ಬೇಗ ಫಲ ಕೊಡುವ ತೆಂಗಿನ ಸಸಿಯ ಲಕ್ಷಣ- ಗಿಡದಲ್ಲೇ ತಿಳಿಯಿರಿ.

ಒಂದು ವರುಷದ ಗಿಡ ಹೀಗೆ ಇರಬೇಕು.

ತೆಂಗಿನ ಸಸಿ ಅಥವಾ ಅಡಿಕೆ ಸಸಿ ನೆಡುವವರು ಮೊದಲಾಗಿ ಸಸಿಯ ಲಕ್ಷಣವನ್ನು ಸ್ವಲ್ಪ ನೋಡಿ ಆಯ್ಕೆ ಮಾಡಬೇಕು.ಬೇಗ ಫಲ ಕೊಡುವ ಸಸಿಯ ಲಕ್ಷಣಗಳು ಎಳೆ ಸಸಿಯ ಹಂತದಲ್ಲೇ ಗೊತ್ತಾಗುತ್ತದೆ. ಯೋಗ್ಯ ಲಕ್ಷಣ ಉಳ್ಳ ಸಸಿಗಳನ್ನು ಮಾತ್ರ ಆಯ್ಕೆ ಮಾಡಿ ನೆಟ್ಟರೆ ನಂತರ ಫಲ ಬರುವ ಸಮಯದಲ್ಲಿ ಪಶ್ಚಾತಾಪ ಪಡಬೇಕಾಗಿಲ್ಲ.

ಒಂದು ಕರು ಸಣ್ಣ ಪ್ರಾಯದಲ್ಲಿ ತನ್ನತಾಯಿಯ ಗಿಣ್ಣು ಹಾಲನ್ನು ಯಥೇಚ್ಚವಾಗಿ ಕುಡಿದರೆ ಅದರ ಇಡೀ ಜೀವಮಾನಕೆ ಬೇಕಾಗುವ ಶಕ್ತಿ ದೊರೆಯುತ್ತದೆ. ಅದೇ ರೀತಿ ಮಾನವನಿಗೂ. ಎಳೆ ಪ್ರಾಯದಲ್ಲಿ ಅಪೌಷ್ಟಿಕತೆ ಉಂಟಾದರೆ ಅದು ಜೀವಮಾನಕ್ಕೆ ಬಳುವಳಿಯಾಗಿರುತ್ತದೆ. ಸಸ್ಯಗಳೂ ಇದಕ್ಕೆ ಹೊರತಲ್ಲ. ಸಸ್ಯಗಳ ಬೀಜದ ಗುಣ ಮತ್ತು ಸಾಕುವ ವಿಧಾನದಲ್ಲಿ ಆ ಸಸ್ಯ  ನಿರ್ದಿಷ್ಟ ವಯಸ್ಸಿಗೆ ಫಲಕೊಡಬಹುದೇ , ಅಥವಾ ಅದನ್ನು ಉಳಿಸಿ ಫಸಲು ಕಾಣುವ ತನಕ  ಕಾಯುವುದು ವ್ಯರ್ಥವೇ ಎಂದು ತಿಳಿಯಲು ಸಾಧ್ಯವಿದೆ.

ಸಸಿ ಲಕ್ಷಣ ಹೇಗೆ ಇರಬೇಕು:

ಬೇಗ ಫಲ ಕೊಡುವ ಗಿಡ ಒಂದು ವರ್ಷಕ್ಕೆ ಹೀಗೆ ಬೆಳೆಯ ಬೇಕು.
ನೆಟ್ಟ ಒಂದು ವರ್ಷಕ್ಕೆ ಹೀಗೆ ಬೆಳೆಯ ಬೇಕು.
 • ನೆಡಲು ಬಳಸುವ ಸಸಿಯನ್ನು ನೋಡಿಯೇ  ಪ್ರತೀಯೊಬ್ಬ ರೈತನೂ ಇದು ಒಳ್ಳೆಯ ಫಲ ಕೊಡಬಹುದೇ ಎಂದು ಅಂದಾಜು ಮಾಡಬಹುದು.
 • ಅದನ್ನು ಗಿಡದ ಲಕ್ಷಣವನ್ನು ಗಮನಿಸಿ  ತಿಳಿಯಬಹುದಾಗಿದೆ.
 • ನೆಡಲು ಆಯ್ಕೆ ಮಾಡುವ ಸಸಿ ಸುಳಿ ಸೇರಿ ಕನಿಷ್ಟ 5 ಎಲೆಯನ್ನು ಹೊಂದಿದ್ದರೆ ಅದಕ್ಕೆ ಮೊಳಕೆ ಬಂದು 5- 6 ತಿಂಗಳು ಆಗಿದೆ ಎಂದು ತಿಳಿಯಬಹುದು.
 • ಇದನ್ನು ರೈತರು ಸಸಿ ನೋಡಿಯೇ ಅಂದಾಜು ಮಾಡಬಹುದು.
 • ನೆಡಲು ಬಳಸುವ ಸಸಿ 6-7  ತಿಂಗಳ ಒಳಗಿನ ಸಸಿಯಾದರೆ ಉತ್ತಮ.
 • ಹೆಚ್ಚು ಬೆಳೆದರೆ ಬುಡ ಭಾಗವನ್ನು ನೋಡಿದಾಗಲೇ ತಿಳಿಯುತ್ತದೆ.

