ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ ನಮಗೆ ಗೊತ್ತಾಗುವುದಿಲ್ಲ. ರೈತರು ಸೂಕ್ಷ್ಮವಾಗಿ ಪ್ರಕೃತಿಯನ್ನು ಗಮನಿಸಬೇಕು. ಆಗ ಅವರಿಗೆ ಹಲವಾರು ಸಂಗತಿಗಳು, ಹಾಗೆ ತಪ್ಪು ತಿಳುವಳಿಕೆಗಳು ಪರಿಹಾರವಾಗುತ್ತವೆ.
ಸಾರಜನಕ ಏನು?
- ಸಾರಜನಕ ಗೊಬ್ಬರ ಎಂಬುದು ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಪೋಷಕ.
- ಈ ಪೋಷಕವು ಹೆಚ್ಚಿನ ಸಾವಯವ ವಸ್ತುಗಳಲ್ಲಿ ಇರುತ್ತದೆ.
- ಇದನು ಕೃತಕವಾಗಿ ಯೂರಿಯಾ ರೂಪದಲ್ಲಿ ಒದಗಿಸಲಾಗುತ್ತದೆ.
- ಸಾರಜನಕ ಎಂಬುದು ವಾತಾವರಣದಲ್ಲಿ ಅನಿಲ ರೂಪದಲ್ಲಿ ಇರುವ ಮೂಲವಸ್ತುವಾಗಿದ್ದು ಪ್ರೊಟೀನು ರಚನೆಯಲ್ಲಿ ಅತಿ ಮುಖ್ಯ ಭಾಗವಾಗಿರುತ್ತದೆ.
- ಸಸ್ಯಗಳು ಈ ಸಾರಜನಕವನ್ನು ನೇರವಾಗಿ ಉಪಯೋಗಿಸುವ ಸ್ತಿತಿಯಲ್ಲಿ ಇರುವುದಿಲ್ಲ.
- ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಎಲೆಗಳಿಗೆ ಸಿಂಪರಣೆ ಮಾಡಿದಾಗಲೂ ಸ್ವೀಕರಿಸುತ್ತದೆ.
ಪರಿಸರವೇ ಇದರ ಮೂಲ:
- ನಮ್ಮ ವಾತಾವರಣದಲ್ಲಿ 79% ದಷ್ಟು ಸಾರಜನಕದ ಅಂಶ ಇದೆ.
- ಆದರೆ ಅದನ್ನು ಎಲ್ಲಾ ಸಸ್ಯಗಳೂ ನೇರವಾಗಿ ಸ್ವೀಕರಿಸುವುದಿಲ್ಲ.
- ದ್ವಿದಳ ಜಾತಿಯ ಸಸ್ಯಗಳ ಬೇರಿನಲ್ಲಿ ಗಂಟುಗಳಂತಿರುವ ರಚನೆ ಇರುವುದನ್ನ ತಾವೆಲ್ಲರೂ ಗಮನಿಸಿರಬಹುದು.
- ಆ ಗಂಟುಗಳಲ್ಲಿ ಸಾರಜನಕವನ್ನು ಸ್ಥೀರಿಕರಿಸುವ ಬ್ಯಾಕ್ಟೀರಿಯಗಳು ಇದ್ದು ಅವು ಸಾರಜನಕವನ್ನು ಹೀರಿಕೊಂಡು ಸಸ್ಯಗಳು ಉಪಯೋಗಿಸುವ ಹಾಗೆ ರಾಸಯನಿಕ ಬದಲಾವಣೆಗೆ ಒಳಪಡಿಸಿ ಒದಗಿಸಿಕೊಡುತ್ತವೆ.
- ಅದೇ ಕಾರಣಕ್ಕೆ ಸೆಣಬಿನ ಗಿಡ, ಗ್ಲೆರಿಸೀಡಿಯಾ ಸಸ್ಯಗಳು, ಹಲವಾರು ಕೋಡು ಬಿಡುವ ಬಳ್ಳಿಗಳು ಯಾವುದೇ ಹೊರಗಡೆಯ ಪೋಷಕಗಳಿಲ್ಲದಿದ್ದರೂ ಹುಲುಸಾಗಿ ಬೆಳೆಯುವುದು.
