ಕೃತ್ರಿಮ ವಿಧಾನ- ಜೈಲು ಶಿಕ್ಷೆ.

ನಮ್ಮ ದೇಶದಲ್ಲಿ ಹಣ್ಣು ಹಂಪಲುಗಳನ್ನು ಬೇಗ ಹಣ್ಣು ಮಾಡಲು ಕೆಲವು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಬಹಿರಂಗ ವಿಚಾರ. ಇನ್ನು ಮುಂದೆ ಈ ರೀತಿ ಮಾಡಿದರೆ  ಮಾಡಿದವನಿಗೆ ಜೈಲು ಶಿಕ್ಷೆ ಆಗುತ್ತದೆ. ಇದು ದೆಹಲಿ ಹೈಕೋರ್ಟು ನೀಡಿದ ತೀರ್ಪು.   ಹಿನ್ನೆಲೆ: ಹಣ್ಣುಹಂಪಲುಗಳನ್ನು ಗಿರಾಕಿಗಳು ಕೊಳ್ಳುವುದು ಅದರ  ಆಕರ್ಷಕ ಮೈ ಬಣ್ಣ ಮತ್ತು ಗಾತ್ರವನ್ನು ನೋಡಿ.   ಹಣ್ಣು ಹಂಪಲುಗಳಿಗೆ ಅತೀ ದೊಡ್ಡ ಸಮಸ್ಯೆ ಎಂದರೆ ಹಣ್ಣಿನ ಒಳಗೆ  ಹುಳ ಆಗುವುದು ಮತ್ತು ಸಿಪ್ಪೆ ಕೊಳೆಯುವುದು. ಇದರಿಂದ…

Read more
ಉತ್ತಮ ಇಳುವರಿಯ ತೆಂಗಿನ ಮರ

ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ. ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!. ಪ್ರತೀ ವರ್ಷವೂ ಫಸಲಿಗೆ…

Read more

ಒಂದು ತೆಂಗಿನ ಕಾಯಿಗೆ ರೂ.60 ಪಡೆಯಬಹುದು.

ತೆಂಗಿನ ಮರ ಒಂದು ಕಲ್ಪ ವೃಕ್ಷ. ಇದರ ಸರ್ವಾಂಗವೂ ಉಪಯುಕ್ತ. ಇದನ್ನು ನಾವು ಬಳಸಿಕೊಳ್ಳುವುದರಿಂದ ಗರಿಷ್ಟ  ಲಾಭವನ್ನು  ಪಡೆಯಬಹುದು.  ಇದು ಹೇಗೆ  ಎಂದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿಕೊಟ್ಟ ತೆಂಗಿನ ಪ್ಲಾಂಟೇಷನ್  ಗೋವಾದ ಮರ್ಗಾವ್ ನಲ್ಲಿ ಇದೆ. ಇಲ್ಲಿ ಬರೇ  ತೆಂಗು ಬೆಳೆಯನ್ನು ಆಧರಿಸಿ ಬೇರೆ ಬೇರೆ ಮೌಲ್ಯ ವರ್ಧಿತ ಉತ್ಪನ್ನವನ್ನು  ತಯಾರಿಸಿ  ಆ ಬೆಳೆಯಿಂದ  ಗರಿಷ್ಟ ಲಾಭವನ್ನು ಪಡೆಯಲಾಗುತ್ತಿದೆ.  ಒಂದು ತೆಂಗಿನ ಕಾಯಿಯ ಮೌಲ್ಯವನ್ನು ಇವರು ಲೆಕ್ಕ ಹಾಕಿ ರೂ. 6೦ ರೂ  ಆ ಗಳಿಗೂ  ಹೆಚ್ಚು ಪಡೆಯುತ್ತಾರೆ….

Read more
ಜೀವಾಮೃತ ಮಿಶ್ರಣ

ಜೀವಾಮೃತಕ್ಕೆ ಜೀವ ಕೊಡುವ ವಿಧಾನ.

ಜೀವಾಮೃತ, ಅಮೃತ ಪಾನಿ, ಅಲ್ಲದೆ ಯಾವುದೇ ಸೂಕ್ಷ್ಮಾಣು ಜೀವಿ ಮಿಶ್ರಣಗಳನ್ನು  ತಯಾರಿಸುವ ಸಮಯದಲ್ಲಿ ಬ್ಯಾರಲ್ ಗೆ ಹಾಕಿ ಕಲಕಬೇಕು ಎನ್ನುತ್ತಾರೆ. ಕಲಕುವುದರಿಂದ ಅದರಲ್ಲಿ ಜೀವಾಣುಗಳು ಹೆಚ್ಚಾಗುತ್ತದೆ. ಅವುಗಳಿಗೆ ಜೀವ ಬರುತ್ತದೆ.  ಸೂಕ್ಷ್ಮಾಣು ಜೀವಿಗಳು ಈ ಕ್ರಿಯೆಯಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಸಂಖ್ಯಾಭಿವೃದ್ದಿಯಾಗುತ್ತವೆ. ಇದು ಮತ್ತೆ ಯಾಕೂ ಆಲ್ಲ. ನಾವು ಬಳಕೆ ಮಾಡುವ ಕಚ್ಚಾ ವಸ್ತುಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಈ ಸೂಕ್ಷ್ಮಾಣು ಜೀವಿಗಳು  ಕನಿಷ್ಟ ಪ್ರಮಾಣದಲ್ಲಿದ್ದರೆ ಅದಕ್ಕೆ ಆಹಾರ ಕೊಟ್ಟು ಅದನ್ನು ಕೆವು ದಿನಗಳ ತನಕ  ಪೋಷಣೆ ಮಾಡಿ…

Read more
ತೆಂಗಿನ ಗರಿಯ ಕೀಟ

ತೆಂಗಿನ ಗರಿಗಳ ಜೀವ ಹಿಂಡುತ್ತಿದೆ ಬಿಳಿ ನೊಣ.

ಕರ್ನಾಟಕ-  ಕೇರಳದ ಕರಾವಳಿಯುದ್ದಕ್ಕೂ ತೆಂಗಿನ ಗರಿಗಳಿಗೆ ಬಿಳಿ ನೊಣ ತೊಂದರೆ ಮಾಡಿ, ಈಗ ಇದು ತೆಂಗು ಬೆಳೆಯಲಾಗುವ  ಎಲ್ಲಾ ಕಡೆಗೂ ವ್ಯಾಪಿಸಿದೆ. ತೆಂಗಿನ ಗರಿಯ ಅಡಿ  ಭಾಗದಲ್ಲಿ ಬಿಳಿ ಬಿಳಿಯಾಗಿ ಕಾಣುವ ಈ ಕೀಟ, ದೊಡ್ದ ಹಾನಿ ಮಾಡುವುದಿಲ್ಲ ಎನ್ನುತ್ತಾರೆಯಾದರೂ, ನಿಯಂತ್ರಣ ಕೈಗೊಳ್ಳದಿದ್ದರೆ ಬೇರೆ ಬೆಳೆಗೆ  ಹಾನಿ ಮಾಡುವ ಸಂಭವ ಇದೆ. ಅದನ್ನು  ನಿಯಂತ್ರಿಸಲು  ಪ್ರಕೃತಿಯಲ್ಲಿ  ಬೇರೆ ಜೀವಿಗಳಿವೆ. ರೈತರು ಯಾವುದೇ ಕಾರಣಕ್ಕೆ ಪ್ರಭಲ ಕೀಟ ನಾಶಕದ ಬಳಕೆ  ಮಾಡದೆ ಸುರಕ್ಷಿತ ಕ್ರಮ ಅನುಸರಿಸಿರಿ ಇದನ್ನು ನಿಯಂತ್ರಣಕ್ಕೆ…

Read more
ಸತ್ತ ತೆಂಗಿನ ಮರಕ್ಕೆ ಬಕೆಟ್ ಮುಚ್ಚಿದ್ದು

ಸಣ್ಣ ಯೋಚನೆ- ದೊಡ್ದ ಫಲಿತಾಂಶ.

