ತೆಂಗಿನ ಗರಿಗಳ ಜೀವ ಹಿಂಡುತ್ತಿದೆ ಬಿಳಿ ನೊಣ.

by | Jan 27, 2020 | Krushi Abhivruddi | 0 comments

ಕರ್ನಾಟಕ-  ಕೇರಳದ ಕರಾವಳಿಯುದ್ದಕ್ಕೂ ತೆಂಗಿನ ಗರಿಗಳಿಗೆ ಬಿಳಿ ನೊಣ ತೊಂದರೆ ಮಾಡಿ, ಈಗ ಇದು ತೆಂಗು ಬೆಳೆಯಲಾಗುವ  ಎಲ್ಲಾ ಕಡೆಗೂ ವ್ಯಾಪಿಸಿದೆ. ತೆಂಗಿನ ಗರಿಯ ಅಡಿ  ಭಾಗದಲ್ಲಿ ಬಿಳಿ ಬಿಳಿಯಾಗಿ ಕಾಣುವ ಈ ಕೀಟ, ದೊಡ್ದ ಹಾನಿ ಮಾಡುವುದಿಲ್ಲ ಎನ್ನುತ್ತಾರೆಯಾದರೂ, ನಿಯಂತ್ರಣ ಕೈಗೊಳ್ಳದಿದ್ದರೆ ಬೇರೆ ಬೆಳೆಗೆ  ಹಾನಿ ಮಾಡುವ ಸಂಭವ ಇದೆ. ಅದನ್ನು  ನಿಯಂತ್ರಿಸಲು  ಪ್ರಕೃತಿಯಲ್ಲಿ  ಬೇರೆ ಜೀವಿಗಳಿವೆ. ರೈತರು ಯಾವುದೇ ಕಾರಣಕ್ಕೆ ಪ್ರಭಲ ಕೀಟ ನಾಶಕದ ಬಳಕೆ  ಮಾಡದೆ ಸುರಕ್ಷಿತ ಕ್ರಮ ಅನುಸರಿಸಿರಿ ಇದನ್ನು ನಿಯಂತ್ರಣಕ್ಕೆ ತರಬೇಕಿದೆ.

ಏನು ಈ ಕೀಟ:

 • ಇದನ್ನು ರುಗೋಸ್ ಸ್ಪೈರಲಿಂಗ್ ವೈಟ್ ಪ್ಲೈ ಎಂದು ಕರೆಯುತ್ತಾರೆ. (Ruguse spiraling Whitefly RSW)  Aleurodicus rugioperculatus martin
 • ಇದರ ಮೂಲ ಹೆಸರು Gumbolimbo spiraling whitefly. ಇದರ ಜೀವಿಸುವ ಲಕ್ಷಣಕ್ಕನುಗುಣವಾಗಿ  ಈ ಮೇಲಿನ ಹೆಸರನ್ನು ಕೊಡಲಾಗಿದೆ.

ಬಿಳಿ ನೊಣ

 • ಎಲೆಯ ಅಡಿಯಲ್ಲಿ ಸುರಕ್ಷಿತ ಜಾಗದಲ್ಲಿ ಜೇಡರ ಬಲೆಯಂತೆ  ಸುತ್ತು ಸುತ್ತಾಗಿ ಬಿಳಿ ಬಣ್ಣದ ಮೇಣ ಸ್ರವಿಸಿ ತನ್ನ ಜೀವನವನ್ನು ಪೂರೈಸುತ್ತದೆ.
 • ಮೊದಲು ತಮಿಳುನಾಡಿನಲ್ಲಿ ಪ್ರಾರಂಭವಾಯಿತು. ನಂತರ ಕೇರಳ, ಈಗ ಕರ್ನಾಟಕ ರಾಜ್ಯಗಳ ತನಕ ಪ್ರಸಾರವಾಗಿದೆ.
 • ಮರಗಳಲ್ಲಿ ಹಗಲು ಹೊತ್ತು ಸೂಕ್ಷ್ಮವಾಗಿ ಗಮನಿಸಿದರೆ  ಕಾಣಿಸುತ್ತದೆ. ರಾತ್ರೆ  ಟಾರ್ಚ್ ಲೈಟ್ ಹಾಕಿದಾಗ ಎಲೆ ಅಡಿಯಲ್ಲಿ ಬಿಳಿ ಬಿಳಿ ಲೇಪಿಸಿದಂತೆ ಕಾಣಿಸುತ್ತದೆ.
ಎಲೆಯ ಅಡಿಯಲ್ಲಿ ಬಿಳಿ ನೊಣಗಳ ಹಿಂಡು

ಎಲೆಯ ಅಡಿಯಲ್ಲಿ ಬಿಳಿ ನೊಣಗಳ ಹಿಂಡು

 • ಇದು ಮೇಲು ನೋಟಕ್ಕೆ ಕಾಣುವಾಗ ಕೀಟದಂತೆ  ಕಾಣಿಸುವುದಿಲ್ಲ. ಬೋರ್ಡೋ ದ್ರಾವಣ ಸಿಂಪಡಿಸಿದ ತರಹ ಕಾಣಿಸುತ್ತದೆ. ಬೆಲೆಯ ಒಳಗೆ ಸಣ್ಣ ಸಣ್ಣ ಬಿಳಿ ರೆಕ್ಕೆ ಉಳ್ಳ ಹಾತೆಗಳಿರುತ್ತವೆ. 
 • ಕೈಗೆಟಕುವ ಗಿಡದ ಎಲೆಯನ್ನು ಅಲುಗಾಡಿಸಿದಾಗ ನೊಣಗಳು ಹಾರುವುದನ್ನು  ಗಮನಿಸಬಹುದು. ಇದು ಎಲೆಯ ಹರಿತ್ತನು ತಿನ್ನುತ್ತದೆ.
 • ತನ್ನ ಶರೀರದ ಅಂಟು ಪದಾರ್ಥವನ್ನು ಸ್ರವಿಸುತ್ತದೆ. ಇದನ್ನು ಹನಿಡ್ಯೂ ಎನ್ನುತ್ತಾರೆ. ಈ ಅಂಟು ಪದಾರ್ಥದಲ್ಲಿ ಒಂದು ರೀತಿಯ ಶಿಲೀಂದ್ರ ಬೆಳೆಯುತ್ತದೆ. ಅದು ಬಿದ್ದಲ್ಲಿ ಕಪ್ಪಿ ಕಪ್ಪಾಗುತ್ತದೆ.
ಇವುಗಳು ಈ ರೀತಿ ಚಕ್ರದಂತೆ ವಾಸಿಸುತ್ತವೆ

ಇವುಗಳು ಈ ರೀತಿ ಚಕ್ರದಂತೆ ವಾಸಿಸುತ್ತವೆ

 • ಕೆಳಭಾಗದ ಎಲೆಗಳಲ್ಲಿ ಮೊದಲು ನಂತರ ಮೇಲಿನ ಎಲೆಗಳಿಗೆ ಹೋಗುತ್ತದೆ.
 • ತೀವ್ರವಾಗಿದ್ದರೆ  ಎಲೆಯ ಹಸುರು ಹರಿತ್ತು ಹೋಗಿ ಕಡ್ಡಿ ಮಾತ್ರ ಉಳಿಯುತ್ತದೆ.
 • ನಮ್ಮದೇಶದಲ್ಲಿ ಈ ತರಹ ಹಾನಿ ಆದದ್ದು ಕಡಿಮೆ. ಪ್ಲೋರಿಡಾದಲ್ಲಿ ಈ ಕೀಟ ಎಲ್ಲಾ ನಮೂನೆಯ ಬೆಳೆಗಳಿಗೂ ವ್ಯಾಪಿಸಿ ತುಂಬಾ ಹಾನಿಯಾದ ವರದಿ ಇದೆ.