seedlings like this -ಗಿಡಕ್ಕೆ ಶಕ್ತಿ ಇರಬೇಕು.

 • ಬೆಳೆದ ಗಿಡದಲ್ಲಿ ಎಲೆಗಳು ಹೆಚ್ಚು ಇರುತ್ತವೆ.
 • ಕೆಲವು ಸಸ್ಯ ಒದಗಿಸುವವರು ಪಾತಿಯಲ್ಲಿ ಒಂದು ಎರಡು ವರ್ಷ ಬೆಳೆಸಿರುತ್ತಾರೆ.
 • ಅಂತಹ ಗಿಡಗಳನ್ನು ಆಯ್ಕೆ ಮಾಡಿದರೆ ಒಂದು ವರ್ಷ ನಷ್ಟವಾಗುತ್ತದೆ.
 • ಸಾಧ್ಯವಾದಷ್ಟು ಎರಡು , ಮೂರು ಬೇರುಗಳಷ್ಟೇ  ಬಂದಿರುವ ಗಿಡ ಉತ್ತಮ.
 • ಗಿಡದ  ಬುಡ ಭಾಗ ಕನಿಷ್ಟ  ಹೆಬ್ಬೆರಳು- ತೋರು ಬೆರಳುಗಳೆರಡರ ಮಧ್ಯಂತರದಷ್ಟು ದಪ್ಪ ಇರಬೇಕು.
 • ಇದು ಹೊಲದಲ್ಲಿ ನೆಟ್ಟಾಗ ತಕ್ಷಣ ಬೇರುಗಳು ಬೆಳೆದು ಆಹಾರ ಸಂಗ್ರಹಿಸಿ, ಎಳವೆಯಿಂದಲೇ ಚೆನ್ನಾಗಿ ಬೆಳೆಯಲಾರಂಭಿಸುತ್ತದೆ.

ಒಂದು ವರ್ಷದ ಗಿಡ ಹೀಗಿರಬೇಕು:

 • ನೆಟ್ಟು ಒಂದು ವರ್ಷ ಪೂರ್ಣಗೊಂಡ ತೆಂಗಿನ ಗಿಡ  ಸುಮಾರು 3 ಮೀಟರಿನಷ್ಟು ಉದ್ದದ ಸುಳಿಯನ್ನೂ ಅದರ ಕೆಳಭಾಗದ ಬಿಡಿಸಿದ ಗರಿಗಳೂ ಸಹ ಸರಿ ಸುಮಾರು 7-7-6-5ಅಡಿ, ಹೀಗೆ ಉದ್ದ ಇರಬೇಕು.
 • ಗರಿಯಲ್ಲಿ ಕಡ್ಡಿಗಳು ಬಿಡಿಸಿಕೊಂಡು ಇರಬೇಕು.
Date of seed is important- ಬೀಜಕ್ಕೆ ಇಟ್ತ ದಿನಾಂಕ ಮುಖ್ಯ
ಬೀಜಕ್ಕೆ ಇಟ್ತ ದಿನಾಂಕ ಮುಖ್ಯ
 • ಗಿಡದಲ್ಲಿ ಜೀವಂತವಾಗಿರುವ ಸುಮಾರು 7-8 ಗರಿಗಳು ಇರಲೇ ಬೇಕು.
 • ಬುಡ ಭಾಗ ಬಿಡಿಸಿಕೊಳ್ಳಬೇಕು. ಅಂದರೆ  ಗರಿಯ ರಚನೆ ಸ್ಪಷ್ಟವಾಗಿರಬೇಕು.
 • ಎರಡನೇ ವರ್ಷಕ್ಕೆ ಗಿಡದ ಗರಿಗಳು ಸುಮಾರು 4-5 ಮೀಟರ್ ಉದ್ದ ಬೆಳೆದಿರಬೇಕು. ಗಿಡದಲ್ಲಿ ಸುಳಿ ಸೇರಿ 9-10 ರಷ್ಟು ಜೀವಂತ ಗರಿಗಳು ಇರಬೇಕು.
 • ಗರಿಯ ಬುಡ ಭಾಗ (Clasps) ರಚನೆ( ಗರಿಯು ಮರಕ್ಕೆ ಹಿಡಿದುಕೊಂಡಿರುವಾಗ ಉಂಟಾಗುವ ಆಕಾರ) ಅಗಿರಬೇಕು.

