ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.

Mulching to whole ground

ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ  ಮತ್ತು ಬೆಳೆವಣಿಗೆಗೆ  ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು  ಒಡಿಸದಿದ್ದರೆ ಅಡಿಕೆ ಬೆಳೆಯೇ ವ್ಯರ್ಥ. ಈ ಸಮಯದಲ್ಲಿ ಈ ಬೇರು ದುಂಬಿಯನ್ನು ಓಡಿಸುವ ಕ್ರಮ ಯಾವುದು?

root eating beetle

  •  ನಮ್ಮ ಪರಿಸರದಲ್ಲಿ ನೂರಾರು ನಮೂನೆಯ ಬೇರು ಹುಳಗಳಿವೆ.
  • ಅವೆಲ್ಲಾ ಬೇರೆ ಬೇರೆ ಮರಗಳ ಬೇರನ್ನು ತಿನ್ನುತ್ತವೆ.
  • ಅಡಿಕೆ ಮರದ ಬೇರು ತಿನ್ನುವ ಹುಳ ಬೇರೆ.
  • ಅದೇ ರೀತಿಯಲ್ಲಿ ಅದು ಪ್ರಾದೇಶಿಕವಾಗಿಯೂ ಪ್ರಭೇಧ ಬೇರೆ ಬೇರೆ ಬೇರೆ ಇರುತ್ತದೆ.
  • ಸಪ್ಟೆಂಬರ್ ನಿಂದ ಜನವರಿ ತನಕ ಹುಳ ಹಂತದಲ್ಲಿರುತ್ತವೆ. ನಂತರ ಪ್ಯುಫೆ ಆಗಿ ದುಂಬಿಯಾಗುತ್ತದೆ.
  • ಒಂದು ಮಳೆ ಬಂದರೆ ಸಾಕು  ಅವು ಜೋಡಿಯಾಗಲು ಹೊರ ಹಾರುತ್ತವೆ.
  • ಈ ಸಮಯದಲ್ಲಿ ದುಂಬಿ ನಾಶ ಒಂದೇ ಉಪಾಯ.

ಬೇರು ಹುಳದ ಪತ್ತೆ:

Holes where root grub exists

  • ಬೇರು ಹುಳವು ಕೇವಲ ಅಡಿಕೆಗೆ ಮಾತ್ರವಲ್ಲ, ತಾಳೆ ಜಾತಿಯ ಇತರ ಮರಗಳು, ಕೊಕ್ಕೋ, ಕಾಫೀ, ರಬ್ಬರ್, ಕಬ್ಬು, ಹಲಸು, ಮುಂತಾದವುಗಳಿಗೂ ಹಾನಿ ಮಾಡುತ್ತದೆ.
  • ಮರಗಳು ಕಳೆಗುಂದಿದ್ದರೆ ಅದರ ಬುಡವನ್ನು ಆಗಸ್ಟ್ ನಿಂದ ಅಕ್ಟೋಬರ್ ತನಕ ನೆಲವನ್ನು  ಸುಮಾರು 1/2 ದಿಂದ 3/4 ಅಡಿ ತನಕ ಅಗೆದು ನೊಡಿದರೆ ಬುಡದಲ್ಲಿ ಗೊಬ್ಬರದ ಹುಳುವಿನಂತ ಹುಳು ಕಾಣಸಿಗುತ್ತದೆ.
  • ಮೇ ತಿಂಗಳಿನಿಂದ ಜೂನ್ ಜುಲಾಯಿ ತನಕ ನೆಲದಲ್ಲಿ  ತೂತುಗಳು ಕಂಡುಬಂದು ಸಂಜೆ ದುಂಬಿಗಳು ಹಾರುತ್ತವೆ.
  • ಒಂದು ಮಳೆ ಬಂದ ದಿನ ಸಂಜೆ ಹೊತ್ತು ತೋಟಕ್ಕೆ  ಹೋದರೆ ಅಲ್ಲಿ ಕೆಲವು ಗಿಡಗಳ ಮೇಲೆ ದುಂಬಿಗಳು ಕುಳಿತಿರುತ್ತವೆ.
  • ಅವು ಹಾರುವುದೂ ಇರುತ್ತದೆ. ಕೆಲವೊಮ್ಮೆ ಒಂದು ಎರಡು ದುಂಬಿಗಳು ಮನೆ ಪಕ್ಕದಲ್ಲಿ ತೋಟ ಇದ್ದರೆ ದೀಪದ ಬೆಳೆಕಿಗೂ ಅವು ಬರುವುದುಂಟು.