ಇಳುವರಿಯ ಮೇಲೆ ಪರಿಣಾಮ:

ಈ ಕೀಟದಿಂದ ತೆಂಗಿನ ಮರದ ಇಳುವರಿಯ ಮೇಲೆ ಅಂತಹ ದೊಡ್ದ ತೊಂದರೆ ಇಲ್ಲ. ಎಲೆಗಳ ಹರಿತ್ತು ಕಡಿಮೆಯಾಗುವ ಕಾರಣ ಬೆಳೆವಣಿಗೆಯ ಮೇಲೆ ಸ್ವಲ್ಪ ತೊಂದರೆ ಉಂಟಾಗಿ, ಇಳುವರಿ ಅಲ್ಪ ಸ್ವಲ್ಪ ಕಡಿಮೆಯಾಗಬಹುದು.

CPCRI ಕಾಸರಗೋಡು ಇಲ್ಲಿನ ತೋಟದಲ್ಲಿ ಗಮನಿಸಿದಂತೆ ಸ್ಥಳೀಯ ವೆಸ್ಟ್ ಕೋಸ್ಟ್ ಟಾಲ್ ತಳಿಗೆ ಇದರಿಂದ ಹಾನಿಯಾದುವುದು ಸ್ವಲ್ಪ ಕಡಿಮೆ. ಆದರೆ COD, MYD, ಹೈಬ್ರೀಡ್ ತಳಿಗಳಿಗೆ ಅತೀ ಹೆಚ್ಚು ಹಾನಿ ಉಂಟಾಗಿದೆ. ಅದೇ ರೀತಿಯಲ್ಲಿ ಇನ್ನೊಂದು ಶಿಲೀಂದ್ರ ಬಾಧೆ ತೆಂಗು ಅಡಿಕೆಗೆ ಭಾರೀ ತೊಂದರೆ ಮಾಡಲಾರಂಭಿಸಿದೆ. ಅದೂ ಸಹ ಸ್ಥಳೀಯ ತಳಿಗಳಿಗೆ ಸ್ವಲ್ಪ ಕಡಿಮೆ. ಆದ ಕಾರಣ ರೈತರು ಸಾಧ್ಯವಾದಷ್ಟು ಸ್ಥಳೀಯ ತಳಿಗಳಿಗೆ ಒತ್ತು ಕೊಡುವುದು ಉತ್ತಮ.

ಅಸಂಖ್ಯಾತ ನೊಣಗಳು ಇರುತ್ತವೆ

ಅಸಂಖ್ಯಾತ ನೊಣಗಳು ಇರುತ್ತವೆ

ನಿಯಂತ್ರಣ ಹೇಗೆ:

 • ಯಾವುದೇ ದ್ರವವಸ್ತುವನ್ನು ಅದು ವಸಿಸುವ ಜಾಗಕ್ಕೆ ಸಿಂಪಡಿಸಿದಾಗ ಅದು ತೊಳೆಯಲ್ಪಡುತ್ತದೆ.
 • ಇದರ ನಿಯಂತ್ರಣಕ್ಕೆ ಯಾವುದೇ ಕೀಟನಾಶಕ ಬಳಕೆ ಮಾಡುವುದು ಸೂಕ್ತವಲ್ಲ. 
 • ಇದನ್ನು ತಿನ್ನುವ ಪರಭಕ್ಷಕಗಳು ಪ್ರಕೃತಿಯಲ್ಲಿ ಇವೆ. ಅವುಗಳ ಮೂಲಕವೇ ಇದು ನಾಶವಾಗುತ್ತದೆ.
ಪೇರಳೆ ,ಬಾಳೆ ಎಲೆಯಲ್ಲಿ ಮೊದಲು ಪ್ರಾರಂಭವಾಗುತ್ತದೆ

