ಶುಂಠಿ- ಎಲೆಗೆಳು ಹಳದಿಯಾಗದಂತೆ ತಡೆಯುವ ವಿಧಾನ.
ಬ್ಯಾಕ್ಟೀರಿಯಾ ಸೊರಗು ಬರುವುದು ಮುಖ್ಯವಾಗಿ ಗಡ್ಡೆಗಳಲ್ಲಿ ಸೋಂಕು ಇರುವ ಕಾರಣದಿಂದ. ಗಡ್ಡೆಗಳನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕತೆ ಬೇಕು. ಮಣ್ಣು ಒಮ್ಮೆ ಬೆಳೆ ಬೆಳೆದ ಸ್ಥಳ ಆಗಿರಬಾರದು. ಬಿತ್ತನೆ ಗಡ್ಡೆಯನ್ನು ಉಪಚರಿಸಿಯೇ ನಾಟಿ ಮಾಡಬೇಕು. ಬ್ಯಾಕ್ಟೀರಿಯಾ ಸೊರಗು ರೋಗವು ಗಿಡವನ್ನು ತಕ್ಷಣಕ್ಕೆ ಸಾಯುವಂತೆ ಮಾಡುವುದಿಲ್ಲ. ಎಲೆ ಹಳದಿಯಾಗುತ್ತಾ ಕೊನೆಗೆ ಸಾಯುತ್ತದೆ. ಇದು ಬೆಳಯನ್ನು ಏಳಿಗೆಯಾಗಲು ಬಿಡದ ರೋಗ. ಇದು ಸುಡೋಮೋನಾಸ್ ಸೋಲನೇಸಿಯಾರಂ ಎಂಬ ಬ್ಯಾಕ್ಟೀರಿಯಾ ( ದುಂಡಾಣು) ದಿಂದ ಬರುತ್ತದೆ. ಇದು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ…