ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ

ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ.

ಅಡಿಕೆ ಗಿಡ ಮಾಡುವಾಗ ಬೀಜದ ಗೋಟು ಅಥವಾ ಹಣ್ಣು ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬರುವಂತೆ ಮಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ನಾವು 100 ಬೀಜಗಳನ್ನು ಮೊಳಕೆ ಬರಿಸಲು ಇಟ್ಟರೆ ಅದರಲ್ಲಿ  60-80 ರಷ್ಟು ಮಾತ್ರ ಮೊಳಕೆ ಪಡೆಯುತ್ತೇವೆ. ಇದು ನಾವು ಮೊಳಕೆಗೆ ಇಡುವ ಕ್ರಮ ಸರಿಯಿಲ್ಲದೆ ಆಗುವ ಸಮಸ್ಯೆ. ಸರಿಯಾದ ಮೊಳಕೆಗೆ ಇಡುವ ವಿಧಾನ ಹೀಗಿದೆ. ಅಡಿಕೆ ತೋಟ ಇದ್ದವರು ಹಣ್ಣಾಗಿ ಬಿದ್ದು, ಹೆಕ್ಕಲು ಸಿಕ್ಕದೆ ಅವಿತುಕೊಂಡು ಬಾಕಿಯಾದ ಅಡಿಕೆ ಹೇಗೆ ತನ್ನಷ್ಟೆಕ್ಕೆ…

Read more
areca nut palm with full yield

ಅಡಿಕೆ – ಉತ್ತಮ ಫಲ ಕೊಡುವ ಮರದ ಲಕ್ಷಣ ಹೇಗಿರಬೇಕು.

ಇತ್ತೀಚೆಗಿನ ಅಡಿಕೆ ತೋಟಗಳಲ್ಲಿ ಶೇ.50 ಮಾತ್ರ ಉತ್ತಮ ಫಲನೀಡಿ, ಉಳಿದವು ಅನುತ್ಪಾದಕ ಮರಗಳಂತೆ ಇರುವ ಕಾರಣ ತೋಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಉತ್ಪಾದನೆ ಆ ಮಟ್ಟಕ್ಕೆ ಏರುತ್ತಿಲ್ಲ. ಬೆಳೆಗಾರರು ಹೆಚ್ಚು ಹೆಚ್ಚು ಸಸಿ ನೆಡುವ ಬದಲು ಇರುವ ತೋಟದಲ್ಲೇ ಬಹುತೇಕ ಉತ್ಪಾದಕ ಮರಗಳಿರುವಂತೆ ತೋಟವನ್ನು ಪುನಃಶ್ಚೇತನ ಮಾಡುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ಸ್ವಲ್ಪ ಬಿಡುವು ಮಾಡಿಕೊಂಡು ತೋಟ ಸುತ್ತುತ್ತಾ ಬನ್ನಿ. ಹಿಂದೆ ಸುತ್ತುದಾಗ ಗಮನಿಸಿದ ಮರ, ಕಳೆದ ವರ್ಷ ಸುತ್ತುವಾಗ ಗಮನಿಸಿದ ಮರ , ಅದಕ್ಕಿಂತ ಹಿಂದಿನ…

Read more
ಹೊಸತಾಗಿ ತೋಟ ಮಾಡುತ್ತೀರಾ

ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.

ಹೊಸತಾಗಿ ಅಡಿಕೆ ಸಸಿಗಳನ್ನು  ನೆಡುವಾಗ ಸಾಂಪ್ರದಾಯಿಕ  ಅಂತರದಲ್ಲಿ  ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ  ಬೇರೆ  ಬೇರೆ ಅಂತರದಲ್ಲಿ ನಾಟಿ ಮಾಡಿದರೆ  ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ. ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು. ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ. ಇದಷ್ಟೇ ಅಲ್ಲ. ಒಂದು…

Read more

ಅಡಿಕೆ ಮರಗಳು ಹೀಗೆ ಯಾಕೆ ಆಗುತ್ತವೆ?

ಸಹಜ ಸ್ಥಿತಿಯಲ್ಲಿ ಅಡಿಕೆ ಮರದ ಗಂಟುಗಳು  ಒಂದೇ ನೇರಕ್ಕೆ  ಸುತ್ತು ಬಂದಿರಬೇಕು.ಆದರೆ  ಕೆಲವು ತೊಟಗಳಲ್ಲಿ ಕೆಲವು ಮರಗಳಲ್ಲಿ ಅದರ ಗಂಟು ವಿಚಿತ್ರವಾಗಿ ಗರಗಸದ ತರಹ ಬೆಳೆಯುತ್ತವೆ. ಇದ್ದು ರೋಗವೋ ಎಂಬ ಸಂದೇಹ ರೈತರಲ್ಲಿದೆ. ಇದು ರೋಗವಲ್ಲ.  ಪೊಷಕಾಂಶದ ಅಸಮತೋಲನ. ಗರಗಸ ಗಂಟು ಹೇಗೆ ಆಗುತ್ತದೆ? ಅದು 2005 ನೇ ಇಸವಿ. ಬಂಟ್ವಾಳ ತಾಲೂಕು, ಕಾಅವಳ ಮುಡೂರು ಗ್ರಾಮದ ಕೆದ್ದಳಿಕೆ ಗಣೇಶ್ ಭಟ್ ಇವರ ತೋಟಕ್ಕೆ  ಹೋಗಿದ್ದೆ. ಆಗ ಅವರು ತಮ್ಮ ಅಡಿಕೆ ಮರಗಳಿಗೆ ಕೊಡುತ್ತಿದ್ದ ಗೊಬ್ಬರ ಹರಳಿನ ಹಿಂಡಿ. ಹನಿ…

Read more
error: Content is protected !!