- ಅವು ಸತ್ತ ನಂತರ ತಮ್ಮ ದೇಹದ ಎಲ್ಲಾ ಪೋಷಕಗಳನ್ನು ಮಣ್ಣಿಗೆ ಬಿಡುಗಡೆ ಮಾಡುತ್ತವೆ.
- ಅದಕ್ಕೇ ಇದನ್ನು ಗೊಬ್ಬರದ ಗಿಡ ಎಂದಿರುವುದು.
- ಹೊಲದ ಬದುಗಳಲ್ಲಿ ಗ್ಲೆರಿಸೀಡಿಯಾ ಬೆಳೆದರೆ ಯೂರಿಯಾ ಗೊಬ್ಬರ ಅಲ್ಲೇ ಉತ್ಪಾದನೆಯಾಗುತ್ತದೆ.
- ಮಣ್ಣು ಎಂಬ ಘನ ಪದಾರ್ಥದಲ್ಲಿ ಸಾರಜನಕ ಎಂಬುದು ಹೆಚ್ಚಾಗಿ ಇರುವುದೇ ಇಲ್ಲ.
- ಮಣ್ಣಿಗೆ ಸಾವಯವ ವಸ್ತುಗಳು ಸೇರಿದಾಗ ಸ್ವಲ್ಪ ಪ್ರಮಾಣದಲ್ಲಿ ಸಾರಜನಕ ಸೇರಿಕೊಳ್ಳುತ್ತದೆಯಾದರೂ ಅದು ತೀರಾ ಅಲ್ಪ.
- ಆದರೂ ಅದ್ಭುತ ಎಂದರೆ ಸಸ್ಯಗಳು ಅತೀ ಕನಿಷ್ಟ ಪ್ರಮಾಣದಲ್ಲಿ ಸಾರಜನಕ ಇದ್ದರೂ ಬದುಕಿಕೊಳ್ಳುತ್ತವೆ.
ಒಂದು ಸಸ್ಯ ತನ್ನ ಬೆಳವಣಿಗೆಯ ಉದ್ದಕ್ಕೂ ತನ್ನ ಬದುಕುವ ಅವಶ್ಯಕತೆಗೆ ಬೇಕಾದಷ್ಟು ಸಾರಜನಕವನ್ನು ತನ್ನ ಎಲೆ ಇತ್ಯಾದಿ ಉದುರಿಸಿ ಉತ್ಪಾದನೆ ಮಾಡುತ್ತವೆ. ಹೀಗೆ ಉತ್ಪಾದಿಸಿದ ಸಾರಜನಕ ಅಮೋನಿಯಾ ಮತ್ತು ನೈಟ್ರೇಟ್ ರೂಪದಲ್ಲಿ ಇರುತ್ತವೆ, ಅಮೋನಿಯ ರೂಪದಲ್ಲಿರುವ ಸಾರಜನಕ ನೀರಿನೊಂದಿಗೆ ಹರಿದು ಹೋಗುವುದಿಲ್ಲ. ಅದು ನಿಧಾನವಾಗಿ ಸಸ್ಯಗಳಿಗೆ ಲಭ್ಯವಾಗುತ್ತಿರುತ್ತದೆ.
- ಆ ಕಾರಣದಿಂದ ಸ್ವಾಭಾವಿಕ ಸಸ್ಯಗಳು ಸಾರಜನಕದ ಕೊರತೆಯನ್ನು ಅನುಭವಿಸುವುದು ಕಡಿಮೆ.
- ಅವು ಯಾವಾಗಲೂ ಹುಲುಸಾಗಿಯೇ ಬೆಳೆಯುತ್ತಿರುತ್ತವೆ.
- ಸಾರಜನಕದ ಮೂಲ ಪ್ರಕೃತಿ. ವಾಯು ರೂಪದಲ್ಲಿರುವ ಅಮೋನಿಯಾವನ್ನು ಘನ ರೂಪಕ್ಕೆ ( ಅಮೋನಿಯಾ ಮತ್ತು ಕಾರ್ಬನ್ ಡೈ ಆಕ್ಸೈಡ್ ಸೇರಿಸಿ) ಪರಿವರ್ತಿಸಿ ಮಾಡಿದ ಗೊಬ್ಬರವೇ ಯೂರಿಯಾ.
