ಕೆಂಪಡಿಕೆ ಬಲ- ಚಾಲಿಹಿನ್ನೆಡೆ- ಇಂದು 08-03-2022 ಅಡಿಕೆ ಧಾರಣೆ.

ಕೆಂಪಡಿಕೆ

ಹಿಂದಿನ ಲೆಕ್ಕಾಚಾರಗಳು ಹಾಗೂ ಪರಿಸ್ಥಿತಿಗಳಂತೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಅತ್ಯಲ್ಪ ಪ್ರಮಾಣದ ಅಡಿಕೆ ಮಾತ್ರ ಉತ್ತಮ ದರಕ್ಕೆ ಖರೀದಿಯಾಗುತ್ತಿದ್ದು, ಪ್ರಕಟಣೆಯ ದರಕ್ಕೂ ಕೊಳ್ಳುವ ದರಕ್ಕೂ ಸಂಬಂಧವೇ ಇಲ್ಲದಾಗಿದೆ. ಆದರೆ ಕೆಂಪಡಿಕೆ ಮಾರುಕಟ್ಟೆ ಮಾತ್ರ  ಬಲ ಕಳೆದುಕೊಳ್ಳದೆ ಉಳಿದಿದೆ. ಬಹುತೇಕ ಕೆಂಪಡಿಕೆ ಉಳ್ಳವರು ಉತ್ತಮ ದರದ ನಿರೀಕ್ಷೆಯಲ್ಲಿ ಮಾರಾಟ ಮಾಡುವುದನ್ನು ಮುಂದೂಡುತ್ತಿದ್ದಾರೆ.ಈ ವರ್ಷ ಹಿಂದೆಲ್ಲಾ ಆಗುತ್ತಿದ್ದಂತೆ ಕೆಂಪಡಿಕೆ ದರವನ್ನು ಹಿಂಬಾಲಿಸುತ್ತಾ ಚಾಲಿ ದರ ಮುಂದುವರಿಯಲಿದೆ ಎಂಬ ವದಂತಿಗಳಿವೆ.  

ನಿನ್ನೆ ದಿನಾಂಕ 07-03-2022 ರಂದು ಕೆಂಪಡಿಕೆಯ ಪ್ರಮುಖ ಮಾರುಕಟ್ಟೆಯಾದ ಶಿವಮೊಗ್ಗ, ಚೆನ್ನಗಿರಿ, ಶಿರಸಿ, ಯಲ್ಲಾಪುರ, ಸಿದ್ದಾಪುರ, ದಾವಣಗೆರೆ,ಚಿತ್ರದುರ್ಗ ಇಲ್ಲಿ ಒಟ್ಟು 8450 ಕ್ಕೂ ಹೆಚ್ಚು ಚೀಲ ರಾಶಿ ಅಡಿಕೆ ಮಾರಾಟವಾಗಿದೆ. ಭಾನುವಾರ ಹೊಸನಗರದಲ್ಲಿ 1604, ಚೀಲ ಅಡಿಕೆ ಕನಿಷ್ಟ 40610 ರೂ. ಗರಿಷ್ಟ 46439ರೂ. ಹಾಗೂ ಸರಾಸರಿ 45799 ರೂ.ಗಳಿಗೆ ಮಾರಾಟವಾಗಿದೆ. ನಿನ್ನೆ ಶಿವಮೊಗ್ಗದ ಒಂದೇ ಮಾರುಕಟ್ಟೆಯಲ್ಲಿ ಒಟ್ಟು 6527ಚೀಲ ಅಡಿಕೆ ಕನಿಷ್ಟ  43000 ರೂ. ಗರಿಷ್ಟ  45599 ರೂ. ಹಾಗೂ ಸರಾಸರಿ 45300 ರೂ. ಗಳಿಗೆ ಮಾರಾಟವಾಗಿದೆ. ಬಾನುವಾರ ತೀರ್ಥಹಳ್ಳಿಯಲ್ಲಿ ಒಟ್ಟು 943 ಚೀಲ, ಕನಿಶ್ಟ ರೂ. 32419 ಗರಿಷ್ಟ 45899ರೂ. ಹಾಗೂ ಸರಾಸರಿ, 45489 ರೂ.ಗಳಿಗೆ ಖರೀದಿಯಾಗಿದೆ. ಇಲ್ಲೆಲ್ಲಾ ಸರಾಸರಿ ದರಕ್ಕೂ ಗರಿಷ್ಟ 200-300 ರೂ. ವ್ಯತ್ಯಾಸವಿದ್ದು, ಇದೆಲ್ಲಾ  ಉತ್ತಮ ಬೇಡಿಕೆಯನ್ನು ಸೂಚಿಸುತ್ತದೆ.