ನಾವು ಎಲೆಲ್ಲೋ ಪ್ರಯಾಣ ಮಾಡಬೇಕಾದರೆ ಹಲವಾರು ತೀರಾ ಸರಳವಾದ  ವಿಚಾರಗಳನ್ನು ಗಮನಿಸುತ್ತೇವೆ.  ಸರಳ ವಿಷಯಗಳಾದರೂ ನಮಗೆ ಅದು ಹೊಳೆದಿರುವುದಿಲ್ಲ. ಸಣ್ಣ ಯೋಚನೆಯಲ್ಲೇ  ದೊಡ್ಡ ಉಪಕಾರ ಇರುತ್ತದೆ. ಅದಕ್ಕೇ ಹೇಳುವುದು ಊರು ಸುತ್ತುವುದರಿಂದ ಜ್ಞಾನರ್ಜನೆ ಆಗುತ್ತದೆ.. ನಮ್ಮಲ್ಲಿ ಅಡಿಕೆ ಮರಗಳು ಸಾಯುತ್ತವೆ. ತೆಂಗಿನ ಮರಗಳು ಸಾಯುತ್ತವೆ. ಸತ್ತ ಮರದಲ್ಲಿ ಕರಿಮೆಣಸು, ವೀಳ್ಯದೆಲೆ ಮುಂತಾದ ಬೆಳೆ  ಇರುತ್ತದೆ. ಆಧಾರ ಮರ ಸತ್ತ ತರುವಾಯ ಅದು ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚು ಫಸಲನ್ನೂ  ಕೊಡುತ್ತಿರುತ್ತದೆ.  ನಂತರ ಅದಕ್ಕೆ ರೋಗ ಸಹ ಬರುವುದು ನಿಧಾನ. …

Read more
ಮುತ್ತಿನ ಸರ

ಕೃಷಿಕರು ಮುತ್ತು ಉತ್ಪಾದಿಸಿ ಆದಾಯಗಳಿಸಬಹುದು.

ನಿಮ್ಮ ಕೃಷಿ ಹೊಲದಲ್ಲಿ  ನೀರಾವರಿಯ ಬಾವಿ ಇದೆಯೇ,  ಅಥವಾ ನಿಮ್ಮ ಸುಪರ್ದಿಯಲ್ಲಿ  ದೊಡ್ದ  ಕೆರೆ ಇದೆಯೇ ಹಾಗಿದ್ದರೆ, ಅಲ್ಲಿ  ಕೃಷಿಗೆ ಪೂರಕವಾಗಿ ಅತ್ಯಂತ ಲಾಭದಾಯಕವಾದ ವೃತ್ತಿ “ಮುತ್ತಿನ ಉತ್ಪಾದನೆ” ಮಾಡಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನದಲ್ಲಿ  ಮಾತ್ರ  ರಾಶಿ ರಾಶಿ ಮುತ್ತುಗಳಿತ್ತು. ಆಗ ಬೇರೆಯವರಿಗೆ ಅದನ್ನು ಹೊಂದುವ ಸಾಮರ್ಥ್ಯವೂ ಇರಲಿಲ್ಲ. ರಾಜಾಧಿಪಥ್ಯ ಕೊನೆಗೊಂಡ  ನಂತರ, ಎಲ್ಲರೂ ಮುತ್ತು ಹೊಂದುವ ಸ್ಥಿತಿಗೆ ಬಂದರು. ಆಗ ಅದರ ಬೇಡಿಕೆ ಹೆಚ್ಚಾಯಿತು. ಬೆಲೆಯೂ ಹೆಚ್ಚಾಯಿತು. ಮುತ್ತು ಸಾಮಾನ್ಯ ಬೆಲೆಯ…

Read more
ಬಸವನ ಹುಳ

ಬಸವನ ಹುಳು ನಿಯಂತ್ರಣ

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಈ ಬಸವನ ಹುಳ ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರು ಇದರಿಂದ ಬೇಸತ್ತಿದ್ದಾರೆ. ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗುವುದಿಲ್ಲ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತಿವೆ. ಹಗಲು ನಾಲ್ಕು– ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ  ಏರಿ ಬಿಡುತ್ತವೆ. ಇವು ದೊಡ್ಡ ಗಾತ್ರದ  ಬಸವನ ಹುಳುಗಳು. ಇವು ಅಡಿಕೆ ಮರದ ಎಳೆ ಎಲೆಗಳನ್ನು ಮತ್ತು ಪಕ್ಕದಲ್ಲಿರುವ  ಇತರ ಗಿಡಗಳ ಎಳೆ ಎಲೆಗಳನ್ನು ತಿನ್ನುತ್ತವೆ. …

Read more
pruned plant and yield

ಸೀಬೆ ಬೆಳೆಯಲ್ಲಿ ಅಧಿಕ ಇಳುವರಿಗೆ ಪ್ರೂನಿಂಗ್ ಮಾಡಿ.

