ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ

ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ.

ಹಾಲೀ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ 50% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ಮುಂದುವರಿಯುವ ಸಾಧ್ಯತೆ ಇದೆ.ಈಗಾಗಲೇ ಅಡಿಕೆ ತೋಟಗಳು ನೀರಿಲ್ಲದೆ, ನೀರು ಇದ್ದೂ ಹಾಳಾಗಿದೆ. ಅಡಿಕೆ ಮರಗಳಲ್ಲಿ ಗರಿಗಳು ಒಣಗಿವೆ. ಹೂಗೊಂಚಲು ಕರಟಿ ಹೋಗಿವೆ, ಬೆಳೆಗಾರರು ಮರ ಉಳಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷದ ಹವಾಮಾನ ವೈಪರೀತ್ಯ ಅತೀ ದೊಡ್ಡ ನಷ್ಟವನ್ನು ಉಂಟುಮಾಡಿದೆ. ದಕ್ಷಿಣ ಕನ್ನಡ, ನೆರೆಯ ಕಾಸರಗೋಡು, ಉಡುಪಿ,…

Read more
ಹಣ್ಣು - ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ಕೀಟ.

ಹಣ್ಣು – ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ನೊಣ.

ಹಣ್ಣು  ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ  ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು , ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ. ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋ 100 ಇರಬಹುದು. ಆದರೆ ರೈತನಿಗೆ…

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
cashew

ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.  ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
ಮಾವಿನ ಮರ ಕಾಂಡ ಕೊರಕಕ್ಕೆ ಬಲಿ

ಮರಮಟ್ಟುಗಳ ಕೊಲೆಗಾರ ಕೀಟ. ಇದು ನಿಮ್ಮಲ್ಲೂ ಇದೆ.

ನಾವೆಲ್ಲಾ ಮಾವು, ಹಲಸು, ರಾಂಬುಟಾನ್, ಬಟರ್ ಫ್ರೂಟ್, ಲವಂಗ, ಜಾಯಿ ಕಾಯಿ ಹೀಗೆಲ್ಲಾ ಹಣ್ಣಿನ, ಮತ್ತು ಸಾಂಬಾರ ಮರಗಳನ್ನು ಬೆಳೆಸುತ್ತೇವೆ. ಕೆಲವೊಮ್ಮೆ ಈ ಸಸಿಗಳ/ ಮರಗಳ ಗೆಲ್ಲುಗಳು ಅಥವಾ ಮರವೇ  ಕಾಣು ಕಾಣುತ್ತಿದ್ದಂತೆ ಒಣಗಿ ಸಾಯುತ್ತವೆ. ಇದನ್ನು ಕೆಲವರು ಯಾವುದೋ ರೋಗ ಎಂದು ಭಾವಿಸುತ್ತಾರೆ. ಇದು ರೋಗ ಅಲ್ಲ. ಇದೊಂದು ಕೀಟ. ಈ ಕೀಟಕ್ಕೆ ಮರಮಟ್ಟುಗಳ ಕೊಲೆಗಾರ ಕೀಟ ಎಂದು ಕರೆಯುತ್ತಾರೆ. ಒಮ್ಮೆ ನಿಮ್ಮ   ಹೊಲಕ್ಕೆ ಪ್ರವೇಶವಾದರೆ ಅದಕ್ಕೆ ಸೂಕ್ತ ನಿರ್ವಹಣೆ ಅಥವಾ ಅದರ ಪರಭಕ್ಷಕಗಳು…