ಕರಾವಳಿಯಲ್ಲಿ ಚಾಲಿ ಮಾರುಕಟ್ಟೆ ಮಂದವಾಗಿದ್ದು, ಖಾಸಗಿ ವ್ಯಾಪಾರಿಗಳು ಕರೆದರೂ ಅಡಿಕೆ ಖರೀದಿಗೆ ಬರುತ್ತಿಲ್ಲ. ಸ್ವಲ್ಪ ಹಿಂದೆ ಇದೆ. ಕೆಲವೇ ದಿನದಲ್ಲಿ ಮತ್ತೆ ಏರಿಕೆ ಆಗಬಹುದು. ಸ್ವಲ್ಪ ಕಾಯುವ ಅಗದಾ? ಎಂದು ಹೇಳುತ್ತಿದ್ದಾರೆ.  ಮಾರುಕಟ್ಟೆಗೆ ಕೋಕಾ ಅಡಿಕೆ ಮತ್ತು ಹಾಳಾದ ಅಡಿಕೆಯೇ ಹೆಚ್ಚಾಗಿ ಬರುತ್ತಿದ್ದು, ಉತ್ತಮ ಅಡಿಕೆಯನ್ನು ಹೆಚ್ಚಿನವರು ಉತ್ತಮ ದರ ಬರಲಿ ಎಂದು ದಾಸ್ತಾನು ಇಟ್ಟಿದ್ದಾರೆ. ಈಗಾಗಲೇ ಎರಡು ಕೊಯಿಲಿನ ಅಡಿಕೆ ಒಣಗಿದ್ದು, ಪ್ರಾರಂಭದ ಅಡಿಕೆಯನ್ನು ಹೆಚ್ಚಿನವರು ಸುಲಿದು ಮಾರಾಟ ಮಾಡಿದ್ದಾರೆ. ಉಳಿದ ಅಡಿಕೆ ಶೇಖರಣೆಯಲ್ಲಿದೆ.  ಹೊಸ ಅಡಿಕೆ ಸರಾಸರಿ 43,000 ಹಳೆ ಅಡಿಕೆ ಸರಾಸರಿ 53000 ದರದಲ್ಲಿ ಕೊಳ್ಳುತ್ತಿದ್ದಾರೆ. ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ಇರುವ ಕಾರಣ  ಮಾರುಕಟ್ಟೆ ಬೇಡಿಕೆ ಸ್ವಲ್ಪ ಹಿಂದೆ ಎಂದೇ ಹೇಳಬಹುದು. ಹಾಗೆಂದು ಬೆಳೆಗಾರರು ನಿಯಮಿತ ಪ್ರಮಾಣದಲ್ಲೇ  ಮಾರುಕಟ್ಟೆಗೆ ಅಡಿಕೆ ಪೂರೈಕೆ ಮಾಡುತ್ತಿದ್ದರೆ ದರ ಹಿಂದೆ ಸರಿಯದು.

ಅಡಿಕೆ ಮಾರುಕಟ್ಟೆ

ಎಲ್ಲೆಲ್ಲಿ ಯಾವ ದರ ಇತ್ತು?

ಕರಾವಳಿಯ ಕಾರ್ಕಳ, ಬಂಟ್ವಾಳ,ಸುಳ್ಯ, ಮಂಗಳೂರು ಸುಳ್ಯ, ಕುಂದಾಪುರ, ಬೆಳ್ತಂಗಡಿ ಮುಂತಾದ ಕಡೆ ಖಾಸಗಿ ವ್ಯಾಪಾರಿಗಳಲ್ಲಿ ಹೊಸ ಅಡಿಕೆಗೆ ಕ್ವಿಂಟಾಲಿಗೆ 40,000-43,000-ಉತ್ತಮ ಗುಣಮಟ್ಟದ ಅಡಿಕೆಗೆ 45,000 ದರ ಇತ್ತು.  ಕ್ಯಾಂಪ್ಕೋ ತನ್ನ ದರ ಪಟ್ಟಿಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ.

