ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.
ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…