮಿನ್ ಗಳು ಹೇರಳವಾಗಿರುತ್ತದೆ.
  • ಕ್ಯಾಲೊರಿ ಮಾತ್ರ ತುಂಬಾ ಕಡಿಮೆ (2) ಬರೇ ಎರಡು ಚಮಚ ಇದರ ಸೊಪ್ಪನ್ನು ಸೇವಿಸಿದರೆ ನಮ್ಮ ಶರೀರಕ್ಕೆ ಬೇಕಾಗುವ K  ವಿಟಮಿನ್ ಸತ್ವ ಪೂರೈಸುತ್ತದೆ.
  • ವಿಟಮಿಸ್ C ಸತ್ವದ ಪ್ಯಾಕೆಟ್ ಇದ್ದಂತೆ.
  • ಆದ ಕಾರಣ ಇದನ್ನು ಸೇವಿಸಿದರೆ ಹೃದಯ ಸಂಬಂಧಿ ತೊಂದರೆ ದೂರ.
  • ಆರೋಗ್ಯಕರ ರಕ್ತದ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.

ಕಾಲೆ(Kale):

kale

  • ಕ್ಯಾಬೇಜ್ ಕುಟುಂಬದ  ಸಸ್ಯ ಇದು.ಕಾಲೆ ಎಂದರೆ ಕಿಂಗ್ ಎಂದು ಕರೆಯಲಾಗುತ್ತದೆ.
  • ಇದರಲ್ಲಿ ಹಸುರು, ಪಿಂಕ್ ( ಪರ್ಪಲ್) ಮುಂತಾದ ಮೂರು ಬಣ್ಣಗಳಿರುತ್ತದೆ.
  • ಇದು ಸಕ್ಕರೆ ಖಾಯಿಲೆಗೆ ಔಷಧಿ ಎಂದೇ ಹೇಳಲಾಗುತ್ತದೆ.
  • ಜ್ಞಾನ ವೃದ್ದಿಗೆ,  ಇದು ಉತ್ತಮ. ಒಮೆಗಾ 3 ಸತ್ವ  ಉಳ್ಳ ತರಕಾರಿ.
  • ಉತ್ತಮ ಆಂಟಿ ಆಕ್ಸಿಡೆಂಟ್ ಆಗಿರುತ್ತದೆ.

ಸಾಗೆ (Sage):

  • ಇದು ದೊಡ್ಡ ಪತ್ರೆ ಸೊಪ್ಪಿನ ತರಹದ್ದು, ಮಿಂಟ್ ತರಹ.
  • ಆದರೆ ಎಲೆಯ ಮೇಲೆ ಸಣ್ಣ ಕೂದಲುಗಳು ಇರುತ್ತವೆ.ಸ್ವಲ್ಪ ಉದ್ದ .
  • ಇದು ಮೆಡಿಟರೇನಿಯನ್ ಮೂಲದ್ದು.
  • ಬಸಿಲ್ ಕುಟುಂಬ. ಇದಕ್ಕೆ ಸುವಾಸನೆ ಇದೆ.
  • ಇದನ್ನು ಆಂಟೀ ಆಕ್ಸಿಡೆಂಟ್ ಸಸ್ಯ ಎನ್ನಲಾಗುತ್ತದೆ.
  • ಇದರ ಪ್ರಭೇಧದ ಸುಮಾರು 900 ವಿಧಗಳು ಪ್ರಪಂಚದಾದ್ಯಂತ ಇದೆ.
  • ಇದರ ಎಣ್ಣೆ ತೆಗೆಯುತ್ತಾರೆ.

ಸ್ಪಿನಚ್:(Spinach)

Spinach

  • ಇದು ಶಕ್ತಿ ವರ್ಧಕ ಸಸ್ಯ. ಆರೋಗ್ಯವಂತ ಚರ್ಮ, ಉತ್ತಮ ಕೂದಲು, ಸಧೃಢ ಎಲುಬು, ಉತ್ತಮ ಜೀರ್ಣ ಕ್ರಿಯೆ, ಹೃದಯ ಖಾಯಿಲೆ ಪ್ರತಿಬಂಧಕ.
  • ಪೊಟಾಶಿಯಂ , ಮೆಗ್ನೀಶಿಯಂ ಸತ್ವದ ಆಗರ.
  • ಒಂದು ಕಪ್ ಸ್ಪಿನಚ್ ನಲ್ಲಿ  839 ಮಿಲಿ ಗ್ರಾಂ, 100 ಗ್ರಾಂ   ಬಾಳೆ ಹಣ್ಣಿನಲ್ಲಿ 539 ಮಿಲಿ ಗ್ರಾಂ ಪೊಟಾಶಿಯಂ ಇರುತ್ತದೆ.

ಹೇಗೆ ಬೆಳೆಯುವುದು:

  • ಇದನ್ನು ನೆಲದಲ್ಲಿ ಸಾಲು ಮಾಡಿ ಬೆಳೆಸಬಹುದು.
  • ಮಣ್ಣು ರಹಿತ ಮಾಧ್ಯಮಗಳಲ್ಲಿ ಹೈಡ್ರೋಫೋನಿಕ್ಸ್ ತರಹ ಬೆಳೆಸಬಹುದು.
  • ಕುಂಡಗಳಲ್ಲಿ ಬೆಳೆಸಬಹುದು.
  • ಥರ್ಮೋಕೋಲ್ ಚಟ್ಟಿಗಳಲ್ಲಿ ಮನೆ ಸುತ್ತ ಬೆಳೆಸಿ ಉಪಯೋಗಿಸುತ್ತಾರೆ.
  • ಇದು ನಮ್ಮ ರಾಜ್ಯದ ಎಲ್ಲಾ ಕಡೆ  ಬೆಳೆಯಬಹುದಾದ ಉತ್ತಮ ಬೇಡಿಕೆಯ ಅಧಿಕ ಸತ್ವದ ಸೊಪ್ಪು ತರಕಾರಿಗಳು.

ಮನೆಯಲ್ಲಿ ಚಟ್ಟಿಯಲ್ಲಾದರೂ ಈ ಸಸ್ಯಗಳನ್ನು ಬೆಳೆಸಿ ಅದನ್ನು ನಿತ್ಯ ಸೇವಿಸಿ ಆರೋಗ್ಯವಂತರಾಗಿರಿ.

Leave a Reply

Your email address will not be published. Required fields are marked *

error: Content is protected !!