Read more
ಸಿಂಗಾರ ತಿನ್ನುವ ಹುಳ ಮುಟ್ಟಿದ ಹೂ ಗೊಂಚಲು

ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

ಶುಷ್ಕ ವಾತಾವರಣದ ವ್ಯತ್ಯಾಸವೋ ಏನೋ , ಈಗೀಗ ಅಡಿಕೆ -ಹೂ ಗೊಂಚಲು ಬಹಳ ಪ್ರಮಾಣದಲ್ಲಿ  ಒಣಗಿ ಹಾಳಾಗುತ್ತಿದೆ. ಒಂದು ಕಾಲದಲ್ಲಿ  ಮೈನರ್ ಪೆಸ್ಟ್ ಆಗಿದ್ದ ಈ ಕೀಟ, (ಹುಳ) ಈಗ ಮೇಜರ್ ಪೆಸ್ಟ್ ಆಗುತ್ತಿದೆ. ಇತ್ತೀಚೆಗೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ. ಮಳೆಗಾಲ ಕಳೆದ ತಕ್ಷಣ ಅಡಿಕೆ ಮರದಲ್ಲಿ ಗೊಂಚಲು ಬಿಡಲು ಪ್ರಾರಂಭವಾಗುತ್ತದೆ. ಹೊಸತಾಗಿ ಬರುವ ಬಹುತೇಕ ಹೂ ಗೊಂಚಲುಗಳಲ್ಲಿ ಈ ಹುಳದ  ಬಾಧೆ ಇದೆ. ಮಳೆಗಾಲದಲ್ಲಿ ಸಂಖ್ಯಾಭಿವೃದ್ದಿಯಾದ ಕೀಟ ಅಡಿಕೆಯಲ್ಲಿ…

Read more
ತರಹೇವಾರು ಸೌಂದರ್ಯದಕೀಟಗಳು

ಕೀಟಗಳ ಹಾವಳಿ ಹೆಚ್ಚುತ್ತಿರುವುದಕ್ಕೆ ಕಾರಣ ಏನು ಗೊತ್ತೇ?

ಪ್ರತೀಯೊಬ್ಬ ಕೃಷಿಕನೂ ತಪ್ಪದೇ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರ ಇದು. ರೈತರು ಕೀಟಗಳ ವಿರುದ್ಧ ಹೋರಾಡಲು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಕೀಟನಾಶಕ ತಯಾರಕರು ರೈತರ ನೆರವಿಗೆ ಇದ್ದಾರೆ. ಕೀಟಗಳು ಪ್ರಾಭಲ್ಯ ಸಾಧಿಸುತ್ತಿವೆ.  ಇದಕ್ಕೆಲ್ಲಾ ಕಾರಣ ಎನು ಎಂಬುದು ಇಲ್ಲಿ ಹೇಳಲಿಚ್ಚಿಸುವ  ಮಹತ್ವದ ವಿಚಾರ. ಕೀಟಗಳ ಸಂತತಿ ಹೆಚ್ಚುತ್ತಾ ಇದೆ. ಕೀಟನಾಶಕಗಳಿಗೆ ಅವು ನಿರೋಧಕ ಶಕ್ತಿ ಪಡೆಯುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳೇ ಇಲ್ಲದಿದ್ದಾಗ ಈ ಕೀಟಗಳು ಎಲ್ಲಿದ್ದವು. ಇವು ಹೊಸತಾಗಿ ಸೃಷ್ಟಿಯಾದವುಗಳೇ ಎಂಬೆಲ್ಲಾ ಸಂದೇಹಗಳು ಬರಬಹುದು. ಕೀಟಗಳು ನಾವು ಬೆಳೆ…

Read more
ಆಫ್ರಿಕನ್ ದೈತ್ಯ ಬಸವನ ಹುಳ

ಆಫ್ರಿಕನ್ ಬಸವನ ಹುಳುವಿನ ಅಪಾಯ-ನಿಯಂತ್ರಣ.

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಆಫ್ರಿಕನ್ ಬಸವನ ಹುಳ Giant African Snail (Lissachatina fulica) ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರ ಹೊಲದಲ್ಲಿ, ಮನೆ, ಶೆಡ್ ಎಲ್ಲೆಂದರಲ್ಲಿ ಈ ಹುಳ ಹರಿದಾಡುವ ಸ್ಥಿತಿ ಉಂಟಾಗಿದೆ. ಹಿಡುದು ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತಲೇ ಇದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗದೆ ಕಂಗಾಲಾಗಿದ್ದಾರೆ ರೈತರು ಮತ್ತು ಇತರ ಜನ ಸಮುದಾಯ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತುಕೊಳ್ಳುತ್ತದೆ.ಹಗಲು ನಾಲ್ಕು- ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ,…

Read more
error: Content is protected !!