ತೆಂಗಿನ ಮರಗಳಿಗೆ ಸಿಡಿಲು ಬಡಿದರೆ ಏನು ಮಾಡಬೇಕು?
ಈಗಾಗಲೇ ಮುಂಗಾರು ಪೂರ್ವ ಮಳೆ ಬರಲಾರಂಭಿಸಿದೆ. ಮಿಂಚು ಸಿಡಿಲಿನ ಅಬ್ಬರದಲ್ಲಿ ಬಹಳಷ್ಟು ಕಡೆ ಅಡಿಕೆ, ತೆಂಗಿನ ಮರಗಳು ಬಲಿಯಾಗುತ್ತಿವೆ. ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆಗಾಲ ಕೊನೆಯಲ್ಲಿ ಮಿಂಚು ಸಿಡಿಲಿನ ಆರ್ಭಟ ಅಧಿಕ. ಮಳೆ ಬಾರದಿದ್ದರೂ ಪ್ರಭಲವಾದ ಈ ಗುಡುಗು ಸಿಡಿಲಿನ ಆರ್ಭಟ ಇದ್ದೇ ಇರುತ್ತದೆ. ಈ ಸಿಡಿಲು ಮೋಡಗಳ ಅಪ್ಪಳಿಸುವಿಕೆಯಿಂದ ಉತ್ಪಾದನೆಯಾಗುವ ಒಂದು ವಿದ್ಯುತ್ ಶಕ್ತಿ. ಇದು ಉತ್ಪಾದನೆಯಾಗಿ ಅರ್ಥಿಂಗ್ ಆಗಬೇಕು. ಅದು ಎತ್ತರದ ಮರಗಳು, ಅಥವಾ ಕೆಲವು ಮಿಂಚು ಆಕರ್ಶಕಗಳ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತದೆ….