ಕೃಷಿ ಸುಣ್ಣ – ಯಾವುದನ್ನು ಹಾಕಿದರೆ ಹೇಗೆ?

ಬೂದಿ

ಪ್ರಾದೇಶಿಕವಾಗಿ ಕೃಷಿ ಸುಣ್ಣದ ನೈಸರ್ಗಿಕ ಮೂಲಗಳು ಬೇರೆ ಬೇರೆ ಇರುತ್ತವೆ. ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ಕಪ್ಪೆ ಚಿಪ್ಪಿನಲ್ಲಿ ಸುಣ್ಣದ ಅಂಶ ಇದ್ದರೆ, ಅರೆ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಸುಣ್ಣದ ಕಲ್ಲುಗಳು, ಡೊಲೋ ಮೈಟ್  ಖನಿಜಗಳು ನೈಸರ್ಗಿಕ ಸುಣ್ಣದ ಮೂಲಗಳಾಗಿವೆ. ಇದಲ್ಲದೆ ಕೆಲವು ಕಾರ್ಖಾನೆಗಳ ತ್ಯಾಜ್ಯಗಳಲ್ಲೂ ಸುಣ್ಣದ ಅಂಶ ಇರುತ್ತದೆ. ಎಲ್ಲಿ ಯಾವುದು ಅಗ್ಗದಲ್ಲಿ ಲಭ್ಯವೋ ಅದನ್ನು  ಬಳಕೆ ಮಾಡಬೇಕು.

  • ಬರೇ ಸುಣ್ಣದ ಅಂಶ ಮಾತ್ರ ಇರುವ ಮೂಲವಸ್ತುವನ್ನು ಬಳಕೆ ಮಾಡುವ ಬದಲಿಗೆ ಮೆಗ್ನೀಶಿಯಂ ಸಹ ಇರುವ ಮೂಲವಸ್ತುಗಳನ್ನು ಬಳಕೆ ಮಾಡುವುದು ಉತ್ತಮ ಎನ್ನುತ್ತಾರೆ  ಬೇಸಾಯ ಶಾಸ್ತ್ರಜ್ಞರು.
  • ಮಣ್ಣು ಬೇಸಾಯ ಮಾಡುವಾಗ ತನ್ನ ಸ್ಥಿತಿಯಲ್ಲಿ ಮಾರ್ಪಾಡು ಹೊಂಡುತ್ತದೆ.
  • ಹೆಚ್ಚಾಗಿ ಹುಳಿ ಆಗುವುದೇ ಹೆಚ್ಚು. ಹುಳಿ ಆದಾಗ (Acidity) ಮಣ್ಣು ಆನಾರೋಗ್ಯಕ್ಕೆ ತುತ್ತಾಗುತ್ತದೆ.
  • ಇದನ್ನು ಸರಿ ಮಾಡಿದರೆ ಮಣ್ಣಿನ ಆರೋಗ್ಯ ಸುಧಾರಿಸಿ  ಮಣ್ಣಿನ ಮೂಲ ಸಸ್ಯಗಳು ಆಹಾರವನ್ನು ಚೆನ್ನಾಗಿ ಸ್ವೀಕರಿಸುವಂತಾಗುತ್ತದೆ.
  • ಈ ಸುಧಾರಣೆಗೆ ಅತೀ ಅಗ್ಗದ ಸಾಮಾಗ್ರಿ ಎಂದರೆ ಕ್ಯಾಲ್ಸಿಯಂ ಉಳ್ಳ ಖನಿಜ ಅಥವಾ ಸುಣ್ಣ.
  •  ಇದುವೇ ಕೃಷಿ  ಬಳಕೆಯ ಸುಣ್ಣ  ಅಥವಾ Agriculture lime.

ಸುಣ್ಣದ ಕಲ್ಲು:

  • ಇದು ಜಂಬಿಟ್ಟಿಗೆ ಕಲ್ಲಿನ ತರಹ  ಉಂಡೆಯಂತೆ ಇರುತ್ತದೆ.  ನಮ್ಮ ರಾಜ್ಯದಲ್ಲಿ ಹಾವೇರಿ, ರಾಣೆಬೆನ್ನೂರು ಮುಂತಾದ ಕಡೆಗಳಲ್ಲಿ ಕಾಣಬಹುದು.
  • ಇದನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಎನ್ನುತ್ತಾರೆ(Calcium carbonate)
  • ಇದನ್ನು ಸುಟ್ಟಾಗ ಸುಣ್ಣದ ರೂಪ ಪಡೆಯುತ್ತದೆ. ಇದರಲ್ಲಿ ಸುಮಾರು 40% ಕ್ಯಾಲ್ಸಿಯಂ ಇರುತ್ತದೆ.

ಕಪ್ಪೆ ಚಿಪ್ಪು, ಅಥವಾ ಸಾಗರ ಜಲಚರದ ಚಿಪ್ಪುಗಳನ್ನೂ  (Seashell lime)ಕ್ಯಾಲ್ಸಿಯಂ ಕಾರ್ಬೋನೇಟ್ ಎಂದೇ ಕರೆಯಲಾಗುತ್ತದೆ. ಇದರಲ್ಲಿ 90 ರಿಂದ 94%ತನಕ ಕ್ಯಾಲ್ಸಿಯಂ ಅಂಶ ಇರುತ್ತದೆ.

ಸಮುದ್ರದ ಚಿಪ್ಪು ಸುಣ್ಣ
ಸಮುದ್ರದ ಚಿಪ್ಪು ಸುಣ್ಣ

ಸುಟ್ಟ ಸುಣ್ಣ:

  • ಕ್ಯಾಲ್ಸಿಯಂ ಕಾರ್ಬೋನೇಟ್ ಗಳ ಸುಣ್ಣದ ಅಂಶವು  ಲಭ್ಯಸ್ಥಿತಿಗೆ ಬರಲು ಅದನ್ನು ಕುಲುಮೆಯಲ್ಲಿ ಹಾಕಿ ಸುಡಬೇಕಾಗುತ್ತದೆ.
  • ಸುಡದೆ ಇದ್ದಲ್ಲಿ ಅದನ್ನು ನಯವಾದ ಹುಡಿ ಮಾಡಬೇಕಾಗುತ್ತದೆ. ಸುಡದ ಹುಡಿ ಮಾಡಿದ  ಪುಡಿಯು ಸಹ ಆಮ್ಲಿಯತೆ ನಿವಾರಿಸುತ್ತದೆ.
  • ಚಿಪ್ಪು ಸುಣ್ಣವನ್ನು ಯಂತ್ರಕ್ಕೆ ಹಾಕಿ ಹುಡಿ ಮಾಡಿ ಕೊಡುವ ವ್ಯವಸ್ಥೆ ಇದೆ.
  • ಇದೆಲ್ಲಾ ಹೆಚ್ಚಾಗಿ ಕೊಳಿ ಸಾಕಾಣಿಕೆ ಮಾಡುವವರಿಗೆ ಕೊಳಿಗಳಿಗೆ ಆಹಾರದ  ಜೊತೆ ಕ್ಯಾಲ್ಸಿಯಂ ಸೇರಿಸಲು ಬಳಕೆ ಆಗುತ್ತದೆ. 
  • ಕರಾವಳಿಯಲ್ಲಿ ಕೃಷಿ ಸುಣ್ಣ ಎಂದು ಇಲಾಖೆಗಳು ಕೊಡುವುದು ಇದನ್ನು.
  • ಈ ಸುಣ್ಣ ಬೇಯಿಸದೆ ಇದ್ದರೆ ಸುಡುವಿಕೆ ಇರುವುದಿಲ್ಲ.
  • ಸುಣ್ಣವನ್ನು ಸುಟ್ಟಾಗ ಅದರ ಶುದ್ಧತೆ 85-98% ತನಕ ಇರುತ್ತದೆ.
  • ಸುಣ್ಣವನ್ನು ಸುಟ್ಟ ನಂತರ ಅದು ಸುಣ್ಣದ ಆಕ್ಸೆಡ್ ( Calcium oxide)  ಆಗುತ್ತದೆ.
  • ಇದಕ್ಕೆ ನೀರು ಚಿಮುಕಿಸಿದಾಗ  ಅಥವಾ ತೇವಾಂಶ ತಗಲಿದಾಗ ( ಬೇಯಿಸಿದ ಚಿಪ್ಪು ಸುಣ್ಣ ಪ್ಯಾಕೆಟ್ ಸ್ವಲ್ಪ ಒಡೆದರೆ ಕೆಲವೇ ದಿನದಲ್ಲಿ ಹುಡಿ ಆಗುವುದು ತೇವಾಂಶ ಸೇರಿ) ಹುಡಿ (ಕುಮಾಯಿ) ಆಗುತ್ತದೆ.

ಕ್ಯಾಲ್ಸಿಯಂ ಹೈಡ್ರಾಕ್ಸೈಡ್ :

  • ಇದು ಕ್ಯಾಲ್ಸಿಯಂ ಕಾರ್ಬೋನೇಟ್ (  calcium hydroxide)ಅನ್ನು ತೇವಾಂಶದೊಂದಿಗೆ ಸಂಪರ್ಕಿಸಿದಾಗ ಆಗುವ  ಸುಣ್ಣ. ಚಿಪ್ಪು, ಸುಣ್ಣದ ಕಲ್ಲನ್ನು ಬೇಯಿಸಿದ ತರುವಾಯ ಅದನ್ನು ವಾತಾವರಣದಲ್ಲಿ ತೆರೆದಿಟ್ಟಾಗ ಅದು ತೇವಾಂಶದಿಂದ  ಅರಳಿದ ಸುಣ್ಣವಾಗುತ್ತದೆ.
  • ಇದರಲ್ಲಿ ಜಲ ಮಿಶ್ರ ಇರುವ ಕಾರಣ ಇದು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅಗುತ್ತದೆ.
ತೇವಾಂಶ ಸೇರಿ ಹುಡಿ ಆದ ಸಮುದ್ರದ ಚಿಪ್ಪು ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್)
ತೇವಾಂಶ ಸೇರಿ ಹುಡಿ ಆದ ಸಮುದ್ರದ ಚಿಪ್ಪು ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್)

ಮೆಗ್ನೀಶಿಯಂ ಕಾರ್ಬೋನೇಟ್:

