ಮರೆಯಾಗುತ್ತಿದೆ ಕೃಷಿ ಕ್ಷೇತ್ರದ ‘ಪೂರ್ವ ಶಿಷ್ಟ ಪದ್ದತಿ’ಗಳು.
ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು…