ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಅಡಿಕೆ ರಾಸಿ

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು ಗಡಿಯನ್ನು ಮತ್ತಷ್ಟು ಬಿಗಿ ಮಾಡಲಾಗಿದೆ ಎಂಬ ಪತ್ರಿಕಾ ಪ್ರಕಟಣೆ ಚಾಲಿ ದರವನ್ನು ಆಧರಿಸಲೂಬಹುದು.

ಮೊನ್ನೆ ಭಾನುವಾರ ಕೊಪ್ಪ ಮಾರುಕಟ್ಟೆಯಲ್ಲಿ ದಾಖಲೆಯ 20498 ಚೀಲ ಬೆಟ್ಟೆ ಅಡಿಕೆ ಬಂದಿದ್ದರೂ ಸಹ ದರ ಯಾವ ಸ್ಥಿತ್ಯಂತರವೂ ಇಲ್ಲದೆ  ಕನಿಷ್ಟ 47819 ಗರಿಷ್ಟ 50199 ಸರಾಸರಿ 48119 ದರದಲ್ಲಿ ಖರೀದಿಯಾದುದನ್ನು ನೋಡಿದರೆ ಕೆಂಪಡಿಕೆ ಮಾರುಕಟ್ಟೆ ಯಾಕೋ ಬಲವಾಗಿರುವಂತೆ ಕಾಣಿಸುತ್ತಿದೆ. ನಿನ್ನೆ ತೀರ್ಥಹಳ್ಳಿ ಮಾರುಕಟ್ಟೆಯಲ್ಲೂ ರಾಶಿ ಇಡಿ 2001ಚೀಲ ಕನಿಷ್ಟ 33409, ಗರಿಷ್ಟ  46021,ಸರಾಸರಿ 45299 ದರದಲ್ಲಿ ವ್ಯಾಪಾರವಾಗಿದೆ. ಉಳಿದ ಅತೀ ಹೆಚ್ಚು ಅಡಿಕೆ ಬರುವ ಮಾರುಕಟ್ಟೆ ಪ್ರದೇಶಗಳಾದ ಚೆನ್ನಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಅಡಿಕೆಯ ಅವಕ ಮೇಲಿನ ಮಾರುಕಟ್ಟೆಗೆ ಹೋಲಿಸಿದರೆ ತುಂಬಾ ಕಡಿಮೆ.

 • ಕೆಂಪಡಿಕೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಆಗಲೇ ಮಾರುಕಟ್ಟೆಗೆ ಬಂದಾಗಿದೆ ಎಂಬ ಮಾಹಿತಿ ಇದೆ.
 • ಮಳೆಯಿಂದಾಗಿ ಸಮರ್ಪಕವಾಗಿ ಒಣಗಿಸಲು ಕಷ್ಟವಾಯಿತು.
 • ಜೊತೆಗೆ ಸ್ವಲ್ಪ ಬೇಗ ಅಡಿಕೆ ಬೆಳೆದ ಕಾರಣ ಕೊಯಿಲು ಎಲ್ಲಾ ಕಡೆಯಲ್ಲೂ ಒಟ್ಟೊಟ್ಟಿಗೆ ಆದ ಕಾರಣ ಹಿಂದಿನಂತೆ  ಸುಲಿಯುವುದು, ಬೇಯಿಸುವುದು ಕಷ್ಟವಾಗಿತ್ತು.
 • ಈಗ ರೈತರಲ್ಲಿ ಡಿಸೆಂಬರ್, ಜನವರಿ ತಿಂಗಳಲ್ಲಿ ಕೊಯಿಲು ಆಗಿ ಸಂಸ್ಕರಿಸಿದ ಅಡಿಕೆ ಮಾತ್ರ ಇದೆ. 
 • ಜೊತೆಗೆ ಈ ವರ್ಷ ಎಲ್ಲಾ ಕಡೆಯಲ್ಲೂ ಚಾಲಿಯೇ ಹೆಚ್ಚಿನ ಪ್ರಮಾಣದಲ್ಲಿ ಆದ ಕಾರಣ ಕೆಂಪಡಿಕೆ ಕಡಿಮೆಯಾಗಿದೆ.
 • ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ  ಮೂಂತಾದ ಕಡೆ 80-90% ಚಾಲಿ ಆಗಿದೆ.
 • ಕೆಲವು ಮಿತ್ರರು ಹೇಳುವಂತೆ ಕೆ ಆರ್ ಪೇಟೆ, ತುಮಕೂರು ಇಲ್ಲಿಯೂ ಒಂದಷ್ಟು ಜನ ಕಳೆದ 2-3 ವರ್ಷದ ಚಾಲಿ ದರ ತೇಜಿಯಾದುದನ್ನು ಗಮನಿಸಿ ಈ ವರ್ಷ ಚಾಲಿ ಮಾಡಿದ್ದಾರೆ.
 • ಹಾಗಾಗಿ ಒಟ್ಟಾರೆ ಕೆಂಪಡಿಕೆ 25-30% ಕಡಿಮೆ ಇರಬಹುದು ಎಂಬ ಲೆಕ್ಕಾಚಾರ.ಆದ ಕಾರಣ ಕೆಂಪಡಿಕೆಗೆ ಮಾರುಕಟ್ಟೆ ಬಲ ಹೆಚ್ಚಾಗುತ್ತಿದೆ.
 • ಬೇಡಿಕೆ ಚೆನ್ನಾಗಿದೆ. ಕೊಯಿಲಿನ ಸಮಯದಲ್ಲೂ ಈ ದರ ಇದೆ ಎಂದಾದರೆ ಬೆಲೆ ಏರಿಕೆ ಸಾಧ್ಯತೆ ಹೆಚ್ಚು ಎಂಬ ಮುನ್ಸೂಚನೆ.
ಅಡಿಕೆ ಬಿಳಿ 1

ಕರಾವಳಿಯ ಚಾಲಿ ಮಾರುಕಟ್ಟೆಯಲ್ಲಿ ಅಡಿಕೆ ಅವಕ ತುಂಬಾ ಕಡಿಮೆ ಇದೆ. ಒಂದೊಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಹೊಸ ಅಡಿಕೆ 20-30-40 ಚೀಲ ಮಾತ್ರ ಬರುತ್ತಿದೆ. ಕೋಕಾ ಅಡಿಕೆ ಸ್ವಲ್ಪ ಹೆಚ್ಚು ಬರುತ್ತಿದೆ. ಹಳೆಯ , ಡಬ್ಬಲ್ ಚೋಲ್ ಇತ್ಯಾದಿ 2-3-4 ಚೀಲಗಳಷ್ಟು ಮಾತ್ರ ಬರುತ್ತಿದೆ. ಹಾಗಾಗಿ ದರ ಕಡಿಮೆ ಮಾಡಲು ಅವಕಾಶವೇ ಇಲ್ಲದ ಸ್ಥಿತಿ ಉಂಟಾಗಿದೆ.

 • ಅಡಿಕೆ ಮಾರುಕಟ್ಟೆಗೆ ಬಾರದೆ ಇದ್ದರೆ, ಸಾಂಸ್ಥಿಕ ಖರೀದಿದಾರರಿಗೆ ಬಾಡಿಗೆ, ಸಂಬಳ ಇತ್ಯಾದಿ ಹುಟ್ಟುವಳಿ ಆಗುವುದಿಲ್ಲ.
 • ಹಾಗಾಗಿ ದರ ಇಳಿಸಲು ಹಿಂದೇಟು.
 • ಬೆಳೆಗಾರರು ಬುದ್ದಿವಂತರಾಗಿ ಈ ನಡೆಯನ್ನು ಕಳೆದ ಎರಡು ಮೂರು ವರ್ಷಗಳಿಂದ ಪಾಲಿಸಿದ ಕಾರಣ ದರ ಸ್ವಲ್ಪ ಇಳಿಕೆ ಆದರೂ ಮತ್ತೆ ಏರಿಕೆ ಕಂಡಿದೆ.
 • ಇನ್ನೂ ಇದೇ ರೀತಿಯಲ್ಲಿ  ಅಗತ್ಯಕ್ಕೆ ಬೇಕಾದಷ್ಟೇ ಮಾರಾಟ ಮಾಡುತ್ತಾ ಬರುತ್ತಿದ್ದರೆ ದರ ಕುಸಿತ ಆದರೂ ಅದು ತಾತ್ಕಾಲಿಕವಾಗಿ ಮುಂದೆ ಏರಿಕೆ ಆಗುತ್ತದೆ.
 • ಶಿರಸಿ, ಯಲ್ಲಾಪುರದಲ್ಲೂ ಚಾಲಿ ಅಡಿಕೆ ದರ ಇಳಿಮುಖವಾಗಿಯೇ ಇದೆ.
 • ಶಿರಸಿ, ಯಲ್ಲಾಪುರ, ಸಾಗರದಲ್ಲಿ ಹೊಸ ಚಾಲಿ ಮಾರಾಟ ಹೆಚ್ಚಾಗುತ್ತಿದೆ.

ಎಲ್ಲೆಲ್ಲಿ ಯಾವ ದರ ಇತ್ತು?

 • ಕರಾವಳಿಯ ಕಾರ್ಕಳ, ಬಂಟ್ವಾಳ,ಸುಳ್ಯ, ಮಂಗಳೂರು ಸುಳ್ಯ, ಕುಂದಾಪುರ, ಬೆಳ್ತಂಗಡಿ ಮುಂತಾದ ಕಡೆ ಖಾಸಗಿ ವ್ಯಾಪಾರಿಗಳಲ್ಲಿ ಹೊಸ ಅಡಿಕೆಗೆ ಕ್ವಿಂಟಾಲಿಗೆ 42,000-43,000 ದರ ಇತ್ತು.  
 • ಕ್ಯಾಂಪ್ಕೋ ತನ್ನ ದರ ಪಟ್ಟಿಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ.
 • ಹೊಸ ಅಡಿಕೆ ಕ್ವಿಂಟಾಲಿಗೆ 37500-45000 ಹಳೆ ಅಡಿಕೆ ಕ್ವಿಂಟಾಲಿಗೆ 49500-53000 ಡಬ್ಬಲ್ ಚೋಲ್ 50500-53500 ತನಕ ಖರೀದಿ ನಡೆಯುತ್ತಿದೆ.
 • ಖಾಸಗಿಯವರ ದರ 1000 ದಷ್ಟು ಕಡಿಮೆ ಇದೆ. 
 • ಸಾಂಸ್ಥಿಕ ಖರೀದಿದಾರರಿಗೆ ಹಣಕಾಸಿನ ಹೊಂದಾಣಿಕೆಗೆ ಅನುಕೂಲ ಇರುವ ಕಾರಣ  ದಾಸ್ತಾನು ಹೆಚ್ಚಿಸಿಕೊಳ್ಳುವ ತಂತ್ರ  ಇದು ಎಂಬುದಾಗಿ ಹೇಳುತ್ತಾರೆ.
 • ಇದರಿಂದ ಬೆಳೆಗಾರರಿಗೆ ಪ್ರಯೋಜನವೇ ಹೊರತು ನಷ್ಟ ಇಲ್ಲ.
 • ಈಗ ಅಡಿಕೆ ಕೊಡುವವರು ದರ ಹೆಚ್ಚು ಇರುವ ಕ್ಯಾಂಪ್ಕೋಗೇ ಮಾರಾಟ ಮಾಡುತ್ತಿದ್ದಾರೆ.

ಪಟೋರಾ ದರ  ಚೆನ್ನಾಗಿದೆ.ಕೆಂಪಡಿಕೆ ದರ ಇಳಿಕೆಯಾದರೆ ಮಾತ್ರ ಪಟೋರಾ, ಕರಿಕೋಕ, ಉಳ್ಳಿ ಗಡ್ಡೆ ಮುಂತಾದ ತರಾವಳಿಯ ಅಡಿಕೆಗೆ ಬೆಲೆ ಇಳಿಕೆಯಾಗುತ್ತದೆ. ಕೆಂಪಡಿಕೆ ದರ ಇಳಿಕೆಯಾಗದೆ ಸ್ಥಿರವಾಗಿರುವ ಕಾರಣ ಈ ಅಡಿಕೆಗೆ ಬೆಲೆ ಚೆನ್ನಾಗಿಯೇ ಇದೆ.ಹೊಸ ಪಟೋರಾ 30000-32500 ತನಕ ಹಳೆ ಪಟೋಟಾ 32500-44,000 ತನಕವೂ ಇದೆ. ಕರಿಕೋಕಾ ದರ 25000-26000 ತನಕ ಉಳ್ಳೀ ಗಡ್ಡೆ ಇದೇ ದರದಲ್ಲಿ (20000-26000) ತನಕ ಇದೆ.

ಕೆಂಪಡಿಕೆ ಮಾರುಕಟ್ಟೆ ಸ್ಥಿತಿ:

 • ಭಧ್ರಾವತಿಯಲ್ಲಿ ರಾಶಿಗೆ,  ಕನಿಷ್ಟ 41399,ಗರಿಷ್ಟ 45999,ಸರಾಸರಿ 44800
 • ಚೆನ್ನಗಿರಿಯಲ್ಲಿ  ರಾಶಿ, 43529, 46409, 45910
 • ಚಿತ್ರದುರ್ಗದಲ್ಲಿ ಅಪಿ, 45219, 45629, 45449
 • ಚಿತ್ರದುರ್ಗದಲ್ಲಿ ಬೆಟ್ಟೆ, 36459, 36899, 36679
 • ಚಿತ್ರದುರ್ಗದಲ್ಲಿ ಕೆಂಪುಗೋಟು, 30900, 31300, 31100
 • ಚಿತ್ರದುರ್ಗದಲ್ಲಿ ರಾಶಿ, 44739, 45169, 44989
 • ದಾವಣಗೆರೆ ರಾಶಿ, 40759, 46179, 44880
 • ಹೊನ್ನಾಳಿ ರಾಶಿ, 46899, 46899, 46899
 • ಹೊನ್ನಾಳಿ ಇಡಿ, 46300, 46300, 46300
 • ಕೊಪ್ಪ ಬೆಟ್ಟೆ, 47819, 50199, 48119
 • ಕೊಪ್ಪ ಗೊರಬಲು, 22609, 33570, 32129
 • ಕೊಪ್ಪ ರಾಶಿ, 193, 40866, 46199, 45399
 • ಕೊಪ್ಪ ಸರಕು, 53169, 73099, 67719
 • ಕುಂಟಾ ಹಳೆ ಚಾಲಿ 46509, 48309, 47929
 • ಕುಮಟಾ ಹೊಸ ಚಾಲಿ, 36509, 40549, 40149
 • ಸಾಗರ ಹೊಸಚಾಲಿ, 25179, 37829, 36899
 • ಸಾಗರ ರಾಶಿ  33899, 46419, 45699
 • ಸಾಗರ ಸಿಪ್ಪೆ ಗೋಟು 5290, 18619, 17509
 • ಶಿಕಾರಿಪುರ ಕೆಂಪು, 43500, 45580, 44530
 • ಶಿವಮೊಗ್ಗ ಬೆಟ್ಟೆ , 46366, 51799, 48500
 • ಶಿವಮೊಗ್ಗ ರಾಶಿ, 42669, 46099, 45500
 • ಶಿವಮೊಗ್ಗ ಸರಕು, 54069, 75150, 68200
 • ಸಿದ್ದಾಪುರ ಹಳೆ ಚಾಲಿ, 46899, 46899, 46899
 • ಸಿದ್ದಾಪುರ ಹೊಸ ಚಾಲಿ, 35599, 41099, 39599
 • ಸಿದ್ದಾಪುರ ರಾಶಿ, 42349, 46869, 45769
 • ಸಿದ್ದಾಪುರ ಬೆಟ್ಟೆ, 36889, 45699, 40889
 • ಸಿರ್ಸಿ ಬೆಟ್ಟೆ  30509, 44698, 40097
 • ಶಿರಸಿ ಚಾಲಿ 32639, 41303, 39857
 • ಶಿರಸಿ ರಾಸಿ 39610, 47489, 45727
 • ತೀರ್ಥಹಳ್ಳಿ ಬೆಟ್ಟೆ, 45590, 51300, 49000
 • ತೀರ್ಥಹಳ್ಳಿ ಇಡಿ, 33409, 46021, 45299
 • ತೀರ್ಥಹಳ್ಳಿ ರಾಸಿ, 34166, 46721, 45599
 • ಸರಕು, 53019, 76300, 69619
 • ಯಲ್ಲಾಪುರ ಹಳೇ ಚಾಲಿ 44501, 46719, 46719
 • ಯಲ್ಲಾಪುರ ಹೊಸ ಚಾಲಿ, 35260, 40899, 39410
 • ರಾಸಿ, 45819, 52950, 49609
 • ಬೆಟ್ಟೆ 38509, 45179, 42699
 • ಅಪಿ, 54479, 54479, 54479

ಕರಿಮೆಣಸು ಧಾರಣೆ:

ಇಂದು ಕ್ಯಾಂಪ್ಕೋ ಸಂಸ್ಥೆ ಕರಿಮೆಣಸಿನ ದರ ಏರಿಸಿದೆ. ನಿನ್ನೆ ಗರಿಷ್ಟ 500 ಇದ್ದುದು ಇಂದು 510 ಕ್ಕೆ ಏರಿಕೆಯಾಗಿದೆ. ಖಾಸಗಿಯವರೂ ಸಹ ನಿನ್ನೆಗಿಂತ ಇಂದ್ ರೂ.10 ಏರಿಕೆ ಮಾಡಿದ್ದಾರೆ. ಆಮದು ಸ್ವಲ್ಪ ಕಡಿಮೆಯಾಗಿದೆ. ಕಡಿಮೆ ದರ ನಮೂದಿಸಿ ಆಮದಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ  ಕಾರಣಕ್ಕೆ ಸ್ಥಳೀಯ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.  ಮಲೆನಾಡು ಭಾಗದಲ್ಲಿ ಕೊಯಿಲು ಪ್ರಾರಂಭವಾಗಿದ್ದು, ಸಣ್ಣ ಸಣ್ಣ ಬೆಳೆಗಾರರ ಮಾಲು ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ದೊಡ್ಡ ಬೆಳೆಗಾರರ ಸಂಸ್ಕರಣೆ ಮುಗಿದಿಲ್ಲ. ಅದು ಇನ್ನೂ ತಿಂಗಳು ಕಾಲ ಬೇಕಾಗಬಹುದು. ಒಟ್ಟಿನಲ್ಲಿ ಈ ವರ್ಷ ಮೆಣಸಿನ ಬೆಲೆ ಸ್ವಲ್ಪ ಏರಿಕೆ ಆಗುವ ವದಂತಿಗಳು ಹಬ್ಬಿರುವ ಕಾರಣ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ.

ಕರಿಮೆಣಸು

ಎಲ್ಲೆಲ್ಲಿ ಯಾವ ದರ ಇತ್ತು?

 • ಕಲೇಶಪುರ: Royal Traders, ಅಯದ್ದು  520.00 
 • ಸಕಲೇಶಪುರ :Gain Coffee ಅಯದ್ದು ,  520.00 
 • ಸಕಲೇಶಪುರ :Sathya Murthy, ಅಯ್ದದ್ದು,  535.00 
 • ಸಕಲೇಶಪುರ :Sathya Murthy, ಆಯದ್ದು  520.00
 • ಸಕಲೇಶಪುರ :S.K Traders, ಆಯದ್ದು,  525.00 
 • ಸಕಲೇಶಪುರ :H.K.G & Bros-ಆಯದ್ದು,  525.00 
 • ಸಕಲೇಶಪುರ :Nasir Traders ಆಯದ್ದು,  530.00
 • ಸಕಲೇಶಪುರ -Sainath Cardamom, ಹೊಸತು.  535.00 
 • ಬಾಳುಪೇಟೆ :Geetha Coffee Trading, ಆಯದ್ದು  530.00 
 • ಬಾಳುಪೇಟೆ:Coffee Age-ಆಯದ್ದು,  525.00 
 • ಮೂಡಿಗೆರೆ :Sha.M.Khimraj, ಆಯದ್ದು,  530.00 
 • ಮೂಡಿಗೆರೆ :Bhavarlal Jain, ಆಯದ್ದು,  535.00
 • ಮೂಡಿಗೆರೆ :A1 Traders, ಆಯದ್ದು  537.00 
 • ಮೂಡಿಗೆರೆ :Harshika Traders-ಆಯದ್ದು,  535.00 
 • ಮೂಡಿಗೆರೆ :A.M Traders-ಆಯದ್ದು,  530.00 
 • ಮೂಡಿಗೆರೆ :Hadhi Coffee, ಆಯದ್ದು,  535.00 
 • ಚಿಕ್ಕಮಗಳೂರು:Arihant Coffee, ಆಯದ್ದು,  530.00 
 • ಚಿಕ್ಕಮಗಳೂರು:Nirmal Commodities, ಆಯದ್ದು,  525.00
 • ಚಿಕ್ಕಮಗಳೂರು:M.R Stancy G.C, ಆಯದ್ದು,  520.00 
 • ಚಿಕ್ಕಮಗಳೂರು:Kiran, ಆಯದ್ದು,  515.00 
 • ಮಡಿಕೇರಿ:Kiran Commodities, ಆಯದ್ದು,  515.00
 • ಕೊಡಗು ಸಿದ್ದಾಪುರ:Trust Spices ಆಯದ್ದು,  530.00 
 • ಗೋಣಿಕೊಪ್ಪ:Sri Maruthi, ಆಯದ್ದು,  525.00 
 • ಕಳಸ :PIB Traders, ಆಯದ್ದು  525.00 
 • ಕಾರ್ಕಳ:Kamadhenu, 9845256188,  520.00
 • ಪುತ್ತೂರು :ಕ್ಯಾಂಪ್ಕೋ, ಆಯದ್ದು,  510.00 
 • ಮಂಗಳೂರು:PB Abdul-7204032229, ಆಯದ್ದು,  515.00 
 • ಮಂಗಳೂರು;  ಕ್ಯಾಂಪ್ಕೋ, ಆಯದ್ದು,  510.00 
 • ಶಿರ್ಸಿ :Kadamba Marketing, ಆಯದ್ದು,  510.00
 • ಬೋಳು ಕಾಳು:710.00-750.00 

ಶುಂಠಿ ದರ:

ಒಣ ಶುಂಠಿಗೆ ಉತ್ತರ ಭಾರತದ ಬೇಡಿಕೆ ಸ್ವಲ್ಪ ಸ್ವಲ್ಪ ಪ್ರಾರಂಭವಾಗಿದೆ ಎಂಬ ವದಂತಿಗಳಿವೆ. ವ್ಯಾಪಾರಿಗಳು ಶುಂಠಿಗೆ ಬೇಡಿಕೆ ಮಾಡಲಾರಂಭಿಸಿದ್ದಾರೆ. ಹಾಗಾಗಿ ಕಳೆದ ವಾರ 1400-1500 ಇದ್ದ   ಹಸಿ ಶುಂಠಿ  ಬೆಲೆ ಈ ವಾರ ಮೇಲಕ್ಕೇರಲು ಪ್ರಾರಂಭವಾಗಿದೆ. ಇದ್ ಇನ್ನೂ ಸ್ವಲ್ಪ ಮೇಲೆ ಹೋಗಬಹುದು ಎಂಬ ಸೂಚನೆ ಇದೆ. ಕೆಲವರು ಉತ್ತಮ ಬೆಲೆ ನಿರೀಕ್ಷೆಯಲ್ಲಿ ಇನ್ನೂ ಒಕ್ಕಣೆ ಮಾಡಿಲ್ಲ. ಇವರಿಗೆಲ್ಲಾ ಇನ್ನು ಉತ್ತಮ ಬೆಲೆ ಸಿಗಬಹುದು. 

ಶುಂಠಿ ಹಸಿ

ಇಂದು ಧಾರಣೆ: ಕ್ವಿಂಟಾಲು

 • ಶಿವಮೊಗ್ಗ: 1500, 2000, 1700
 • ಸಾಗರ: 1400, 1900, 1800
 • ಶಿರಸಿ: 1300, 1850, 1500
 • ಚನ್ನರಾಯಪಟ್ನ: 1000, 1500, 1300
 • ಬೇಲೂರು:1000, 1600, 1450
 • ಹಾಸನ: 1000, 1600, 1300
 • ಮಡಿಕೇರಿ: 1400
 • ಸೊರಬ:, 2200, 2100

 ಕೊಬ್ಬರಿ ಧಾರಣೆ:  ಕ್ವಿಂಟಾಲು

ಉತ್ತರ ಭಾರತದಲ್ಲಿ ಬಾಲ್ ಕೊಬ್ಬರಿಗೆ ಬೇಡಿಕೆ ಚೆನ್ನಾಗಿದೆ. ಕೊಬ್ಬರಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯೂ ಕಡಿಮೆ ಇದೆ. ಹಾಗಾಗಿ ಎಪ್ರೀಲ್. ಮೇ ತಿಂಗಳಿನಲ್ಲಿ ಕೊಬ್ಬರಿ ದರ ಏರಿಕೆಯಾಗಬಹುದು. ಎಣ್ಣೆ ಕೊಬ್ಬರಿ ಸ್ಥಳೀಯವಾಗಿ ಉತ್ಪಾದನೆ ಕಡಿಮೆ ಇದ್ದು, ಕರಾವಳಿಯಿಂದ ತಿಪಟೂರು ಅರಸೀಕೆರೆಗೆ ಹಸಿ ಕಾಯಿ ರವಾನೆಯಾಗಿ ಅಲ್ಲಿಂದ ಎಣ್ಣೆ ಕೊಬ್ಬರಿ ಬರುವಂತಾಗಿದೆ. ಕಾರಣ ಇಲ್ಲಿ ಕೆಲಸಗಾರರ ಲಭ್ಯತೆ ಕಡಿಮೆಯಾದುದೇ ಆಗಿದೆ.

ಕೊಬ್ಬರಿ
 • ಅರಸೀಕೆರೆ :17650
 • ತಿಪಟೂರು:17500
 • ಮಂಗಳೂರು:9000-10000
 • ಪುತ್ತೂರು:9000-10500
 • ಚನ್ನರಾಯಪಟ್ನ: 7500-9500
 • ತುರುವೇಕೆರೆ:17600

ಕಾಫೀ ದಾರಣೆ:

ಕಾಫಿ ದಾರಣೆ ತುಸು ಹಿಂದೆ ಬಂದಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಮತ್ತೆ ಏರಿಕೆ ಆಗಬಹುದು.

ಕಾಫೀ
 • ಅರೇಬಿಕಾ ಪಾಚ್ ಮೆಂಟ್:15,700 -16,000 (50Kg)
 • ಅರೇಬಿಕಾ ಚೆರಿ:7100- 7500(50Kg)
 • ರೋಬಸ್ಟಾ ಪಾರ್ಚ್ ಮೆಂಟ್: 8000 8100 (50Kg)
 • ರೋಬಸ್ಟಾ ಚೆರಿ:3850 -4075(50Kg)
 • ರೋಬಸ್ಟಾ  ಹಣ್ಣು :32 -33 ಕಿಲೋ

ರಬ್ಬರ್ ಧಾರಣೆ:  ಕಿಲೊ.

ಇಂದು ರಬ್ಬರ್ ಸ್ವಲ್ಪ ಏರಿಕೆಯಾಗಿದೆ. ಚಳಿಗಾಲದಲ್ಲಿ ಹೆಚ್ಚು ಹಾಲು ಸಿಗುವ ಸಮಯ. ಜೊತೆಗೆ ಈ ವರ್ಷ ಹಿಮ್ದಿನ 4-5 ವರ್ಷಗಳಿಗೆ ಹೋಲಿಸಿದಾಗ ದರ ಸ್ವಲ್ಪ ಹೆಚ್ಚಾದ ಕಾರಣ  ಟ್ಯಾಪ್ಂಗ್ ನಿಲ್ಲಿಸಿದವರೂ ಮತ್ತೆ ಟ್ಯಾಪಿಂಗ್ ಪ್ರಾರಂಭಿಸಿದ್ದಾರೆ. ಇದರಿಂದ ಉತ್ಪಾದನೆ ಹೆಚ್ಚಬಹುದು. ದರ ಇಳಿಕೆ ಸಾಧ್ಯತೆ ಕಡಿಮೆ.

 • Grade 1X- 177-00 (kg)
 • RSS 3-162.50
 • RSS 4 -162.00
 • RSS 5 -157.00
 • Lot : 153.00
 • Scrap:106.00-114.00

ಬೆಳೆಗಾರರು ಹಳೆ ಅಡಿಕೆ, ಡಬ್ಬಲ್ ಚೋಲ್ ಮಾರಾಟ ಮಾಡಿ. ಹೊಸ ಅಡಿಕೆ ದಾಸ್ತಾನು ಇಡಿ.  ಮೆಣಸು ಎಲ್ಲಾ ಕಡೆ ಕೊಯಿಲು ಮುಗಿಯುವ ತನಕ ಮಾರಾಟ ಮಾಡಬೇಡಿ.  ಹಸಿ ಶುಂಠಿಗೆ ಕ್ವಿಂಟಾಲಿಗೆ 2500  ತನಕವೂ ಏರಿಕೆ ಆಗಬಹುದು.ತೆಂಗಿನ ಕಾಯಿಯ ಕೊರತೆಯಿಂದ ಕೊಬ್ಬರಿ ದರ ಇನ್ನೂ ಏರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!