
ಮಂಗಗಳ ಕಾಟಕ್ಕೆ ಮುಕ್ತಿ ಬೇಕೇ? ಮಳೆಗಾಲದಲ್ಲಿ ಇದನ್ನು ಮಾಡಿ.
ಮಂಗಗಳ ಕಾಟ , ಅಳಿಲು, ನವಿಲು, ಹಂದಿ, ಆನೆ, ಕಾಡು ಕೋಣಗಳ ಹಾವಳಿಯಲ್ಲಿ ಕೃಷಿ ಹಾಳಾಗುತ್ತಿದೆಯೇ? ಹಾಗಿದ್ದರೆ ಈ ಮಳೆಗಾಲದಲ್ಲಿ ಒಂದು ದಿನ ಪ್ರತೀಯೊಬ್ಬರೂ ಇದನ್ನು ಮಾಡಿ. ಕೆಲವು ಸಮಯದಲ್ಲಿ ಅವು ನಿಮ್ಮ ತಂಟೆಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಉಳಿಯಬೇಕಾದರೆ ಇದನ್ನು ನಾವೇ ಮಾಡಬೇಕು. ಮೊನ್ನೆ ಕೊರೋನಾ ಲಾಕ್ ಡೌನ್ ಇದ್ದರೂ ಸಹ ಜೂನ್ 5 ರಂದು ಪೇಟೆ ಪಟ್ಟಣಗಳಲ್ಲಿ ಕೆಲವು ಸಂಘಟನೆಗಳು ಕಸ ಹೆಕ್ಕಿದರು, ಕೆಲವರು ರಸ್ತೆ ಬದಿಗಳಲ್ಲಿ ಸಸಿ ನೆಟ್ಟರು.ಯಾರೋ ಉಡುಗೊರೆಯಾಗಿ ಕೊಟ್ಟ…