Headlines
ದಾಳಿಂಭೆ ಪ್ಯಾಕಿಂಗ್

ಹಣ್ಣು ಹಂಪಲುಗಳನ್ನು ಹೀಗೆ ಪ್ಯಾಕಿಂಗ್ ಮಾಡಿ – ಹಾಳಾಗದು.

ಪಪ್ಪಾಯಿಯ ಬಲಿತ ಕಾಯಿಯನ್ನು ಕೊಯ್ದು ಕಾಗದ ಸುತ್ತಿ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಮಾವನ್ನು  ಭತ್ತದ ಹುಲ್ಲಿನಲ್ಲಿ ಪ್ಯಾಕಿಂಗ್ ಮಾಡುತ್ತಾರೆ. ಕಾರಣ ಹಣ್ಣು ಹಂಪಲುಗಳು ಹಣ್ಣಾಗುವ ಸಮಯದಲ್ಲಿ ಏಕ ರೀತಿಯ ತಾಪಮಾನ ಇರಬೇಕು. ಅದು ತಂಪೂ ಆಗಬಾರದು. ಬಿಸಿಯೂ ಆಗಬಾರದು. ಹಣ್ಣು ಆಗುವ ತನಕ ಇದನ್ನು ಕಾಯ್ದುಕೊಂಡರೆ  ಹಾಳಾಗದೇ ಹಣ್ಣಾಗುತ್ತದೆ. ಹಣ್ಣು ಹಂಪಲುಗಳಿಗೆ ಒಂದು  ಸಣ್ಣ ನೊಣ ( ಕಣ್ಣಿನ ಸುತ್ತ ಹಾರುವಂತದ್ದು) ಕುಳಿತರೆ ಸಾಕು ಅದು ಬೇಗ ಹಾಳಾಗುತ್ತದೆ. ಅದನ್ನು ತಡೆಯಲು ಈ ರಕ್ಸಣೆ ಅಗತ್ಯ. …

Read more

ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ. ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ…

Read more
error: Content is protected !!