ಬದನೆಯ ಕಾಯಿ ಕೊಳೆತ

ಬದನೆಯ ಕಾಯಿಗಳು ಯಾಕೆ ಕೊಳೆಯುತ್ತವೆ.

ಬದನೆ  ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ. ಹೆಚ್ಚಿನ ಬೆಳೆಗಾರರು ಸಣ್ಣ  ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ.   ಸಮೀಪದ  ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ  ಅದಕ್ಕೆ ಉಪಚಾರ …

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more
brinja

ಬಿಟಿ ಬದನೆ ಬಂದರೆ ಕೀಟನಾಶಕ ಬಳಸದ ಬದನೆ ತಿನ್ನಬಹುದು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ    ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ  ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ. ವಿಜ್ಞಾನ ಹೇಳುತ್ತದೆ ಹೀಗೆ: ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ…

Read more

ಗುಳ್ಳಕ್ಕೆ ಇದು ಬದಲಿ ತಳಿ.

ಬದನೆ ಬೆಳೆಸುವ ರೈತರು ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಖರ್ಚು ಅತೀ ಹೆಚ್ಚು. ಸಾಕಷ್ಟು ಕೀಟನಾಶಕ – ರೋಗ ನಾಶಕ ಬಳಸಿ  ಬೆಳೆ ಉಳಿಸಿಕೊಳ್ಳುತ್ತಾರೆ. ಇಷ್ಟೆಲ್ಲಾ ಖರ್ಚು ಮಾಡಿದಾಗ ರೈತರಿಗೆ ಉಳಿಯುವುದು ಅಷ್ಟಕ್ಕಷ್ಟೇ.  ಖರ್ಚು ಕಡಿಮೆ ಮಾಡಿ ಬೆಳೆ ಬೆಳೆಸಬೇಕಿದ್ದರೆ ಇರುವುದು ರೋಗ ನಿರೋಧಕ ಶಕ್ತಿ ಪಡೆದ ತಳಿಯನ್ನು ಆಯ್ಕೆ ಮಾಡುವುದು ಒಂದೇ. ಗುಳ್ಳ ಬದನೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಆದರೆ ಈಗಿತ್ತಲಾಗಿ ಗುಳ್ಳ ಬದನೆ ಬೆಳೆಸುವುದೇ ಕಷ್ಟವಾಗುತ್ತಿದೆ. ಬೆಳೆಸು ರೈತರು ಗುಳ್ಳ ತಿನ್ನುವುದನ್ನೇ ಕಡಿಮೆ ಮಾಡಿದ್ದೂ ಇದೆ….

Read more
error: Content is protected !!