ಹೇಗೆ ನಿಯಂತ್ರಣ:

Pesticide sprayed to kill beetles

  • ಹುಳುಗಳನ್ನು ನಿಯಂತ್ರಣ ಮಾಡುವುದು ಈಗ ಅಲ್ಲ. ಈಗ ಹುಳುಗಳು  ಇರುವುದೂ ಇಲ್ಲ.
  • ಈಗ ಅವು ದುಂಬಿಗಳಾಗಿ ಹೊರ ಹಾರಿ ಸಂತಾನೋತ್ಪತ್ತಿ ಮಾಡುವ ಸಮಯ.
  • ಈಗ ಏನಿದ್ದರೂ ದುಂಬಿಗಳನ್ನು ನಾಶ ಮಾಡಬಹುದೇ ಹೊರತು ಹುಳ ಕೊಲ್ಲುವುದು ವ್ಯರ್ಥ ಪ್ರಯತ್ನ.
  • ನೀರು ಕೆಳಗೆ ಹೋದಂತೇ ಹುಳಗಳು ಕೋಶಾವಸ್ಥೆಗೆ ಹೋಗುವ ಕಾರಣ ನಂತರ ಕಾಣಲು ಸಿಗುವುದು ಅಪರೂಪ.
  •  ಎಪ್ರೀಲ್ ನಿಂದ-ಜೂನ್ ತಿಂಗಳಿಗೆ ಒಂದು ಮಳೆ ಬಿದ್ದ ತಕ್ಷಣ, ಅವು ಕೋಶಾವಸ್ಥೆ ಬಿಟ್ಟು ಪ್ರೌಢ ಕೀಟಗಳಾಗುತ್ತವೆ. ಆ ಸಮಯದಲ್ಲಿ ದುಂಬಿಯಾಗಿ ಹೊರಗೆ ಹಾರಲಾರಂಭಿಸುತ್ತವೆ.

ಬೇರು ಹುಳದ ಪ್ರಕಾರಗಳು:

Root grub of Arecanut

  • ಬೇರು ಹುಳಗಳದ್ದು ನಾಲ್ಕು ಹಂತದ ಜೀವನ ಕ್ರಮ. ಒಂದು ಮೊಟ್ಟೆ, ನಂತರ ಮರಿ(ಹುಳು)ತದನಂತರ ಕೋಶ (ಪ್ಯೂಪೆ) ಆನಂತರ ದುಂಬಿ.
  • ದುಂಬಿಯಾಗಿ ಗಂಡು ಹೆಣ್ಣು ಕೂಡಿ ಮತ್ತೆ ಮಣ್ಣಿನಲ್ಲಿ ಮೊಟ್ಟೆ ಇಡುತ್ತದೆ.
  • ಬೇರು ಹುಳದಲ್ಲಿ ಮೂರು ಪ್ರಭೇಧಗಳನ್ನು ಕಾಣಬಹುದು. ಲ್ಯುಕೊಪೋಲಿಸ್  ಕೊನಿಯೋಪೆರಾ, leucopholis coneophora ಲ್ಯುಕೊಪೋಲಿಸ್ ಬರ್ಮಿಸ್ಟೆರಿ, leucopholis burmeisteri  ಇವು  ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಿಕೆ ಮರದ ಬೇರನ್ನು ತಿಂದರೆ ಲ್ಯುಕೊಪೋಲಿಸ್  ಲೆಪಿಡೋಪೆರಾಗಳು. leucopholis lepidophora.
  • ಇದು ಕಬ್ಬು ಮತ್ತು ಬಯಲು ಸೀಮೆಯಲ್ಲಿ ಅಡಿಕೆ ಮರದ ಬೇರನ್ನೂ ತಿನ್ನುತ್ತವೆ.
  • ಇದರಲ್ಲಿ ಮೊದಲನೆಯದರ ಜೀವನ ಚಕ್ರ ಒಂದು ವರ್ಷವಾದರೆ ಮತ್ತೆರಡರದ್ದು ಎರಡು ವರ್ಷ.
  • ಮೊಟ್ಟೆ , ಮರಿ ಹಾಗೂ ಕೋಶಗಳು ಯಾವಾಗಲೂ ಮಣ್ಣಿನಲ್ಲಿ ಇರುತ್ತವೆ.
  • ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲ ಮುಗಿಯುವಾಗ. ನಂತರವೂ ಸಿಗುತ್ತದೆ.
  • ಪ್ರಮಾಣ ತುಂಬಾ ಕಡಿಮೆ. ದುಂಬಿಗಳು ಮಾತ್ರ ವರ್ಷದ ನಿರ್ದಿಷ್ಟ ಸಮಯದಲ್ಲಿ ಮುಸ್ಸಂಜೆ ಅಥವಾ ರಾತ್ರೆ ಹೊತ್ತು ಮಣ್ಣಿನಿಂದ ಹೊರ ಹಾರಿ ಲೈಂಗಿಕ ಸಂಪರ್ಕ ಹೊಂದುತ್ತವೆ.

sugarcane root grub

ಬೇರು ದುಂಬಿ ನಾಶ ಮಾಡುವುದು:

ROOT GRUB ATTACHED SUGARCANE

  • ಬೇರು ಹುಳದ ದುಂಬಿಯನ್ನು ತಜ್ಞರು ಸಂಜೆ ಹೊತ್ತು ಹೊಂಚು ಹಾಕಿ ಹಿಡಿದು ಕೊಲ್ಲಬೇಕು ಎನ್ನುತ್ತಾರೆ.
  • ಆದರೆ ಅದು ಈಗಿನ ಕಾಲದಲ್ಲಿ ಅಸಾಧ್ಯವಾದ ಮಾತು.
  • ಮುಸ್ಸಂಜೆ ಹೊತ್ತಿನಲ್ಲಿ ತೋಟದಲ್ಲಿ ಟಾರ್ಚ್ ಬೆಳೆಕಿನಲ್ಲಿ ದುಂಬಿಗಳನ್ನು ಹುಡುಕಿ ಕೊಂದು ಸಾಯಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಅದರ ಸಂತಾನೋತ್ಪತ್ತಿ ನಿಯಂತ್ರಣವಾಗುತ್ತದೆ ಎನ್ನುತ್ತಾರೆ.
  • ಇದು ಸತ್ಯವಾದರೂ ಪಾಲಿಸಲು ಕಷ್ಟ.
  • ಬೇರು ದುಂಬಿಗಳು ತೋಟದ ಬದುಗಳಲ್ಲಿರುವ ಗ್ಲೆರಿಸಿಡಿಯಾ, ಹೊಂಗಾರೆ( ಹಾಲುವಾಣ) ನುಗ್ಗೆ, ಬೇವು, ಹಿಪ್ಪು ನೇರಳೆ ಮರಗಳ ಎಲೆಗಳಲ್ಲಿ ನೇತಾಡುತ್ತಿರುತ್ತವೆ. ಇದನ್ನು  ಅಲ್ಲೇ ಸಾಯಿಸುವುದು ಸಾಧ್ಯವಿದೆ.
  • ಇಡೀ ತೋಟಕ್ಕೆ ಮಲ್ಚಿಂಗ್ ಶಿಟು  ಹಾಕಿದಾಗ ಬೇರು ದುಂಬಿ ಸಂತಾನಾಭಿವ್ರುದ್ದಿಯಾಗಲು ಅವಕಾಶ ಸಿಗದೆ ಅವು ನಾಶವಾಗುತ್ತವೆ ಎನ್ನುತ್ತಾರೆ ಸಿದ್ದಾಪುರದ ಅರುಣ್  ಹೆಗಡೆಯವರು..
  • ತೋಟದ ಬದುವಿನಲ್ಲಿರುವ ಮರಗಳಿಗೆ ಸಸ್ಯಗಳಿಗೆ ಮಧ್ಯಾನ್ಹದ ನಂತರ ಕ್ಲೋರೋಫೆರಿಫೋಸ್ ಅಥವಾ ಮೊನೋಕ್ರೋಟೋಫೋಸ್ ಕೀಟನಾಶಕವನ್ನು  ಸಿಂಪಡಿಸಿರಿ.
  • ಒಂದು ವೇಳೆ ಮರ ಮಟ್ಟು ಇಲ್ಲವಾದರೆ ಗೆಲ್ಲುಗಳನ್ನು  ಕದಿದು ತಂದು ಹಾಕಿ ಸಿಂಪರಣೆ ಮಾಡಿ.
  • ಕೀಟನಾಶಕ ಎಲೆಗಳಿಗೆಲ್ಲಾ  ಬೀಳಬೇಕು. ಹಾರಿ ಬಂದು ಆಶ್ರಯ ಪಡೆಯುವ ದುಂಬಿಗಳಿಗೆ ಈ ಕೀಟನಾಶಕವು ವಿಷಕಾರಿಯಾಗಿ ಅದು ಸಾಯುತ್ತದೆ. ಇದು  ಸರಳ ಮತ್ತು ಸುಲಭದ ಉಪಾಯ.

