ಅಡಿಕೆ – ಉತ್ತಮ ಫಲ ಕೊಡುವ ಮರದ ಲಕ್ಷಣ ಹೇಗಿರಬೇಕು.

areca nut palm with full yield

ಇತ್ತೀಚೆಗಿನ ಅಡಿಕೆ ತೋಟಗಳಲ್ಲಿ ಶೇ.50 ಮಾತ್ರ ಉತ್ತಮ ಫಲನೀಡಿ, ಉಳಿದವು ಅನುತ್ಪಾದಕ ಮರಗಳಂತೆ ಇರುವ ಕಾರಣ ತೋಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಉತ್ಪಾದನೆ ಆ ಮಟ್ಟಕ್ಕೆ ಏರುತ್ತಿಲ್ಲ. ಬೆಳೆಗಾರರು ಹೆಚ್ಚು ಹೆಚ್ಚು ಸಸಿ ನೆಡುವ ಬದಲು ಇರುವ ತೋಟದಲ್ಲೇ ಬಹುತೇಕ ಉತ್ಪಾದಕ ಮರಗಳಿರುವಂತೆ ತೋಟವನ್ನು ಪುನಃಶ್ಚೇತನ ಮಾಡುವುದು ಎಲ್ಲಾ ದೃಷ್ಟಿಯಿಂದ ಉತ್ತಮ.

healthy and good bearing tree- ಉತ್ತಮ ಫಲಕೊಡುವ ಲಕ್ಷಣದ ಮರ

  • ಸ್ವಲ್ಪ ಬಿಡುವು ಮಾಡಿಕೊಂಡು ತೋಟ ಸುತ್ತುತ್ತಾ ಬನ್ನಿ.
  • ಹಿಂದೆ ಸುತ್ತುದಾಗ ಗಮನಿಸಿದ ಮರ, ಕಳೆದ ವರ್ಷ ಸುತ್ತುವಾಗ ಗಮನಿಸಿದ ಮರ , ಅದಕ್ಕಿಂತ ಹಿಂದಿನ ವರ್ಷ  ಗಮನಿಸಿದ ಮರ,
  • ಹೀಗೆ ಎಲ್ಲವನ್ನೂ  ಗಮನಿಸುವಾಗ ನಿಮ್ಮ ತೋಟದಲ್ಲಿ ಕೆಲವು ಮರಗಳು ಪ್ರತೀ ವರ್ಷ ಅತೀ ಕಡಿಮೆ  ಇಳುವರಿ,
  • ಅಥವಾ ಇಳುವರಿಯನ್ನೇ ಕೊಡುವುದಿಲ್ಲ ಎಂಬುದು ಗೊತ್ತಾಗುತ್ತದೆ.
  • ಅದರ ಎಲ್ಲಾ ಶಾರೀರಿಕ ಲಕ್ಷಣಗಳನ್ನು ನೋಡಿ
  • ಅವು ಮುಂದೆ ಸರಿಯಾಗುವ ಮರವೇ ಆಥವಾ ಅದರ ವಂಶ ಗುಣವೇ ಹಾಗೆಯೇ ಎಂದು ನೀವೇ  ತೀರ್ಮಾನಿಸಬಹುದು.

ಇವು ಯಾವ ಕಾರಣಕ್ಕೂ ಫಲ ಕೊಡಲಾರವು:

this type of leaf structure are not yielders- ಇಂತಹ ಎಲೆಗಳ ಲಕ್ಷಣಗಳುಳ್ಳ ಮರಗಳು ಲಾಭದಾಯಕ ಇಳುವರಿ ನೀಡುವುದಿಲ್ಲ.
ಇಂತಹ ಎಲೆಗಳ ಲಕ್ಷಣಗಳುಳ್ಳ ಮರಗಳು ಲಾಭದಾಯಕ ಇಳುವರಿ ನೀಡುವುದಿಲ್ಲ.
  •  ಮನುಷ್ಯರೆಲ್ಲಾ ಒಂದೇ, ಎಲ್ಲರೂ ನಡೆದಾಡುತ್ತಾರೆ, ಎಲ್ಲರಲ್ಲೂ ರಕ್ತ ಹರಿಯುತ್ತದೆ,
  • ಆದರೆ ಗುಣಗಳು ಮಾತ್ರ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸ ಇರುತ್ತದೆ.
  • ಇದಕ್ಕೆ  ಕಾರಣ ಅವನ ಜೀನ್. ಅದೇ ರೀತಿಯಲ್ಲಿ ಪ್ರತೀಯೊಂದು ಸಸ್ಯಗಳು ಭಿನ್ನ ಭಿನ್ನ ಗುಣಗಳನ್ನು  ಹೊಂದಿವೆ.
  • ನಿಮ್ಮ ತೋಟದಲ್ಲಿರುವ ಮರಗಳನ್ನು ಸರಿಯಾಗಿ ಗಮನಿಸಿ ನೋಡಿದ್ದರೆ ನಿಮಗೇ ತಿಳಿಯುತ್ತದೆ.
  • ಈ ಮರವನ್ನು ಸಾಕುವುದು ವ್ಯರ್ಥ ಎಂದು. ತೋಟ ಎಂದ ಮಾತ್ರಕ್ಕೆ ಅಲ್ಲಿ ಎಲ್ಲಾ ಮರಗಳಿಗೂ ಏಕ ಪ್ರಕಾರ ಗೊಬ್ಬರ ಕೊಡುವ ಕಾರಣ ಒಂದು ಮರ ಉತ್ತಮ ಇಳುವರಿ, ಪಕ್ಕದಲ್ಲೇ ಮತ್ತೊಂದು ಏನೂ ಇಳುವರಿ ಕೊಡದೆ,
  • ಅದರ ಲಕ್ಷಣವೇ ಭಿನ್ನವಾಗಿ ಕಂಡರೆ ಅಂತಹ ಮರ ಯಾವಾಗಲೂ ಫಲ ಕೊಡಲಾರದು.
  • ಅದನ್ನು ಗಮನಿಸಿ ತಕ್ಷಣ ತೆಗೆದು ಬೇರೆ ಸಸಿ ನೆಡಿ.

ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ. (English sub title also)

.

ಅಡಿಕೆ ಮರದ ಗರಿ ಹೇಗಿರಬೇಕು:

This type leaf character is good yielders- ಉತ್ತಮ ಇಳುವರಿ ಕೊಡಬಲ್ಲ ಮರಗಳ ಗರಿ (ಸೋಗೆ) ಈ ರೀತಿ ಕಡ್ಡಿ ಬಿಟ್ಟು ಇರುತ್ತದೆ.
ಉತ್ತಮ ಇಳುವರಿ ಕೊಡಬಲ್ಲ ಮರಗಳ ಗರಿ (ಸೋಗೆ) ಈ ರೀತಿ ಕಡ್ಡಿ ಬಿಟ್ಟು ಇರುತ್ತದೆ.
  • ಗರಿಗಳಲ್ಲಿ ಕಡ್ಡಿ ಬಿಡಿಸಿಕೊಂಡು ಇರಬೇಕು. ಗರಿಗಳು ಬಿಲ್ಲಿನಂತೆ ಬಾಗಿಕೊಂಡು ಶಿರಭಾಗ ಚತ್ರಿಯಂತೆ ಇರಬೇಕು.
  •  ಒಂದು ಅಡಿಕೆ ಮರದಲ್ಲಿ 10 ರಷ್ಟು ಗರಿಗಳಾದರೂ  ಇರಬೇಕು.
  • ಗರಿಯ ಅಡಿ ಭಾಗದಲ್ಲಿ ಯಾವುದೇ ಕೀಟಗಳು ಅಂಟಿ ( ಹಿಟ್ಟು ತಿಗಣೆ, ಕೆಂಪು ಮೈಟ್ ಇತ್ಯಾದಿ) ಕೊಂಡು ಇರಬಾರದು.
  • ಗರಿಯ  ಬಣ್ಣ ಹಚ್ಚ ಹಸುರಾಗಿರಬೇಕು.
  • ಗರಿಗಳು ಕಾಂಡಕ್ಕೆ ಜೋತು ಬಿದ್ದಿರಬಾರದು.

ಗರಿ ಹೀಗಿದ್ದರೆ ಅದು ಅನುತ್ಪಾದಕ :

This type of leaf structure are not yielders- ಇಂತಹ ಗರಿ (ಅಂಟಿಕೊಂಡಿರುವ)  ಗರಿ ಇರುವ ಮರ ತೀರಾ ಕಡಿಮೆ ಇಳುವರಿ ಕೊಡುತ್ತದೆ.
ಇಂತಹ ಗರಿ (ಅಂಟಿಕೊಂಡಿರುವ) ಗರಿ ಇರುವ ಮರ ತೀರಾ ಕಡಿಮೆ ಇಳುವರಿ ಕೊಡುತ್ತದೆ.
  • ಮರದ ಶಿರಭಾಗ  ಮಡಚಿದ ಛತ್ರಿಯನ್ನು ಮೇಲ್ಮುಖವಾಗಿ ಹಿಡಿದರೆ ಹೇಗೆ ಕಾಣುತ್ತದೆಯೋ ಅಂತಹ ಅಡಿಕೆ ಮರಗಳು/ ಸಸಿಗಳು ಯಾವಾಗಲೂ ಹೂ ಗೊಂಚಲನ್ನು ಬಿಡಬಹುದು,
  • ಅದರೆ ಕಾಯಿ ಕಚ್ಚಲಾರವು. ಅಂತಹ ಮರಗಳನ್ನು ಕಡಿದು ಬೇರೆ ನೆಡುವುದು ಉತ್ತಮ.
  • ಶಿರ ಭಾಗದ ಎಲೆಗಳು ಕಾಂಡಕ್ಕೆ ಜೋತು ಬೀಳುವಂತಿರಬಾರದು..
  • ಕೆಲವು ಅಡಿಕೆ ಮರಗಳು ಮೇಲಿನ ಆರೋಗ್ಯ ಲಕ್ಷಣ ಹೊಂದಿದ್ದರೂ ಪ್ರತೀ ವರ್ಷವೂ ಅದರ ಹೂ ಗೊಂಚಲು ಒಣಗಿ ಕಾಯಿ ಕಚ್ಚದೇ ಇದ್ದರೆ,
  • ಇಂತಹ ಮರಗಳನ್ನು ಒಂದು ಎರಡು ವರ್ಷ ಸಮತೋಲನದ ಪೋಷಕ ಮತ್ತು ಮರಸುಟ್ಟ ಬೂದಿಯನ್ನು ಹಾಕಿ ಕಾದು ನೋಡಿ.
  • ಸರಿಯಾದರೆ ಮಾತ್ರ ಅಂತಹ ಮರಗಳನ್ನು ಉಳಿಸಿರಿ.
  • ಇಲ್ಲವಾದರೆ ಅದನ್ನು ಕಡಿದು ತೆಗೆದು ಬೇರೆ ನೆಡಿ.

nature of good yielding young plants - ಎಳೆ ಗಿಡಗಳಲ್ಲಿ ಇಂತಹ  ಗರಿ ಲಕ್ಷಣ ಇದ್ದರೆ ಅದು ಉತ್ತಮ ಗಿಡ.
ಕೆಲವು ಅಡಿಕೆ ಮರಗಳು ಹೂಗೊಂಚಲು ದೊಡ್ಡದಾಗಿ ಬಿಡುತ್ತದೆ. ಅಧಿಕ ಸಂಖ್ಯೆಯಲ್ಲಿ ಗಂಡು ಹೆಣ್ಣು ಹೂವುಗಳು ಇರುತ್ತವೆ. ಆದರೆ ಹೂ ಗೊಂಚಲಿನಲ್ಲಿ ಬೆರಳೆಣಿಕೆಯ ಕಾಯಿಯೇ ಕಚ್ಚುತ್ತದೆ. ಎಲ್ಲಾ ಹೂ ಗೊಂಚಲುಗಳೂ  ಹಾಗೆಯೇ ಆಗುತ್ತದೆ ಎಂದಾದರೆ ಅಂತಹ ಮರಗಳು ಅನುತ್ಪಾದಕ ಮರಗಳೇ ಆಗಿರುತ್ತವೆ. ಇದನ್ನು ಉಳಿಸುವುದು ರೈತರ ಐಚ್ಚಿಕ.

  • 8 ಎಲೆಗಿಂತ ಕಡಿಮೆ ಎಲೆ ಇರುವ ಮರ,
  • ಎಲೆಗಳು ಎಲ್ಲಾ ಪೋಷಕಗಳನ್ನು ಒದಗಿಸಿದಾಗ್ಯೂ ಹೂ ಗೊಂಚಲು ಬಿಡದೆ, ಅಥವಾ ಮುರುಟು, ಸಣ್ಣ ಹೂ ಗೊಂಚಲು ಬಿಟ್ಟು,
  • ಎಲೆ ಯಾವಾಗಲೂ ತಿಳಿ ಹಸುರು ಬಣ್ಣದಲ್ಲಿದ್ದರೆ ಅಂತಹ ಮರಗಳನ್ನು ಉಳಿಸುವುದು ಲಾಭದಾಯಕವಲ್ಲ,

ಅಡಿಕೆ ಮರದ ಕಾಂಡ ಹೇಗಿರಬೇಕು:

  • ಮರದ ಕಾಂಡ ತೀರಾ ಸಪುರ ಆಗಿರಬಾರದು, ತೀರಾ ದಪ್ಪವೂ ಆಗಿರಬಾರದು.
  • ಉತ್ತಮ ಇಳುವರಿ ಕೊಡಬಲ್ಲ ಮರದ ಕಾಂಡದ ದಪ್ಪ 40-50 ಸೆಂ. ಮೀ. ಬುಡ ಭಾಗದಲ್ಲೂ , 8-10 ಅಡಿ  ನಂತರ 35-45 ಸೆಂ. ಮೀ. ಸುತ್ತಳತೆಯಲ್ಲಿ ಇರಬೇಕು.
  • ಅಡಿಕೆ ಹಾಳೆ ತೀರಾ ದಪ್ಪ ಇರಬಾರದು. ಸುಮಾರಾಗಿ ಉದ್ದ 75-85 ಸೆಂ. ಮೀ ಮತ್ತು 35-45 ಸೆಂ ಮೀ. ಅಗಲ ಇರಬೇಕು.
  • ಹೂ ಗೊಂಚಲಿನ ರಕ್ಷಾ ಕವಚ ತೆಳುವಾಗಿ ಇರಬೇಕು.
  • ತುಂಬಾ ದಪ್ಪ ಇರಬಾರದು. ಹಸುರು ಬಣ್ಣ ಇರಬಾರದು.
splitting of leaf lets are good yield indicators- ಬೇಗ ಕಡ್ಡಿ ಬಿಡಿಸಿದ ಗರಿಗಳು ಉತ್ತಮ ಇಳುವರಿ ಕೊಡುತ್ತವೆ
ಬೇಗ ಕಡ್ಡಿ ಬಿಡಿಸಿದ ಗರಿಗಳು ಉತ್ತಮ ಇಳುವರಿ ಕೊಡುತ್ತವೆ
  • ಕೆನೆಬಣ್ಣದಲ್ಲಿದ್ದು, ತೆಳುವಾಗಿ ಇರಬೇಕು. ಹಾಳೆ ಬಿದ್ದ ಒಂದು ಎರಡು ದಿನದ ಒಳಗೆ ರಕ್ಷಾಕವಚ ಒಡೆದುಕೊಳ್ಳುವ ಗುಣದ ಮರ ಆಗಿರಬೇಕು.
  • ಇಂತಹ ಮರಗಳನ್ನು  ಕೆಲವು ಉಪಚಾರ ( ಸಾರಜನಕ ಕಡಿಮೆ ಮಾಡಿ, ಸೂಕ್ಷ್ಮ ಪೊಷಕಾಂಶ ಒದಗಿಸಿ) ಹೆಚ್ಚಿನ ಪ್ರಮಾಣದಲ್ಲಿ ಸರಿಪಡಿಸಬಹುದು.
  • ಉಪಚಾರ ಮಾಡಿ 2-3  ವರ್ಷದ ಒಳಗೆ ಸರಿಯಾಗದಿದ್ದರೆ ಅದನ್ನು ಕಡಿದು ತೆಗೆದು ಬೇರೆ ನೆಡುವುದು ಉತ್ತಮ.

ಮರದ ಕಾಂಡದಲ್ಲಿ ಅಲ್ಲಲ್ಲಿ ದಪ್ಪ ವ್ಯತ್ಯಾಸಗಳಾಗುವುದುಂಟು. ಅದು ಕೆಲವೊಮ್ಮೆ ಪೋಷಕಾಂಶದ ಕೊರತೆಯಲ್ಲಿ ಆಗುತ್ತದೆ. ಕೆಲವೊಮ್ಮೆ ಬೇರು ಹುಳ ಜಂತು ಹುಳ ಮುಂತಾದ ಸಮಸ್ಯೆಗಳಿಂದ ಉಂಟಾಗುತ್ತದೆ. ಎಲ್ಲಾ ಮರಗಳಿಗೂ ಏಕ ಪ್ರಕಾರ ಗೊಬ್ಬರಗಳನ್ನು  ಕೊಡುತ್ತಿದ್ದು, ಅಲ್ಲಿ ಹೀಗೆ ಕಾಂಡ ಸಪುರವಾಗುತ್ತಿದರೆ ಅಲ್ಲಿ ಸಮಸ್ಯೆ ಇದೆ ಎಂದರ್ಥ. ಅಲ್ಲಿ ತಕ್ಷಣ ಉಪಚಾರ ಕೈಗೊಳ್ಳಬೇಕು. 
ಅನವಶ್ಯಕವಾಗಿ ಅನುತ್ಪಾದಕ ಮರವನ್ನು ಸಾಕಬೇಡಿ. ಒಂದು ಮರಕ್ಕೆ ಚಾಲಿಯಾದರೆ ಸರಾಸರಿ   ಕಿಲೋ ಕೆಂಪು ಆದರೆ  ಕಿಲೋ ಇಳುವರಿ ಕೊಡುವ ಮರ ಆದರೆ ಮಾತ್ರ ಅದನ್ನು ಸಾಕುವುದು ಲಾಭದಾಯಕ. ಕಡಿಮೆ ಮರಗಳಲ್ಲಿ ಅಧಿಕ ಇಳುವರಿ ಪಡೆಯುವುದು ರೈತರ ಬುದ್ದಿವಂತಿಕೆಯಾಗಬೇಕು.
end of the article:————————————————————–
search words: agriculture # arecanut#  Areca cultivation# areca plant# Radhakrishna holla#  krushi# arecanut plant health# areca garden management# agriculture information#

Leave a Reply

Your email address will not be published. Required fields are marked *

error: Content is protected !!