ನಾಟಿ ಹತ್ತಿಯನ್ನು ಕೊಳ್ಳುವವರೇ ಇಲ್ಲ. ಬಿಟಿ ಗೇ ಬೇಡಿಕೆ
ಹತ್ತಿ ಬೆಳೆಯುವ ರೈತರು ಯಾರ ಮಾತನ್ನೂ ನಂಬಲಿಲ್ಲ. ನಾಟಿ ಹತ್ತಿಗೆ ವಿದಾಯ ಹೇಳಿಯೇ ಬಿಟ್ಟರು. ನಮಗೆ ಹುಳ ಬಾರದ ಹತ್ತಿ ತಳಿ ಬೇಕು ಎಂದು ಬೋಲ್ ಗಾರ್ಡ್ (ಬಿಟಿ) ಹತ್ತಿ ಬೀಜವನ್ನು ಕದ್ದು ಮುಚ್ಚಿಯಾದರೂ ಬೆಳೆಸಿದರು. ಈಗ ದೇಶದಲ್ಲಿ ಬೆಳೆಸಲ್ಪಡುವ 99 % ಹತ್ತಿ ಬಿಟಿಯೇ. ಇದರ ಬೀಜ ಮಾತ್ರ ಸಿಗದಿದ್ದರೆ ರೈತರು ಏನು ಮಾಡಲಿಕ್ಕೂ ಹಿಂಜರಿಯಲಿಕ್ಕಿಲ್ಲ. ಅಷ್ಟೂ ಜನ ಬಿಟಿ ಹತ್ತಿಯನ್ನು ಹಚ್ಚಿಕೊಂಡಿದ್ದಾರೆ. ಮಾರುಕಟ್ಟೆಯೂ ಸಹ ಬಿಟಿ ಪರವಾಗಿದ್ದು, ಅದಕ್ಕೆ ಬೇಡಿಕೆ- ಬೆಲೆ. ನಮ್ಮ ರಾಜ್ಯದಲ್ಲಿ…