ಬೇರು ಹುಳವನ್ನು ಕೊಲ್ಲುವುದೇ ಆಗಿದ್ದಲ್ಲಿ ಆ ಕಾರ್ಯವನ್ನು ಸಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ತನಕ ಮಾತ್ರ ಸಾಧ್ಯ. ಅದಕ್ಕೆ ಕೆಲವು ಜೈವಿಕ ನಿಯಂತ್ರಕಗಳು ಇವೆ. ಅದನ್ನು ಆ ಸಮಯದಲ್ಲಿ ತಿಳಿಸುತ್ತೇವೆ.

  • ಲಕ್ಕಿ ಗಿಡ ಮತ್ತು ನೆಕ್ಕಿ ಗಿಡದ ಸಾರದಿಂದ ತಯಾರಿಸಿದ ಸಸ್ಯ ಔಷಧಿ ವಿಟೆಕ್ಸ್ ನೆಗುಂಡ ಅಥವಾ ನಿಂಬಿಸಿಡಿನ್ (ಬೇವು ಆಧಾರಿತ ಕೀಟನಾಶಕ) 2% ದಂತೆ ಬೇರು ವಲಯಕ್ಕೆ ಜೂನ್ ತಿಂಗಳಲ್ಲಿ  ಹೊಯ್ಯುವುದರಿಂದ ಮೊಟ್ಟೆಗಳು, ಸಣ್ಣ ಮರಿಗಳು ನಾಶವಾಗುತ್ತವೆ.

ಈ ಸಮಯದಲ್ಲಿ ದುಂಬಿಗಳ ನಾಶಕ್ಕೆ  ಬೇಕಾದ ಕಾರ್ಯವನ್ನು ಮಾಡಿದರೆ ಮಾತ್ರ ಅದು ಫಲಕಾರಿ. ಯಾರೋ ಹೇಳಿದರು ಎಂದು ಅದಕ್ಕೆ  ಜೈವಿಕ ಉಪಚಾರ  ಈಗ ಮಾಡಬೇಡಿ. ಅದನ್ನು ಮಾಡುವುದಾದರೆ ಮೊಟ್ಟೆ ಇಟ್ಟು ಮರಿ ಆದ ನಂತರ ಮಾಡಬೇಕು.           

Leave a Reply

Your email address will not be published. Required fields are marked *

error: Content is protected !!