ಪೇರಳೆ ,ಬಾಳೆ ಎಲೆಯಲ್ಲಿ ಮೊದಲು ಪ್ರಾರಂಭವಾಗುತ್ತದೆ

 • ಪ್ರಯೋಗಾಲಯದಲ್ಲಿ ಈ ಪರಭಕ್ಷಕ ಕೀಟಗಳ ಅಭಿವೃದ್ದಿ ಮಾಡುವ ಪ್ರಯತ್ನವೂ ಸಾಗಿದೆ.
 • ಕೆಲವು ಜಾತಿಯ ಇರುವೆಗಳು ಇದನ್ನು ಹುಡುಕಿ ತಿನ್ನುತ್ತವೆ. ಇವು ಸಣ್ಣ ಮರಗಳಲ್ಲಿ ಬಿಳಿ ನೊಣ ಇದ್ದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅದು ಕಡಿಮೆಯಾದಾಗ ಇಲ್ಲದಾಗುತ್ತದೆ. (ಶುಂಠಿ ಇರುವೆ, ಇದನ್ನು ಹಿಚುಕಿದಾಗ ಶುಂಠಿಯ ವಾಸನೆ  ಬರುತ್ತದೆ).
ಬಿಳಿ ನೊಣದ ಬಾಧೆಯಿಂದ ಕಳೆಗುಂದಿದ ತೋಟ

ಬಿಳಿ ನೊಣದ ಬಾಧೆಯಿಂದ ಕಳೆಗುಂದಿದ ತೋಟ

 • ಇದರ ಹತೋಟಿಗೆ  ಎನ್ಕಾರ್ಸಿಯಾ ಗೌಡೆಲೋಪಿಯಾ Encarsia sp ಎಂಬ ಪರಭಕ್ಷಕ ಕೀಟ  ಇದ್ದು, ಇದರ  ಸಂಖ್ಯೆ  ಕಡಿಮೆಯಾದ ಕಾರಣ  ಬಿಳಿ ನೊಣ ಹೆಚ್ಚಿನ ಪ್ರಮಾಣದಲ್ಲಿ ಸಂಖ್ಯಾಭಿವೃದ್ದಿಯಾಗಿದೆ.
 • . ಬೇರೆ ದೇಶಗಳಲ್ಲಿ ಕೆಲವು ಪರಭಕ್ಷಕಗಳನ್ನು ಗುರುತಿಸಲಾಗಿದೆ.
 • ರೈತರು ಈ ತೊಂದರೆ ಇದ್ದಲ್ಲಿ ವಿಷ ರಾಸಾಯನಿಕ ಬಳಕೆ  ಮಾಡಿದರೆ  ಪರಭಕ್ಷಕಗಳು ನಾಶವಾಗುವ ಭೀತಿ ಇದೆ.
 • ಈಗ ಕೀಟ ಹೆಚ್ಚಾಗಲು ವಾತಾವರಣದ ಏರು ಪೇರು ಮತ್ತು ಪರಭಕ್ಷಗಳ ಅವನತಿಯೂ ಒಂದು ಕಾರಣವಾಗಿದೆ.
 • ಮರದ ಎಲೆಯ ಕೆಳ ಬಾಗಕ್ಕೆ ಸ್ಟಾರ್ಚ್ ಸೇರಿಸಿದ ನೀರನ್ನು ಸಿಂಪರಣೆ  ಮಾಡಿದರೆ   ಹತೋಟಿ ಆಗುತ್ತದೆ  ಎನ್ನುತ್ತಾರೆ.

ಜೈವಿಕ ನಿಯಂತ್ರಣ:

ಈ ಹುಳ ಅದನ್ನು ಭಕ್ಷಿಸುತ್ತದೆ

ಈ ಹುಳ ಅದನ್ನು ಭಕ್ಷಿಸುತ್ತದೆ.

