ಸಾಗುವಾನಿ (ತೇಗ)ಮರದ ಗೆಲ್ಲು ಕಡಿದರೆ ಏನಾಗುತ್ತದೆ?
ಮರಮಟ್ಟುಗಳಲ್ಲಿ ಚಿನ್ನದ ಮರವೆಂದೇ ಖ್ಯಾತವಾದ ಸಾಗುವಾನಿ (ತೇಗ) ಮರವನ್ನು ನೇರವಾಗಿ ಬೆಳೆಯಲಿ ಎಂದೋ, ಇತರ ಉದ್ಡೆಶಗಳಿಗಾಗಿಯೋ ಗೆಲ್ಲು ಸವರುತ್ತೇವೆ. ಗೆಲ್ಲು ಸವರುವುದರಿಂದ ಮರದ ಗುಣಮಟ್ಟ ಏನಾಗುತ್ತದೆ ಎಂಬುದರ ಪೂರ್ಣ ಮಾಹಿತಿ. ಬಹಳ ಜನ ನಮ್ಮ ಹಲಸಿನ ಮರ ಸಾಗುವಾನಿ ಮರ ಹೆಬ್ಬಲಸಿನ ಮರದಲ್ಲಿ ಒಡಕು( ಬಿರುಕು) ಬಂದು ಯಾವುದಕ್ಕೂ ಆಗದಂತಾಯಿತು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ನಾವೇ ಹೊರತು ಮರ ಅಲ್ಲ. ಸಾಗುವಾನಿ ಇರಲಿ, ಇನ್ಯಾವುದೇ ನಾಟಾ ಉದ್ದೇಶದ ಮರಮಟ್ಟುಗಳು ಇರಲಿ ನಾವು ತಿಳಿದೋ ತಿಳಿಯದೆಯೋ ಗೆಲ್ಲುಗಳನ್ನು…