- ಇದನ್ನು ಕೆಲವು ಜನ ರಾಸಾಯನಿಕ ಎನ್ನುತ್ತಾರೆ. ಅದು ಪೂರ್ತಿ ನಿಜವಲ್ಲ. ಇದರ ತಯಾರಿಕೆಯೆಂಬುದು ರಾಸಾಯನಿಕ ಪ್ರಕ್ರಿಯೆಯಾದರೂ ಮೂಲ ಪ್ರಾಕೃತಿಕ ಉತ್ಪನ್ನವೇ ಆಗಿದೆ.
- ಯೂರಿಯಾ ಗೊಬ್ಬರವನ್ನು ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಪೂರೈಕೆ ಮಾಡಬೇಕು.
- ಹೆಚ್ಚು ಮಾಡಿದರೆ ಅದು ಬೆಳೆಗಳ ಫಸಲಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ.
- ಯೂರಿಯ ಅಥವಾ ಸಾರಜನಕ ಎಷ್ಟು ಉಪಯುಕ್ತವೋ ಮಿತಿಮೀರಿದರೆ ತೊಂದರೆಕಾರಕವೂ ಸಹ.
ಯೂರಿಯಾ ಮೂಲವಲ್ಲದೆ ಬೇರೆ ಕೆಲವು ಮೂಲಗಳಲ್ಲಿಯೂ ಸಾರಜನಕವನ್ನು ತಯಾರಿಸಲಾಗುತ್ತದೆ. ಈ ಬಗ್ಗೆ ಮುಂದೆ ತಿಳಿಸಲಾಗುವುದು.
- ನಮ್ಮ ಪರಿಸರದಲ್ಲಿ ಈ ಪ್ರಕ್ರಿಯೆ ಸಹಜವಾಗಿ ನಡೆಯುತ್ತಿರುತ್ತದೆ.
- ಮೊದಲೇ ಹೇಳಿದಂತೆ ದ್ವಿದಳ ಜಾತಿಯ ಸಸ್ಯಗಳು ಸಾರಜನಕವನ್ನು ಉತ್ಪಾದಿಸುವ ವ್ಯವಸ್ಥೆಗಳು.
- ಅದು ನಾವು ಬಯಸಿದಷ್ಟು ಹೇರಳ ಪ್ರಮಾಣದಲ್ಲಿ ಲಭ್ಯವಾಗದ ಕಾರಣ ಕೃತಕ ಉತ್ಪಾದನೆಯ ಅವಶ್ಯಕತೆ ಒದಗಿದೆ.
- ಸಸ್ಯಗಳಾದ ಸೆಣಬು, ಸಸ್ಬೇನಿಯಾ, ಡಯಂಚಾ, ಗ್ಲೆರಿಸೀಡಿಯಾ, ಕ್ರೋಟಲೇರಿಯಾ ಮುಂತಾದ ಹಲವಾರು ದ್ವಿದಳ ಸಸ್ಯ, ಬಳ್ಳಿಗಳು ಯೂರಿಯಾ ಅಥವಾ ಸಾರಜಕನ ತಯಾರಿಕೆಯ ಪ್ರಾಕೃತಿಕ ಕಾರ್ಖಾನೆಗಳು.
ದ್ವಿದಳ ಸಸ್ಯಗಳ ಸೊಪ್ಪು ಇತ್ಯಾದಿಗಳನ್ನು ಹೇರಳವಾಗಿ ಬಳಸಿದರೆ ನಾವು ಯೂರಿಯಾ ಅಥವಾ ಇನ್ನಿತರ ಕೃತಕ ತಯಾರಿಕೆಯ ಸಾರಜನಕ ಮೂಲದ ಗೊಬ್ಬರ ಬಳಕೆ ತುಂಬಾ ಕಡಿಮೆ ಮಾಡಬಹುದು.
end of the article:
search words: green manure crop# Urea plant# Natural nitrogen # plant nitrogen# soil improvement # legume plants# natural nutrient rich plants#