ಹಣ್ಣಿನ ಸಸ್ಯಗಳಿಗೆ  ಟೊಂಗೆ ಪ್ರೂನಿಂಗ್  ಮಾಡುವುದರಿಂದ ಇಳುವರಿ ಹೆಚ್ಚಳವಾಗುತ್ತದೆ. ದ್ರಾಕ್ಷಿ , ದಾಳಿಂಬೆ, ಅಂಜೂರ ಮುಂತಾದ ಬೆಳೆಗಳನ್ನು ಬೆಳೆಸುವ ರೈತರು ಇದನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಈಗ ಮಾವು, ಗೇರು, ಸೀತಾಫಲ, ಸೀಬೆ ಮುಂತಾದ ಬೆಳೆಗಳನ್ನು ಬೆಳೆಸುವವರೂ ಪ್ರೂನಿಂಗ್ ಮಾಡಿ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾಕೆ ಸೀಬೆಗೆ ಪ್ರೂನಿಂಗ್: ಫಲ ಬಿಡುವ ಹಣ್ಣು ಹಂಪಲಿನ ಸಸ್ಯಗಳನ್ನು  ಅದರಷ್ಟಕ್ಕೇ  ಬೆಳೆಯಲು ಬಿಟ್ಟರೆ ಅದರಲ್ಲಿ ಸಸ್ಯ ಬೆಳವಣಿಗೆಯೇ ಹೆಚ್ಚಳವಾಗುತ್ತದೆ. ಸಸ್ಯ ಬೆಳವಣಿಗೆಯನ್ನು ಟೊಂಗೆ ಸವರುವ ಮೂಲಕ ನಿಯಂತ್ರಿಸಿದಾಗ ಸಸ್ಯ ಬೆಳವಣಿಗೆಗೆ ಒಮ್ಮೆ…

Read more
ಅಡಿಕೆ ಎಲೆ ಅಡಿಯಲ್ಲಿ ಬಿಳಿ ನೊಣ

ಅಡಿಕೆಗೂ ಬಂತು ಬಿಳಿ ನೊಣ

ಒಮ್ಮೆ ನಿಮ್ಮ ಅಡಿಕೆ ಮರದ ಗರಿಯ ಅಡಿ ಭಾಗವನ್ನು  ಪರಾಂಬರಿಸಿ ನೋಡಿ. ಅಲ್ಲಲ್ಲಿ ಬಿಳಿ ಬಿಳಿ ಕಾಣಿಸುತ್ತದೆಯಲ್ಲವೇ? ಒಂದು ವೇಳೆ ಹಗಲು ಕಾಣದಿದ್ದರೆ ರಾತ್ರೆ ಟಾರ್ಚ್ ಲೈಟ್  ಬಿಟ್ಟು ನೋಡಿ. ಖಂಡಿತವಾಗಿಯೂ ಕಾಣಿಸುತ್ತದೆ. ಇದು  ಬೊರ್ಡೋ ಹೊಡೆದು ಆದರ ಅವಶೇಷ ಎಂದು ತಿಳಿಯದಿರಿ. ಆ ಕೆಳಭಾಗದ ಗರಿಗಳು  ಆಗಲೇ  ಉದುರಿ ಹೋಗಿವೆ. ಇದು  ಬಿಳಿ ನೊಣ ಎಂಬ ರಸ ಹೀರುವ ಕೀಟ, ಅಡಿಕೆಯ ಕೆಳ ಭಾಗದ ಗರಿಯಲ್ಲಿ ವಾಸ್ತವ್ಯ ಮಾಡಿರುವುದು. ಇದು ಇತ್ತೀಚಿನೆ ಬೆಳವಣಿಗೆ. ಬಹುಷಃ ಯಾರೂ…

Read more
error: Content is protected !!