
ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.
ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ ಮತ್ತು ಬೆಳೆವಣಿಗೆಗೆ ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು ಒಡಿಸದಿದ್ದರೆ…