  • ಇದು  ಒಂದು ಖನಿಜ. ಇದನ್ನೇ ಡೋಲೋಮೈಟ್ (Dolomite meal or crushed lime stone) ಎನ್ನುತ್ತಾರೆ .ರಾಜ್ಯದ ಬಾಗಲಕೊಟೆ ಸುತ್ತಮುತ್ತ ಇದರ ಖನಿಜ ಇರುತ್ತದೆ.
  • ಇದರಲ್ಲಿ ಸುಣ್ಣದ ಅಂಶ ಕೆಲವು ಸ್ಥರಗಳಲ್ಲಿ ಹೆಚ್ಚು, ಮತ್ತೆ ಕೆಲವು ಸ್ಥರಗಳಲ್ಲಿ ಕಡಿಮೆ ಇರುತ್ತದೆ.
  • ಜೊತೆಗೆ ಒಂದೊಂದು ಪದರ ಮೆಗ್ನೀಶಿಯಂ ಸಹ ಇರುತ್ತದೆ. ಇದನ್ನು ಅಗೆದು ಪುಡಿಮಾಡಿದಾಗ ದೊರೆಯುವಂತದ್ದು, ಮೆಗ್ನೀಶಿಯಂ  ಕಾರ್ಬೋನೇಟ್.
  • ಬಂಡೆಯ ತರಹ ಇರುವ ಕೆಲವು ನಿರ್ದಿಷ್ಟ ಪ್ರದೇಶಗಳ ಶಿಲೆಗಳಲ್ಲಿ ಈ ಅಂಶ ಹೆಚ್ಚು ಮತ್ತು ಕೆಲವು ಕಡೆ ಕಡಿಮೆ  ಇರುತ್ತದೆ.
  • ನಮ್ಮ ಸುತ್ತಮುತ್ತ ಇರುವ  ಬಂಡೆ ಕಲ್ಲು ಪುಡಿಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇರುತ್ತದೆ. 
  • ಇದರಲ್ಲಿ ಸುಮಾರು 30-34% ಸುಣ್ಣ ಹಾಗೂ 21% ದಷ್ಟು ಮೆಗ್ನೀಶಿಯಂ  ಇರುವ ಖನಿಜ ಉತ್ತಮ.
  • ಕ್ಯಾಲ್ಸಿಯಮ್ ಮತ್ತು ಮೆಗ್ನಿಶಿಯಮ್  ಇದೆರಡೂ ನೈಸರ್ಗಿಕ ಮೂಲವಾಗಿರುತ್ತದೆ.
  • ಇದನ್ನು  ಬೇರೆ ಬೇರೆ ಗಾತ್ರದ (micron) ಹುಡಿ ಮಾಡಿ ಕೃಷಿಯಲ್ಲಿ ಸುಣ್ಣದ ಪೂರೈಕೆಗಾಗಿ ಬಳಕೆ ಮಾಡುತ್ತಾರೆ.ಈಗ ಇದನ್ನು ಧೂಳು ಪುಡಿ  ಮಾಡಿ ಕೊಡುವ ವ್ಯವಸ್ಥೆ ಇದೆ. ತುಂಬಾ ಅಗ್ಗ. ಅದರೆ ಸಾಗಾಟ – ತಯಾರಿಗೆ ಸ್ವಲ್ಪ ವೆಚ್ಚದ್ದು.
  • ಇದೇ ಮೂಲ ವಸ್ತುವನ್ನು  ಸಿಮೆಂಟ್ ತಯಾರಿಕೆಗೂ ಬಳಕೆ ಮಾಡುತ್ತಾರೆ.
  • ಇದನ್ನು ಹಾಕುವಾಗ  ಕೈ ಸುಡುವುದಿಲ್ಲ. ಕೈಗೆ ಯಾವ ಗ್ಲೌಸ್ ಹಾಕಬೇಕಾಗಿಲ್ಲ.
ಡೊಲೊಮೈಟ್ ಹುಡಿ ಸುಣ್ಣ
ಡೊಲೊಮೈಟ್ ಹುಡಿ ಸುಣ್ಣ

ಆಮ್ಲೀಯತೆಯ ನಿವಾರಣಾ ಸಾಮರ್ಥ್ಯ:

  • ಕ್ಯಾಲ್ಸಿಯಂ ಕಾರ್ಬೋನೇಟ್ (CaCO3) ನಲ್ಲಿ ಆಮ್ಲ ನಿವಾರಣಾ ಸಾಮರ್ಥ್ಯ 100% ಇರುತ್ತದೆ.
  • ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ( Ca (OH)2 ನಲ್ಲಿ  136 % ದಷ್ಟು ಹುಳಿ ನಿವಾರಣಾ ಶಕ್ತಿ ಇರುತ್ತದೆ.
  • ಕ್ಯಾಲ್ಸಿಯಂ ಮೆಗ್ನೀಶಿಯಂ ಕಾರ್ಬೋನೇಟ್ (CaMg(CO3)2 ನಲ್ಲಿ 109 % ಹುಳಿನಿವಾರಣಾ ಸಾಮರ್ಥ್ಯ ಇರುತ್ತದೆ.
  • ಕ್ಯಾಲ್ಸಿಯಂ ಆಕ್ಸೈಡ್(CaO) ನಲ್ಲಿ 179% ಹುಳಿ ನಿವಾರಣಾ ಶಕ್ತಿ ಇರುತ್ತದೆ.
  • ಶುದ್ಧ ಕ್ಯಾಲ್ಸಿಯಂ ಕಾರ್ಬೋನೇಟ್ (CaCO3) ಯನ್ನು ಅಧಾರವಾಗಿಟ್ಟುಕೊಂಡು ಸುಣ್ಣದ ವಸ್ತುಗಳ ಗುಣವನ್ನು ಕಂಡು ಹಿಡಿಯಲಾಗುತ್ತದೆ.
ಬಯಲು ಸೀಮೆಯಲ್ಲಿ ಸಿಗುವ ಸುಣ್ಣದ ಕಲ್ಲು
ಬಯಲು ಸೀಮೆಯಲ್ಲಿ ಸಿಗುವ ಸುಣ್ಣದ ಕಲ್ಲು