  • ಪಟೋರಾ ದರ  ಚೆನ್ನಾಗಿದೆ.ಕೆಂಪಡಿಕೆ ದರ ಇಳಿಕೆಯಾದರೆ ಮಾತ್ರ ಪಟೋರಾ, ಕರಿಕೋಕ, ಉಳ್ಳಿ ಗಡ್ಡೆ ಮುಂತಾದ ಅಡಿಕೆಗೆ ಬೇಡಿಕೆ ಇದೆ.
  • ಹೊಸ ಪಟೋರಾ 30000-32500 ತನಕ ಹಳೆ ಪಟೋಟಾ 32500-44,000 ತನಕವೂ ಇದೆ.
  • ಕರಿಕೋಕಾ ದರ 25000-26000 ತನಕ ಉಳ್ಳೀ ಗಡ್ಡೆ ಇದೇ ದರದಲ್ಲಿ (20000-26000) ತನಕ ಇದೆ.

ಕೆಂಪಡಿಕೆ ಮಾರುಕಟ್ಟೆ ಸ್ಥಿತಿ:

  • ಭಧ್ರಾವತಿಯಲ್ಲಿ ರಾಶಿಗೆ,  ಕನಿಷ್ಟ 44899,ಗರಿಷ್ಟ 45899,ಸರಾಸರಿ 45456.
  • ಚೆನ್ನಗಿರಿಯಲ್ಲಿ  ರಾಶಿ, 44866, 46009, 45477
  • ಚಿತ್ರದುರ್ಗದಲ್ಲಿ ಅಪಿ, 44929, 45359, 45179
  • ಚಿತ್ರದುರ್ಗದಲ್ಲಿ ಬೆಟ್ಟೆ, 36119, 36569, 36339
  • ಚಿತ್ರದುರ್ಗದಲ್ಲಿ ರಾಶಿ, 44449, 44889, 44699
  • ದಾವಣಗೆರೆ ರಾಶಿ, 45439, 45788, 45720
  • ಹೊನ್ನಾಳಿ ರಾಶಿ, 46899, 46899, 46899
  • ಹೊಸನಗರ ರಾಶಿ, 40610, 46439, 45799
  • ಕೊಪ್ಪ ಬೆಟ್ಟೆ, 47819, 50199, 48119
  • ಕೊಪ್ಪ ಗೊರಬಲು, 22609, 33570, 32129
  • ಕುಮಟಾ ಹಳೆ ಚಾಲಿ 46090, 48219, 47469
  • ಕುಮಟಾ ಹೊಸ ಚಾಲಿ, 35189, 41099, 40709
  • ಸಾಗರ ಹೊಸಚಾಲಿ, 23699, 37599, 36899
  • ಸಾಗರ ರಾಶಿ  33199, 46119, 45799
  • ಸಾಗರ ಸಿಪ್ಪೆ ಗೋಟು 8992, 19369, 18699
  • ಶಿವಮೊಗ್ಗ ಬೆಟ್ಟೆ , 47019, 50800, 48800
  • ಶಿವಮೊಗ್ಗ ರಾಶಿ, 43000, 45599, 45300
  • ಶಿವಮೊಗ್ಗ ಸರಕು, 52100, 76100, 68500
  • ಸಿದ್ದಾಪುರ ಹಳೆ ಚಾಲಿ, 46639, 46639, 46639
  • ಸಿದ್ದಾಪುರ ಹೊಸ ಚಾಲಿ, 35299, 40339, 38699
  • ಸಿದ್ದಾಪುರ ರಾಶಿ, 44159, 46509, 46199
  • ಸಿದ್ದಾಪುರ ಬೆಟ್ಟೆ, 36469, 41219, 38319
  • ಸಿರ್ಸಿ ಬೆಟ್ಟೆ  30899, 45299, 39895
  • ಶಿರಸಿ ಚಾಲಿ 33109, 41418, 39824
  • ಶಿರಸಿ ರಾಸಿ 30639, 47199, 45903
  • ತೀರ್ಥಹಳ್ಳಿ ಬೆಟ್ಟೆ, 45890, 51419, 48600
  • ತೀರ್ಥಹಳ್ಳಿ ಇಡಿ, 35199, 45699, 45199
  • ತೀರ್ಥಹಳ್ಳಿ ರಾಸಿ, 32419, 45899, 45489
  • ಸರಕು, 50519, 76910, 69799
  • ಯಲ್ಲಾಪುರ ಹಳೇ ಚಾಲಿ 46666, 46666, 46666
  • ಯಲ್ಲಾಪುರ ಹೊಸ ಚಾಲಿ, 35369, 41599, 40291
  • ರಾಸಿ, 46199, 52899, 49899
  • ಬೆಟ್ಟೆ 38099, 45590, 42890
  • ಅಪಿ, 54479, 54479, 54479

