ಒಂದು ವರುಷದ ಗಿಡ ಹೀಗೆ ಇರಬೇಕು.

ಬೇಗ ಫಲ ಕೊಡುವ ತೆಂಗಿನ ಸಸಿಯ ಲಕ್ಷಣ- ಗಿಡದಲ್ಲೇ ತಿಳಿಯಿರಿ.

ತೆಂಗಿನ ಸಸಿ ಅಥವಾ ಅಡಿಕೆ ಸಸಿ ನೆಡುವವರು ಮೊದಲಾಗಿ ಸಸಿಯ ಲಕ್ಷಣವನ್ನು ಸ್ವಲ್ಪ ನೋಡಿ ಆಯ್ಕೆ ಮಾಡಬೇಕು.ಬೇಗ ಫಲ ಕೊಡುವ ಸಸಿಯ ಲಕ್ಷಣಗಳು ಎಳೆ ಸಸಿಯ ಹಂತದಲ್ಲೇ ಗೊತ್ತಾಗುತ್ತದೆ. ಯೋಗ್ಯ ಲಕ್ಷಣ ಉಳ್ಳ ಸಸಿಗಳನ್ನು ಮಾತ್ರ ಆಯ್ಕೆ ಮಾಡಿ ನೆಟ್ಟರೆ ನಂತರ ಫಲ ಬರುವ ಸಮಯದಲ್ಲಿ ಪಶ್ಚಾತಾಪ ಪಡಬೇಕಾಗಿಲ್ಲ. ಒಂದು ಕರು ಸಣ್ಣ ಪ್ರಾಯದಲ್ಲಿ ತನ್ನತಾಯಿಯ ಗಿಣ್ಣು ಹಾಲನ್ನು ಯಥೇಚ್ಚವಾಗಿ ಕುಡಿದರೆ ಅದರ ಇಡೀ ಜೀವಮಾನಕೆ ಬೇಕಾಗುವ ಶಕ್ತಿ ದೊರೆಯುತ್ತದೆ. ಅದೇ ರೀತಿ ಮಾನವನಿಗೂ. ಎಳೆ ಪ್ರಾಯದಲ್ಲಿ…

Read more
ಆರೋಗ್ಯವಂತ ಅಡಿಕೆ ಮರ

ಅಡಿಕೆ ಮರದ ಆರೋಗ್ಯ –ಅದರ ಬೇರು ವ್ಯವಸ್ಥೆ.

ಯಾವುದೇ ಸಸ್ಯವಿರಲಿ, ಬೇರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಸಸ್ಯಕ್ಕೆ ಬೇರು ಮುಖ್ಯ ಆಧಾರ ಸ್ಥಂಭ.  ಇದು ಮಣ್ಣು, ನೀರು, ಕೀಟಗಳು ಮತ್ತು ಪೋಷಕಗಳ ಅಸಮತೋಲನದಿಂದ ತೊಂದರೆಗೆ ಒಳಗಾಗುತ್ತದೆ. ಇದನ್ನು ಪ್ರತೀಯೊಬ್ಬ ರೈತರೂ ಗಮನಿಸಿ ಅದನ್ನು ಸರಿಪಡಿಸಿದರೆ ಮರ ಆರೋಗ್ಯವಾಗಿರುತ್ತದೆ. ಅಡಿಕೆ ಮರ, ತೆಂಗಿನ ಮರ ಮುಂತಾದ ಎಲ್ಲಾ ಏಕದಳ ಸಸ್ಯಗಳ ಬೇರುಗಳು ತಳಕ್ಕೆ ಇಳಿಯದೇ ಮೇಲ್ಭಾಗದಲ್ಲೇ ಪೋಷಕಗಳನ್ನು ಹುಡುಕುತ್ತಾ ಪಸರಿಸುತ್ತಿರುತ್ತವೆ. ಇವು ಸಸ್ಯದ ಕಾಂಡದಿಂದ ಹುಟ್ಟಿಕೊಂಡು ಬೆಳವಣಿಗೆಯಾಗುತ್ತದೆ. ಸಸ್ಯದ ಸುತ್ತಲೂ ಇದು ಪಸರಿಸಿರುತ್ತದೆ.  Monocot roots are…

Read more
coconut palm genetically defected

ತೆಂಗು -ಇಂಥಹ ನ್ಯೂನತೆಗೆ ಪರಿಹಾರ ಏನು?

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯ ದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳವಣಿಗೆ  ಇರುತ್ತದೆ. ತೆಂಗಿನ ವಿಚಾರದಲ್ಲೂ ಇದು ಪ್ರಸ್ತುತ. ನಾವು ನೆಟ್ಟು ಬೆಳೆಸುವ ತೆಂಗು ನಾಟಿ ಮಾಡಿ ನಾಲ್ಕರಿಂದ ಐದು ವರ್ಷಕ್ಕೆ ಫಸಲಿಗೆ ಆರಂಭವಾಗುತ್ತದೆ. ಆ ಸಮಯದ ವರೆಗೆ ಆ ಸಸಿ ಯಾವ ರೀತಿ ಫಲ ಕೊಡಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳಲಿಕ್ಕೆ ಬರುವುದಿಲ್ಲ. ಕೆಲವು…

Read more
ಬೇಗ ಇಳುವರಿ ಕೊಡಬಲ್ಲ ತೆಂಗಿನ ಸಸಿ ಲಕ್ಷಣ - Early yielding nature of plant

ಉತ್ತಮ ಇಳುವರಿ ನೀಡಬಲ್ಲ ತೆಂಗಿನ ಸಸಿಯ ಲಕ್ಷಣಗಳು ಹೇಗೆ ಇರಬೇಕು?

 ಧೀರ್ಘಾವಧಿ ಬೆಳೆಗಳಲ್ಲಿ ಸಸ್ಯ ಮೂಲವನ್ನು ಆರಿಸುವಾಗ ನಮಗೆ ಸ್ವಲ್ಪ ಮಟ್ಟಿಗೆ ಸಸಿ ಹೀಗೆ ಇದ್ದರೆ ಉತ್ತಮ ಎಂಬ ಮಾನದಂಡಗಳನ್ನು ತಿಳಿದಿದ್ದರೆ ಒಳ್ಳೆಯದು.  ಕಾರಣ ಈ ಗಿಡ ನೆಟ್ಟು ಪ್ರತಿಫಲ ತೋರಿಸಲು 5-6 ವರ್ಷ ಬೇಕು. ಆಗ ನಮ್ಮ ಆಯ್ಕೆ ಸ್ವಲ್ಪ ತಪ್ಪಿದ್ದರೆ ಅಷ್ಟೂ ವರ್ಷ ನಷ್ಟ. ಇದಕ್ಕಾಗಿ ಪ್ರತೀಯೊಬ್ಬ ತೆಂಗು ಬೆಳೆಯುವವನೂ ತೆಂಗಿನ ಉತ್ತಮ ಗಿಡದ ಲಕ್ಷಣಗ ಗಳು ಹೀಗೆ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು. ತೆಂಗು ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವ ಸಸ್ಯವಾಗಿದು, ಯಾವ ಮರದ ಕಾಯಿಯನ್ನು…

Read more
error: Content is protected !!