ಕ್ಯಾಲ್ಸಿಯಂ ನೈಟ್ರೇಟ್:

  • ಇದು ರಾಸಾಯನಿಕವಾಗಿ ಸುಣ್ಣದ ಕಲ್ಲನ್ನು  ನೈಟ್ರಿಕ್ ಅಸಿಡ್ ಮೂಲಕ ಉಪಚರಿಸಿ, ಅಮೋನಿಯಾದಲ್ಲಿ ತಟಸ್ಥೀಕರಣ ಮಾಡಲಾದ ಉತ್ಪನ್ನ.CaCO3 + 2 HNO3 → Ca(NO3)2 + CO2 + H2O.
  • ಇದನ್ನು ನೀರಿನ ಜೊತೆ ಮಿಶ್ರ ಮಾಡಿಕೊಡಲಾಗುತ್ತದೆ. ಇದು ಮಣ್ಣಿನ ಸ್ಥಿತಿ ಸರಿಪಡಿಸುವ ಉದ್ದೇಶಕ್ಕಿಂತಲೂ ಸಸ್ಯದ ಕ್ಯಾಲ್ಸಿಯಂ ಆವಶ್ಯಕತೆ  ನೀಗಿಸಲು ಅಲ್ಪಾವಧಿ ಬೆಳೆಗಳಿಗೆ ಬಳಕೆ ಮಾಡಲಾಗುತ್ತದೆ.
  • ಇದರಲ್ಲಿ 18 -26% ತನಕ ಕ್ಯಾಲ್ಸಿಯಂ ಹಾಗೂ 15% ದಷ್ಟು ಸಾರಜನಕ ಇರುತ್ತದೆ.

ಇದಲ್ಲದೆ ಬೇರೆ ಬೇರೆ ಕ್ಯಾಲ್ಸಿಯಂ ಸತ್ವ ಕೊಡುವ ಮೂಲವಸ್ತುಗಳಿವೆ. ಜೇಡಿ ಮಣ್ಣಿನ ಜೊತೆಗೆ ಬೆರೆತಿರುವ ಬಿಳಿಕಲ್ಲಿನಲ್ಲೂ  ಕ್ಯಾಲ್ಸಿಯಂ ಅಂಶ ಇರುತ್ತದೆ.  Marl stone, ಎಲುಬಿನ ಪುಡಿಯಲ್ಲೂ ಇರುತ್ತದೆ. ಮರ ಸುಟ್ಟ ಬೂದಿಯಲ್ಲೂ ಸುಣ್ಣದ ಅಂಶ ಇರುತ್ತದೆ. ಕ್ಯಾಲ್ಸಿಯಂ ಎಂಬುದು ಬೆಳೆಗಳ ಮೂಲಕ ಬೆಳೆಯನ್ನು ಬಳಸುವವರಿಗೂ ತಲುಪುತ್ತದೆ. ಹುಲ್ಲಿಗೆ ಕ್ಯಾಲ್ಸಿಯಂ ಹಾಕಿದಾಗ ಅದು ದನಗಳಿಗೂ ಲಭ್ಯವಾಗುತ್ತದೆ. ಅ ಹಾಲನ್ನು ಕುಡಿದವರಿಗೂ ದೊರೆಯುತ್ತದೆ. ಹಾಗೆಯೇ ಮುಂದುವರಿಯುತ್ತದೆ.
ತಮ್ಮ ಸಂದೇಹ ಮತ್ತು ಸಲಹೆಗಳಿಗೆ ಸ್ವಾಗತ, ಕಮೆಂಟ್ ಬಾಕ್ಸ್ ನಲ್ಲಿ ಇದನ್ನು ತಿಳಿಸಿ.
End of the article:——————————————————————
search words: lime sources #  calcium sources # natural calcium sources # Dolomite lime # calcium carbonate # calcium oxide # burnt lime# calcium hydroxide# Calcium naitrete # crushed limestone # marl  stone#

Leave a Reply

Your email address will not be published. Required fields are marked *

error: Content is protected !!