ಕರಿಮೆಣಸು ಧಾರಣೆ:

ಕಾಳು ಮೆಣಸು

ಕರಿಮೆಣಸಿನ ಧಾರಣೆ ಸ್ಥಿರವಾಗಿದೆ ಎನ್ನಬಹುದು. ಖಾಸಗಿ ವ್ಯಾಪಾರಿಗಳು ಕಿಲೋ ಮೇಲೆ 5-10 ರೂ. ಇಳಿಕೆ ಮಾಡಿದ್ದಾರೆ. ಕ್ಯಾಂಪ್ಕೋ ಖಾಸಗಿಯವರಿಗಿಂತ  ಕಡಿಮೆ ಬೆಲೆ ನಮೂದಿಸಿದೆ. ಖಾಸಗಿಯವ ದರ ಕಿಲೋ ಮೇಲೆ 5-10 ರೂ. ಹೆಚ್ಚು ಇದೆ. ಮೊನ್ನೆ ಏರಿಕೆಯಾದ ಬಲ ನಂತರ ಮುಂದುವರಿಯಲಿಲ್ಲ. ಅಲ್ಲಿಗೇ ಸ್ಥಬ್ಧ ಅಥವಾ ತುಸು ಇಳಿಕೆಯೇ ಆಗಿದೆ.

ಎಲ್ಲೆಲ್ಲಿ ಯಾವ ದರ ಇತ್ತು?