ಗೊಬ್ಬರ, ಬೀಜದ ಗುಣ, ನೆಡುವ ವಿಧಾನ,ನೀರಾವರಿ,ನೀರು ಬಸಿಯುವಿಕೆ ಅಲ್ಲದೆ ಇಷ್ಟು  ಕರಾರುವಕ್ಕಾಗಿ ಬೆಳೆಯಲು ಪ್ರಧಾನವಾಗಿ ಬೆಳೆಗ್ಗೆಯಿಂದ ಸಂಜೆ ತನಕ ಪೂರ್ಣ ಬಿಸಿಲು ದೊರೆಯಲೇ ಬೇಕು.

splitting of leaflets is its yielding capacity
ಗರಿಯಲ್ಲಿ ಬೇಗ ಕಡ್ದಿ ಬಿಟ್ಟಿರ ಬೇಕು.

ಒಂದು ವೇಳೆ ಹೀಗೆ ಬೆಳೆಯದಿದ್ದರೆ?

 • ಅಂತಹ ಸಸಿಗಳು ಬೆಳೆದ ಮೇಲೆ ಉತ್ತಮ ಫಲ ಕೊಡಲಾರವು. ಕೊಟ್ಟರೂ ಕೆಲವೇ ಕೆಲವು ಕಾಯಿಗಳು ಮಾತ್ರ.
 • ಇಂತಹ ಸಸ್ಯಗಳನ್ನು ಎಳವೆಯಲ್ಲೇ ಗುರುತಿಸಿ ಅದನ್ನು ತಕ್ಷಣ ಅನುತ್ಪಾದಕ ಸಸ್ಯವೆಂದು ಪರಿಗಣಿಸಿ  ತೆಗೆದು ಬೇರೆ ಸಸಿ ನೆಡುವುದು ಸೂಕ್ತ.
 • ಕೆಲವು ತಳಿಯ (CGD ಚೌಘಾಟ್ ಗ್ರೀನ್ ಡ್ವಾರ್ಪ್ )  ತಳಿಯ ತೆಂಗು ಸುಮಾರು 18 ಎಲೆ ಬಿಟ್ಟ  ತಕ್ಷಣ ಹೂ ಗೊಂಚಲು ಬಿಡುತ್ತದೆ.
 • ಹಾಗಿರುವಾಗ ಎರಡು ವರ್ಷದ ಸಾಮಾನ್ಯ ತಳಿಯ ಗಿಡ  ಕನಿಷ್ಟ ಬುಡ ಭಾಗದಲ್ಲಿ ಬೊಡ್ಡೆ ತೋರುವಷ್ಟಾದರೂ ಬೆಳೆದಿರಬೇಕು.
 • ಎರಡು ವರ್ಷವಾದರೂ ಬೊಡ್ದೆ  (Bole) ಬಿಡದಿದ್ದರೆ ಅಂತಹ ಗಿಡ ಬೇಗ ಫಲ ಕೊಡಲಾರದು.

ಈ ಲಕ್ಷಣ  ಇಲ್ಲದ ಗಿಡವನ್ನು ಸಾಕುವುದು ವ್ಯರ್ಥ.ಅದನ್ನು ನಿರ್ದಾಕ್ಷಿಣ್ಯವಾಗಿ ಆಗಲೇ ತೆಗೆದು ಬೇರೆ ನೆಟ್ಟರೆ ಉತ್ತಮ. ತೆಂಗು ಬೆಳೆಯುವವರು ಈ ರೀತಿ ಸಸ್ಯ ಲಕ್ಷಣವನ್ನು ಗಮನಿಸಿ ಅದಕ್ಕನುಗುಣವಾಗಿ ಅನುತ್ಪಾದಕ ಸಸ್ಯವನ್ನು ತೆಗೆದು ಬೇರೆ ಸಸಿ ನೆಡುವುದರಿಂದ ಎಕ್ರೆವಾರು ಇಳುವರಿಯನ್ನು ತುಂಬಾ ಹೆಚ್ಚಿಸಬಹುದಾಗಿದೆ.
end of the article:———————————————–
search words: coconut plant# plant selection of coconut# age of the seedlings # which type of Coconut plant is ideal for planting# high yielding nature in coconut plants # Growth of plant in first year# coconut#

Leave a Reply

Your email address will not be published. Required fields are marked *

error: Content is protected !!