ಗೇರು ಬೆಳೆಯಲ್ಲಿ ಹೆಚ್ಚು ಇಳುವರಿ ಬೇಕಾದರೆ ಇದು ಅಗತ್ಯ.

ಗೇರು ಚಿಗುರು ಬಿಡುವ ಸಮಯ ಅಕ್ಟೋಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಚಿಗುರುವ ಸಮಯದಲ್ಲಿ ಈ ಬೆಳೆಗೆ ಕೀಟಗಳ ತೊಂದರೆ  ಜಾಸ್ತಿ.ಇದನ್ನು  ನಿವಾರಣೆ ಮಾಡಿಕೊಳ್ಳದಿದ್ದರೆ , ಚಿಗುರು ಹಾಳಾಗುತ್ತದೆ. ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ.

ಯಾವ ಕೀಟಗಳಿಂದ ತೊಂದರೆ:

  • ಚಿಗುರುವ ಸಮಯದಲ್ಲಿ ಎಳೆ ಚಿಗುರನ್ನು ತಿನ್ನಲು ಗುಲಗುಂಜಿ ಹುಳದ ತರಹದ ಒಂದು ಹಾರುವ ಕೀಟ ತಿನ್ನುತ್ತದೆ.
  • ಇದರಿಂದ ಎಳೆ  ಚಿಗುರು ಹಾಳಾಗಿ ಒಣಗುತ್ತದೆ.
  • ಎಲೆಗಳಲ್ಲೊ ಹರಿತ್ತು  ಇರುವುದಿಲ್ಲ. ತಿಂದು ಹಾಕಿದ ಹಿಕ್ಕೆ  ಇರುತ್ತದೆ.
  • ಕೆಲವು ಸಮಯದಲ್ಲಿ  ಇದರ ಹಾವಳಿ ಹೆಚ್ಚು ಇರುತ್ತದೆ.

ಎಫಿಡ್ ಜಾತಿಯ ಕೀಟಗಳು, ಬಿಳಿ ನೊಣಗಳು ಸಹ  ಚಿಗುರುವ ಭಾಗದಲ್ಲಿ  ಕುಳಿತು ರಸ ಹೀರಿ ಚಿಗುರನ್ನು ಬೆಳೆಯಲು ಬಿಡುವುದಿಲ್ಲ. ಇದು ಚಿಗುರು ಮಾತ್ರವಲ್ಲದೆ ಮಿಡಿ ಕಾಯಿಗಳಿಗೂ ಬಾಧಿಸಿ. ಬೀಜವನ್ನು ಪೊಳ್ಳಾಗುವಂತೆ  ಮಾಡುತ್ತದೆ.

  • ಇದಕ್ಕೆ  ನೈಸರ್ಗಿಕ ವೈರಿ ಕೀಟಗಳು ಗುಲಗುಂಜಿ ಹುಳ. ಇದರ ಸಂಖ್ಯೆ  ಹೆಚ್ಚು ಇದ್ದರೆ ಈ ಕೀಟ ನಗಣ್ಯ.
  • ಎಳೆ  ಚಿಗುರನ್ನು ರಸ ಹೀರಿ ಹೆಚ್ಚು ಹಾನಿ ಮಾಡುವ ಕೀಟ ಟಿ ಸೊಳ್ಳೆ.
  • ಇದು ಚಿಗುರು ಮೂಡುವ ಹಂತದಲ್ಲಿ ಹೊಸ ಚಿಗುರನ್ನು  ಹಾನಿ ಮಾಡುತ್ತದೆ,
  • ಹೂ ಮೊಗ್ಗು ಬರುವ ಹಂತದಲ್ಲಿ ಮೊಗ್ಗನ್ನು ಹಾಳು ಮಾಡುತ್ತದೆ.
  • ಮಿಡಿ ಹಂತದಲ್ಲಿ ಮಿಡಿಯ ರಸ ಹೀರುತ್ತದೆ ಕಾಯಿಯಾಗುವ ಸಮಯದಲ್ಲಿ  ಕಾಯಿಗಳ ಮೇಲೆಯೂ ಬಾಧಿಸುತ್ತದೆ.

  ಇದು ರಸ ಹೀರಿದಾಗ ಚಿಗುರು, ಹೂ ಮೊಗ್ಗು, ಮಿಡಿ,ಕಾಯಿ ಕಪ್ಪಗಾಗಿ ಹಾಳಾಗುತ್ತದೆ.  ಗೇರು ಬೆಳೆ  ಬೆಳೆಯಲ್ಪಡುವ ಎಲ್ಲಾ ಕಡೆ ಇದರ ಬಾಧೆ ಇರುತ್ತದೆ. 

ನಿಯಂತ್ರಣ:

  • ಇದರ ನಿಯಂತ್ರಣಕ್ಕೆ ಸದ್ಯದ ಮಟ್ಟಿಗೆ ರಾಸಾಯನಿಕ ಕೀಟನಾಶಕಗಳೇ  ಹೆಚ್ಚು ಪರಿಣಾಮಕಾರಿಯಾಗಿವೆ.
  • ಜೈವಿಕ ಕೀಟ ನಾಶಕಗಳ ಬಳಕೆಯ ಯಾವುದೇ ಪ್ರಯೋಗಗಳು ಆಗಿಲ್ಲ.
  • ರಸ ಹೀರುವ ಕೀಟ ನಿಯಂತ್ರಣಕ್ಕೆ ಪರಿಣಾಮಕಾರೀ ಸಸ್ಯ ಜನ್ಯ ಕೀಟನಾಶಕಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
  • ಕೀಟನಾಶಕವನ್ನು ಚಿಗುರು ಮೊಗ್ಗು ಮೂಡುವ ಹಂತದಲ್ಲಿ , ಹೂ ಮೊಗ್ಗು ಮೂಡುವ ಹಂತದಲ್ಲಿ  ಮತ್ತು ಮಿಡಿ ಬಿಡುವ ಹಂತದಲ್ಲಿ  ಸಿಂಪರಣೆ ಮಾಡಬೇಕು.
  • ಎಲ್ಲಾ ನಮೂನೆಯ ಕೀಟಗಳಿಗೂ ಒಂದೇ ಔಷಧಿ ಸಾಕಾಗುತ್ತದೆ.

  ಯಾವ ಕೀಟನಾಶಕ:

  • ರಾಸಾಯನಿಕ ಕೀಟ ನಾಶಕಗಳಲ್ಲಿ  ಎಕಾಲಕ್ಸ್, (ಕ್ವಿನಾಲ್ ಫೋಸ್) ರೋಗರ್, ಡೈಮಿಥೋಯೇಟ್ ಕಾನ್ಫಿಡಾರ್ ( ಇಮಿಡಾ ಕ್ಲೋಫ್ರಿಡ್) ಕೀಟ ನಾಶಕಗಳನ್ನು ಬಳಕೆ ಮಾಡಬಹುದು.
  •   ಗೇರು ಸಂಶೋಧನಾ ನಿರ್ಧೇಶನಾಲಯವು ಕರಾಟೆ ( ಲಾಂಬ್ಡಾ ಸೈಹೋಥ್ರಿನ್) ಕೀಟನಾಶಕವನ್ನು ಶಿಫಾರಸು ಮಾಡುತ್ತಾರೆ.
  • ಇದು ಜಾಗರೂಕತೆಯಲ್ಲಿ  ಬಳಸಬೇಕಾದ ಕೀಟನಾಶಕ. ಮೈ ಚರ್ಮಕೆ ಬಿದ್ದಲ್ಲಿ, ನೀರಿನ ಸಂಪರ್ಕ( ಕೈಕಾಲು ತೊಳೆದು, ಸ್ನಾನ ಮಾಡುವಾಗ) ಯಾತನೆಯ ಉರಿ ಉಂಟು ಮಾಡುತ್ತದೆ.
  • ಸೂಕ್ತ ಮುನ್ನೆಚ್ಚರಿಕೆ ವಹಿಸಿ ಸಿಂಪಡಿಸಬೇಕು.

ಅಂಟಿನ ಹಾಳೆಗಳ ಮೂಲಕ ಟಿ ಸೊಳ್ಳೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ಗೇರು ಸಂಶೋಧನಾ ನಿರ್ಧೇಶನಾಲಯದ ವಿಜ್ಞಾನಿಗಳು.

  • ಉಳಿದ ಕೀಟನಾಶಕದಲ್ಲಿ ಈ ತೊಂದರೆ ಇಲ್ಲವಾದರೂ ಅಜಾಗರೂಕತೆ ಮಾಡಬಾರದು. ಗಾಳಿಯ ದಿಕ್ಕಿಗೆ  ವಿರುದ್ಧವಾಗಿ ಸಿಂಪಡಿಸಬಾರದು.

ಚಹ ಸೊಳ್ಳೆ  ಹಾಗೂ ಇನ್ನಿತರ ಕೀಟಗಳ ನಿಯಂತ್ರಣಕ್ಕೆ ಧೂಳು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ. ಇದು ಮಾಡಲು ಕ್ಲಿಷ್ಟ ಕೆಲಸವಾದ ಕಾರಣ ಸಾಧ್ಯವಾಗದು. ಕಲ್ಲೆಣ್ಣೆ ( ಮಿನರಲ್ ಆಯಿಲ್)”ಟಿ” ಸೊಳ್ಳೆ ನಿಯಂತ್ರಣಕ್ಕೆ ಸಹಕಾರಿ.

Leave a Reply

Your email address will not be published. Required fields are marked *

error: Content is protected !!