  • ಸಕಲೇಶಪುರ: Royal Traders, ಅಯದ್ದು  500.00
  • ಸಕಲೇಶಪುರ :Gain Coffee ಅಯದ್ದು ,  510.00 
  • ಸಕಲೇಶಪುರ :Sathya Murthy, ಅಯ್ದದ್ದು,  525.00
  • ಸಕಲೇಶಪುರ :Sathya Murthy, ಆಯದ್ದು  500.00 
  • ಸಕಲೇಶಪುರ :S.K Traders, ಆಯದ್ದು,  515.00
  • ಸಕಲೇಶಪುರ :H.K.G & Bros-ಆಯದ್ದು,  510.00 
  • ಸಕಲೇಶಪುರ :Nasir Traders ಆಯದ್ದು,  505.00 
  • ಸಕಲೇಶಪುರ -Sainath Cardamom, ಹೊಸತು.  520.00
  • ಬಾಳುಪೇಟೆ :Geetha Coffee Trading, ಆಯದ್ದು  520.00 
  • ಬಾಳುಪೇಟೆ:Coffee Age-ಆಯದ್ದು,  490.00
  • ಮೂಡಿಗೆರೆ :Sha.M.Khimraj, ಆಯದ್ದು,  520.00 
  • ಮೂಡಿಗೆರೆ :Bhavarlal Jain, ಆಯದ್ದು,  515.00
  • ಮೂಡಿಗೆರೆ :A1 Traders, ಆಯದ್ದು  520.00 
  • ಮೂಡಿಗೆರೆ :Harshika Traders-ಆಯದ್ದು,  520.00
  • ಮೂಡಿಗೆರೆ :A.M Traders-ಆಯದ್ದು,  515.00 
  • ಮೂಡಿಗೆರೆ :Hadhi Coffee, ಆಯದ್ದು,  520.00
  • ಚಿಕ್ಕಮಗಳೂರು:Arihant Coffee, ಆಯದ್ದು,  520.00 
  • ಚಿಕ್ಕಮಗಳೂರು:Nirmal Commodities, ಆಯದ್ದು,  510.00 
  • ಚಿಕ್ಕಮಗಳೂರು:M.R Stancy G.C, ಆಯದ್ದು,  520.00 
  • ಚಿಕ್ಕಮಗಳೂರು:Kiran, ಆಯದ್ದು,  510.00
  • ಮಡಿಕೇರಿ:Kiran Commodities, ಆಯದ್ದು,  510.00 
  • ಕೊಡಗು ಸಿದ್ದಾಪುರ:Trust Spices ಆಯದ್ದು,  515.00
  • ಗೋಣಿಕೊಪ್ಪ:Sri Maruthi, ಆಯದ್ದು,  515.00 
  • ಕಳಸ :PIB Traders, ಆಯದ್ದು  510.00 
  • ಕಾರ್ಕಳ:Kamadhenu, 9845256188,  520.00 
  • ಪುತ್ತೂರು :ಕ್ಯಾಂಪ್ಕೋ, ಆಯದ್ದು,  510.00
  • ಮಂಗಳೂರು:PB Abdul-7204032229, ಆಯದ್ದು,  515.00 
  • ಮಂಗಳೂರು;  ಕ್ಯಾಂಪ್ಕೋ, ಆಯದ್ದು,  510.00 
  • ಶಿರ್ಸಿ :Kadamba Marketing, ಆಯದ್ದು,  500.00
  • ಬೋಳು ಕಾಳು:710.00-750.00 

ಶುಂಠಿ ದರ:

ಒಣ ಶುಂಠಿಗೆ ಉತ್ತರ ಭಾರತದ ಬೇಡಿಕೆ ಪ್ರಾರಂಭವಾಗಿದೆ ಹಾಗಾಗಿ ಕಳೆದ ವಾರ 1400-1500 ಇದ್ದ   ಹಸಿ ಶುಂಠಿ  ಬೆಲೆ ಈ ವಾರ 2000ಕ್ಕೆ ಏರಿದೆ. ಕೆಲವೇ ಸಮಯದಲ್ಲಿ ಇದು 3000 ದಾಟಬಹುದು ಎಂಬ ಹೇಳಿಕೆಗಳಿವೆ.ಒಕ್ಕಣೆ ಮಾಡದವರು ಸ್ವಲ್ಪ ಸಮಯ ಕಾದು ಒಕ್ಕಣೆ ಮಾಡಿ. ಬಿತ್ತನೆ ಶುಂಠಿಗೆ ಬೇಡಿಕೆ ಪ್ರಾರಂಭವಾಗಿದೆ.

ಸುಂಠೀ

ಇಂದು ಧಾರಣೆ:

  • ಶಿವಮೊಗ್ಗ: 1500, 2400, 2000
  • ಸಾಗರ: 1400, 2400, 1800
  • ಶಿರಸಿ: 1300, 2000, 1800
  • ಚನ್ನರಾಯಪಟ್ನ: 1000, 1500, 1300
  • ಬೇಲೂರು:1000, 1180, 1400
  • ಹಾಸನ: 1000, 1750, 1400
  • ಮಡಿಕೇರಿ: 1400-1750
  • ಸೊರಬ:, 2300, 2200

 ಕೊಬ್ಬರಿ ಧಾರಣೆ: 

ಕೊಬ್ಬರಿ ಧಾರಣೆ ಸ್ಥಿರವಾಗಿದೆ. ಕೊಬ್ಬರಿಯ ಕೊರತೆ ಮುಂದೆ ಧಾರಣೆಯನ್ನು ಮೇಲಕ್ಕೆ ಒಯ್ಯುವ ಸಾಧ್ಯತೆ ಇದೆ. ಎಲ್ಲಾ ಕಡೆಯಲ್ಲೂ ತೆಂಗಿನ ಬೆಳೆ ಕಡಿಮೆ ಇದೆ. ಎಣ್ನೆ ಕೊಬ್ಬರಿ ಹಾಗೂ ಖಾದ್ಯ ಕೊಬ್ಬರಿ ದರ ಮುಂದೆ ಹೆಚ್ಚಾಗಲಿದೆ.

