ಅಡಿಕೆಗೂ ಬಂತು ಬಿಳಿ ನೊಣ

by | Jan 9, 2020 | Krushi Abhivruddi | 0 comments

ಒಮ್ಮೆ ನಿಮ್ಮ ಅಡಿಕೆ ಮರದ ಗರಿಯ ಅಡಿ ಭಾಗವನ್ನು  ಪರಾಂಬರಿಸಿ ನೋಡಿ. ಅಲ್ಲಲ್ಲಿ ಬಿಳಿ ಬಿಳಿ ಕಾಣಿಸುತ್ತದೆಯಲ್ಲವೇ? ಒಂದು ವೇಳೆ ಹಗಲು ಕಾಣದಿದ್ದರೆ ರಾತ್ರೆ ಟಾರ್ಚ್ ಲೈಟ್  ಬಿಟ್ಟು ನೋಡಿ. ಖಂಡಿತವಾಗಿಯೂ ಕಾಣಿಸುತ್ತದೆ. ಇದು  ಬೊರ್ಡೋ ಹೊಡೆದು ಆದರ ಅವಶೇಷ ಎಂದು ತಿಳಿಯದಿರಿ. ಆ ಕೆಳಭಾಗದ ಗರಿಗಳು  ಆಗಲೇ  ಉದುರಿ ಹೋಗಿವೆ. ಇದು  ಬಿಳಿ ನೊಣ ಎಂಬ ರಸ ಹೀರುವ ಕೀಟ, ಅಡಿಕೆಯ ಕೆಳ ಭಾಗದ ಗರಿಯಲ್ಲಿ ವಾಸ್ತವ್ಯ ಮಾಡಿರುವುದು.

ಇದು ಇತ್ತೀಚಿನೆ ಬೆಳವಣಿಗೆ. ಬಹುಷಃ ಯಾರೂ ಇದನ್ನು ಗಮನಿಸಿರಲಿಕ್ಕಿಲ್ಲ. ಎಲೆಗಳ ಗರಿಗಳು ಒಣಗಿದಂತೆ  ಕಾಣುತ್ತದೆ. ಬಿಸಿಲಿಗೆ  ಎಂದು ತಿಳಿದು ಸುಮ್ಮನಿದ್ದಿರಬಹುದು. ಬಿಸಿಲಿಗೂ ಎಲೆ ಒಣಗುತ್ತದೆ. ಅದು ಇನ್ನು ಸ್ವಲ್ಪ ಸಮಯದ ನಂತರ. ಈಗ ಕೆಳ ಭಾಗದ ಗರಿಗಳಲ್ಲಿ ಒಣಗಿದ ಚಿನ್ಹೆ ಕಂಡು ಬಂದರೆ ಖಂಡಿತವಾಗಿಯೂ ಇದನ್ನು ಪರಾಂಬರಿಸಿ ನೋಡಿ.

ಏನಿದು ಬಿಳಿ ನೊಣ:

 • ತೆಂಗಿನ ಮರಕ್ಕೆ  ಒಂದು ಬಿಳಿ ನೊಣ ತೊಂದರೆ ಮಾಡುತ್ತದೆ. ಇದಕ್ಕೆ  ರುಗೋಸ್ ಸ್ಪಿರಲಿಂಗ್ ವ್ಹೈಟ್ ಪ್ಲೈ (Rugose spiralling whitefly RSW) ಎಂದು ಹೆಸರು.  ಇದು ನಮ್ಮ ಕರಾವಳಿಗೆ ಆಗಮಿಸಿ ಮೂರು ವರ್ಷ ಆಗಿದೆ…
 • ತೆಂಗಿನ ಬೇಸಾಯದಲ್ಲಿ ರೈತರು ಅಷ್ಟೊಂದು ಆಸಕ್ತರಾಗಿರದ ಕಾರಣ ಅದನ್ನು ಅಷ್ಟು ಗಂಭೀರ ವಿಷಯವಾಗಿ ತೆಗೆದುಕೊಳ್ಳಲೇ ಇಲ್ಲ. ಅದು ವಾತಾವರಣ ಸಹಜವಾಗಿ ಕೆಲವು ಋತುಮಾನಗಳಲ್ಲಿ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಕಡಿಮೆಯಾಗುತ್ತಾ ಇದೆಯೋ, ಇದೆ. ಇಲ್ಲವೋ ಇಲ್ಲ – ಗಮನಿಸಿಯೇ ಇಲ್ಲ ಎಂಬ ಸ್ಥಿತಿಯಲ್ಲಿತ್ತು.
 • ಈಗ ಇದು ಅಡಿಕೆ ಮರಗಳಿಗೆ ತೊಂದರೆ ಕೊಡಲು ಪ್ರಾರಂಭಿಸಿವೆ. ಕರಾವಳಿಯ ಬಹಳ ಕಡೆ ಇದು ಅಡಿಕೆ ಮರಗಳ ಗರಿಯಲ್ಲಿ ಕಾಣಿಸುತ್ತಿದೆ. ಉಳಿದಂತೆ  ಅಡಿಕೆ ಬೆಳೆಯಲಾಗುವ ಬೇರೆ ಕಡೆಗಳಲ್ಲಿಯೂ ಇರಬಹುದು. ಕೆಲವು ನಮ್ಮ ಗ್ರೂಪ್ ನ ಸದಸ್ಯರು  ತಮ್ಮ ಅಡಿಕೆ  ಮರದ ಗರಿಯ ಸಮಸ್ಯೆಯ ಬಗ್ಗೆ  ಹಾಕಿದ ಚಿತ್ರಗಳಲ್ಲಿ ಇದನ್ನು ಗಮಸಿದ್ದೇವೆ.
 • ತೆಂಗಿನ ಮರದ ಗರಿಯಲ್ಲಿ ಈ ಕೀಟ ಇದೆಯೆಂದಾದರೆ ಅಡಿಕೆ  ಮರಕ್ಕೂ ಇದು ಬಾಧಿಸದೆ ಇರುವುದಿಲ್ಲ.
 • ಈ ಬಿಳಿ ನೊಣ ಬರೇ ತೆಂಗನ್ನು ಮಾತ್ರ ಬಾಧಿಸುವುದಲ್ಲ. ಸುಮಾರು 200  ಬಗೆಯ ಸಸ್ಯಗಳಿಗೆ ಇದರ ಉಪಟಳ ಇದೆ.
 • ಇದು ಭಾರೀ ಹಾನಿ ಮಾಡುವ ಕೀಟ ಅಲ್ಲ. ಆದರೆ  ಕೆಲವು ಪರಿಸ್ಥಿತಿಗಳಲ್ಲಿ  ಮೈನರ್ ಪೆಸ್ಟ್ ಎಂಬುದು ಸಹ ಹೆಚ್ಚು ಹಾನಿ ಮಾಡುವ ಪ್ರಮೇಯ ಇದೆ.
ಸುರುಳಿ ಆಕಾರದ ಬಿಳಿ ನೊಣ -Rugose Spiralling Whitefly