ಈ ಇರುವೆಗಳೂ ಇದನ್ನು ತಿನ್ನುತ್ತವೆ

 • ರಾಸಾಯನಿಕ ಬಳಕೆ ಮಾಡುವ ಬದಲಿಗೆ ಜೈವಿಕವಾಗಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಉತ್ತಮ. ಇದರಿಂದ ಯಾವುದೇ ಹಾನಿ ಇರುವುದಿಲ್ಲ.
 • ಜೈವಿಕ ಕೀಟ ನಿಯಂತ್ರಕಗಳಾದ  ಬೆವೇರಿಯಾ ಬಾಸಿಯಾನ Beauveria bassiana ಎಂಬುದು ಬಿಳಿ ನೊಣಗಳ  ನಿಯಂತ್ರಣದಲ್ಲಿ  ಉತ್ತಮವಾಗಿ ಕೆಲಸ ಮಾಡುತ್ತದೆ. 
 • ಇದನ್ನು ತೆಂಗಿನ ಮರದ ಎಲೆಗಳಿಗೆ ಸಿಂಪರಣೆ ಮಾಡಬಹುದು. ಇಲ್ಲವೇ ಬುಡ ಭಾಗಕ್ಕೆ  ಹಾಕಿ ನಿಯಂತ್ರಣ ಮಾಡಬಹುದು.
 • ತೀರಾ ವಿಪರೀತ ಹಾನಿ ಇದ್ದಲ್ಲಿ 1 ಲೀ. ನೀರಿಗೆ 3 ಗ್ರಾಂ ನಂತೆ ವೆಟ್ಟೆಬಲ್ ಸಲ್ಫರ್ ( ನೀರಿನಲ್ಲಿ ಕರಗುವ ಗಾಂಧಕ)  ಎಲೆ ಅಡಿಗೆ ಬೀಳುವಂತೆ ಸಿಂಪಡಿಸಿರಿ.
 • ಈ ಬಿಳಿ ನೊಣ ನಮ್ಮ ಕರ್ನಾಟಕ- ಕೇರಳಗಳ ತೆಂಗಿನ ತೋಟಗಳಿಗೆ ಲಗ್ಗೆ ಇಟ್ಟು ಸುಮಾರು 6-7 ವರ್ಷ ಆಗಿದೆ.
 • ಈ ಅವಧಿಯಲ್ಲಿ ಇದು ಇನ್ನೂ 6 ರೂಪಾಂತರಿಗಳಾಗಿದೆ.
 • ಅದುದರಿಂದ ಇದಕ್ಕೆ ನಿರ್ದಿಷ್ಟ ಪರಿಹಾರವನ್ನು ಕಂಡುಕೊಳ್ಳುವುದು ಅಸಾಧ್ಯವಾಗಿದೆ.
ರೂಪಾಂತರಿ ಬಿಳಿ ತಿಗಣೆ

ರೂಪಾಂತರಿ ಬಿಳಿ ತಿಗಣೆ

 ಈ ಬಿಳಿ ನೊಣ ಬರೇ ತೆಂಗು ಮಾತ್ರವಲ್ಲ, ಬಾಳೆ, ಹಣ್ಣಿನ ಗಿಡಗಳು, ಅಡಿಕೆ  ಮುಂತಾದ 200 ಕ್ಕೂ ಹೆಚ್ಚಿನ ಬೆಳೆಗಳಿಗೆ ತೊಂದರೆ ಮಾಡುವ ಕಾರಣ ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಸಧ್ಯಕ್ಕೆ ಇರುವ  ಪರಿಹಾರ ಪ್ರಾಕೃತಿಕವಾಗಿ ಅದರ ವೈರಿ ಕೀಟಗಳ ಸಂತತಿ ಹೆಚ್ಚಾಗಿ ನಿಯಂತ್ರಣ ಆಗುವುದು ಒಂದೇ>

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!