  • ಅರಸೀಕೆರೆ :17450
  • ತಿಪಟೂರು:17300
  • ಮಂಗಳೂರು:9000-11500
  • ಪುತ್ತೂರು:9000-11000
  • ಚನ್ನರಾಯಪಟ್ನ: 7500-9000
  • ತುರುವೇಕೆರೆ:17500
ಕೊಬ್ಬರಿ

ಕಾಫೀ ದಾರಣೆ:

ಕಾಫಿ ದಾರಣೆ ತುಸು ಹಿಂದೆ ಬಂದಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಮತ್ತೆ ಏರಿಕೆ ಆಗಬಹುದು.

  • ಅರೇಬಿಕಾ ಪಾಚ್ ಮೆಂಟ್:15,700 -15,750 (50Kg)
  • ಅರೇಬಿಕಾ ಚೆರಿ:7100- 7450(50Kg)
  • ರೋಬಸ್ಟಾ ಪಾರ್ಚ್ ಮೆಂಟ್: 8000 8100 (50Kg)
  • ರೋಬಸ್ಟಾ ಚೆರಿ:3850 -4200(50Kg)
  • ರೋಬಸ್ಟಾ  ಹಣ್ಣು :32 -33 ಕಿಲೋ

ರಬ್ಬರ್ ಧಾರಣೆ: 

ಇಂದು ರಬ್ಬರ್ ಸ್ವಲ್ಪ ಇಳಿಕೆಯಾಗಿದೆ. ಚಳಿಗಾಲದಲ್ಲಿ ಹೆಚ್ಚು ಹಾಲು ಸಿಗುವ ಸಮಯ. ಜೊತೆಗೆ ಈ ವರ್ಷ ಹಿಂದಿನ 4-5 ವರ್ಷಗಳಿಗೆ ಹೋಲಿಸಿದಾಗ ದರ ಸ್ವಲ್ಪ ಹೆಚ್ಚಾದ ಕಾರಣ  ಟ್ಯಾಪ್ಂಗ್ ನಿಲ್ಲಿಸಿದವರೂ ಮತ್ತೆ ಟ್ಯಾಪಿಂಗ್ ಪ್ರಾರಂಭಿಸಿದ್ದಾರೆ. ಇದರಿಂದ ಉತ್ಪಾದನೆ ಹೆಚ್ಚಬಹುದು. ದರ ಇಳಿಕೆ ಸಾಧ್ಯತೆ ಇದೆ.

  • Grade 1X- 176-00 (kg)
  • RSS 3-161.50
  • RSS 4 -161.00
  • RSS 5 -156.00
  • Lot : 152.00
  • Scrap:105.00-113.00

ಬೆಳೆಗಾರರು ಹಳೆ ಅಡಿಕೆ, ಡಬ್ಬಲ್ ಚೋಲ್ ಮಾರಾಟ ಮಾಡಿ. ಹೊಸ ಅಡಿಕೆ ದಾಸ್ತಾನು ಇಡಿ.  ಮೆಣಸು ಎಲ್ಲಾ ಕಡೆ ಕೊಯಿಲು ಮುಗಿಯುವ ತನಕ ಮಾರಾಟ ಮಾಡಬೇಡಿ.  ಹಸಿ ಶುಂಠಿ  ರೋಗದಿಂದಾಗಿ ನಿರೀಕ್ಷೆಗಿಂತ ಇಳುವರಿ ಕಡಿಮೆಯಾಗಿ ಕೊರೆತೆ ಕಂಡು ಬಂದಿದ್ದು, ಕ್ವಿಂಟಾಲಿಗೆ 4000  ತನಕವೂ ಏರಿಕೆ ಆಗಬಹುದು.ತೆಂಗಿನ ಕಾಯಿಯ ಕೊರತೆಯಿಂದ ಕೊಬ್ಬರಿ ದರ ಇನ್ನೂ ಏರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!