waiting for food

ಮಂಗಗಳ ಕಾಟಕ್ಕೆ ಮುಕ್ತಿ ಬೇಕೇ? ಮಳೆಗಾಲದಲ್ಲಿ ಇದನ್ನು ಮಾಡಿ.

ಮಂಗಗಳ ಕಾಟ , ಅಳಿಲು, ನವಿಲು, ಹಂದಿ, ಆನೆ, ಕಾಡು ಕೋಣಗಳ ಹಾವಳಿಯಲ್ಲಿ ಕೃಷಿ ಹಾಳಾಗುತ್ತಿದೆಯೇ? ಹಾಗಿದ್ದರೆ ಈ ಮಳೆಗಾಲದಲ್ಲಿ ಒಂದು ದಿನ ಪ್ರತೀಯೊಬ್ಬರೂ ಇದನ್ನು ಮಾಡಿ. ಕೆಲವು ಸಮಯದಲ್ಲಿ ಅವು ನಿಮ್ಮ ತಂಟೆಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಉಳಿಯಬೇಕಾದರೆ ಇದನ್ನು ನಾವೇ ಮಾಡಬೇಕು. ಮೊನ್ನೆ ಕೊರೋನಾ ಲಾಕ್ ಡೌನ್ ಇದ್ದರೂ ಸಹ ಜೂನ್ 5 ರಂದು ಪೇಟೆ ಪಟ್ಟಣಗಳಲ್ಲಿ  ಕೆಲವು ಸಂಘಟನೆಗಳು ಕಸ ಹೆಕ್ಕಿದರು, ಕೆಲವರು ರಸ್ತೆ ಬದಿಗಳಲ್ಲಿ ಸಸಿ ನೆಟ್ಟರು.ಯಾರೋ ಉಡುಗೊರೆಯಾಗಿ ಕೊಟ್ಟ…

Read more
ಕಾಡು ಹಣ್ಣು ತಿನ್ನುತ್ತಿರುವ ಗುಬ್ಬಿ

ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.

ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ. ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ  ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು.  ಅದು…

Read more

ಪರಿಸರದೊಂದಿಗೆ ಬದುಕಿದರೆ ಮಾತ್ರ ನಮಗೆ ಉಳಿಗಾಲ

ಪರಿಸರ ಎಂಬುದು ಮನುಷ್ಯನಿಗಿಂತ ಮುಂಚೆಯೇ ಸೃಷ್ಟಿಯಾಗಿದೆ. ಇದನ್ನು ಹಾಳು ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಒಂದು ವೇಳೆ ಏನಾದರೂ ಕೆಣಕಲು ಹೋದರೆ ಅದು ತಿರುಗಿ ಬೀಳುತ್ತದೆ. ಪ್ರಕೃತಿ  ತನ್ನದೇ ಆದ ವ್ಯವಸ್ಥೆಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಅದರೊಂದಿಗೆ ಬದುಕಿದರೆ ಮಾತ್ರ ನಮಗೆ ಉಳಿಗಾಲ. ಇಂದು ಆಗುತ್ತಿರುವ ಕೆಲವು ಅನಾಹುತಗಳು, ಮನುಕುಲಕ್ಕೆ ಎದುರಾಗಿರುವ ಕೆಲವು ಸಂಧಿಗ್ಧ ಪರಿಸ್ಥಿತಿಗಳು ಇವೆಲ್ಲಾ ಪ್ರಕೃತಿಯ ಮುನಿಸೇ ಹೊರತು ಬೇರೇನೂ ಅಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಸಾಂಕ್ರಾಮಿಕ ರೋಗ ಇರಲಿ, ಬರ ಇರಲಿ…

Read more
Caster plant in fence

ಮನುಕುಲವನ್ನು ಕಾಪಾಡುವ ವಾತಾವರಣ ಮಹತ್ವ ಅರಿಯೋಣ.

ಪ್ರತೀ ವರ್ಷ ಮಾರ್ಚ್ 23 ರಂದು ಜಾಗತಿಕ ಹವಾಮಾನ ಸಂಸ್ಥೆಯು ವಾತಾವರಣ ವಿಜ್ಞಾನ ದಿವಸವನ್ನು World Meteorological Day ಆಚರಿಸುತ್ತದೆ. 1961 ರಿಂದಲೂ ಇದು ಆಚರಿಸಲ್ಪಡುತ್ತಿದೆ. ಕಳೆದ ವರ್ಷ ಹವಾಮಾನ ಮತ್ತು ನೀರು ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವರ್ಷ ಭೂ ವ್ಯವಸ್ಥೆಯೊಳಗೆ ಸಾಗರ ಮತ್ತು ಹವಾಮಾನ ಎಂಬ ಧ್ಯೇಯದಲ್ಲಿ ಈ ದಿನವನ್ನು ಅಚರಿಸಲಾಗುತ್ತಿದೆ.   ಹವಾಮಾನದ ಸುಸ್ಥಿತಿ ಎಂಬುದು ಸುಖೀ ಸಂಸಾರದ ತರಹ. ಅದು ಇದ್ದರೆ ಮಾತ್ರ ಬದುಕು, ಇಲ್ಲವಾದರೆ ಅದು ನರಕ. ನಮಗೆ ನಮ್ಮ…

Read more

ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.

ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಾರ್ಚ್ 21 ನೇ ದಿನಾಂಕವನ್ನು ವಿಶ್ವ…

Read more
error: Content is protected !!