
ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.
ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ ನರ್ಸರಿಗಳು ಮಾಡಿದ ಸಸಿ ಅಷ್ಟಿಷ್ಟಲ್ಲ. ಆದರೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ. ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…