ಸುರುಳಿ ಆಕಾರದ ಬಿಳಿ ನೊಣ -Rugose Spiralling Whitefly

ನಿಯಂತ್ರಣ ಹೇಗೆ?

 • ಇದನ್ನು ವಿಷ ಕೀಟನಾಶಕ ಬಳಕೆ  ಮಾಡಿ ನಾಶ ಮಾಡಲು  ಹೋಗಬೇಕಾಗಿಲ್ಲ.
 • ಕೀಟನಾಶಕಗಳ ಬಳಕೆಯಿಂದ  ಅದನ್ನು ತಿನ್ನುವ ಕೆಲವು ಪರಾವಲಂಭಿ ಜೀವಿಗಳು ನಾಶವಾಗುತ್ತವೆ.
 • ಇದು ಹೊಸ ಕೀಟ ಅಲ್ಲ. ಇದು ಕಾಡು, ಸೊಪ್ಪಿನ ಬೆಟ್ಟಗಳಲ್ಲಿ ಕೆಲವು ಗಿಡಗಳಲ್ಲಿ ಇರುತ್ತಿತ್ತು. ಈಗ ಆ ಗಿಡಗಳು  ನಾಶವಾದ ಕಾರಣ ಇದು ಬೆಳೆಗಳಿಗೆ ಬಾಧಿಸಲು ಪ್ರಾರಂಭವಾಗಿದೆ.
 • ಅಡಿಕೆ ಮರಗಳ ಗರಿಗಳಿಗೆ ಚಳಿಗಾಲ ಪ್ರಾರಂಭವಾಗುವಾಗ  ಅಡಿ ಭಾಗಕ್ಕೆ ವೆಟೆಬಲ್ ಸಲ್ಫರ್  Wetteble sulphur ಸಿಂಪರಣೆ ಮಾಡಬಹುದು. ಇದರಲ್ಲಿ ಸಾಮಾನ್ಯವಾಗಿ ಈ ಕೀಟ ಕಡಿಮೆಯಾಗುತ್ತದೆ.
 • ದಕ್ಷಿಣಾಯನದ ಬಿಸಿಲಿನ ಸಮಯದಲ್ಲಿ ಗರಿಗಳು ನೇರವಾಗಿ ಸೂರ್ಯ ಕಿರಣದ ಘಾಸಿಗೆ ಒಳಗಾಗುತ್ತವೆ. ಇದರಿಂದ ರಕ್ಷಣೆಗೆ  ಎಲೆ ಅಡಿ ಭಾಗಕ್ಕೆ  ಶೇ..5 (1ಕಿಲೋ, 200 ಲೀ. ನೀರು) ಸುಣ್ಣದ ದ್ರಾವಣ ಸಿಂಪರಣೆ ಮಾಡಿದರೆ, ಬಿಳಿ ಬಣ್ಣದ ಲೇಪನ ಈ ಕೀಟವನ್ನು ಸ್ವಲ್ಪ ದೂರ ಮಾಡುತ್ತದೆ.
 • ಕೀಟ ನಾಶಕ ಸಿಂಪಡಿಸದೇ ಇದ್ದರೆ ಪರಭಕ್ಷಕ ಕೀಟಗಳು ಇದನ್ನು ನಾಶಮಾಡುತ್ತವೆ.
 • ಅಡಿಕೆ ಮರಗಳಿಗೆ ಬರೇ ಎನ್ ಪಿ ಕೆ ಮಾತ್ರ ಕೊಡುವ ಅಭ್ಯಾಸವನ್ನು ಬದಲಿಸಿರಿ.  ಮುಖ್ಯ ಪೋಷಕದ ಜೊತೆಗೆ ದ್ವಿತೀಯ ಅಗತ್ಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ  ಕೊಡುವುದರಿಂದ ಸಸ್ಯಕ್ಕೆ ಕೀಟ – ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ.

ಹೆಚ್ಚಿನ ವಿವರಗಳಿಗೆ ಇದೇ ಸೈಟ್ ನಲ್ಲಿ  ಎಲ್ಲಾ ಬೆಳೆಗಳಿಗೂ ತೊಂದರೆ  ಬಿಳಿ ನೊಣ ಓದಿ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!