180 ಕ್ಕೂ ಹೆಚ್ಚು ಹಲಸು ತಳಿಗಳ ಖಜಾನೆ
ರಾಜ್ಯ ಹೊರ ರಾಜ್ಯಗಳ ವಿಶಿಷ್ಟ ಗುಣದ ಸುಮಾರು 180 ಕ್ಕೂ ಹೆಚ್ಚು ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿ, ಸಂರಕ್ಷಿಸಿದ ಬೆಂಗಳೂರು, ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ IIHR ಸಾಧನೆ ಪ್ರಶಂಸಾರ್ಹ. ಇಲ್ಲಿ ತಳಿಗಳ ಸಂಗ್ರಹ ಇದ್ದರೆ ಸೇಫ್. ಹಲಸಿನ ಹಣ್ಣಿಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಹಲಸು ತಿನ್ನುವರು, ಬೆಳೆಸುವವರು ಹೆಚ್ಚಾಗಿದ್ದಾರೆ. ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚಿವೆ. ಹಲಸು ನಮ್ಮಲ್ಲಿ ಅನಾದಿ ಕಾಲದಿಂದಲೂ ಇದ್ದ ಹಣ್ಣು. ಅದರ ಮರಮಟ್ಟಿನ…