ನವಿಲುಗಳು ಹೆಚ್ಚುತ್ತಿರಲು – ಕಾರಣ ಇದು.
ಮಂಗ, ಹಂದಿ ಕಾಡು ಕೋಣ ಇವೆಲ್ಲದರ ಜೊತೆಗೆ ಈಗ ನವಿಲುಗಳೂ ರೈತರ ಹೊಲದಲ್ಲಿ ಠಿಕಾಣಿ ಹೂಡಿವೆ ಯಾಕೆ ಗೊತ್ತೇ? ಅಲ್ಲಿ ಅವುಗಳಿಗೆ ಜೀವ ಭಯ ಉಂಟಾಗಿದೆ !! ಇದು ಯಾವ ಪರಿಸರವಾದಿಗಳೂ ಸುದ್ದಿ ಗದ್ದಲ ಎಬ್ಬಿಸದೇ ಇದ್ದ ಸಂಗತಿ. ಕಾಡು ನಾಶವಾಗಿದೆ ಎಂದು ಅದಕ್ಕೆ ಬೊಬ್ಬೆ ಹಾಕುತ್ತಾರೆ. ಕಾಡಿನ ಪ್ರಾಣಿಗಳಿಗೆ ಹಿಂಸೆಯಾದರೆ ಪ್ರಾಣಿ ದಯಾ ಹೋರಾಟಗಾರರು ಪ್ರವೇಶ ಮಾಡುತ್ತಾರೆ. ಅರಣ್ಯ ಪ್ರಾಣಿಗಳಾದ ಮಂಗ , ಕಾಡು ಹಂದಿ, ಕೋಣಗಳಿಂದ ಬೆಳೆ ಉಳಿಸಿಕೊಳ್ಳುವರೇ ರೈತರು ಭಾರೀ ಪ್ರಯಾಸ ಪಡುತ್ತಿದ್ದಾರೆ….